/newsfirstlive-kannada/media/media_files/2026/01/05/rashika-ashwini-2026-01-05-10-48-09.jpg)
ಬಿಗ್​​ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ನಿನ್ನೆ ಸ್ಪರ್ಧಿಗೆ ವಿಶೇಷ ಚಟುವಟಿಕೆ ನೀಡಿದರು. ನಿಮ್ಮ ಎದುರಾಳಿ ಸ್ಪರ್ಧಿಗಳಿಗೆ ಏನಾದರೂ ಹೇಳಬೇಕು ಅನಿಸಿದ್ರೆ ಮುಖಕ್ಕೆ ಹೊಡೆದಂತೆ ಹೇಳಬೇಕು ಅಂತಾರಲ್ಲ ಹಾಗೆ. ಮೇಲೆ ನೇತು ಹಾಕಿರುವ ಅವರ ಭಾವಚಿತ್ರಕ್ಕೆ ಪಂಚ್ ಮಾಡಿ ಹೇಳಿ ಎಂದಿದ್ದರು. ಈ ವೇಳೆ ಅಶ್ವಿನಿ ಗೌಡ, ರಾಶಿಕಾಗೆ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕೊಪ್ಪಳ ಅಜ್ಜನ ಮಹಾರಥೋತ್ಸವಕ್ಕೆ ಕ್ಷಣಗಣನೆ; ಭರದಿಂದ ಸಾಗಿದ ಸಿದ್ಧತೆ..!
ಅಶ್ವಿನಿ, ರಾಶಿಕಾಗೆ ಏನಂದ್ರು..?
ನಾನು ಬಿಗ್ ಬಾಸ್ ಸೀಸನ್ 12 ರಲ್ಲಿ, ನಾನು ಮಿಸ್ ಯುನಿವರ್ಸ್ ಅಂದ್ಕೊಂಡಿರೋ ರಾಶಿ.. ನಿನ್ನ ವಯಸ್ಸಿಗೂ, ನನ್ನ ವಯಸ್ಸಿಗೂ ತುಂಬಾ ಅಂತರ ಇದೆ. ನಿನ್ನನ್ನ ನೀನೇ ಹೇಳಿಕೊಳ್ತಿದ್ದೆ. ಇಲ್ಲಿರೋ ಎಲ್ಲಾ ಹೆಣ್ಮಕ್ಕಳಿಗಿಂತ ತುಂಬಾ ಸ್ಟ್ರಾಂಗು ಅಂತಾ. ಅದೇ ಹಿಂದಿನ ಆಟದಲ್ಲಿ ನಿನಗಿಂತ ನಾನು ಸ್ಟ್ರಾಂಗ್ ಅಂತಾ ಪ್ರೂವ್ ಮಾಡಿದ್ದೀನಿ.
ನಿನ್ನ ಥರಾ, ಬಿಗ್ ಬಾಸ್ ಮನೆಯೊಳಗಡೆ ಇನ್ನೊಂದು ಟ್ರ್ಯಾಕು, ಮತ್ತೊಂದು ಟ್ರ್ಯಾಕು ನಾನು ಶುರು ಮಾಡ್ಕೊಂಡಿರಲಿಲ್ಲ. ನಿನಗೆ ನಿಯತ್ತು ಇಲ್ಲ ಅನ್ನೋದಕ್ಕೆ ಸೂರಜ್ ಇದ್ನಲ್ಲ, ಅವನೇ ದೊಡ್ಡ ಉದಾಹರಣೆ. ಗಿಲ್ಲಿಗೆ ನಾನು ರಿಕ್ವೆಸ್ಟ್ ಮಾಡಿಕೊಂಡೆ, ರಿಕ್ವೆಸ್ಟ್ ಮಾಡಿಕೊಂಡೆ. ಹೌದು, ನಾನು ರಿಕ್ವೆಸ್ಟ್ ಮಾಡಿಕೊಂಡೆ.. ಮಾಡಲ್ಲ ಎಂಬ ಪದವನ್ನು ನಾನು ಬಳಕೆ ಮಾಡಿಲ್ಲ. ಏಕವಚನ ಪದ ಬಳಕೆ ಮಾಡಿದ್ದು ಗಿಲ್ಲಿನೇ.
ಇದೇ ಟಿಟಿಎಫ್. ಟಿಕೆಟ್ ಟು ಫಿನಾಲೆ. ಲಾಸ್ಟ್ ಕ್ಯಾಪ್ಟನ್ ದಿ ಆಫ್ ಹೌಸ್ ಅಂತಾ ಬಂದಾಗ.. ನೀನು, ನೀನು, ಉಸ್ತುವಾರಿಯಾಗಿ ನಿನ್ನ ಯೋಗ್ಯತೆಗೆ ಎಷ್ಟು ಚೆನ್ನಾಗಿ ಪ್ರದರ್ಶನ ಮಾಡಿದ್ದೆ ಅಂತಾ ಚೆನ್ನಾಗಿ ಗೊತ್ತಿದೆ. ನೀನೊಬ್ಬ ಉಸ್ತುವಾರಿಯಾಗಿ ನೀನು ಜವಾಬ್ದಾರಿಯನ್ನ ಕರೆಕ್ಟ್ ಮಾಡಿದ್ದರೆ ನಾನು ಇವತ್ತು ಈ ಮನೆಯ ಕಡೆಯ ಕ್ಯಾಪ್ಟನ್ ಆಗಿರುತ್ತಿದ್ದೆ.
ನಿನಗೆ ಒರಗಿಕೊಳ್ಳೋಕೆ ರಘು ಅವರ ತೊಡೆ ಬೇಕು. ನಿನಗೆ ಒರಗಿ ಕೊಳ್ಳೋಕೆ ರಘು ಅವರ ಹೆಗಲು ಬೇಕು. ನನಗೆ ಅದರ ಅವಶ್ಯಕತೆ ಇಲ್ಲ. ನಾನು ಇನ್ನೊಬ್ಬರಿಗೆ ಹೆಗಲಾಗಿ ಇರುತ್ತೀನಿ ಅರ್ಥ ಆಯ್ತಾ. ಯೂ ಆರ್ ನಥಿಂಗ್ ಇನ್ ಫ್ರಂಟ್ ಆಫ್ ಮೀ.
ಅಶ್ವಿನಿ ಗೌಡ
ಇದನ್ನೂ ಓದಿ:ಗಿಲ್ಲಿ, ಅಶ್ವಿನಿ, ಧನು.. ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯೋಱರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us