Advertisment

ಕಿಚನ್​​ನಲ್ಲಿ ಇದು ಇಲ್ಲ ಅಂದ್ರೆ ಗಮ್ಮತ್ತೇ ಇರಲ್ಲ.. ಹೆಲ್ತ್​ಗೆ ಬೇಕೇಬೇಕು ಕಪ್ಪು ಉಪ್ಪು!

ಈ ವರೆಗೂ ಬಿಳಿ ಉಪ್ಪನ್ನೇ ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದೇವೆ. ಆಹಾರದಲ್ಲಿ ಕಪ್ಪು ಉಪ್ಪು ಬಳಸಿಲ್ಲ. ಕೆಲವೊಂದು ಕಡೆ ಬಳಸಿದರೂ ಅದು ತೀರ ಕಡಿಮೆ. ಇದನ್ನು ಉಪಯೋಗಿಸುವುದು ಒಂದು ಅದ್ಭುತ ಆಯ್ಕೆ ಎನ್ನಬಹುದು.

author-image
Bhimappa
BLACK_SALT
Advertisment

ಉಪ್ಪು ಇಲ್ಲ ಎಂದರೆ ಕಿಚನ್ ರೂಮ್​ನಲ್ಲಿ ಗಮ್ಮತ್ತೇ ಇರಲ್ಲ. ಯಾವುದೇ ಅಡುಗೆಗೆ ಸಾಲ್ಟ್ ಹಾಕದಿದ್ದರೇ ಅದರ ರುಚಿ ಹಾಳಾಗುತ್ತದೆ. ಆಹಾರಕ್ಕೆ ಏನೇ ಹಾಕಿ ಘಮಘಮಿಸುವಂತೆ ಮಾಡಿದರೂ ಅದಕ್ಕೆ 100 ರಷ್ಟು ರುಚಿ ತಂದುಕೊಡುವುದು ಉಪ್ಪು. ಆಹಾರದಲ್ಲಿ ಸಾಮಾನ್ಯ ಉಪ್ಪು ಬಳಸುವುದಕ್ಕಿಂತ ಕಪ್ಪು ಉಪ್ಪು (Black Salt) ಬಳಸಿದರೆ ನಮ್ಮ ಆರೋಗ್ಯಕ್ಕೆ ಏನೇನು ಉಪಯೋಗಗಳು ಇವೆ?. 

Advertisment

ನಾವು ಈ ವರೆಗೂ ಬಿಳಿ ಉಪ್ಪನ್ನೇ ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದೇವೆ. ಆಹಾರದಲ್ಲಿ ಕಪ್ಪು ಉಪ್ಪು ಬಳಸಿಲ್ಲ. ಕೆಲವೊಂದು ಕಡೆ ಬಳಸಿದರೂ ಅದು ತೀರ ಕಡಿಮೆ. ಇದನ್ನು ಉಪಯೋಗಿಸುವುದು ಒಂದು ಅದ್ಭುತ ಆಯ್ಕೆ ಎನ್ನಬಹುದು. ಏಕೆಂದರೆ, ಹಲವಾರು ದಶಕಗಳಿಂದ ದಕ್ಷಿಣ ಏಷ್ಯಾದ ಹಲವಾರು ರಾಷ್ಟ್ರಗಳಲ್ಲಿ ಇದನ್ನು ಬಳಸುತ್ತಿದ್ದಾರೆ. ಇದು ವಿಶಿಷ್ಟವಾದ ರುಚಿ ಹಾಗೂ ಆರೋಗ್ಯದ ಪ್ರಯೋಜನ ಹೊಂದಿದೆ. ಸಾಮಾನ್ಯ ಉಪ್ಪುಗಿಂತ ಕಪ್ಪು ಉಪ್ಪು ಹೆಚ್ಚಿನ ಆರೋಗ್ಯದ ಫಲಗಳನ್ನ ಹೊಂದಿದೆ. 

ಜೀರ್ಣಕ್ರಿಯೆ, ಉಸಿರಾಟ ಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಕಪ್ಪು ಉಪ್ಪು ನಮಗೆ ಬೇಕೇಬೇಕು. ಒಂದು ವೇಳೆ ನಿಮಗೆ ಅಲರ್ಜಿ ಅಥವಾ ಶೀತ, ಮೂಗು ಕಟ್ಟಿಕೊಂಡಿದ್ದರೆ, ಉಗುರು ಬೆಚ್ಚಗಿನ ಬಿಸಿ ನೀರಿಗೆ ಕಪ್ಪು ಉಪ್ಪು ಸೇರಿಸಿ ಅದರ ಆವಿಯನ್ನು ಮೂಗಿನ ಮೂಲಕ ತೆಗೆದುಕೊಂಡರೆ ಸರಳವಾಗಿ ಉಸಿರಾಡಲು ಅನುಕೂಲವಾಗುತ್ತದೆ. ಉರಿಯೂತ ನಿವಾರಿಸಿ, ನಂಜುನಿರೋಧಕ ಗುಣಲಕ್ಷಣಗಳು (Anti-Inflammatory and Antiseptic Properties) ಮೂಗಿನ ಮಾರ್ಗಗಳನ್ನು ತೆರವುಗೊಳಿಸಲು ಇದು ಸಹಾಯ ಮಾಡುತ್ತದೆ. 

ಇದನ್ನೂ ಓದಿ:ತುಳಸಿ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳು ಇವೆ?

BLACK_SALT_New

ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಎಲೆಕ್ಟ್ರೋಲೈಟ್‌ (Electrolytes) ಗಳನ್ನು ಸಮತೋಲನಗೊಳಿಸಬೇಕು. ಇಂತಹವುಗಳನ್ನು ಸಮತೋಲನಗೊಳಿಸಲು ಕಪ್ಪು ಉಪ್ಪು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಚೆನ್ನಾಗಿ ಹೈಡ್ರೀಕರಿಸಿರುವುದರ ಜೊತೆಗೆ ಚೈತನ್ಯದಿಂದ ಇರಿಸಲು ಸಹಾಯ ಮಾಡುತ್ತದೆ.

Advertisment

ಕಪ್ಪು ಉಪ್ಪು ದೇಹದ ಒಳಭಾಗಕ್ಕೆ ಮಾತ್ರವಲ್ಲ, ಚರ್ಮಕ್ಕೂ ಅದ್ಭುತವಾದ ಆರೋಗ್ಯ ನೀಡುತ್ತದೆ. ಮೊಡವೆ, ಎಸ್ಜಿಮಾ ಅಥವಾ ಸಾಮಾನ್ಯ ಚರ್ಮದ ಕಿರಿಕಿರಿಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಹಕರಿಸುತ್ತದೆ. ಇದರಲ್ಲಿರುವ ಖನಿಜಗಳು ಚರ್ಮಕ್ಕೆ ಬೇಡವಾದ ನೈಸರ್ಗಿಕ ಎಣ್ಣೆಗಳನ್ನು ಸಮತೋಲನದಲ್ಲಿ ಇಡುತ್ತದೆ. ಇದರಿಂದ ನಯವಾದ, ಆರೋಗ್ಯಕರ ಚರ್ಮ ನಿಮ್ಮದಾಗುತ್ತದೆ.

ಸಾಮಾನ್ಯ ಉಪ್ಪಿಗಿಂತ ಕಪ್ಪು ಉಪ್ಪು ಹೆಚ್ಚು ಖನಿಜಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಕಡಿಮೆ ಸಂಸ್ಕರಿಸಿದ್ದರಿಂದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೃದಯದ ಆರೋಗ್ಯ ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸ್ನಾಯು ಸೆಳೆತವನ್ನು ನಿವಾರಿಸುತ್ತದೆ. ವಿಟಮಿನ್‌ಗಳ ಹೀರಿಕೊಳ್ಳುವಿಕೆಯನ್ನು ಕಪ್ಪು ಉಪ್ಪು ಹೆಚ್ಚಿಸುತ್ತದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

kajal on eyes, health benefits Skin Health Health Tips Black Salt
Advertisment
Advertisment
Advertisment