ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ತ್ರಿವಳಿ ಆಲ್​ರೌಂಡರ್ಸ್ ಶಕ್ತಿ..!

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಅವಕಾಶದ ನಿರೀಕ್ಷೆಯಲ್ಲಿದ್ದ ಕೆಲ ಆಟಗಾರರಿಗೆ ಸೆಲೆಕ್ಟರ್ಸ್ ಶಾಕ್ ನೀಡಿದ್ರೆ, ಸ್ಥಾನ ಕಳೆದುಕೊಂಡಿದ್ದ ಕೆಲವರು ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದಾರೆ.

author-image
Ganesh Kerekuli
Team india (8)
Advertisment
  • ಕಿವೀಸ್ ವಿರುದ್ಧ 5 ಮಂದಿ ಬ್ಯಾಟರ್ಸ್​ ಅಖಾಡಕ್ಕೆ!
  • ಗಿಲ್ ಪಡೆಯ ತಾಖತ್ತು ಹೆಚ್ಚಿಸಿರುವ ಪಂಚ ಬೌಲರ್ಸ್​..!
  • ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಸ್​ಗೆ ಮಣೆ

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಅವಕಾಶದ ನಿರೀಕ್ಷೆಯಲ್ಲಿದ್ದ ಕೆಲ ಆಟಗಾರರಿಗೆ ಸೆಲೆಕ್ಟರ್ಸ್ ಶಾಕ್ ನೀಡಿದ್ರೆ, ಸ್ಥಾನ ಕಳೆದುಕೊಂಡಿದ್ದ ಕೆಲವರು ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದಾರೆ. 

ಬರೋಡಾ, ರಾಜ್​ಕೋಟ್ ಮತ್ತು ಇಂದೋರ್ ಏಕದಿನ ಪಂದ್ಯಗಳಿಗೆ, ಟೀಮ್ ಇಂಡಿಯಾ ರೆಡಿಯಾಗಿದೆ. ವೆಬಿನಾರ್ ಮೂಲಕ ತಂಡದ ಆಯ್ಕೆ ನಡೆಸಿದ ಸೆಲೆಕ್ಟರ್ಸ್​ ಮತ್ತು ಟೀಮ್ ಮ್ಯಾನೇಜ್ಮೆಂಟ್, ಬಲಿಷ್ಟ ತಂಡವನ್ನೇ ಆಯ್ಕೆ ಮಾಡಿದೆ. ಕೆಲ ಆಟಗಾರರಿಗೆ ಸೆಲೆಕ್ಟರ್ಸ್​ ಸೆಕೆಂಡ್ ಚಾನ್ಸ್ ನೀಡಿದ್ರೆ, ವಿಜಯ್ ಹಜಾರೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಟಗಾರರನ್ನ ಕಡೆಗಣಿಸಲಾಗಿದೆ.  

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ನಲ್ಲಿ ಮತ್ತೆ ತಿಕ್ಕಾಟ.. ಜಡೇಜಾ vs ಪರಾಗ್..!

Rohit Kohli

ನ್ಯೂಜಿಲೆಂಡ್ ವಿರುದ್ಧ 5 ಮಂದಿ ಬ್ಯಾಟರ್ಸ್​ ಅಖಾಡಕ್ಕೆ

ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತಯ ಯಶಸ್ವಿ ಜೈಸ್ವಾಲ್, ತಂಡದ ಫೈವ್ ಸ್ಟಾರ್ ಬ್ಯಾಟರ್ಸ್​. ಗಾಯದಿಂದ ಚೇರಿಸಿಕೊಂಡಿರುವ ಶ್ರೇಯಸ್​​​​​​​​, ಉಪನಾಯಕ ಪಟ್ಟವನ್ನ ಭದ್ರಗೊಳಿಸಿಕೊಂಡಿದ್ರೆ, ಜೈಸ್ವಾಲ್ ಬ್ಯಾಕ್​ಅಪ್ ಓಪನರ್ ಆಗಿ ಕಾಣಿಸಿಕೊಂಡಿದ್ದಾರೆ.

ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಸ್​ಗೆ ಮಣೆ

ಕರ್ನಾಟಕದ ಕೆ.ಎಲ್.ರಾಹುಲ್ ತಂಡದ ಫಸ್ಟ್​ ಚಾಯ್ಸ್​ ವಿಕೆಟ್ ಕೀಪರ್. ಎರಡನೇ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಪಂತ್ 15 ಸದಸ್ಯರ ಬಳಗದಲ್ಲಿ ಕಾಣಿಸಿಕೊಂಡಿದ್ರೂ , ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡೋದು ಅನುಮಾನ. ಇನ್​ಫಾರ್ಮ್​​ ಇಶಾನ್​ ಕಿಶನ್​ರನ್ನ ಓವರ್​ ಟೇಕ್ ಮಾಡಿ ಸ್ಥಾನ ಪಡೆದಿರುವ ಪಂತ್​ಗೆ, ಸೆಲೆಕ್ಟರ್ಸ್ ಸೆಕೆಂಡ್ ಚಾನ್ಸ್​ ನೀಡಿದ್ದಾರೆ. 

ಇದನ್ನೂ ಓದಿ:ಕೊಪ್ಪಳ ಅಜ್ಜನ ಮಹಾರಥೋತ್ಸವಕ್ಕೆ ಕ್ಷಣಗಣನೆ; ಭರದಿಂದ ಸಾಗಿದ ಸಿದ್ಧತೆ..!

washington sundar (1)

ತಂಡಕ್ಕೆ ಶಕ್ತಿ ತುಂಬಲಿರುವ ತ್ರಿವಳಿ ಆಲ್​ರೌಂಡರ್ಸ್

ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಮತ್ತು ನಿತೀಶ್ ಕುಮಾರ್ ರೆಡ್ಡಿ.. ಈ ತ್ರಿವಳಿ ಆಲ್​ರೌಂಡರ್ಸ್​​​​​​​​​​​ ಟೀಮ್ ಇಂಡಿಯಾಕ್ಕೆ ಶಕ್ತಿ ತುಂಬಲಿದ್ದಾರೆ. ಜಡ್ಡು ತಂಡದ ಫ್ರಂಟ್​ಲೈನ್ ಸ್ಪಿನ್ನರ್​​​​​​​​​​​​​​​​​​​​​​​​​​​​​​​​​​​ ಕಮ್ ಆಲ್​ರೌಂಡರ್. ಆದ್ರೆ ವಾಶಿಂಗ್ಟನ್​​ಗೆ, ಆಡುವ ಹನ್ನೊಂದರಲ್ಲಿ ಚಾನ್ಸ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಏಕೈಕ ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್ ಆಗಿರುವ ನಿತೀಶ್ ರೆಡ್ಡಿ ಸ್ಥಾನ ಸೇಫ್.

Gambhir and Gill

ಗಿಲ್ ಪಡೆಯ ತಾಖತ್ತು ಹೆಚ್ಚಿಸಿರುವ ಪಂಚ ಬೌಲರ್ಸ್ 

ನಾಲ್ವರು ವೇಗಿಗಳನ್ನ ಆಯ್ಕೆ ಮಾಡಿರುವ ಸೆಲೆಕ್ಟರ್ಸ್​, ಅನುಭವಿಗಳಿಗೆ ಕೊಕ್ ನೀಡಿದ್ದಾರೆ. ಎಡಗೈ ವೇಗಿ ಆರ್ಷ್​ದೀಪ್ ಸಿಂಗ್, ಮೊಹಮ್ಮದ್​ ಸಿರಾಜ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಪೇಸ್ ಅಟ್ಯಾಕ್​ನಲ್ಲಿ ಕಾಣಿಸಿಕೊಂಡಿರುವ ವೇಗಿಗಳು. ಇನ್ನು ಚೈನಾಮೆನ್ ಕುಲ್ದೀಪ್ ಯಾದವ್ ಸಹ, ಬೌಲರ್ಸ್​ ಕೋಟಾದಲ್ಲಿ ಸ್ಥಾನ ಪಡೆದಿರುವ ಸ್ಪಿನ್ನರ್. 

ಒಟ್ನಲ್ಲಿ..2027ರ ಏಕದಿನ ವಿಶ್ವಕಪ್​​ಗೆ ಕೋರ್ ಟೀಮ್ ರೆಡಿ ಮಾಡ್ತಿರುವ ಸೆಲೆಕ್ಟರ್ಸ್​, ಯಂಗ್ ಌಂಡ್ ಬ್ಯಾಲೆನ್ಸ್ಡ್​ ಟೀಮ್ ಕಟ್ಟಿದ್ದಾರೆ. ಆದ್ರೆ ಕೆಲ ಅರ್ಹ ಆಟಗಾರರನ್ನ ಕೈಬಿಟ್ಟಿರುವ ಆಯ್ಕೆಗಾರರು, ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ:‘ನಿನಗೆ ಒರಗಿಕೊಳ್ಳಲು ರಘು ತೊಡೆ ಬೇಕು’ ಎಂದ ಅಶ್ವಿನಿ ಗೌಡ.. ರಾಶಿಕಾ ಫ್ಯಾನ್ಸ್ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Team India team india squad IND vs NZ
Advertisment