ವೆನೆಜುವೆಲಾ ವಿಶ್ವದ ಬ್ಯೂಟಿ ಕ್ವೀನ್ ಫ್ಯಾಕ್ಟರಿ..! ಈ ದೇಶವನ್ನ ವಿಶ್ವ ಸುಂದರಿಯರ ನಾಡು ಎಂದು ಕರೆಯೋದೇಕೆ?

ಅಮೆರಿಕ ಮತ್ತೊಮ್ಮೆ ಜಗತ್ತನ್ನು ಉದ್ವಿಗ್ನ ಸ್ಥಿತಿಗೆ ದೂಡುವ ಕೆಲಸ ಮಾಡಿದೆ. ಅಮೆರಿಕ ಸೇನೆ ವೆನೆಜುವೆಲಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಬಂಧಿಸಿದ್ದು ಅಲ್ಲದೇ ನ್ಯೂಯಾರ್ಕ್​ಗೆ ಹೊತ್ತೊಯ್ದಿದೆ.

author-image
Ganesh Kerekuli
venezuela beautiful girl (4)

Dayana Mendoza (miss universe 2008) Photograph: (Facebook)

Advertisment

ಅಮೆರಿಕ ಮತ್ತೊಮ್ಮೆ ಜಗತ್ತನ್ನು ಉದ್ವಿಗ್ನ ಸ್ಥಿತಿಗೆ ದೂಡುವ ಕೆಲಸ ಮಾಡಿದೆ. ಅಮೆರಿಕ ಸೇನೆ ವೆನೆಜುವೆಲಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಬಂಧಿಸಿದ್ದು ಅಲ್ಲದೇ ನ್ಯೂಯಾರ್ಕ್​ಗೆ ಹೊತ್ತೊಯ್ದಿದೆ. ಅಲ್ಲದೇ ತನ್ನದಲ್ಲದ ದೇಶಕ್ಕೆ ಸೈನಿಕರನ್ನ ಕಳುಹಿಸಿ ಅಲ್ಲಿನ ಅಧ್ಯಕ್ಷರನ್ನ ಹೊತ್ತೊಯ್ದು  ತನ್ನಿಂದ ಹೊರತು ಇನ್ಯಾರಿಂದಲೂ ಇದು ಸಾಧ್ಯವಿಲ್ಲ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘಂಟಾ ಘೋಷವಾಗಿ ಹೇಳಿದ್ದಾರೆ. ಆ ಮೂಲಕ ಪ್ರಪಂಚದಲ್ಲಿರುವ ಚಿಕ್ಕ ಚಿಕ್ಕ ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದಾರೆ. 

ಇದನ್ನೂ ಓದಿ:Rashi Bhavishya: ಇವತ್ತು ಮನಸ್ಸಿಗೆ ತುಂಬಾ ನೋವು ಉಂಟಾಗಬಹುದು, ಜಾಗೃತೆ

venezuela beautiful girl
Maritza Sayalero (Miss Universe 1979)

ಅಮೆರಿಕ ಆಕ್ರಮಣ ಮಾಡಿ ಸ್ವಾಧೀನಪಡಿಸಿಕೊಂಡಿದ್ದಾಗಿ ಘೋಷಣೆ ಮಾಡಿದ ನಂತರ ವೆನೆಜುವೆಲಾ ಸುದ್ದಿಯಲ್ಲಿದೆ. ಅಮೆರಿಕ ಖಂಡದಲ್ಲಿ ಕಚ್ಚಾ ತೈಲ, ಚಿನ್ನದ ನಿಕ್ಷೇಪಗಳಿಗೆ ಹೆಸರುವಾದ ದೇಶ ವೆನೆಜುವೆಲಾ. ತೈಲವಲ್ಲದೇ ವೆನೆಜುವೆಲಾ ಮತ್ತೊಂದು ಕಾರಣಕ್ಕೂ ಜಾಗತಿಕವಾಗಿ ಹೆಸರುವಾಸಿ.
ಅದು ವಿಶ್ವ ಸುಂದರಿಯರ ನಾಡು ಅಂತಲೇ ಕರೆಯಲ್ಪಡುತ್ತದೆ... 

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ನಲ್ಲಿ ಮತ್ತೆ ತಿಕ್ಕಾಟ.. ಜಡೇಜಾ vs ಪರಾಗ್..!

venezuela beautiful girl (1)
Irene Sáez Iron ( 1981 Miss Universe)

ವೆನೆಜುವೆಲಾವನ್ನು ಜಾಗತಿಕವಾಗಿ "ವಿಶ್ವದ ಬ್ಯೂಟಿ ಕ್ವೀನ್ ಫ್ಯಾಕ್ಟರಿ" ಅಥವಾ "ವಿಶ್ವ ಸುಂದರಿಯರ ದೇಶ" ಎಂದು ಕರೆಯಲಾಗುತ್ತದೆ. ಇದು ವೆನೆಜುವೆಲಾದ ಹೆಗ್ಗುರುತುಗಳಲ್ಲಿ ಒಂದು. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ವೆನೆಜುವೆಲಾ ಸುಂದರಿಯರು ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದಾರೆ. ಮಿಸ್ ಯೂನಿವರ್ಸ್​, ಮಿಸ್ ವರ್ಲ್ಡ್​, ಮಿಸ್ ಇಂಟರ್​ನ್ಯಾಷನಲ್​, ಮಿಸ್​ ಅರ್ಥ್​ ಗಳಲ್ಲಿ ವೆನೆಜುವೆಲಾ ಸುಂದರಿಯರು 24 ಬಾರಿ ಜಾಗತಿಕ ಸೌಂದರ್ಯದ ಕಿರೀಟ ಧರಿಸಿದ್ದಾರೆ.

ಇದನ್ನೂ ಓದಿ: ವಿನ್ನಿಂಗ್‌ ರೇಸ್‌ನಲ್ಲಿ ರಕ್ಷಿತಾ, ಧನು, ರಘು.. ಪ್ಲಸ್‌ ಏನು? ಮೈನಸ್‌ ಏನು?

venezuela beautiful girl (2)
Barbara Palacios (Miss Universe 1986)

1952 ರಿಂದ 2025ರವರೆಗೆ ವೆನೆಜುವೆಲಾದ ಸುಂದರಿಯರು 7 ಬಾರಿ ಮಿಸ್​ ಯೂನಿವರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಅಮೆರಿಕ ಬಳಿಕ 2ನೇ ಅತಿ ಹೆಚ್ಚು ಮಿಸ್ ಯೂನಿವರ್ಸ್ ಗೆದ್ದಿದೆ. 1951 ರಿಂದ 2025ರವರೆಗೆ ಈ ದೇಶದ ಸುಂದರಿಯರು 6 ಬಾರಿ ಮಿಸ್​ ವರ್ಲ್ಡ್​ ಪ್ರಶಸ್ತಿ ಗೆದ್ದಿದ್ದಾರೆ. ಇದು ಸದ್ಯಕ್ಕೆ ಭಾರತದ ಸಮಬಲ. 9 ಬಾರಿ ಮಿಸ್ ಇಂಟರ್ ನ್ಯಾಷನಲ್, 2 ಬಾರಿ ಮಿಸ್ ಅರ್ಥ್​ ವೆನೆಜುವೆಲಾ ಸುಂದರಿಯರ ಪಾಲಾಗಿದೆ.

ಇದನ್ನೂ ಓದಿ:ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್‌ ಟ್ರೋಫಿ ಎತ್ತಿ ಹಿಡಿಯೋಱರು?

venezuela beautiful girl (3)
Dayana Mendoza (Miss Universe 2008)

ಸೌಂದರ್ಯ ಸ್ಪರ್ಧೆಯಲ್ಲಿ ಹೆಸರುವಾಸಿ

ಆರ್ಥಿಕ ಸಂಕಷ್ಟದ ನಡುವೆಯೂ ಇಲ್ಲಿ ಸೌಂದರ್ಯ ಸ್ಪರ್ಧೆಗಳು ಬಹಳ ಜನಪ್ರಿಯ. ಸದ್ಯಕ್ಕೆ ವೆನೆಜುವೆಲಾ ಶ್ರೀಮಂತ ದೇಶವೇನೂ ಅಲ್ಲ. 1950ರಿಂದ 1980ರವರೆಗೆ ಅದು ದಕ್ಷಿಣ ಅಮೆರಿಕದ ಶ್ರೀಮಂತ ದೇಶಗಳಲ್ಲಿ ಒಂದಾಗಿತ್ತು. ವಿಶ್ವದ ಅತಿ ದೊಡ್ಡ ತೈಲ ಭಂಡಾರ ಹೊಂದಿದ್ದ ವೆನೆಜುವೆಲಾ ಜನರ ಜೀವನ ಗುಣಮಟ್ಟ ಉತ್ತಮವೇ ಆಗಿತ್ತು. ಆದರೆ ತೈಲದ ಮೇಲೆ ಅತಿಯಾದ ಅವಲಂಬನೆ, ತೈಲ ಉತ್ಪಾದನೆ ಕುಸಿತ, ಸರ್ಕಾರಿ ನೀತಿಗಳ ವೈಫಲ್ಯ, ಅತ್ಯಧಿಕ ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆಯಿಂದಾಗಿ ವೆನೆಜುವೆಲಾದಲ್ಲಿ ತೈಲ ಸಂಪತ್ತು ಇದ್ದರೂ ಸದ್ಯಕ್ಕೆ ಲ್ಯಾಟಿನ್ ಅಮೆರಿಕಾದಲ್ಲೇ ಬಡ ಮತ್ತು ಸಂಕಷ್ಟದಲ್ಲಿರುವ ದೇಶ ಎನಿಸಿದೆ.

ಇದನ್ನೂ ಓದಿ:ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

Venezuela Beautiful girl (5)
Stefania Fernandez (Miss Universe 2009)

ಸಂಕಷ್ಟವಿದ್ದರೂ ವೆನೆಜುವೆಲಾದಲ್ಲಿ ಸೌಂದರ್ಯ ಸ್ಪರ್ಧೆಗಳು ಕೇವಲ ಸ್ಪರ್ಧೆಯಲ್ಲ. ಅದೊಂದು ಸಂಸ್ಕೃತಿ. ನಮ್ಮಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೇ ವೆನೆಜುವೆಲಾದಲ್ಲಿ ಸೌಂದರ್ಯ ಸ್ಪರ್ಧೆ ಜನಪ್ರಿಯ. ಇಲ್ಲಿ ಸೌಂದರ್ಯ ಸ್ಪರ್ಧೆಗೆ ತರಬೇತಿ ನೀಡುವ ಬ್ಯೂಟಿ ಅಕಾಡೆಮಿಗಳಿವೆ, ಹುಡುಗಿಯರಿಗೆ ಮಾತುಗಾರಿಕೆ, ನಡಿಗೆ, ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ತರಬೇತಿಯೇ ನೀಡಲಾಗುತ್ತದೆ.

ವಿಶೇಷ ವರದಿ: ವಿಶ್ವನಾಥ್ ಜಿ. , ಸೀನಿಯರ್ ಕಾಪಿ ಎಡಿಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DONALD TRUMP USA ATTACKS VENEZUELA Miss Universe
Advertisment