Black Magic ಗಾಗಿ 9 ವರ್ಷದ ವಿದ್ಯಾರ್ಥಿ ಬಲಿ; ಶಾಲಾ ಮಾಲೀಕನಿಂದಲೇ ನಡೀತಿ ಘನಘೋರ ಕೃತ್ಯ!

author-image
Gopal Kulkarni
Updated On
Black Magic ಗಾಗಿ 9 ವರ್ಷದ ವಿದ್ಯಾರ್ಥಿ ಬಲಿ; ಶಾಲಾ ಮಾಲೀಕನಿಂದಲೇ ನಡೀತಿ ಘನಘೋರ ಕೃತ್ಯ!
Advertisment
  • ಭಾನಾಮತಿ ಪೂಜೆಗೆ 9 ವರ್ಷದ ಮಗುವನ್ನು ಬಲಿ ಪಡೆದ ಶಾಲಾ ಮಾಲೀಕ
  • ತನ್ನದೇ ಶಾಲೆಯಲ್ಲಿ ಕಲಿಯುತ್ತಿದ್ದ ಮಗುವನ್ನು ಬ್ಲ್ಯಾಕ್ ಮ್ಯಾಜಿಕ್​ಗೆ ಬಲಿಕೊಟ್ಟ
  • ಉತ್ತರಪ್ರದೇಶದ ಹತ್ರಾಸ್ ಜಿಲ್ಲೆ ಬೆಚ್ಚಿ ಬೀಳಿಸುವ ಘಟನೆಗೆ ಸಾಕ್ಷಿಯಾಗಿದೆ

ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. 2 ತರಗತಿಯಲ್ಲಿ ಕಲಿಯುತ್ತಿರುವ 9 ವರ್ಷದ ಬಾಲಕನನ್ನು ಭಾನಾಮತಿ ಮಾಟ ಮಂತ್ರಕ್ಕೆ ಬಲಿಕೊಡಲಾಗಿದೆ . ಬ್ಲ್ಯಾಕ್ ಮ್ಯಾಜಿಕ್​ ಆಚರಣೆ ಮಾಡುವುದಕ್ಕಾಗಿ 11 ವರ್ಷದ ಬಾಲಕನನ್ನು ಶಾಲೆಯ ಮಾಲೀಕರೇ ಬಲಿಕೊಟ್ಟಿರುವಂತಹ ಘಟನೆ ನಡೆದಿದೆ.ಬಲಿಯಾದ ಬಾಲಕನನ್ನು ಕೃತಾರ್ಥ್ ಎಂದು ಗುರುತಿಸಲಾಗಿದೆ.

ಈ ಬಾಲಕ ಡಿ.ಎಲ್ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿ ಕಲಿಯುತ್ತಿದ್ದ. ಶಾಲೆಯ ಮಾಲೀಕನಾದ ಜಸೋಧನ್ ಸಿಂಗ್ ಅತೀಂದ್ರಿಯ ಶಕ್ತಿಗಳನ್ನ ಹಾಗೂ ತಾಂತ್ರಿಕ ಆಚರಣೆಗಳನ್ನ ತುಂಬಾ ನಂಬುತ್ತಿದ್ದ. ಭಾನಾಮತಿಯಂತಹ ಪೂಜೆಗಳಲ್ಲಿ ನಿರತನಾಗುವ ಹುಚ್ಚು ಇತ್ತು. ಒಂದು ಮಗುವನ್ನು ಬಲಿಕೊಟ್ಟು ಪೂಜೆ ಮಾಡಿದರೆ ತನ್ನ ಶೈಕ್ಷಣಿಕ ಸಂಸ್ಥೆ ದೊಡ್ಡ ಮಟ್ಟಕ್ಕೆ ಜನಪ್ರಿಯತೆ ಪಡೆಯುತ್ತದೆ ಎಂದು ನಂಬಿದ್ದ ಮಾಲೀಕ, ತನ್ನ ಪುತ್ರನಿಗೆ ಈ ಬಗ್ಗೆ ಹೇಳಿದ್ದ. ಪುತ್ರ ದಿನೇಶ್ ಭಗೆಲ್ ಡಿ ಎಲ್ ಪಬ್ಲಿಕ್ ಶಾಲೆಯ ನಿರ್ದೇಶಕನಾಗಿದ್ದು. ಮಗುವನ್ನು ಬಲಿಕೊಟ್ಟು ಭಾನಾಮತಿ ಪೂಜೆ ಮಾಡಲು ಒಪ್ಪಿಕೊಂಡಿದ್ದ.

ಇದನ್ನೂ ಓದಿ:IT Notice: ತಿಂಗಳಿಗೆ 10 ಸಾವಿರ ಗಳಿಸುವ ದಿನಗೂಲಿ ಕಾರ್ಮಿಕನಿಗೆ ₹2 ಕೋಟಿ IT ನೋಟಿಸ್​!

ಸೆಪ್ಟಂಬರ್ 23 ರಂದು ತಂದೆ ಮತ್ತು ಮಗ ಮೂರು ಜನ ಶಾಲಾ ಸಿಬ್ಬಂದಿಯೊಂದಿಗೆ ಕೃತಾರ್ಥ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗಿದ್ದಾರೆ. ಅಲ್ಲಿ ಆತನಿಗೆ ಡ್ರಗ್ಸ್​ ನೀಡಿ ಎಚ್ಚರ ತಪ್ಪಿಸಲಾಗಿದೆ. ಪೊಲೀಸರು ಹೇಳುವ ಪ್ರಕಾರ ಯಾವಾಗ ಹುಡುಗನಿಗೆ ಪ್ರಜ್ಞೆ ಬಂತೋ ಅವನು ಅಳುತ್ತಾ ಕಿರುಚಲು ಶುರು ಮಾಡಿದ್ದಾನೆ. ಆಗ ಬಾಲಕನ ಕತ್ತು ಹಿಸುಕಿ ಕೊಂದು ಮೃತದೇಹವನ್ನು ಕಾರ್​ನಲ್ಲಿ ತೆಗೆದುಕೊಂಡು ಬರಲಾಗಿತ್ತಂತೆ.

ಇದನ್ನೂ ಓದಿ:ಜನಪ್ರಿಯ ನೀಲಿಚಿತ್ರ ತಾರೆ ಬಂಧನ; ಈಕೆ ಮಾಡಿದ್ದು ಅಂತಿಂಥ ತಪ್ಪು ಅಲ್ಲ..!

ಬಳಿಕ ಬ್ಲ್ಯಾಕ್ ಮ್ಯಾಜಿಕ್​​ನ ಎಲ್ಲಾ ಆಚರಣೆಗಳು ಮುಗಿದ ಬಳಿಕ ಬಾಲಕನ ಮನೆಗೆ ಕರೆ ಮಾಡಿ ನಿಮ್ಮ ಮಗನ ಆರೋಗ್ಯ ಸರಿಯಾಗಿಲ್ಲ. ಅವನನ್ನು ದಿನೇಶ್ ಭಾಗೆಲ್ ಕಾರ್​​ನಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕೂಡಲೇ ಮಗನ ಹಾಸ್ಟೆಲ್​ನತ್ತ ಧಾವಿಸಿದ ಕೃತಾರ್ಥ್​​ನ ಪೋಷಕರು. ನಡುರಸ್ತೆಯಲ್ಲಿಯೇ ದಿನೇಶ್ ಭಾಗೆಲ್ ಕಾರ್ ತಡೆದು. ಏನಾಯ್ತು ಎಂದು ವಿಚಾರಿಸಿದ್ದಾರೆ. ಮಗನ ಸ್ಥಿತಿ ಕಂಡು ಕೂಡಲೇ ಅನುಮಾನಗೊಂಡ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

publive-image

ಸದ್ಯ ಹತ್ರಾಸ್ ಪೊಲೀಸರು ಐದು ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲಾ ಮಾಲೀಕ ಜಸೋಧನ್ ಸಿಂಗ್, ಅವರ ಪುತ್ರ ದಿನೇಶ್ ಭಗೆಲ್, ಶಾಲೆಯ ಪ್ರಿನ್ಸಿಪಾಲ್ ಲಕ್ಷ್ಮಣ ಸಿಂಗ್, ರಾಮಪ್ರಕಾಶ್ ಸೋಳಂಕಿ ಹಾಗೂ ವಿರುಪಾಕ್ಷ ಸಿಂಗ್ ಎನ್ನುವ ಇಬ್ಬರು ಶಾಲಾ ಶಿಕ್ಷಕರನ್ನು ಬಂಧಿಸಿ ಬಿಎನ್​ಎಸ್ ಸೆಕ್ಷನ್ 103(1) ಅಡಿ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment