newsfirstkannada.com

ಜಾಮೀನು ಮುಂದೂಡಿಕೆ ಆಗ್ತಿದ್ದಂತೆ ಫುಲ್‌ ಅಪ್ಸೆಟ್‌; ಜೈಲಿನಲ್ಲಿ ಹೆಚ್‌.ಡಿ ರೇವಣ್ಣ ಹೇಳಿದ್ದೇನು?

Share :

Published May 9, 2024 at 9:14pm

    ಮುಂದಿನ ಸೋಮವಾರದವರೆಗೂ ರೇವಣ್ಣಗೆ ಪರಪ್ಪನ ಜೈಲೇ ಗತಿ!

    ಇವತ್ತು ಬಂಧನದಿಂದ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ H.D ರೇವಣ್ಣ

    ಬೇಲ್‌ ಸುದ್ದಿ ತಿಳಿಯುತ್ತಿದ್ದಂತೆ ಹೆಚ್‌.ಡಿ ರೇವಣ್ಣ ಅವರು ಫುಲ್‌ ಅಪ್ಸೆಟ್!

ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣಗೆ ಮತ್ತೆ 4 ದಿನ ಸೆರೆವಾಸವೇ ಖಾಯಂ ಅಗಿದೆ. 7 ದಿನ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ರೇವಣ್ಣ ಅವರು ಇವತ್ತು ಬಂಧನದಿಂದ ಮುಕ್ತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದ್ರೆ ಮತ್ತಷ್ಟು ವಾದ ಮಂಡಿಸಲು ಎಸ್​​ಐಟಿ ಮನವಿ ಮಾಡಿದ ಹಿನ್ನೆಲೆಯಲ್ಲಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಸೋಮವಾರದವರೆಗೂ H.D ರೇವಣ್ಣಗೆ ಪರಪ್ಪನ ಜೈಲೇ ಗತಿ!
ಮಾಜಿ ಸಚಿವ ಹೆಚ್.ಡಿ ರೇವಣ್ಣರನ್ನ ಸ್ತ್ರೀ ಕಂಟಕ ಸಂಕಷ್ಟಕ್ಕೆ ತಳ್ಳಿದೆ. ಸಂತ್ರಸ್ತ ಮಹಿಳೆಯ ಅಪಹರಣ ಆರೋಪದ ಮೇಲೆ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್​ನಲ್ಲಿ ಮೊದಲನೇ ಆರೋಪಿಯಾಗಿರೋ ಹೆಚ್​.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಕೋರ್ಟ್​​​​ ಎಸ್​​ಐಟಿ ಕಸ್ಟಡಿಗೆ ವಹಿಸಿತ್ತು. ಈ ಬೆನ್ನಲ್ಲೇ ಕಳೆದ 2 ದಿನಗಳಿಂದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇವತ್ತಿಗೆ ಮುಂದೂಡಿತ್ತು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ವೈರಲ್‌; ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ; ಆಗಿದ್ದೇನು? 

ಇವತ್ತು ಬೆಳಗ್ಗೆ ಅರ್ಜಿ ಕೈಗೆತ್ತಿಕೊಂಡ ಕೋರ್ಟ್​ ಮತ್ತಷ್ಟು ವಾದ ಮಂಡಿಸಲು ಮಧ್ಯಾಹ್ನ 2.45ಕ್ಕೆ ವಿಚಾರಣೆ ಮುಂದೂಡಿತ್ತು. ಮಧ್ಯಾಹ್ನ 2.50ಕ್ಕೆ ವಿಚಾರಣೆ ಶುರು ಮಾಡಿದ ನ್ಯಾಯಾಧೀಶರು ಸುದೀರ್ಘವಾಗಿ ಎರಡೂ ಕಡೆಯ ವಕೀಲರ ವಾದ ಆಲಿಸಿದರು. ಎಸ್​​​ಐಟಿ ಮತ್ತಷ್ಟು ವಾದ ಮಂಡಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇವತ್ತಾದ್ರೂ ಬಂಧನದಿಂದ ರಿಲೀಫ್ ಸಿಗುವ ನಿರೀಕ್ಷೆಯಲ್ಲಿದ್ದ ಹೆಚ್​.ಡಿ.ರೇವಣ್ಣಗೆ ಕೋರ್ಟ್​ ಶಾಕ್ ನೀಡಿದೆ. ಮಾಜಿ ಸಚಿವರಿಗೆ ಸದ್ಯ ಜೈಲೇ ಗತಿಯಾಗಿದೆ.

ಇವತ್ತು ಹೆಚ್​.ಡಿ.ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿದ್ರು. ರೇವಣ್ಣ 65 ವರ್ಷದ ವ್ಯಕ್ತಿಯಾಗಿದ್ದು ಮಾನಸಿಕ ಒತ್ತಡ ಎದುರಿಸಿದ್ದಾರೆ. 4 ದಿನ ಕಸ್ಟಡಿ ಎದುರಿಸಿದ್ದು ಅನಾರೋಗ್ಯ ಸಮಸ್ಯೆ ಇದೆ. ಈ ಆಧಾರದ ಮೇಲೆ ಜಾಮೀನು ನೀಡಬೇಕು ಅಂತ ಮನವಿ ಮಾಡಿದರು. ಅಲ್ಲದೇ ಅವರ ವಿರುದ್ಧ ದಾಖಲಾಗಿರುವ ದೂರಿನಲ್ಲಿರುವ ಲೋಪಗಳನ್ನು ಎತ್ತಿ ತೋರಿಸಿದರು. ಆದ್ರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್​ಐಟಿ ಪರ ವಕೀಲೆ ಜಯ್ನಾ ಕೊಠಾರಿ ರೇವಣ್ಣ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ, ಸಮರ್ಪಕ ವಿಚಾರಣೆ ಆಗಿಲ್ಲ, ರೇವಣ್ಣ ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರೋದ್ರಿಂದ ಜಾಮೀನು ನೀಡಬಾರದು ಅಂತ ವಾದ ಮಂಡಿಸಿದ್ದರು.

ಇದನ್ನೂ ಓದಿ: 700 ಮಹಿಳೆಯರ ದೂರು? ಪ್ರಜ್ವಲ್ ರೇವಣ್ಣ ಕೇಸ್‌ಗೆ NCW ಬಿಗ್ ಟ್ವಿಸ್ಟ್‌; ಹೇಳಿದ್ದೇನು?

ಜೈಲಿನಲ್ಲಿ ಫುಲ್‌ ಅಪ್ಸೆಟ್ ಆದ ರೇವಣ್ಣ! 
ಜಾಮೀನು ಅರ್ಜಿ ಸೋಮವಾರಕ್ಕೆ‌ ಮುಂದೂಡಿಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಹೆಚ್‌.ಡಿ ರೇವಣ್ಣ ಅವರು ಫುಲ್‌ ಅಪ್ಸೆಟ್ ಆಗಿದ್ದಾರೆ. ಇಂದು ಬೆಳ್ಳಗ್ಗಿಯಿಂದಲೇ ಸೆಪ್ಪಾಗಿದ್ದ ರೇವಣ್ಣ ಇದೀಗ ಮತ್ತಷ್ಟು‌ ಬೇಸರಕ್ಕೆ ಒಳಗಾಗಿದ್ದಾರೆ. ಯಾರ ಬಳಿಯೂ ಮಾತನಾಡದೇ ಸುಮ್ಮನೆ ಕುಳಿತಿದ್ದಾರೆ. ನ್ಯೂಸ್‌ ಫಸ್ಟ್‌ಗೆ ವಿಶ್ವಾಸರ್ಹ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಹೋದಾಗ ಖುಷಿಯಾಗಿಯೇ ಇದ್ದ ಹೆಚ್‌.ಡಿ ರೇವಣ್ಣ ಅವರು ಇಂದು ಬೆಳಗ್ಗಿನಿಂದ ಅಪ್ಸೆಟ್ ಆಗಿ ಕುಳಿತಿದ್ದಾರಂತೆ. ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣದಲ್ಲಿ ನಡೆದ ಘಟನೆಯ ಬಗ್ಗೆ ಯೋಚನೆ ಮಾಡುತ್ತಾ ಕುಳಿತಿದ್ದಾರೆ. ಜೈಲಿನಲ್ಲಿ ವೈದ್ಯರ ಪರೀಕ್ಷೆಯೂ ಬೇಡ ಎಂದು ರೇವಣ್ಣ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾಮೀನು ಮುಂದೂಡಿಕೆ ಆಗ್ತಿದ್ದಂತೆ ಫುಲ್‌ ಅಪ್ಸೆಟ್‌; ಜೈಲಿನಲ್ಲಿ ಹೆಚ್‌.ಡಿ ರೇವಣ್ಣ ಹೇಳಿದ್ದೇನು?

https://newsfirstlive.com/wp-content/uploads/2024/05/REVANNA-4.jpg

Load More