/newsfirstlive-kannada/media/media_files/2025/10/31/narayana-health-2-2025-10-31-17-32-33.jpg)
ಬೆಂಗಳೂರು: ಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುವ ನಾರಾಯಣ ಹೆಲ್ತ್ ಕೇರ್ ಇದೀಗ ಬ್ರಿಟನ್ ಆರೋಗ್ಯ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಯುಕೆ ಮೂಲದ 12 ಆಸ್ಪತ್ರೆ ಮತ್ತು ಸರ್ಜಿಕಲ್ ಕೇಂದ್ರಗಳನ್ನು ಹೊಂದಿರುವ, ಗುಣಮಟ್ಟದ ಮೂಳೆ ಶಸ್ತ್ರ ಚಿಕಿತ್ಸೆ, ನೇತ್ರ ವಿಜ್ಞಾನ, ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸೆಗೆ ಹೆಸರಾಗಿರುವ ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಆಸ್ಪತ್ರೆ ಸ್ವಾಧೀನಕ್ಕೆ ಮುಂದಾಗಿದೆ. ಈ ಮೂಲಕ ನಾರಾಯಣ ಹೆಲ್ತ್ ಕೇರ್ ಭಾರತದ ಅಗ್ರ ಮೂರು ಆರೋಗ್ಯ ಪೂರೈಕೆದಾರರ ಪಾಲಿಗೆ ಸೇರಲಿದೆ.
ಇದನ್ನೂ ಓದಿ:ಕೃತಕ ಗರ್ಭಧಾರಣೆಗೆ 15 ವರ್ಷಗಳ ನಂತರ ಪೆರೋಲ್​ ಪಡೆದ ಜೋಡಿ ಖೈದಿಗಳು!
/filters:format(webp)/newsfirstlive-kannada/media/media_files/2025/10/31/narayana-health-3-2025-10-31-17-37-47.jpg)
ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಆಸ್ಪತ್ರೆ ಬ್ರಿಟನ್​ನ 5ನೇ ಅತಿದೊಡ್ಡ ಖಾಸಗಿ ಆಸ್ಪತ್ರೆಗಳ ಸಮೂಹ. ವರ್ಷಕ್ಕೆ ಸುಮಾರು 80 ಸಾವಿರ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಯಶಸ್ವಿಯಾಗಿದೆ. ಈಗ ನಾರಾಯಣ ಹೆಲ್ತ್ ಕೇರ್ ಕೂಡ ಕೈ ಜೋಡಿಸಿರುವುದರಿಂದ ಭವಿಷ್ಯದಲ್ಲಿ ಖಾಸಗಿ ವಲಯದಲ್ಲಿ ಶಸ್ತ್ರ ಚಿಕಿತ್ಸೆಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳು ಸಿಗುವ ನಿರೀಕ್ಷೆಯಿದೆ.
/filters:format(webp)/newsfirstlive-kannada/media/media_files/2025/10/31/narayana-health-2025-10-31-17-37-59.jpg)
ಈ ಬಗ್ಗೆ ನಾರಾಯಣ ಹೆಲ್ತ್ ಕೇರ್ ಮುಖ್ಯಸ್ಥರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಪ್ರತಿಕ್ರಿಯಿಸಿದ್ದು. ‘ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಜತೆಗಿನ ಈ ಒಪ್ಪಂದವನ್ನು ಮಾಡಿಕೊಳ್ಳಲು ನಾರಾಯಣ ಹೆಲ್ತ್ ಕೇರ್ ತುಂಬಾ ಉತ್ಸುಕವಾಗಿದೆ. ನಮ್ಮಂತೆ ಪ್ರಾಕ್ಟೀಸ್ ಪ್ಲಸ್ ಕೂಡಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಕಷ್ಟ ಪಡುತಿದ್ದ ಮಧ್ಯಮ ವರ್ಗದವರಿಗೆ ನೆರವಾಗುವ ಮನೋಭಾವನೆ ಹೊಂದಿದೆ. ವಿಬ್ಬರೂ ಕೂಡ ಆ ನಿಟ್ಟಿನಲ್ಲಿ ಕೆಲಸ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡಲಿದ್ದೇವೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ನೆರವಾಗಲಿದ್ದೇವೆ ಎಂದರು.
ಇದನ್ನೂ ಓದಿ: ಟಿಟಿಡಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆ ಕೇಸ್: ಟಿಟಿಡಿ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ಆಪ್ತ ಸಹಾಯಕ ಚಿನ್ನಅಪ್ಪಣ್ಣ ಬಂಧನ
/filters:format(webp)/newsfirstlive-kannada/media/media_files/2025/10/31/narayana-health-1-2025-10-31-17-38-31.jpg)
ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ,ಎಮ್ಆರ್ ಜಿಮ್ ಈಸ್ಟನ್ ಮಾತನಾಡಿ, 'ಡಾ. ಶೆಟ್ಟಿ ಮತ್ತು ನಾರಾಯಣ ಹೆಲ್ತ್ ಕೇರ್ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಜೊತೆ ಸೇರಿ ನಾವು ಇನ್ನೂ ಉತ್ತಮ ಆರೋಗ್ಯ ಸೇವೆ ನೀಡಲು ಉತ್ಸುಕರಾಗಿದ್ದೇವೆ ಎಂದರು.
ನಾರಾಯಣ ಹೆಲ್ತ್ ಕುರಿತು
ಡಾ. ದೇವಿ ಶೆಟ್ಟಿ ಸ್ಥಾಪಿಸಿರುವ ನಾರಾಯಣ ಹೆಲ್ತ್ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಈ ಸಂಸ್ಥೆಯು ಜಾಗತಿಕ ಮಟ್ಟದ ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಅತಿದೊಡ್ಡ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಒಂದಾಗಿರುವ ನಾರಾಯಣ ಹೆಲ್ತ್ ಸಂಸ್ಥೆಯು ಭಾರತ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ಮತ್ತು ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬಹಳ ಪ್ರಸಿದ್ಧವಾಗಿದೆ. ಸಂಸ್ಥೆಯು ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಗುಣಮಟ್ಟದ ಕೇಂದ್ರಗಳು ಮತ್ತು 18,822ರಷ್ಟು ವೃತ್ತಿಪರರ ತಂಡವನ್ನು ಹೊಂದಿದೆ. ಇದರಲ್ಲಿ 3,868 ನುರಿತ ವೈದ್ಯರು ಮತ್ತು ತಜ್ಞರು ಇದ್ದಾರೆ. ಅತ್ಯುತ್ತಮ ಸೌಲಭ್ಯ ಮತ್ತು ತಂಡಗಳ ಮೂಲಕ ಉತ್ಕೃಷ್ಟ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿದೆ. ನಾರಾಯಣ ಒನ್ ಹೆಲ್ತ್ (ಎನ್‌ಎಚ್ ಇಂಟಿಗ್ರೇಟೆಡ್ ಕೇರ್) ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಇವು ನಾರಾಯಣ ಹೆಲ್ತ್ ನ ಅಂಗಸಂಸ್ಥೆಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ, https://www.narayanahealth.org/ ವೆಬ್​ಸೈಟ್​ಗೆ ಭೇಟಿ ನೀಡಿ..
ಇದನ್ನೂ ಓದಿ: ಕೃತಕ ಗರ್ಭಧಾರಣೆಗೆ 15 ವರ್ಷಗಳ ನಂತರ ಪೆರೋಲ್​ ಪಡೆದ ಜೋಡಿ ಖೈದಿಗಳು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us