Advertisment

ಮಾಜಿ ಸಚಿವ ರೇವಣ್ಣ ಬಂಧನ.. ಸಿಐಡಿ ಕಚೇರಿಯಲ್ಲಿ ಏನೆಲ್ಲ ಆಯ್ತು..?

author-image
Ganesh
Updated On
ರೇವಣ್ಣ ಅರೆಸ್ಟ್.. ಭಾರತದತ್ತ ಪ್ರಜ್ವಲ್​ ಮುಖ.. ಇಂದು​ ಬೆಂಗಳೂರಿಗೆ ​ರಿಟರ್ನ್​? 
Advertisment
  • ಸುಮಾರು 2 ಗಂಟೆಗಳ ಕಾಲ ರೇವಣ್ಣಗೆ ಮೆಡಿಕಲ್​ ಚೆಕಪ್
  • ಮೆಡಿಕಲ್​ ಚೆಕಪ್​ ಬಳಿಕ ಸಿಐಡಿ ಕಚೇರಿಗೆ ರೇವಣ್ಣ ವಾಪಸ್
  • ಮಹಿಳೆ ಅಪಹರಣ ಕೇಸ್​ನಲ್ಲಿ ಬಂಧಿಸಿರುವ ಎಸ್ಐಟಿ

ಕೆ.ಆರ್​.ನಗರ ಮಹಿಳೆಯ ಅಪಹರಣ ಆರೋಪ ಕೇಸ್​ನಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisment

ಬಂಧನದ ಬಳಿಕ ಸಿಐಡಿ ಕಚೇರಿಯಿಂದ ಬೌರಿಂಗ್ ಆಸ್ಪತ್ರೆಗೆ ರೇವಣ್ಣರನ್ನ ಕರೆದೊಯ್ದ ಎಸ್​ಐಟಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಬರೋಬ್ಬರಿ 2 ಗಂಟೆ ರೇವಣ್ಣ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ, ಬಿ.ಪಿ, ಶುಗರ್, ಯೂರಿನ್, ಬ್ಲಡ್​ ಚೆಕಪ್​ ಮಾಡಿದ್ದಾರೆ. ಈ ವೇಳೆ ರೇವಣ್ಣಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಇಸಿಜಿ ಸಹ ಮಾಡಿಸಲಾಗಿದೆ.

ಇದನ್ನೂ ಓದಿ:ಅರೆಸ್ಟ್ ಆಗಲು ಜ್ಯೋತಿಷ್ಯದ ಪ್ರಕಾರವೇ ನಡೆದುಕೊಂಡ್ರಂತೆ ರೇವಣ್ಣ.. ಆ ಮುಕ್ಕಾಲು ಗಂಟೆ ಮಾಡಿದ್ದೇನು ಗೊತ್ತಾ..?

publive-image

ಮೆಡಿಕಲ್​ ಚೆಕಪ್​ ಬಳಿಕ ಸಿಐಡಿ ಕಚೇರಿಗೆ ರೇವಣ್ಣ ವಾಪಸ್​
ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್​ ಚೆಕಪ್​ ಮುಗಿಸಿದ ಬಳಿಕ ಹೆಚ್​.ಡಿ ರೇವಣ್ಣರನ್ನ ಸಿಐಡಿ ಕಚೇರಿಗೆ ವಾಪಸ್​ ಕರೆತರಲಾಯ್ತು. ರೇವಣ್ಣಗಾಗಿ ಹೊಸ ಹಾಸಿಗೆ ಹಾಗೂ ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿತ್ತು. ಈವರೆಗೆ ಸುಖದ ಸುಪ್ಪತ್ತಿನಲ್ಲಿದ್ದ ರೇವಣ್ಣ, ಬಂಧನಕ್ಕೆ ಒಳಗಾಗಿ ಸಿಐಡಿ ಕಚೇರಿಯಲ್ಲೇ ರಾತ್ರಿ ಕಳೆಯುವಂತಾಯ್ತು.

Advertisment

ಒಟ್ನಲ್ಲಿ ರಾಜಕೀಯ ಮೇರು ಪರ್ವತದಲ್ಲಿ ಮಿರಿ ಮಿಂಚಿದ್ದ ದೊಡ್ಡಗೌಡರ ಕುಟುಂಬದ ಕುಡಿಯೊಂದು ಇಂತದೊಂದು ಪ್ರಕರಣದ ಸುಳಿಗೆ ಸಿಲುಕಿರೋದು ವಿಪರ್ಯಾಸ. ರೇವಣ್ಣ ಬಂಧನದ ಬಳಿಕ ಇಡೀ ಗೌಡರ ಕುಟುಂಬವೇ ಚಿಂತೆಗೆ ಬಿದ್ದಿದೆ. ಕುಟುಂಬದ ಗೌರವ, ಘನತೆಗೆ ಈ ಪ್ರಕರಣ ಬಹುದೊಡ್ಡ ಪೆಟ್ಟು ನೀಡಿದಂತಾಗಿದೆ.

ಇದನ್ನೂ ಓದಿ:ಪ್ರಚಾರಕ್ಕೆ ದುಡಿಲ್ಲ..! ಟಿಕೆಟ್ ವಾಪಸ್ ಕೊಟ್ಟು ಕಾಂಗ್ರೆಸ್​ಗೆ ಬಿಗ್​ ಶಾಕ್ ನೀಡಿದ ಅಭ್ಯರ್ಥಿ..!

ಇದನ್ನೂ ಓದಿ:ರೇವಣ್ಣ ಅರೆಸ್ಟ್​ ಬೆನ್ನಲ್ಲೇ ತಡರಾತ್ರಿ ದೇವೇಗೌಡರ ನಿವಾಸದಲ್ಲಿ ಏನೆಲ್ಲ ನಡೀತು..? ಕಂಪ್ಲೀಟ್ ಮಾಹಿತಿ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment