ರಾತ್ರಿ ಅನ್ನ ತಿನ್ನಬೇಕೇ..? ಚಪಾತಿ ತಿನ್ನಬೇಕೇ.? ಯಾವುದು ಉತ್ತಮ..?

ಮಧುಮೇಹಿಗಳಿಗೆ ಅನ್ನವೋ ಅಥವಾ ಚಪಾತಿಯೋ ಯಾವುದು ಉತ್ತಮ? ರಾತ್ರಿ ಊಟದ ವಿಚಾರವಾಗಿ ಅನೇಕ ಗೊಂದಲಗಳು ಹಲವರಲ್ಲಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಮಿಸ್ ಮಾಡದೇ ಓದಿ.

author-image
Ganesh Kerekuli
Updated On
Rice and chapathi
Advertisment

ಮಧುಮೇಹದಿಂದ ಬಳಲುತ್ತಿರೋರು ಆಹಾರ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ವಿಶೇಷವಾಗಿ ಚಪಾತಿ ಮತ್ತು ಅನ್ನದ ಬಗ್ಗೆ ಹೆಚ್ಚಾಗಿ ಅನುಮಾನಗಳಿವೆ. ತಜ್ಞರ ಪ್ರಕಾರ, ಈ ಎರಡೂ ಆಹಾರಗಳಲ್ಲೂ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ ಎರಡರ ಪ್ರಮಾಣವು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. 

ಅಂದರೆ ಒಂದು ಕಪ್ ಅನ್ನದಲ್ಲಿ ಸುಮಾರು 50 ಗ್ರಾಂ ಕಾರ್ಬೋಹೈಡ್ರೇಟ್ಸ್ (carbohydrates) ಇದ್ದರೆ, ಒಂದು ಚಪಾತಿಯಲ್ಲಿ ಸುಮಾರು 15 ಗ್ರಾಂ ಕಾರ್ಬೋಹೈಡ್ರೇಟ್‌ ಇರುತ್ತದೆ. ಚಪಾತಿಯಲ್ಲಿ ಅಕ್ಕಿಗಿಂತ ಸುಮಾರು 2 ಗ್ರಾಂ ಹೆಚ್ಚು ಫೈಬರ್ (Fiber) ಇರುತ್ತದೆ. ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಯಲ್ಲಿ ಅಕ್ಕಿಗಿಂತ ಹೆಚ್ಚಿನ ಪೋಷಕಾಂಶಗಳು ಇರುತ್ತದೆ. ಒಂದು ಚಪಾತಿಯಲ್ಲಿ ಸುಮಾರು 71 ಕ್ಯಾಲೋರಿಗಳು, 3 ಗ್ರಾಂ ಪ್ರೋಟೀನ್, 0.4 ಗ್ರಾಂ ಕೊಬ್ಬು ಮತ್ತು 15 ಗ್ರಾಂ ಕಾರ್ಬೋಹೈಡ್ರೇಟ್‌ ಇರುತ್ತದೆ. ಅಕ್ಕಿಯಲ್ಲಿ ರಂಜಕ ಮತ್ತು ಮೆಗ್ನೀಸಿಯಮ್ ಗೋಧಿಗಿಂತ ಕಡಿಮೆ. ಫೋಲೇಟ್ ಮತ್ತು ಕಬ್ಬಿಣದ (folate and iron rich) ಅಂಶ ಎರಡರಲ್ಲೂ  ಸಮಾನವಾಗಿರುತ್ತದೆ. 

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ತ್ರಿವಳಿ ಆಲ್​ರೌಂಡರ್ಸ್ ಶಕ್ತಿ..!

ಮಧುಮೇಹಿಗಳು ಅನ್ನ ಅಥವಾ ಚಪಾತಿ ಎರಡನ್ನೂ ತಿನ್ನಬಹುದು. ಆದರೆ ಮಿತವಾಗಿ ತಿನ್ನಬೇಕು. ಒಂದು ಕಪ್ ಅನ್ನ ಅಥವಾ ಎರಡು ಚಪಾತಿಗಳು ಒಂದೇ ಕ್ಯಾಲೋರಿ ಮಟ್ಟಕ್ಕೆ ಸಮಾನವಾಗಿರುತ್ತದೆ. ರಾತ್ರಿ ಊಟಕ್ಕೆ ಹೆಚ್ಚಿನ ಮಧುಮೇಹ ರೋಗಿಗಳು ಅನ್ನ ತಿನ್ನುವಾಗ ಯಾವುದೇ ನಿರ್ಬಂಧವಿಲ್ಲದೆ ತಿನ್ನಬಹುದು. 

ಚಪಾತಿ ತಿನ್ನೋದ್ರಿಂದ ಡೋಸೇಜ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು. ಎರಡು ಚಪಾತಿಗಳೊಂದಿಗೆ ಭೋಜನ ಕೊನೆಗೊಳಿಸುವುದು ಒಳ್ಳೆಯದು. ಜೋಳ, ಸಜ್ಜೆ, ರಾಗಿ ಮುಂತಾದ ಮಿಶ್ರ ಧಾನ್ಯಗಳಿಂದ ತಯಾರಿಸಿದ ಚಪಾತಿಗಳು ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತವೆ. ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರೋದ್ರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಸಂಸ್ಕರಿಸದ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಧಾನ್ಯದ ಹಿಟ್ಟನ್ನು ಆಯ್ಕೆ ಮಾಡೋದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ತುಂಬಾ ಬೇಜಾರು ಇದೆ -ಸ್ಪಂದನಾ ಫಸ್ಟ್ ರಿಯಾಕ್ಷನ್ ಏನು? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Health Tips health care Health Benefits
Advertisment