newsfirstkannada.com

ಮದುವೆಗೂ ಮೊದಲೇ ಮಗು.. ನೈಟ್‌ಕ್ಲಬ್‌ನಲ್ಲಿ ನತಾಶಾಳ ಕಂಡು ಲವ್ವಲ್ಲಿ ಬಿದ್ದಿದ್ದ ಹಾರ್ದಿಕ್ ಪಾಂಡ್ಯ!

Share :

Published May 26, 2024 at 6:34pm

Update May 26, 2024 at 6:37pm

  ಇನ್‌ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಸರ್‌ನೇಮ್ ತೆಗೆದು ಹಾಕಿದ್ಯಾಕೆ ನತಾಶಾ?

  ಪತ್ನಿ ನತಾಶಾ ಹುಟ್ಟುಹಬ್ಬಕ್ಕೆ ಶುಭಾಶಯದ ಪೋಸ್ಟ್ ಹಾಕದ ಹಾರ್ದಿಕ್

  ನಾಯಕತ್ವದಲ್ಲಿ ಹಿನ್ನಡೆ, ಟೀಕೆ, ದೂರವಾಗೋ ನಿರ್ಧಾರ ಮಾಡಿದ್ಲಾ ನತಾಶಾ

ಆತ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್. ಆಕೆ ಸರ್ಬಿಯಾ ದೇಶದಿಂದ ಭಾರತಕ್ಕೆ ಬಂದು ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಿದ್ದ ಅಪ್ಸರೆ. ಆದ್ರೆ, ಪರಸ್ಪರ ಪ್ರೀತಿಸಿ ಮದುವೆಯಾದ ಕೇವಲ ನಾಲ್ಕೇ ವರ್ಷಕ್ಕೆ ಸ್ಟಾರ್ ಜೋಡಿಯ ಬದುಕಿನಲ್ಲಿ ಬಿರುಗಾಳಿ ಬೀಸಿದೆ. ಹೌದು, 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದಾರಾ ಎಂಬ ಸುದ್ದಿಗಳು ಅಪ್ಪಳಿಸಿವೆ. ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಯಾರಿಗೇ ತಾನೆೇ ಗೊತ್ತಿಲ್ಲ. 1983ರಲ್ಲಿ ವಿಶ್ವಕಪ್ ಗೆದ್ದ ಭಾರತದ ತಂಡದ ಕ್ಯಾಪ್ಟನ್ ಕಪಿಲ್‌ ದೇವ್‌ಗೆ ಸರಿಸಾಟಿಯಾಗ್ತಾರೆ ಅಂತ ಹೋಲಿಸಲಾಗಿದ್ದ.

ಇದನ್ನೂ ಓದಿ: ಬಸ್ ನಿಲ್ದಾಣ ಕಾಣೆಯಾಗಿದೆ, ಪ್ಲೀಸ್​ ಹುಡುಕಿಕೊಡಿ! ನ್ಯೂಸ್​ಫಸ್ಟ್​ಗೆ ಸಾರ್ವಜನಿಕರಿಂದ ಸ್ಪೆಷಲ್ ರಿಕ್ವೆಸ್ಟ್

ಐಪಿಎಲ್‌ನಲ್ಲಿ ಗುಜರಾತ್ ತಂಡವನ್ನು ಮುನ್ನೆಡೆಸಿ ಕಪ್ ಗೆದ್ದು ಬೀಗಿದ್ದ. ಈಗ ಮುಂಬೈ ತಂಡಕ್ಕೆ ಕ್ಯಾಪ್ಟನ್ ಆಗಿರೋ ಹಾರ್ದಿಕ್ ಪಾಂಡ್ಯ ಭಾರತದ ಸ್ಟಾರ್ ಕ್ರಿಕೆಟರ್‌ಗಳಲ್ಲೊಬ್ರು. ಇತ್ತೀಚಿಗೆ ಮುಂಬೈ ಕ್ಯಾಪ್ಟನ್ಸಿ ವಿಚಾರವಾಗಿ ಶುರುವಾಗಿದ್ದ ವಿವಾದದಿಂದಲೂ ಸುದ್ದಿಯಾಗಿದ್ದ ಹಾರ್ದಿಕ್‌, ಮುಂಬೈ ತಂಡದ ಕಳಪೆ ಪ್ರದರ್ಶನದಿಂದಲೂ ಟೀಕೆಗಳಿಗೆ ಗುರಿಯಾಗಿದ್ರು. ಹೀಗೆ, ವಿವಾದ, ಹತಾಶೆಯ ಸುಳಿಯಲ್ಲಿ ಸಿಲುಕಿರೋ ಹಾರ್ದಿಕ್‌ಗೆ ಪಾಂಡ್ಯರ ಸಾಂಸಾರಿಕ ಜೀವನದಲ್ಲೂ ಬಿರುಗಾಳಿ ಬೀಸಿದೆಯಾ? ಪ್ರೀತಿಸಿ ಮದುವೆಯಾದ ವಿದೇಶಿ ಹೆಂಡ್ತಿ ಹಾರ್ದಿಕ್‌ಗೆ ಕೈಕೊಟ್ಟು ಹೋಗೋ ನಿರ್ಧಾರ ಮಾಡಿಬಿಟ್ಟಿದ್ದಾಳಾ? ಕ್ರಿಕೆಟ್ ಕೆರಿಯರ್‌ನ ಬ್ಯಾಡ್ ಟೈಂ ನೋಡ್ತಿರೋ ಹಾರ್ದಿಕ್‌ಗೆ ಪರ್ಸಲನ್‌ ಲೈಫ್‌ನಲ್ಲೂ ಕೇಡುಗಾಲ ಶುರುವಾಯ್ತಾ?
ಸ್ಟಾರ್ ಕ್ರಿಕೆಟರ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸರ್ಬಿಯಾದ ಮಾಡೆಲ್, ಪರಮಸುಂದರಿ ನತಾಶಾ ಸ್ಟಾಂಕೋವಿಕ್‌ಳನ್ನು ಮದುವೆಯಾಗಿದ್ರು. ಮೊದಲು ಮಗು ಮಾಡ್ಕೊಂಡು ನಂತರ ಮದುವೆಯಾಗಿ ಸಂಚಲನ ಸೃಷ್ಟಿಸಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ ಎಲ್ಲರ ಕಣ್ಣರಳುವಂತೆ ಬದುಕು ಸಾಗಿಸ್ತಾ ಬಂದಿದ್ರು. ಆದ್ರೀಗ ಹಾರ್ದಿಕ್ ಮತ್ತು ನತಾಶಾ ಜೋಡಿಯ ಸುಖ ಸಂಸಾರದಲ್ಲಿ ಬಿರುಗಾಳಿ ಬೀಸಿರೋ ಸುದ್ದಿ ಅಪ್ಪಳಿಸಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ ಈಗ ನಾನೊಂದು ತೀರ ನೀನೊಂದು ತೀರ ಎಂಬ ಸ್ಥಿತಿಗೆ ಬಂದಿದ್ದಾರಾ? ಈ ಪ್ರಶ್ನೆಗಳು ಹುಟ್ಟೋದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ.

ಕಾರಣ ನಂ – 01

ಇನ್‌ಸ್ಟಾಗ್ರಾಮ್‌ನಲ್ಲಿ ಪಾಂಡ್ಯ ಸರ್‌ನೇಮ್ ತೆಗೆದು ಹಾಕಿದ ನತಾಶಾ!

ಹಾರ್ದಿಕ್ ಪಾಂಡ್ಯ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸರ್ಬಿಯಾ ಮಾಡೆಲ್ ನತಾಶಾ ತನ್ನ ಸರ್‌ ನೇಮ್ ಅನ್ನು ಪಾಂಡ್ಯ ಎಂದು ಬದಲಿಸಿಕೊಂಡಿದ್ದರು. ನತಾಶಾ ಸ್ಟಾಂಕೋವಿಕ್ ಎಂದಷ್ಟೇ ಇದ್ದ ಹೆಸರು ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಬದಲಿಸಿಕೊಂಡಿದ್ರು. ಆದ್ರೆ, ಇತ್ತೀಚೆಗೆ ಮಾಡೆಲ್ ನತಾಶಾ ತಮ್ಮ ಇನ್‌ಸ್ಟಾ ಖಾತೆಯ ಯೂಸರ್‌ನೇಮ್‌ನಿಂದ ಪಾಂಡ್ಯ ಸರ್‌ನೇಮ್ ತೆಗೆದುಹಾಕಿದ್ದಾರೆ. ನತಾಶಾ ಸ್ಟಾಂಕೋವಿಕ್ ತಮ್ಮ ಸೋಶಿಯಲ್ ಮೀಡಿಯಾ ಯೂಸರ್‌ ನೇಮ್‌ನಿಂದ ಪಾಂಡ್ಯ ಸರ್‌ನೇಮ್ ತೆಗೆದು ಹಾಕಿರೋದು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಹಾರ್ದಿಕ್ ಮತ್ತು ನತಾಶಾ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ, ಇಬ್ಬರ ಸಂಬಂಧ ಮುರಿದುಬೀಳುವಹಂತಕ್ಕೆ ಬಂದಿದ್ದು. ಇನ್ನೇನು ವಿಚ್ಛೇದನ ಆಗೋದಷ್ಟೇ ಬಾಕಿ ಎಂಬ ಸುದ್ದಿಗಳಿಗೆ ಈ ಬೆಳವಣಿಗೆ ಪುಷ್ಟಿ ಕೊಡ್ತಿದೆ.

ಕಾರಣ ನಂ-02

ಪಾಂಡ್ಯ ಜೊತೆಗಿನ ಫೋಟೋ ಡಿಲೀಟ್ ಮಾಡಿದ ನತಾಶಾ!

ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾರ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್ ಮೂಲಕ ಎಲ್ಲರಿಗೂ ಅಚ್ಚರಿ ತರಿಸಿದ್ದಾರೆ. ಮೊದಲು, ಇನ್‌ಸ್ಟಾ ಹ್ಯಾಂಡಲ್‌ನ ಯೂಸರ್‌ನೇಮ್‌ನಿಂದ ಪಾಂಡ್ಯ ಸರ್‌ನೇಮ್ ತೆಗೆದುಹಾಕಿರೋ ನತಾಶಾ ನಂತರದಲ್ಲಿ ಪತಿ ಪಾಂಡ್ಯ ಜೊತೆಗಿನ ಹಲವಾರು ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ನತಾಶಾ ಸೋಷಿಯಲ್‌ ಮೀಡಿಯಾದಲ್ಲಿ ತುಂಬಿ ತುಳುಕುತ್ತಿದ್ದ ಪಾಂಡ್ಯ ದಂಪತಿ ಫೋಟೋಗಳು ದಿಢೀರಂತ ಮಾಯವಾಗಿವೆ. ಇತ್ತೀಚಿಗೆ ನತಾಶಾ ಸ್ಟಾಂಕೋವಿಕ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪಾಂಡ್ಯ ಜೊತೆಗಿರೋ ಯಾವುದೇ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿಲ್ಲ. ಹಾರ್ದಿಕ್ ಪಾಂಡ್ಯರ ಫೋಟೋವನ್ನ ತಮ್ಮ ಇನ್‌ಸ್ಟಾದಲ್ಲಿ ಕಡೆಯ ಬಾರಿಗೆ ಪೋಸ್ಟ್ ಮಾಡಿದ್ದು ಈ ವರ್ಷದ ಪ್ರೇಮಿಗಳ ದಿನ ಅಂದ್ರೆ ಫೆಬ್ರವರಿ 14ನೇ ತಾರೀಖು. ಅದೇ ಕೊನೆ ಅಲ್ಲಿಂದೀಚೆಗೆ ನತಾಶಾ ತಮ್ಮ ಇನ್‌ಸ್ಟಾದಲ್ಲಿ ಪಾಂಡ್ಯ ಜೊತೆಗಿರೋ ಒಂದೇ ಒಂದು ಫೋಟೋ ಕೂಡ ಪೋಸ್ಟ್ ಮಾಡಿಲ್ಲ. ಮೇಲಾಗಿ, ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಇನ್‌ಸ್ಟಾದಲ್ಲಿ ಕೇವಲ ತಮ್ಮ ಮತ್ತು ತಮ್ಮ ಮಗ ಆಗಸ್ತ್ಯನ ಫೋಟೋಗಳು, ವಿಡಿಯೋಗಳನ್ನಷ್ಟೇ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ನತಾಶಾರ ಈ ನಡೆ ಭಾರೀ ಅನುಮಾನಕ್ಕೆ ನಾಂದಿ ಹಾಡಿದೆ. ಕ್ರಿಕೆಟರ್ ಹಾರ್ದಿಕ್ ಪಾಂಡ್ಯನಿಂದ ನತಾಶ ದೂರವಾಗಿದ್ದಾಳಾ? ಅಥವಾ ದಾಂಪತ್ಯ ನಂಟು ಮುರಿದುಕೊಂಡು ಹೊರನಡೆಯೋ ಪ್ರಯತ್ನದಲ್ಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿರೋದಕ್ಕೆ ಈ ಬೆಳವಣಿಗೆ ಕೂಡ ಕಾರಣವಾಗಿದೆ.

ಇದನ್ನೂ ಓದಿ: ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

ಕಾರಣ ನಂ-03

ಪತ್ನಿ ನತಾಶಾ ಹುಟ್ಟುಹಬ್ಬಕ್ಕೆ ಶುಭಾಶಯದ ಪೋಸ್ಟ್ ಹಾಕದ ಪಾಂಡ್ಯ!

ಪತ್ನಿ ನತಾಶಾ ಕೂತರೂ, ನಿಂತರೂ, ಒಂದೆಜ್ಜೆ ನಡೆದರೂ ಅದನ್ನು ಫೋಟೋ ತೆಗೆದು ಪೋಸ್ಟ್ ಮಾಡುವಷ್ಟು ಹುಚ್ಚು ಪ್ರೀತಿಯಲ್ಲಿ ಬಿದ್ದಿದ್ದ ಹಾರ್ದಿಕ್ ಪಾಂಡ್ಯ ಆಕೆಯ ಬರ್ತ್‌ಡೇಗೆ ಶುಭಾಶಯದ ಪೋಸ್ಟ್ ಹಾಕೋದೇ ಇಲ್ಲ ಅಂದ್ರೆ ಎಂಥವರಿಗೂ ಅಚ್ಚರಿ ಹುಟ್ಟುತ್ತೆ. ಕಳೆದ ಮಾರ್ಚ್ ತಿಂಗಳ 4ನೇ ತಾರೀಖು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್‌ ಬರ್ತ್‌ಡೇ ಇತ್ತು. ಆದ್ರೆ, ಹಾರ್ದಿಕ್ ಪಾಂಡ್ಯ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಿಲ್ಲ. ಆಕೆ ಫೋಟೋವನ್ನೂ ಕೂಡ ಶೇರ್ ಮಾಡಲಿಲ್ಲ. ಹೋಗಲಿ ಪತ್ನಿಯ ಬರ್ತ್‌ಡೇ ಪಾರ್ಟಿಯನ್ನಾದ್ರೂ ಕೊಟ್ರಾ ಅಂದ್ರೆ ಅದೂ ಇಲ್ಲ. ಶುಭಾಶಯವನ್ನೇ ಕೋರದವರು ಪಾರ್ಟಿ ಕೊಡಿಸ್ತಾರಾ? ಅಲ್ಲದೆ, ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಇನ್‌ಸ್ಟಾ, ಟ್ವೀಟರ್​ ಸೇರಿದಂತೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪತ್ನಿಯ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡೋದನ್ನೇ ನಿಲ್ಲಿಸಿದ್ದಾರೆ. ಇತ್ತೀಚಿಗೆ ಪಾಂಡ್ಯ ತಮ್ಮ ಪತ್ನಿಯ, ಪತ್ನಿ ಜೊತೆಗಿನ ಯಾವುದೇ ಫೋಟೋ, ವಿಡಿಯೋಗಳನ್ನು ಹಾಕಿಲ್ಲ. ಹಾಗಾಗಿ, ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಯಿಂದ ದೂರವಾಗ ಬಯಸಿದ್ದಾರಾ ಎಂಬ ಪ್ರಶ್ನೆ ಹುಟ್ಟಿದೆ. ಇಬ್ಬರೂ ಪರಸ್ಪರ ಚರ್ಚಿಸಿ ವಿಚ್ಛೇದನ ಪಡೆದುಕೊಳ್ಳೋಕೆ ಮುಂದಾಗಿದ್ದಾರಾ ಎಂಬ ಅನುಮಾನವೂ ಶುರುವಾಗಿದೆ.

ಹಾಗಾದ್ರೆ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ದಂಪತಿಯ ನಡುವೆ ಬಿರುಕು ಮೂಡಿರೋದು ನಿಜಾನಾ? ಇಬ್ಬರ ನಡುವಿನ 5 ವರ್ಷ ಪ್ರೀತಿ 4 ವರ್ಷದ ಸಾಂಸಾರಿಕ ಜೀವನ ಅಂತ್ಯವಾಯ್ತಾ? ಪತ್ನಿಗೆ ಡಿವೋರ್ಸ್ ನೀಡೋದಕ್ಕೆ ಹಾರ್ದಿಕ್ ಪಾಂಡ್ಯ ಸಜ್ಜಾಗಿದ್ದಾರಾ? ಒಂದೊಮ್ಮೆ ಹಾರ್ದಿಕ್ ಪಾಂಡ್ಯರಿಂದ ಪತ್ನಿ ನತಾಶಾ ದೂರವಾಗಿದ್ದೇ ಆದ್ರೆ, ಪತ್ನಿಗೆ ಪರಿಹಾರ ರೂಪದಲ್ಲಿ 60 ಕೋಟಿ ರೂಪಾಯಿ ಕೊಡಬೇಕಾಗುತ್ತಾ? ಒಂದೊಮ್ಮೆ ಈ ಎಲ್ಲಾ ಗಾಸಿಪ್‌ಗಳು ಸತ್ಯವಾಗಿದ್ದೇ ಆದ್ರೆ, ಸ್ಟಾರ್ ಕ್ರಿಕೆಟರ್ ಬದುಕಲ್ಲಿ ಬಿರುಗಾಳಿಯೇಳಲು ಕಾರಣವಾಗಿದ್ದೇನು? ಸುಂದರ ಜೋಡಿಯ ನಡುವೆ ಯಾರಾದ್ರೂ ಹುಳಿ ಹಿಂಡಿದ್ರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕೋಕು ಮೊದಲು ಈ ನತಾಶಾ ಯಾರು? ಈಕೆ ಹಿನ್ನೆಲೆಯೇನು? ಈಕೆ ಹಾರ್ದಿಕ್ ಪಾಂಡ್ಯ ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದು ಹೇಗೆ? ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆಗೂ ಮೊದಲೇ ಮಗು ಮಾಡಿಕೊಳ್ಳುವಲ್ಲಿಗೆ ಬಂದು ನಿಂತಿದ್ದು ಹೇಗೆ?

ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ನತಾಶಾ ನಡುವೆ ಲವ್​​ ಶುರುವಾಗಿದ್ದು 2018 ರಲ್ಲಿ. ಮುಂಬೈನ ನೈಟ್‌ಕ್ಲಬ್‌ನಲ್ಲಿ ಪರಿಚಯವಾಗಿದ್ದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನತಾಶಾ ಹಾರ್ದಿಕ್‌ ಪಾಂಡ್ಯನ ಹೆಸರನ್ನು ಟ್ಯಾಗ್ ಮಾಡಿ ಬೆಸ್ಟ್ ಫ್ರೆಂಡ್ ಅಂತೆಲ್ಲಾ ಪೋಸ್ಟ್ ಮಾಡಲಾರಂಭಿಸಿದ್ರು. ನೋಡ ನೋಡುತ್ತಲೇ ಇಬ್ಬರ ನಡುವಿನ ನಂಟಿಗೆ ಬಗ್ಗೆ ಗಾಸಿಪ್‌ಗಳು ಶುರುವಾದ್ವು. ಕೊನೆಗೆ, ಹಾರ್ದಿಕ್ ಪಾಂಡ್ಯ ಬರ್ತ್‌ಡೇ ಪಾರ್ಟಿಯಲ್ಲಿ ನತಾಶಾ ಕಾಣಿಸಿಕೊಂಡ ಬಳಿಕ ಗಾಸಿಪ್‌ಗಳಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿದ್ವು. ಆ ಸಂದರ್ಭದಲ್ಲಿ ಮಾಡೆಲ್ ನತಾಶಾ ಬೇರೊಬ್ಬನೊಟ್ಟಿಗೆ ಪ್ರೀತಿ, ಪ್ರೇಮ, ಪ್ರಯಣ ಅಂತ ಓಡಾಡ್ತಿದ್ದರೂ ಹಾರ್ದಿಕ್ ಮತ್ತು ನತಾಶಾ ನಡುವೆ ಏನೋ ನಡೀತಿದೆ ಎಂಬ ಸುದ್ದಿಗಳು ಹಬ್ಬಿದ್ವು.

2019ರ ಅಕ್ಟೋಬರ್ 11ನೇ ತಾರೀಖು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ನತಾಶಾ ಹಾರ್ದಿಕ್‌ ಪಾಂಡ್ಯರನ್ನು ಬೆಸ್ಟ್ ಫ್ರೆಂಡ್ ಎಂದು ಮೆನ್ಷನ್ ಮಾಡಿದ್ರು. ತಮ್ಮ ಜೀವನದ ಏರಿಳಿತಗಳಲ್ಲಿ ಹಾರ್ದಿಕ್ ಪಾಂಡ್ಯ ಬೆನ್ನೆಲುಬಾಗಿ ನಿಂತಿದ್ದನ್ನು ಸ್ಮರಿಸಿದ್ರು. ಅಂತಿಮವಾಗಿ, 2020ರ ಜನವರಿ ತಿಂಗಳ ಹೊಸವರ್ಷದ ದಿನವೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ ಅಚ್ಚರಿ ಸುದ್ದಿಯೊಂದನ್ನು ನೀಡಿದ್ರು. ತಾವು ಎಂಗೇಜ್ ಆಗ್ತಿರೋದಾಗಿ ಘೋಷಿಸಿ ಶಾಕ್ ಕೊಟ್ಟಿದ್ರು. ಅಲ್ಲದೆ, ಹಾರ್ದಿಕ್ ಪಾಂಡ್ಯ ವಿದೇಶವೊಂದರಲ್ಲಿ ಐಷಾರಾಮಿ ಯಾಚ್‌ನಲ್ಲಿ ನತಾಶಾಗೆ ಪ್ರಪೋಸ್ ಕೂಡ ಮಾಡ್ತಾರೆ. ತಾವು ಎಂಗೇಜ್ ಆಗ್ತಿರೋದಾಗಿ ಘೋಷಿಸಿಕೊಂಡ ಜಸ್ಟ್ 5 ತಿಂಗಳಿಗೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ ಜಗತ್ತಿಗೆ ಮತ್ತೊಂದು ಶಾಕಿಂಗ್ ಸುದ್ದಿ ನೀಡುತ್ತೆ. ಅಂದು ಈ ಸ್ಟಾರ್‌ ಕ್ರಿಕೆಟರ್ ಮತ್ತು ಬ್ಯೂಟಿಫುಲ ಮಾಡೆಲ್ ಜೋಡಿ ನೀಡಿದ ಸುದ್ದಿ ಕೇಳಿ ಜಗತ್ತೇ ಹೌಹಾರಿತ್ತು. ಅದರಲ್ಲೂ, ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಯಾಕಂದ್ರೆ, ಮದುವೆಗೆ ಮೊದಲೇ ಮಾಡೆಲ್ ನತಾಶಾ ಗರ್ಭಿಣಿಯಾಗಿದ್ಲು. ಹಾರ್ದಿಕ್ ಮತ್ತು ನತಾಶಾ ಜೋಡಿ ಆ ವಿಚಾರವನ್ನ ಯಾವುದೇ ಅಂಜಿಕೆಯಿಲ್ಲದೆ ಬಹಿರಂಗ ಮಾಡಿದ್ದರು.

ಇದನ್ನೂ ಓದಿ: ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಹಾರ್ದಿಕ್​​ ಪಾಂಡ್ಯ; ಆಗಿದ್ದೇನು..?

2020ರ ಜುಲೈ ತಿಂಗಳು ಇಡೀ ಜಗತ್ತು ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಲಾಕ್‌ಡೌನ್‌ಗೆ ಒಳಗಾಗಿತ್ತು. ಆ ಸಂದರ್ಭದಲ್ಲಿ ನತಾಶಾ-ಹಾರ್ದಿಕ್ ಜೋಡಿ ಗುಡ್‌ನ್ಯೂಸ್ ಕೊಟ್ಟಿತ್ತು. ಹಾರ್ದಿಕ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಮೊದಲೇ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇಬ್ಬರ ಪ್ರೀತಿಯ ಪ್ರತೀಕದಂತಿದ್ದ ತಮ್ಮ ಮಗುವಿಗೆ ಅಗಸ್ತ್ಯ ಪಾಂಡ್ಯ ಅಂತ ನಾಮಕರಣ ಮಾಡಿದ್ರು.

ಈ ಮೂಲಕ ತಮ್ಮ ಪ್ರೀತಿ, ನಂಟು, ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ರು. ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ 2023ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಮದುವೆಯಾಗಿದ್ರು. ರಾಜಸ್ಥಾನದ ಉದಯಪುರದಲ್ಲಿ ಸಾಂಪ್ರದಾಯಿಕವಾಗಿ ನಡೆದ ವಿವಾಹೋತ್ಸವದಲ್ಲಿ ಹಾರ್ದಿಕ್ ಮತ್ತು ನತಾಶ ಕುಟುಂಬಸ್ಥರು, ಸ್ನೇಹಿತರು, ಆಪ್ತರು ನೆರೆದಿದ್ರು. ಆ ಮದುವೆ ಮಹೋತ್ಸವ ಅದೆಷ್ಟು ಬ್ಯೂಟಿಫುಲ್ ಆಗಿತ್ತು ಅನ್ನೋದನ್ನ ಬರಿಮಾತಲ್ಲಿ ವರ್ಣಿಸೋಕೆ ಸಾಧ್ಯವೇ ಇಲ್ಲ. ಸುಂದರ ಬದುಕು ಕಟ್ಟಿಕೊಂಡಿದ್ದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿಯ ನಡುವೆ ಈಗ ಕಂದಕ ಮೂಡಿದೆ ಎಂಬ ಸುದ್ದಿಗಳು ಅಪ್ಪಳಿಸಿವೆ. ಇಬ್ಬರೂ ಇದಾಗಲೇ ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ ಎಂಬ ಗಾಸಿಪ್‌ಗಳೂ ಸದ್ದು ಮಾಡ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಗೂ ಮೊದಲೇ ಮಗು.. ನೈಟ್‌ಕ್ಲಬ್‌ನಲ್ಲಿ ನತಾಶಾಳ ಕಂಡು ಲವ್ವಲ್ಲಿ ಬಿದ್ದಿದ್ದ ಹಾರ್ದಿಕ್ ಪಾಂಡ್ಯ!

https://newsfirstlive.com/wp-content/uploads/2024/05/hartik2.jpg

Load More