newsfirstkannada.com

ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್​ಐಟಿ ಜಾಣ ನಡೆ.. ದಿಟ್ಟ ಹೆಜ್ಜೆಯಿಟ್ಟ ತನಿಖಾ ತಂಡ..!

Share :

Published May 1, 2024 at 2:13pm

    ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ ವಿಡಿಯೋ ಕೇಸ್

    ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಿರುವ ರಾಜ್ಯ ಸರ್ಕಾರ

    ತನಿಖೆ ಆರಂಭಿಸಿರುವ ಎಸ್​ಐಟಿಗೆ ಸಾಲು ಸಾಲು ಸವಾಲ್

ಬೆಂಗಳೂರು: ರಾಜ್ಯದಲ್ಲಿ ಹಾಸನ ಅಶ್ಲೀಲ ವಿಡಿಯೋ ಪ್ರಕರಣವು ಭಾರೀ ಸಂಚಲನ ಮೂಡಿಸಿದೆ. ವಿಡಿಯೋ ವೈರಲ್ ಆಗ್ತಿದ್ದಂತೆಯೇ ಅದರಲ್ಲಿದ್ದಾರೆ ಎನ್ನಲಾಗಿರುವ ಕೆಲವು ಸಂತ್ರಸ್ತೆ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತ ಮಹಿಳೆಯರು ಮಾತ್ರವಲ್ಲ, ಅವರನ್ನು ನಂಬಿದ ಕುಟುಂಬಗಳು ಕೂಡ ಮುಜುಗರ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸ್ತಿರುವ ಎಸ್​ಐಟಿ ಘಟಕವು, ಸಂತ್ರಸ್ತರನ್ನು ಗೌಪ್ಯವಾಗಿ ವಿಚಾರಣೆ ನಡೆಸಲು ಮುಂದಾಗಿದೆ.

ವರದಿಗಳ ಪ್ರಕಾರ, ಸರ್ಕಾರಿ ನೌಕರರು, ಪೊಲೀಸರು ಇನ್ನುಳಿದಂತೆ ಅನೇಕ ಮಹಿಳೆಯರಿಗೆ ಮೋಸವಾಗಿದೆ ಎಂಬ‌ ಆರೋಪ ಇದೆ. ಸಂತ್ರಸ್ತ ಮಹಿಳೆಯರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ಮಾಡಲು ನಿರ್ಧಾರ ಮಾಡಿದ್ದಾರೆ. ಸಂತ್ರಸ್ತರ ಕುಟುಂಬದವರಿಗೂ ತಿಳಿಯದಂತೆ ವಿಚಾರಣೆಗೆ ಬರಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ:ಇನ್​ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?

ಅಂತೆಯೇ ಸಂತ್ರಸ್ತರ ಮೊಬೈಲ್​ಗೆ ನೋಟಿಸ್ ಕಳುಹಿಸಿ ವಿಚಾರಣೆ ಮಾಡಲು ನಿರ್ಧರಿಸಿದ್ದಾರೆ. ಯಾಕೆಂದರೆ ವಿಚಾರ ಹೊರಬಂದರೆ ಕುಟುಂಬದಲ್ಲಿ ಬಿರುಕು ಉಂಟಾಗಬಹುದು ಮತ್ತು ಜಗಳವಾಗುವ ಸಾಧ್ಯತೆ ಇದೆ. ಇದರಿಂದ ಮೋಸ‌ ಹೋಗಿರುವ ಮಹಿಳೆಯರ ವಿಚಾರಣೆಯನ್ನು ಗೌಪ್ಯವಾಗಿಡಲು ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.

ಇದನ್ನು ಮನದಲ್ಲಿಟ್ಟುಕೊಂಡೇ ಮಹಿಳಾ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿದೆ. ಈಗಾಗಲೇ ವಿಡಿಯೋದಲ್ಲಿರುವ ಮಹಿಳೆಯರ ಲಿಸ್ಟ್ ಮಾಡಿಕೊಂಡಿದೆ. ಹಲವು ಮಹಿಳೆಯರು ‌ಮುಜುಗದಿಂದ‌ ಹೊರ ಬಾರದ ಕಾರಣ ಅವರ ಫೋನ್ ನಂಬರ್ ಪಡೆದು‌ ಮೊಬೈಲ್​ಗೆ ‌ನೋಟಿಸ್ ನೀಡಲು ‌ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್​ಐಟಿ ಜಾಣ ನಡೆ.. ದಿಟ್ಟ ಹೆಜ್ಜೆಯಿಟ್ಟ ತನಿಖಾ ತಂಡ..!

https://newsfirstlive.com/wp-content/uploads/2024/05/SIT.jpg

Load More