Advertisment

ನಿಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು ಊಟ ಮಾಡಿಸ್ತಿದ್ದೀರಾ..? ಬಿ ಕೇರ್​​ ಫುಲ್​..!

ಮಕ್ಕಳು ಊಟ, ತಿಂಡಿ ಮಾಡಲ್ಲ. ಇದು ಪೋಷಕರ ಸಾಮಾನ್ಯ ಪುಕಾರು. ಒಂದು ಹೊತ್ತಿನ ಊಟ ಮಾಡಿಸಬೇಕು ಅಂದ್ರೆ ದೊಡ್ಡ ಸಹವಾಸವೇ ಸರಿ. ಆದರೆ ಕೆಲವು ಅಮ್ಮ, ಅಜ್ಜಿಯಂದಿರು ಸ್ಮಾರ್ಟ್​ ಐಡಿಯಾ ಮಾಡುತ್ತಾರೆ. ಅದುವೇ ಸ್ಮಾರ್ಟ್​ ಫೋನ್. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸ್ತಿರುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಎಷ್ಟು ಡೇಂಜರ್ ಗೊತ್ತಾ..?

author-image
Ganesh Kerekuli
Phone with feed (1)
Advertisment

ಮಕ್ಕಳು ಊಟ, ತಿಂಡಿ ಮಾಡಲ್ಲ. ಇದು ಪೋಷಕರ ಸಾಮಾನ್ಯ ಪುಕಾರು. ಒಂದು ಹೊತ್ತಿನ ಊಟ ಮಾಡಿಸಬೇಕು ಅಂದ್ರೆ ದೊಡ್ಡ ಸಹವಾಸವೇ ಸರಿ. ಆದರೆ ಕೆಲವು ಅಮ್ಮ, ಅಜ್ಜಿಯಂದಿರು ಸ್ಮಾರ್ಟ್​ ಐಡಿಯಾ ಮಾಡುತ್ತಾರೆ. ಅದುವೇ ಸ್ಮಾರ್ಟ್​ ಫೋನ್. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸ್ತಿರುವ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಎಷ್ಟು ಡೇಂಜರ್ ಗೊತ್ತಾ..?

Advertisment

ಮಕ್ಕಳ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ..?

ಹೌದು, ಊಟ ಮಾಡಿಸಬೇಕಾದರೆ ಸ್ಮಾರ್ಟ್​​ಫೋನ್, ಟಿವಿ, ಗ್ಯಾಜೆಟ್, ಇತ್ಯಾದಿ.. ತೋರಿಸುತ್ತಿದ್ದಾರೆ. ಇದು ಮಕ್ಕಳ ಬೆಳವಣಿಗೆ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ನೀವು ಅಷ್ಟೇ, ಡಿಜಿಟಲ್ ವಸ್ತುಗಳನ್ನ ಮಕ್ಕಳ ಮುಂದೆ ಇಟ್ಟು, ಊಟ ಮಾಡಿಸುತ್ತಿದ್ದೆ, ಈ ಪದ್ಧತಿಗೆ ಇವತ್ತಿನಿಂದಲೇ ಪೂರ್ಣ ವಿರಾಮ ಹೇಳಿಬಿಡಿ. ಇಲ್ಲದಿದ್ದರೆ ನಿಮ್ಮ ಮಗುವಿನ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರೋದಲ್ಲಿ ಎರಡು ಮಾತಿಲ್ಲ. 

ಓವರ್ ಸ್ಟಿಮಿಲೇಷನ್ (over stimulation)

ಮಕ್ಕಳು ನೋಡುವ ವಿಡಿಯೋದಲ್ಲಿ ಸೆಕೆಂಡ್ ಟು ಸೆಕೆಂಟ್​ ಸ್ಕ್ರೀನ್ ಬದಲಾಗುತ್ತಿರುತ್ತದೆ. ಕಲರ್​​ ಚೇಂಜ್ ಆಗುತ್ತೆ, ಅಷ್ಟೇ ಅಲ್ಲ ಧ್ವನಿ ಕೂಡ ಚೇಂಜ್ ಆಗುತ್ತದೆ. ಇದು ಮಕ್ಕಳ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ ಓವರ್ ಸ್ಟಿಮಿಲೇಷನ್ ಆದಾಗ ಮಕ್ಕಳ ಸಾಮರ್ಥ್ಯಕ್ಕಿಂತ ಮೆದಳು ಹೆಚ್ಚು ಸಕ್ರಿಯಗೊಳ್ಳುತ್ತದೆ. ಆಗ ಮೆದುಳು ನಾರ್ಮಲ್ ಬದುಕಿನ ಸ್ಲೋ ಆ್ಯಕ್ಟಿವಿಟಿಗೆ ಫೋಕಸ್ ಮಾಡಲು ಆಗೋದಿಲ್ಲ. 

ಇದನ್ನೂ ಓದಿ:ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ನಾರಾಯಣ ಹೆಲ್ತ್ ಕೇರ್ ಲಗ್ಗೆ; UK ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಜತೆ ಕೈಜೋಡಿಸಿ ವಿಶ್ವಮಟ್ಟದಲ್ಲಿ ಸೇವೆ

Advertisment

Phone with feed

ಶಾರ್ಟ್​ ಆಟೆನ್ಷನ್ ಪ್ಯಾನ್ (short attention span) 

ಮೊಬೈಲ್​​ ಬಳಕೆಯಿಂದ ಇಂತಹ ಸಮಸ್ಯೆಗಳಿಗೂ ನಿಮ್ಮ ಮಕ್ಕಳು ಸಿಲುಕುತ್ತಾರೆ. ಯಾವುದೋ ಒಂದು ವಸ್ತುವನ್ನು ಹಿಡಿದುಕೊಂಡು ಆಟ ಆಡುತ್ತ ಇರುತ್ತಾರೆ. ಆದರೆ ಅದು ಬೇಗ ಬೇಸ ಬಂದುಬಿಡುತ್ತದೆ. ಅದರಿಂದ ಇರಿಟೇಟ್​​​​ ಆಗಿ ಅದನ್ನು ಬಿಸಾಡಿ ಬಿಡ್ತಾರೆ. ಮಾತ್ರವಲ್ಲ, ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳವುದಿಲ್ಲ. 

ಸ್ಲೀಪ್ ಡಿಸ್ಟರ್ಬ್​

ಮೊಬೈಲ್ ನೋಡೋದ್ರಿಂದ ಮಕ್ಕಳ ಕಣ್ಣಿಗೆ ಹೆಚ್ಚುವರಿಯಾಗಿ ಲೈಟ್ಸ್ ಹೋಗುತ್ತದೆ. ಇದು ಕಣ್ಣುಗಳು ಮಾತ್ರವಲ್ಲ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಮಕ್ಕಳು ನಿದ್ರೆಯನ್ನೇ ಮಾಡೋದಿಲ್ಲ.

ಮಾತು ಮತ್ತು ಭಾಷೆ ಕಲಿಕೆ 

ಅಷ್ಟೇ ಅಲ್ಲ, ಮಕ್ಕಳು ನಿರಂತರವಾಗಿ ಮೊಬೈಲ್ ನೊಡೋದ್ರಿಂದ ಅವರಿಗೆ ಎಮೋಷನಲ್ ಪ್ರಾಬ್ಲಂ ಆಗಲಿದೆ. ಅವರಿಗೆ ಯಾರ ಜೊತೆ ಹೇಗೆ ಮಾತಾಡಬೇಕು ಅಂತಾ ಗೊತ್ತಾಗೋದಿಲ್ಲ. ಹೇಗೆ ನಗಬೇಕು, ಹೇಗೆ ಸಂವಹನ ನಡೆಸಬೇಕು ಅನ್ನೋದು ಗೊತ್ತಾಗಲ್ಲ. ಇದರಿಂದ ಮಕ್ಕಳು ಬೇಗ ಮಾತುಗಳನ್ನ ಆಡೋದು ಕಲಿಯೋದಿಲ್ಲ. 

Advertisment

ಸ್ಕ್ರೀನ್​ ಮೇಲೆ ಹೆಚ್ಚು ಅವಲಂಬನೆ

ಮಕ್ಕಳು ಮೊಬೈಲ್ ಅನ್ನು ಹೆಚ್ಚಾಗಿ ನೋಡೋದ್ರಿಂದ ಸ್ಕ್ರೀನ್​ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಮೊಬೈಲ್, ಟಿವಿ ಆನ್ ಆಗಿಲ್ಲ ಅಂದ್ರೆ ಅಳುತ್ತಾರೆ. ಕಿರುಚಾಡುತ್ತಾರೆ. ಎಮೋಷನ್ ಕಂಟ್ರೋಲ್​​ಗೆ ಬರಲ್ಲ. ಹೈಪರ್ ಆ್ಯಕ್ಟ್​ ಆಗಿರುತ್ತಾರೆ. ಮಕ್ಕಳಲ್ಲಿ ಸಿಟ್ಟು ಮತ್ತು ಹಠಕ್ಕೆ ಪ್ರಮುಖ ಕಾರಣವಾಗುತ್ತದೆ. 

ಮಕ್ಕಳು ಸ್ಕ್ರೀನ್​​ಗೆ ಹೆಚ್ಚು ಅವಲಂಬಿತರಾಗಲು ಬಿಟ್ಟರೇ, ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನೂ ತಂದುಕೊಳ್ತಾರೆ. ಇನ್ನಾದರೂ ಪೋಷಕರು ಮಕ್ಕಳಿಗೆ ಮೊಬೈಲ್​ ದೂರ ಇಡಿ. ಟಿವಿ ಹಾಕಿಸಿ ಊಟ ಮಾಡಿಸಬೇಡಿ. ಊಟ ಸ್ವಲ್ಪ ಕಡಿಮೆ ಮಾಡಿದರೂ ಪಾರವಗಿಲ್ಲ, ಅವರ ಫೋನ್ ಬಳಕೆಯನ್ನು ಕಡಿಮೆ ಮಾಡಿ.  ತಂದೆ ತಾಯಿ ಎಷ್ಟೇ ಬ್ಯುಸಿ ಇದ್ದರೂ ನಿಮ್ಮ ಮಕ್ಕಳಿಗಾಗಿ ಸ್ವಲ್ಪ ಸಮಯ ಕೊಡಿ. 

ಇದನ್ನೂ ಓದಿ: ನಿತ್ಯ ನೀವೂ ಇದನ್ನು ತಿನ್ನಲೇಬೇಕು.. ಅಂಜೂರದ ಆರೋಗ್ಯದ ಗುಟ್ಟು ಗೊತ್ತಾ ನಿಮ್ಗೆ..?

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kids health Health Tips
Advertisment
Advertisment
Advertisment