ಕೊಪ್ಪಳ ಅಜ್ಜನ ಮಹಾರಥೋತ್ಸವಕ್ಕೆ ಕ್ಷಣಗಣನೆ; ಭರದಿಂದ ಸಾಗಿದ ಸಿದ್ಧತೆ..!

ಕೊಪ್ಪಳ ಅಜ್ಜನ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 5:30ಕ್ಕೆ ಕೊಪ್ಪಳದಲ್ಲಿ ಗವಿ ಸಿದ್ದೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವಕ್ಕೆ ಚಾಲನೆ ಸಿಗಲಿದೆ. ಮೇಘಾಲಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

author-image
Ganesh Kerekuli
Koppal Jatre

ಸಂದಾರ್ಭಿಕ ಚಿತ್ರ

Advertisment

ಕೊಪ್ಪಳ ಅಜ್ಜನ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 5:30ಕ್ಕೆ ಕೊಪ್ಪಳದಲ್ಲಿ ಗವಿ ಸಿದ್ದೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವಕ್ಕೆ ಚಾಲನೆ ಸಿಗಲಿದೆ.

ಮೇಘಾಲಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಮಹಾರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ವಿಜಯ ಶಂಕರ್ ಮಠಕ್ಕೆ ಭೇಟಿ ನೀಡಿದ್ದರು. ವಿಜಯಶಂಕರ್, ಮೂಲತಃ ಕೊಪ್ಪಳ‌ದ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದವರು. ಕೊಪ್ಪಳದವರಾದ ಹಿನ್ನೆಲೆ ರಾಜ್ಯಪಾಲರಿಂದ ಈ ಬಾರಿ  ರಥೋತ್ಸವಕ್ಕೆ ಚಾಲನೆ ಸಿಗಲಿದೆ. 

ಇದನ್ನೂ ಓದಿ:ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

Koppal Jatre (2)

ರಥೋತ್ಸವ ಹಿನ್ನೆಲೆ ಕತೃ ಗದ್ದುಗೆಯ ಗವಿಸಿದ್ದೇಶ್ವರನಿಗೆ ವಿಶೇಷ ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ.  ಅಭಿಷೆಕ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿವೆ. ಇನ್ನು, ಮಧ್ಯರಾತ್ರಿಯಿಂದಲೇ ಕಾಲ್ನಡಿಗೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹಲವು ಭಕ್ತರು ದೀರ್ಘದಂಡ ನಮಸ್ಕಾರದ ಮೂಲಕ ಬರುತ್ತಿದ್ದಾರೆ. 

ಇನ್ನು ರಥೋತ್ಸವಕ್ಕೆ ಈಗಾಗಲೇ ರಥ ಸಿದ್ಧವಾಗಿ ನಿಂತಿದೆ. ರಥಕ್ಕೆ ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ರಥದ ಮುಂದೆ ವಿಭಿನ್ನ ರಂಗೋಲಿ, ಚಿತ್ತಾರಗಳು ಮೂಡಿವೆ. ಇನ್ನೊಂದಡೆ ಮಠದಲ್ಲಿ ಭಕ್ತರಿಗಾಗಿ ಮಹಾದಾಸೋಹ ಆಯೋಜನೆಗೊಂಡಿದೆ. 

ಇದನ್ನೂ ಓದಿ: ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್‌ ಟ್ರೋಫಿ ಎತ್ತಿ ಹಿಡಿಯೋಱರು?

Koppal Jatre (3)

ರಥೋತ್ಸವ ಹಿನ್ನೆಲೆ ಪೊಲೀಸರು ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದಾರೆ. ಭಕ್ತರ ಹಾಗೂ ವಾಹನಗಳ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ವಾಹನಗಳಿಗೆ ಹಾಲವರ್ತಿ ರಸ್ತೆ, ಗವಿಶ್ರೀನಗರ, ಗಡಿಯಾರ ಕಂಬ, ಕುಷ್ಟಗಿ ರಸ್ತೆ ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಕೊಪ್ಪಳ ಜನತೆ ವಾಹನಗಳನ್ನು ಮನೆ ಬಳಿ ಬಿಟ್ಟು ಕಾಲ್ನಡಿಗೆಯಲ್ಲಿ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ವೆನೆಜುವೆಲಾ ವಿಶ್ವದ ಬ್ಯೂಟಿ ಕ್ವೀನ್ ಫ್ಯಾಕ್ಟರಿ..! ಈ ದೇಶವನ್ನ ವಿಶ್ವ ಸುಂದರಿಯರ ನಾಡು ಎಂದು ಕರೆಯೋದೇಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Koppal Jatre
Advertisment