/newsfirstlive-kannada/media/media_files/2025/09/28/woman_health-2025-09-28-17-49-57.jpg)
ನಿತ್ಯ ಸೇವನೆ ಮಾಡುವ ಆಹಾರದಲ್ಲಿ ವಿಟಮಿನ್​ ಇರುವುದು ಅತ್ಯಗತ್ಯ. ಎಷ್ಟೇ ಊಟ ತಿಂದರೂ ವಯಸ್ಸು ಆದಂತೆ ವಿಟಮಿನ್​ಗಳ ಕೊರತೆ ನಮ್ಮನ್ನು ಕಾಡುತ್ತ ಹೋಗುತ್ತದೆ. ಆದಷ್ಟು ಸರಿ ಹೊಂದುವಷ್ಟು ವಿಟಮಿನ್ ಇರುವ ಆಹಾರ ಸೇವನೆ ಕಡೆಗೆ ಗಮನ ಹರಿಸಬೇಕು. ಅದರಲ್ಲಿ ಮಹಿಳೆಯರಲ್ಲಿ ಮೊದಲೇ ಪೌಷ್ಟಿಕಾಂಶದ ಸಮಸ್ಯೆ ಕಾಡುತ್ತಿರುತ್ತದೆ. ಇದರ ಜೊತೆಗೆ ಸಾಮಾನ್ಯವಾಗಿ ಈ ವಿಟಮಿನ್​​ಗಳ ಕೊರತೆ ಇದ್ದೇ ಇರುತ್ತದೆ. ಆ 3 ವಿಟಮಿನ್ಸ್​ ಯಾವುವು ಎನ್ನುವ ಮಾಹಿತಿ ಇಲ್ಲಿದೆ.
ವಿಟಮಿನ್ ಬಿ6 ಮಹಿಳೆಯರಿಗೆ ಬೇಕಾದ ಅತ್ಯಂತ ಅವಶ್ಯಕವಾದ ಜೀವಸತ್ವವಾಗಿದೆ. ಇದು ಎಲ್ಲ ಎಂದರೆ ಸ್ಕಿನ್ ಮೇಲೆ ದದ್ದುಗಳು ಬರುತ್ತವೆ. ನಮ್ಮ ಕೈ ಕಾಲುಗಳು ಮರಗಟ್ಟುವಿಕೆಗೆ ಒಳಗಾಗುತ್ತವೆ. ಕಿರಿಕಿರಿ, ಗೊಂದಲ ಹಾಗೂ ಹುಳಿ, ಕೆಂಪು ನಾಲಿಗೆ ಕೂಡ ಇದರ ಲಕ್ಷಣಗಳಾಗಿವೆ. ಇದರ ಜೊತೆಗೆ ಚರ್ಮ ಕೆಂಪು ಬಣ್ಣ ಉಂಟು ಮಾಡುವ ಸಾಧ್ಯತೆ ಇದ್ದು ಊತ ಕೂಡ ಬರಬಹುದು.
ವಿಟಮಿನ್ ಬಿ6 ಇರುವ ಆಹಾರ: ಕಡಲೆ, ಆಲೂಗಡ್ಡೆ, ಪಾಲಕ್, ಬಲವರ್ಧಿತ ಧಾನ್ಯಗಳು, ಬಾಳೆಹಣ್ಣು, ಮಾಂಸ, ಕೋಳಿ, ಅವಕಾಡೊ, ಹಾಲು, ಮೀನು ಹಾಗೂ ಬಟಾಣಿ ಕಾಳುಗಳಂತಹ ಆಹಾರಗಳಲ್ಲಿ ವಿಟಮಿನ್ ಬಿ6 ಕಾಣಬಹುದು.
ವಿಟಮಿನ್ ಬಿ 12 ಮಹಿಳೆಯರಲ್ಲಿ ವಯಸ್ಸು ಹೆಚ್ಚಾದಂತೆ ಕಡಿಮೆ ಆಗುತ್ತ ಹೋಗುತ್ತದೆ. ವೆಜಿಟೆರಿಯನ್​ ಫುಡ್ ತಿನ್ನುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಕೊರತೆ ಕಾಣಬಹುದು. ಬಿ12 ಕೊರತೆಯಾದರೆ ಮನುಷ್ಯರಲ್ಲಿ ನರವೈಜ್ಞಾನಿಕ (Neurological) ಸಮಸ್ಯೆಗಳು ಕಂಡು ಬರುತ್ತವೆ. ಅಂದರೆ ದೌರ್ಬಲ್ಯ, ನರಗಳಲ್ಲಿ ನೋವು ಹಾಗೂ ಮನಸ್ಥಿತಿ ಬದಲಾವಣೆಗಳು, ಆಯಾಸ ಬರುತ್ತದೆ.
ವಿಟಮಿನ್ ಬಿ12 ಇರುವ ಆಹಾರ: ಮಾಂಸ, ಮೀನು, ಕೋಳಿ, ಮೊಟ್ಟೆ, ಹಾಲು, ಚೀಸ್, ಧಾನ್ಯಗಳು, Nutritional yeast, ಸೊಪ್ಪುಗಳಲ್ಲಿ ಇರುತ್ತದೆ.
ಇದನ್ನೂ ಓದಿ:ಚಾಕೋಲೆಟ್​ಗಿಂತ ಬಿಸ್ಕತ್ತು​ಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.. ಹುಷಾರ್..!
ಮನೆಯಲ್ಲಿ ಕೆಲಸ ಮುಗಿಸಿ ಮತ್ತೆ ಆಫೀಸ್, ಆ ಕೆಲಸ, ಈ ಕೆಲಸ ಎಂದು ಮಹಿಳೆಯರು ಬ್ಯುಸಿ ಆಗುತ್ತಾರೆ. ಗಂಡ, ಮಕ್ಕಳ ಊಟ, ಉಪಾಹಾರದಲ್ಲೇ ದಿನ ಕಳೆದಿಬಿಡುತ್ತಾರೆ. ಇದರಿಂದ ಬಿಸಿಲಿಗೆ ಹೋಗಲು ಆಗಲ್ಲ. ಇದರಿಂದ ವಿಟಮಿನ್​-ಡಿ ಕೊರತೆ ಕಾಡುತ್ತದೆ. ಈ ವಿಟಮಿನ್​-ಡಿ ಇಂದ ಮೂಳೆಗಳನ್ನು ಬಲಪಡಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕ. ಒಂದು ವೇಳೆ ಮೂಳೆ ಸಮಸ್ಯೆಗಳು ಬಂದರೆ ಅದಕ್ಕೆ ವಿಟಮಿನ್ ಡಿ ಕಾರಣ.
ವಿಟಮಿನ್ ಡಿ: ನಿತ್ಯ ನೀವು ಸೂರ್ಯನ ಶಾಖ ಅಥವಾ ಬಿಸಿಲಿನಲ್ಲಿ ಇರಬೇಕು. ದಿನಕ್ಕೆ ಅರ್ಧ ಗಂಟೆ ಬಿಸಿಲು ದೇಹಕ್ಕೆ ತಾಗಬೇಕು. ಸಮುದ್ರದ ಆಹಾರ, ಅಣಬೆ, ಹಾಲು, ಬಲವರ್ಧಿತ ಧಾನ್ಯಗಳು, ಚೀಸ್, ಮೊಟ್ಟೆಗಳಲ್ಲಿ ಇದು ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ