newsfirstkannada.com

ಆಟದಲ್ಲಿ ಧಮ್ ಇಲ್ಲ, ಆದ್ರೂ T20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ.. ಇದಕ್ಕೆಲ್ಲ ಗುಜರಾತಿ ಲಾಬಿ ಕಾರಣನಾ?

Share :

Published May 2, 2024 at 12:26pm

    ಹಾರ್ದಿಕ್ ಪಾಂಡ್ಯ ತಂಡಕ್ಕೆ​​ ಆಯ್ಕೆ, ಪರ ವಿರೋಧದ ಚರ್ಚೆಗೆ ಕಾರಣ

    ಈಗಾಗಲೇ ಐಪಿಎಲ್​ನಲ್ಲಿ ಮಂಕಾಗಿರುವ ಆಲ್​ರೌಂಡರ್ ಹಾರ್ದಿಕ್​

    ಆಟದಲ್ಲಿ ಧಮ್​ ಇಲ್ಲ, ಅಷ್ಟಾದ್ರೂ ವಿಶ್ವಕಪ್​​​ ಪಾಂಡ್ಯ ತಂಡಕ್ಕೆ ಆಯ್ಕೆ

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಆಯ್ಕೆಯಾದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ. ಆಲ್​ರೌಂಡರ್​ ಹಾರ್ದಿಕ್​​​​​​​​​​​​​​​ ಪಾಂಡ್ಯ ಆಯ್ಕೆ ಮಾಡಿದ್ದಕ್ಕೆ ಸೆಲೆಕ್ಟರ್ಸ್​ ವಿರುದ್ಧ ಫ್ಯಾನ್ಸ್ ಸಿಡಿದೆದ್ದಿದ್ದಾರೆ. ಅಷ್ಟಕ್ಕೂ ಹಾರ್ದಿಕ್​ ಸೆಲೆಕ್ಷನ್​ ಬಗ್ಗೆ ಅಪಸ್ವರ ಕೇಳಿ ಬರ್ತಿರೋದಾದ್ರು ಯಾಕೆ?.

ಟಿ20 ವಿಶ್ವಕಪ್​​​ ಮಹಾದಂಗಲ್​ಗೆ ಟೀಮ್ ಇಂಡಿಯಾ ಅನೌನ್ಸ್​​​​ ಆಗಿದೆ. 15 ವೀರ ಸೇನಾನಿಗಳು ವೆಸ್ಟ್​ಇಂಡೀಸ್​ಗೆ ಫ್ಲೈಟ್ ಏರಲು ಸಜ್ಜಾಗಿದ್ದಾರೆ. ಇದ್ರ ನಡುವೆ ತಂಡದ ಆಯ್ಕೆಯ ಪರ-ವಿರೋಧದ ಚರ್ಚೆಗಳು ಜೋರಾಗಿವೆ. ಅದ್ರಲ್ಲೂ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಆಯ್ಕೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಕ್ರಿಕೆಟ್​ ಎಕ್ಸ್​​​​ಪರ್ಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್​ ಹಾರ್ದಿಕ್​​​ ಆಯ್ಕೆಯನ್ನ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ? 

ಗುಜರಾತಿ ಲಾಬಿನಾ? ಅಥವಾ ಅನುಭವ ಕೈ ಹಿಡಿತಾ..?

ಹಾರ್ದಿಕ್ ಪಾಂಡ್ಯ​​​​ ಟಿ20 ವಿಶ್ವಕಪ್​​​​​​ ತಂಡದಲ್ಲಿ ಸ್ಥಾನ ಪಡೆದಿರೋದಕ್ಕೆ ಹಿಂದಿನ ಪ್ರದರ್ಶನ ಕಾರಣವೇ ಹೊರತು, ಪ್ರಸಕ್ತ ಐಪಿಎಲ್​​​​ ಪರ್ಫಾಮೆನ್ಸ್ ಅಲ್ಲವೇ ಅಲ್ಲ. ಯಾಕಂದ್ರೆ 17ನೇ ಐಪಿಎಲ್​ನಲ್ಲಿ ಹಾರ್ದಿಕ್​ ಆಟ ಅಷ್ಟಕಷ್ಟೆ. ಮೊದಲಿನಂತೆ ಆಟದಲ್ಲಿ ಧಮ್ ಇಲ್ಲ. ಬ್ಯಾಟಿಂಗ್​​ ಹಾಗೂ ಬೌಲಿಂಗ್​ ಎರಡರಲ್ಲೂ ಸಾಧಾರಣ ಪ್ರದರ್ಶನ ನೀಡಿದ್ದಾರೆ.

IPL 2024ರಲ್ಲಿ ಹಾರ್ದಿಕ್​​​​​​ ಪಾಂಡ್ಯ

ಮುಂಬೈ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ 17ನೇ ಐಪಿಎಲ್​ನಲ್ಲಿ 10 ಪಂದ್ಯಗಳನ್ನ ಆಡಿದ್ದಾರೆ. 21.89ರ ಸರಾಸರಿಯಲ್ಲಿ ಬರೀ 197 ರನ್​ ಬಾರಿಸಿದ್ದಾರೆ. ಒಂದು ಬಾರಿ ಅರ್ಧಶತಕದ ಸನಿಹ ಸುಳಿದಿಲ್ಲ. ಇನ್ನು ಬೌಲಿಂಗ್​​ನಲ್ಲಿ ಮೊನಚು ಕಳೆದುಕೊಂಡಿರೋ ಪಾಂಡ್ಯ ಕೇವಲ 6 ವಿಕೆಟ್​ ಕಬಳಿಸಿದ್ದು, 11ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ.

6 ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್​​ನಿಂದ ದೂರ

ಹೋಗ್ಲಿ ಐಪಿಎಲ್​ನಲ್ಲಿ ಇಂಪ್ರೆಸ್ಸಿವ್ ಆಟವಾಡುವಲ್ಲಿ ಹಾರ್ದಿಕ್ ಫೇಲಾಗಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಾದ್ರು ಆಡಿರ್ತಾರೆ ಅಂದುಕೊಂಡ್ರೆ ಅಲ್ಲು ಖದರ್ ತೋರಿಸಿಲ್ಲ. ಅಸಲಿಗೆ ಪಾಂಡ್ಯ ಸ್ಫರ್ಧಾತ್ಮಕ ಕ್ರಿಕೆಟ್​ನಲ್ಲಿ ಕೊನೆ ಬಾರಿ ಕಾಣಿಸಿಕೊಂಡಿದ್ದು 2023ರ ಏಕದಿನ ವಿಶ್ವಕಪ್​ನಲ್ಲಿ. ಇನ್ನು, ಹಾರ್ದಿಕ್​​​​ ಕೊನೆ ಟಿ20 ಪಂದ್ಯ ಆಡಿದ್ದು 2023 ಆಗಸ್ಟ್​ನಲ್ಲಿ.

2023ರ ಹಾರ್ದಿಕ್​ T20I ಪ್ರದರ್ಶನ​​​​

ಹಾರ್ದಿಕ್​ ಕಳೆದ ವರ್ಷ 11 ಟಿ20 ಪಂದ್ಯಗಳನ್ನ ಆಡಿದ್ದಾರೆ. ಜಸ್ಟ್​​ 188 ರನ್​ ಹೊಡೆದಿದ್ದಾರೆ. ಬೌಲಿಂಗ್​​ನಲ್ಲಿ ಪಂದ್ಯಕ್ಕೆ ಒಂದು ವಿಕೆಟ್​​ನಂತೆ 11 ವಿಕೆಟ್ ಕಬಳಿಸಿದ್ದಾರೆ. ಬೌಲಿಂಗ್ ಎಕಾನಮಿ 7.28 ಆಗಿದೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್​​ಗೆ ಬಿಗ್ ಶಾಕ್​.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ​

ಹಾರ್ದಿಕ್​​​​​ ಮೇಲಿದ್ಯಾ ಜಯ್ ​ಶಾ ಕೃಪಾಕಟಾಕ್ಷ..?

ಒಂದೆಡೆ ಪ್ರಸಕ್ತ ಐಪಿಎಲ್​ನಲ್ಲಿ ಹಾರ್ದಿಕ್​ ನಿರೀಕ್ಷಿತ ಪ್ರದರ್ಶನ ನೀಡ್ತಿಲ್ಲ. ಇನ್ನೊಂದೆಡೆ ಟಿ20 ಕ್ರಿಕೆಟ್​ನಲ್ಲಿ ಬ್ಯಾಟ್​ ಘರ್ಜಿಸಿಲ್ಲ. ಇಷ್ಟಾದ್ರು ಹಾರ್ದಿಕ್​​ರನ್ನ ಟಿ20 ವಿಶ್ವಕಪ್​​​ ಆಯ್ಕೆ ಮಾಡಿ, ಉಪನಾಯಕನ ಪಟ್ಟಕಟ್ಟಲಾಗಿದೆ. ಇದಕ್ಕೆಲ್ಲ ಗುಜರಾತಿ ಲಾಬಿ ಕಾರಣ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಯಾಕಂದ್ರೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹಾಗೂ ಹಾರ್ದಿಕ್​​ ಮೂಲತಃ ಗುಜರಾತ್​​ನವರು. ಈ ಕಾರಣಕ್ಕೆ ಜಯ್​​ ಶಾ, ಬ್ಯಾಡ್ ಫಾರ್ಮ್​ನಲ್ಲಿದ್ರೂ, ಹಾರ್ದಿಕ್​​​​​​​ಗೆ ಮಣೆ ಹಾಕಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಮಾತನಾಡಿಕೊಳ್ತಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

ಹಾರ್ದಿಕ್ ಪಾಂಡ್ಯರನ್ನ ಟಿ20 ವಿಶ್ವಕಪ್ ತಂಡಕ್ಕೆ​​ ಆಯ್ಕೆ ಮಾಡಿರೋದು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಸದ್ಯ ಐಪಿಎಲ್​ನಲ್ಲಿ ಮಂಕಾದ ಸ್ಟಾರ್ ಆಲ್​ರೌಂಡರ್ ವಿಶ್ವಕಪ್​​​​ ಅಖಾಡದಲ್ಲಿ ಅಬ್ಬರಿಸಿ ತಮ್ಮ ಆಯ್ಕೆಯನ್ನ ಸಮರ್ಥಿಕೊಳ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಟದಲ್ಲಿ ಧಮ್ ಇಲ್ಲ, ಆದ್ರೂ T20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಯ್ಕೆ.. ಇದಕ್ಕೆಲ್ಲ ಗುಜರಾತಿ ಲಾಬಿ ಕಾರಣನಾ?

https://newsfirstlive.com/wp-content/uploads/2024/05/PANDYA.jpg

Load More