/newsfirstlive-kannada/media/media_files/2025/10/18/paneer-2025-10-18-11-45-42.jpg)
ಪನೀರ್ ಎಂದರೆ ಆಹ್ಹಾ.. ಎಂದು ಮನಸು ಉಲ್ಲಾಸಮಯವಾಗುತ್ತದೆ. ಏಕೆಂದರೆ ಈ ಪನೀರ್​ನಿಂದ ತಯಾರಿಸಿದ ಕರಿ, ತಿಂಡಿ, ತಿನಿಸುಗಳು ಸೇರಿ ವಿವಿಧ ಭಕ್ಷ್ಯಗಳು ಅಷ್ಟೊಂದು ರುಚಿಯಾಗಿ ಇರುತ್ತವೆ. ಹೀಗಾಗೇ ಹೆಚ್ಚು ಹೆಚ್ಚು ಜನರಿಗೆ ಪನೀರ್ ಎಂದರೆ ತುಂಬಾ ಇಷ್ಟ. ಕೆನೆ ಹಾಲಿನಿಂದ ಸಿದ್ಧವಾಗುವ ಈ ಪನೀರ್​, ಮಾನವ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಮಾಡುತ್ತಾ..?
ಪನೀರ್ ಒಂದು ತಾಜಾ, ಗಟ್ಟಿಯಾದ, ಹಾಲಿನಿಂದ ತಯಾರಿಸಿದ ಚೀಸ್ ಆಗಿರುತ್ತದೆ. ಇದರಲ್ಲಿ ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಇದ್ದರೇ ಪನೀರ್​ ಅನ್ನು ತಿನ್ನಲೇಬಾರದು. ಒಂದು ವೇಳೆ ತಿನ್ನಲ್ಲೇಬೇಕು ಎಂದರೆ ವೈದ್ಯರ ಸಲಹೆ ಪಡೆಯಿರಿ. ಆದಷ್ಟು ಪನೀರ್​ನಿಂದ ದೂರ ಇದ್ರೇ ಒಳ್ಳೆಯದು.
ನಿಮಗೆ ಹೆಚ್ಚು ಕೊಲೆಸ್ಟ್ರಾಲ್ ಅಥವಾ ಜೀರ್ಣಕಾರಿ ಸಮಸ್ಯೆಗಳು ಇದ್ದವರು ಪನೀರ್​ ಆಹಾರವನ್ನು ಮಿತವಾಗಿ ಸೇವಿಸಬೇಕು. ಏಕೆಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಜೊತೆಗೆ ಅತಿಸಾರ, ಹೊಟ್ಟೆ ಉಬ್ಬರ ಅಥವಾ ಗ್ಯಾಸ್​ಸ್ಟ್ರಿಕ್​ ಅಂತವುಗಳನ್ನು ಉಂಟು ಮಾಡವ ಸಾಧ್ಯತೆ ಇದೆ.
ಪನೀರ್ ಡೈರಿ ಉತ್ಪನ್ನವಾಗಿದ್ದರಿಂದ ಕೊಲೆಸ್ಟ್ರಾಲ್ ಜೊತೆಗೆ ಸ್ಯಾಚುರೇಟೆಡ್ ಕೊಬ್ಬು (Saturated fats)ಹೊಂದಿರುತ್ತದೆ. ಇದನ್ನು ಸೇವಿಸುತ್ತ ಹೋದಂತೆ ನಮ್ಮಲ್ಲಿ ಸ್ಯಾಚುರೇಟೆಡ್ ಕೊಬ್ಬು, ಕೊಲೆಸ್ಟ್ರಾಲ್ ಸಂಗ್ರಹಕ್ಕೆ ಕಾರಣ ಆಗುತ್ತದೆ. ಪನೀರ್​ ನಮ್ಮ ದೇಹಕ್ಕೆ ಅವಶ್ಯಕವಾಗಿದೆ. ಆದರೆ ಬೇಕಾದಷ್ಟು ಮಾತ್ರ ತಿನ್ನಬೇಕು. ಹಾರ್ಮೋನ್ ಉತ್ಪಾದನೆ ಹಾಗೂ ಜೀವಕೋಶದ ಕಾರ್ಯಕ್ಕೆ ಪನೀರ್​ ಅಗತ್ಯ ಇದೆ.
ಹೆಚ್ಚಾಗಿ ಪನೀರ್ ತಿಂದರೆ ಅಜೀರ್ಣತೆ ಕಾಡುತ್ತದೆ. ಜೊತೆಗೆ ಅಸ್ವಸ್ಥತೆಯು ಉಂಟಾಗುತ್ತದೆ.
ಅತಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ದೇಹದ ತೂಕ ಹೆಚ್ಚಾಗುತ್ತದೆ.
ಕಲಬೆರೆಕೆ ಪನೀರ್​ಗಳು ಆರೋಗ್ಯಕ್ಕೆ ಹಾನಿಕಾರಕ. ನಿರ್ದಿಷ್ಟ ಪೂರೈಕೆ ಮಾಡುವ ಸಂಸ್ಥೆಗಳಿಂದ ಪನೀರ್ ಪಡೆಯಬೇಕು.
ಕಳಪೆ ಅಥವಾ ಗುಣಮಟ್ಟ ಇಲ್ಲದ ಪನೀರ್ ತಿಂದರೆ ಚರ್ಮದ ಸಮಸ್ಯೆ, ತುರಿಕೆ, ಚರ್ಮದ ದದ್ದುಗಳು ಆಗಬಹುದು. ಕೆಲವೊಬ್ಬರಿಗೆ ಪನೀರ್ ಅಷ್ಟಾಗಿ ಆಗಿ ಬರುವುದಿಲ್ಲ. ಅಂತವರು ಇದರಿಂದ ದೂರು ಇರುವುದು ಉತ್ತಮ.
ಪನೀರ್​ನಲ್ಲಿರುವ ಹೈ ಸೋಡಿಯಂ ಪ್ರಮಾಣವೂ ಮೂತ್ರದಲ್ಲಿರುವಂತಹ ಕ್ಯಾಲ್ಸಿಯಂ ಅನ್ನು ಹೊರ ಹಾಕಲು ಕಾರಣವಾಗುಬಹುದು. ಇದರಿಂದ ಕಿಡ್ನಿ ಸ್ಟೋನ್ ಆಗುವ ಸಂಭವವಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ