/newsfirstlive-kannada/media/media_files/2026/01/04/raghu-dhanu-rakshita-2026-01-04-18-24-43.jpg)
ಬಿಸ್‌ಬಾಸ್ ಪಕ್ಕಾ ವ್ಯಕ್ತಿತ್ವದ ಆಟ. ಯಾರು ವೀಕ್ಷಕರ ಮನ ಮನಸ್ಸು ಮುಟ್ಟುತ್ತಾರೋ ಅವರೇ ಗೆಲ್ಲೋದು. ಸದ್ಯ ಗಿಲ್ಲಿ, ಅಶ್ವಿನಿ ಜೊತೆ ರಘು, ರಕ್ಷಿತಾ, ಧನು ಸಹ ಟಾಪ್ 5 ರಲ್ಲಿ ಕಾಣಿಸ್ಕೊಳ್ಳುವ ಸಾಧ್ಯತೆ ಇದೆ. ಈ ಮೂವರಲ್ಲಿ ಗೆಲುವಿಗೆ ಬೇಕಾದ ವ್ಯಕ್ತಿತ್ವ ಏನಿದೆ? ಗೆಲುವಿಗೆ ಅಡ್ಡಿಯಾಗೋ ಗುಣ ಯಾವುದು?
ಬಿಗ್‌ಬಾಸ್‌ಗೆ ಹೋಗೋ ಪ್ರತಿಯೊಬ್ಬ ಸ್ಪರ್ಧಿಯಲ್ಲೂ ತಾವೇ ಗೆಲ್ಬೇಕು ಅನ್ನೋದು ಇರುತ್ತೆ. ಹೀಗಾಗಿಯೇ ಬಿಗ್ ಬಾಸ್ ನೀಡೋ ಟಾಸ್ಕ್‌ಗಳನ್ನ ಸೀರಿಯಸ್ ಆಗಿ ತೆಗೆದ್ಕೊಂಡ್ ಟಾಸ್ಕ್ ಕಂಪ್ಲೀಟ್ ಮಾಡ್ತಾರೆ. ಹಂಡ್ರೆಡ್ ಪರ್ಸೆಂಡ್ ಎಫರ್ಟ್ ಹಾಕ್ತಾರೆ. ಆಟ ಆಡೋ ಆತುರದಲ್ಲಿ, ಜಗಳ ಆಡೋ ಭರದಲ್ಲಿ ಎಡವಿ ಬೀಳ್ತಾರೆ. ಅದೆಲ್ಲನ್ನು ವೀಕ್ಷಕರ ಗಮನಿಸಿರ್ತಾರೆ. ಯಾರು ಚೆನ್ನಾಗಿ ಆಟ ಆಡ್ತಿದ್ದಾರೆ ಅನ್ನೋದಕ್ಕಿಂತ ತಮ್ಮ ಮನಸ್ಸಿಗೆ ಯಾರು ಹತ್ತಿರ ಆಗಿದ್ದಾರೆ? ತಮ್ಗೆ ಮನರಂಜನೆ ನೀಡಿದ್ದು ಯಾರು? ಅನ್ನೋದನ್ನ ನೋಡ್ತಾರೆ. ಅದರ ಆಧಾರ ಮೇಲೆ ವೋಟ್ ಮಾಡ್ತಾರೆ. ಈ ನಿಟ್ಟಿನಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ಟಾಪ್ ರೇಸ್‌ನಲ್ಲಿದ್ದಾರೆ ಅನ್ನೋದನ್ನ ಹೇಳಲಾಗ್ತಿದೆ. ಹಾಗೇ ರೇಸ್‌ನಲ್ಲಿರೋ ಇನ್ನೂ ಮೂಲವರು ಯಾರು?
ರಕ್ಷಿತಾ!
/filters:format(webp)/newsfirstlive-kannada/media/media_files/2025/11/27/rakshita-shetty-6-2025-11-27-15-02-40.jpg)
ಈ ಬಾರಿಯ ಬಿಗ್‌ಬಾಸ್‌ನಲ್ಲಿ ವಿಭಿನ್ನ ಶೈಯಲಿ ಮಾತುಗಾರಿಕೆ. ವಿಭಿನ್ನ ಹಾವಾ ಭಾವದಿಂದ ಗಮನ ಸೆಳೆದ ಸ್ಪರ್ಧಿ ಅಂದ್ರೆ ರಕ್ಷಿತಾ. ಆಕೆ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ತನ್ಗೆ ಯಾವುದು ಸರಿ ಕಾಣಿಸುತ್ತೋ? ಅದನ್ನ ನೇರಾನೇರ ಹೇಳಿ ಬಿಡ್ತಾಳೆ. ಅದು ಕೆಲವು ಸ್ಪರ್ಧಿಗಳಿಗೆ ಅರಗಿಸಿಕೊಳ್ಳುವುದು ಕಷ್ಟ. ಆದ್ರೆ, ಆಕೆಯ ಮುಗ್ಧತೆ ಬಿಗ್‌ಬಾಸ್ ವೀಕ್ಷಕರಿಗೆ ಇಷ್ಟವಾಗ್ತಾ ಇದೆ. ಹೀಗಾಗಿ ಜನರ ದೃಷ್ಟಿಯಲ್ಲಿ ಟಾಪ್ 5 ಲಿಸ್ಟ್‌ನಲ್ಲಿ ರಕ್ಷಿತಾ ಸಹ ಸ್ಥಾನ ಪಡೆಯೋ ಸಾಧ್ಯತೆ ಇದೆ.
ಇದನ್ನೂ ಓದಿ:‘ಇದ್ರೆ ಇರ್ತಾರೆ, ಇಲ್ಲದಿದ್ರೆ ಹೋಗ್ತಾರೆ..’ ಮದ್ವೆ ಆಗುವ ಹುಡುಗನ ಬಗ್ಗೆ ತುಟಿ ಬಿಚ್ಚಿದ ರಕ್ಷಿತಾ VIDEO
ರಕ್ಷಿತಾಗೆ ಇರೋ ಮೈನಸ್ ಪಾಯಿಂಟ್ ಅಂದ್ರೆ ಆಕೆಗೆ ಯಾರಾದ್ರೂ ಟಾರ್ಗೆಟ್ ಆದ್ರೂ ಅಂದ್ರೆ ಅವರನ್ನ ಬಿಡೋದಿಲ್ಲ. ಗೇಮ್‌ನಲ್ಲಿ ತಾನು ಗೆಲ್ಬೇಕು ಅನ್ನೋದಕ್ಕಿಂತ ತನ್ಗೆ ಆಗದ ಕಾವ್ಯ, ಸ್ಪಂದನಾ ಗೆಲ್ಬಾರದು. ಅವರನ್ನ ಬಿಗ್‌ಮನೆಯಿಂದ ಹೊರಹಾಕಬೇಕು ಅಂತಾನೇ ಆಡೋದು ಜಾಸ್ತಿ. ಇದು ರಕ್ಷಿತಾಗೆ ಮೈನಸ್ ಆಗೋ ಸಾಧ್ಯತೆ ಇರುತ್ತೆ.
ಧನು
/filters:format(webp)/newsfirstlive-kannada/media/media_files/2025/11/08/dhanush-gowda-2025-11-08-22-21-38.jpg)
ಬಿಗ್‌ಬಾಸ್ ಮನೆಯಲ್ಲಿ ನೀಟ್ ಆಗಿ ಆಡ್ತಾ ಇರೋದು ಅಂದ್ರೆ ಧನು.. ಯಾರ ಜೊತೆಗೂ ಅನಾವಶ್ಯಕ ಜಗಳ ಆಡಿದ್ದು ಇಲ್ಲವೇ ಇಲ್ಲ. ಗೇಮ್ ಅಂತ ಬಂದ್ರೆ ಪಕ್ಕಾ ಹುಲಿ. ಎದುರಾಳಿಗಳು ಅದೆಷ್ಟೇ ಬಲಿಷ್ಠರಾಗಿದ್ರೂ ಕೇರ್ ಮಾಡೋದಿಲ್ಲ. ನುಗ್ಗಿ ಹೋಗ್ತಾನೆ ಗೆಲುವು ಸಾಧಿಸ್ತಾನೆ. ಇದೀಗ ಮತ್ತೊಮ್ಮೆ ಕ್ಯಾಪ್ಟನ್ ಆಗಿದ್ದಾನೆ. ಆತನ ಸೌಮ್ಯ ಗುಣ, ವ್ಯಕ್ತಿತ್ವ ಬಿಗ್‌ಬಾಸ್ ವೀಕ್ಷಕರಿಗೆ ಇಷ್ಟವಾಗ್ತಾ ಇದೆ.
ಇದನ್ನೂ ಓದಿ: ಸ್ಪಂದನಾ ಕಣ್ಣೀರಿಗೆ ಗಾಬರಿಯಾದ ಧನುಷ್.. ವಿಷ್ಯ ಗೊತ್ತಾದ್ಮೇಲೆ ಬಿದ್ದುಬಿದ್ದು ನಕ್ಕ ಕಾವ್ಯ..!
ಧನುಗೆ ಇರೋ ಮೈನಸ್ ಪಾಯಿಂಟ್ ಏನು ಅಂದ್ರೆ ಜಾಸ್ತಿ ಮಾತಾಡಲ್ಲ. ಬಿಗ್‌ಬಾಸ್ ಮನೆಯಲ್ಲಿ ಮಾತು ಬೆಳ್ಳಿ ಮೌನ ಬಂಗಾರ ಅಂತ ಇದ್ರೆ ಆಗಲ್ಲ. ಅಲ್ಲಿ ಏನಾದ್ರೂ ಒಂದ್ ಮಾತು ಆಡ್ತಾನೇ ಇರ್ಬೇಕು. ಬಹುಶಃ ಧನುಗೆ ಮೌನವೇ ಮುಳುವಾದ್ರೂ ಆಗಬಹುದು. ಇನ್ನು ಯಾವಾಗ್ಲೂ ಕಾವ್ಯ, ಸ್ಪಂದನ ಪರ ಸ್ಟ್ಯಾಂಡ್ ತೆಗೆದ್ಕೊಳ್ಳುವುದು ಗೆಲುವಿನ ವೋಟಕ್ಕೆ ಅಡ್ಡಿಯಾದ್ರೂ ಅಚ್ಚರಿಯಿಲ್ಲ.
ರಘು
/filters:format(webp)/newsfirstlive-kannada/media/media_files/2025/10/28/bbk12_raghu-1-2025-10-28-08-43-03.jpg)
ಬಿಗ್‌ಬಾಸ್ ಮನೆಯ ಹಿರಿಯಣ್ಣ ಅಂತಾನೇ ಕರಿಯಿಸಿಕೊಳ್ತಿರೋ ರಘು ಚೆನ್ನಾಗಿಯೇ ಆಡ್ತಿದ್ದಾರೆ. ಎಲ್ಲಿಯೂ ಮಿತಿ ಮೀರಿದ ವರ್ತನೆ ತೋರಿಸ್ತಾ ಇಲ್ಲ. ಇತರೇ ಸ್ಪರ್ಧಿಗಳ ವಿರುದ್ಧ ರೇಗಾಡ್ತಾ ಇಲ್ಲ. ಒಮ್ಮೆ ಅಶ್ವಿನಿ ಗೌಡ ಜೊತೆ ಜಗಳ ಆಡಿದ್ದು ಬಿಟ್ರೆ ಉಳಿದಂತೆ ಕೂಲ್ ಆಗಿಯೇ ಇದ್ದಾರೆ. ಗೇಮ್‌ಗಳನ್ನು ಚೆನ್ನಾಗಿಯೇ ಆಡ್ತಿದ್ದಾರೆ. ಹೀಗಾಗಿ ರಘು ಸಹ ಈ ಬಾರಿ ಟಾಪ್ 5 ದಲ್ಲಿ ಸ್ಥಾನ ಪಡೆಯೋ ಲೆಕ್ಕಾಚಾರವಿದೆ.
ಇದನ್ನೂ ಓದಿ:ಗಿಲ್ಲಿಗೆ ಚಪಾತಿ ಕೊಡದ ರಘು.. ಅದಕ್ಕೆ ಅಭಿಷೇಕ್ ಕೊಟ್ಟ ರೀಷನ್ ಬೇರೆ..! VIDEO
ರಘುಗೆ ಇರೋ ಮೈನಸ್ ಏನು ಅಂದ್ರೆ, ಆರಂಭದಲ್ಲಿ ಗಿಲ್ಲಿ ಜೊತೆ ಗುರ್ತಿಸಿಕೊಂಡಿದ್ರು.. ಅದು ರಘುಗೆ ಪ್ಲಸ್ ಆಗ್ತಾ ಇತ್ತು. ಗಿಲ್ಲಿ ಅಭಿಮಾನಿಗಳು ರಘುಗೆ ವೋಟ್ ಮಾಡ್ತಾ ಇದ್ರು. ಇದೀಗ ಗಿಲ್ಲಿಯಿಂದ ದೂರವಾಗಿರೋದು ರಘುಗೆ ಮೈನಸ್ ಆಗೋ ಸಾಧ್ಯತೆ ಇದೆ. ಹಾಗೇ ಬಿಗ್‌ಬಾಸ್ ಮನೆಯಲ್ಲಿ ಜಾಸ್ತಿ ಮಾತಾಡಲ್ಲ ಅನ್ನೋದನ್ನ ವೀಕ್ಷಕರು ಹೇಳ್ತಿದ್ದಾರೆ.
ಗಿಲ್ಲಿ, ಅಶ್ವಿನಿ, ರಘು, ಧನು, ರಕ್ಷಿತಾ ಬಿಗ್‌ಬಾಸ್ ಮನೆಯಲ್ಲಿರೋ ಟಾಪ್ 5 ಸ್ಪರ್ಧಿಗಳು ಅಂತ ಇವರನ್ನ ಗುರ್ತಿಸಲಾಗ್ತಿದೆ. ಇವರಲ್ಲಿ ಒಬ್ಬರು ಬಿಗ್‌ಬಾಸ್ ಗೆಲ್ತಾರಾ? ಇಲ್ಲವೇ ಇವರನ್ನ ಹೊರತು ಪಡ್ಸಿ ಬೇರೆಯವರು ಟ್ರೋಪಿ ಗೆಲ್ತಾರಾ? ಅನ್ನೋದು ಇನ್ನೇನ್ ಮೂರುವಾರದಲ್ಲಿ ಕನ್ಫರ್ಮ್ ಆಗುತ್ತೆ.
ಇದನ್ನೂ ಓದಿ:ಅದ್ದೂರಿಯಾಗಿ ನೆರವೇರಿದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ರಥೋತ್ಸವ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us