ಬೆಂಗಳೂರಲ್ಲಿ‌ ಒಂಟಿತನ, ಖಿನ್ನತೆ.. ಐಟಿ ಉದ್ಯೋಗಿಗಳಿಗೆ ಡಿಪ್ರೆಷನ್ ಗಂಡಾಂತರ..!

ಮಾನಸಿಕ ನೆಮ್ಮದಿ, ಒಂಟಿತನ, ಖಿನ್ನತೆ ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಾಗ್ತಾಯಿದೆ ಅನ್ನೋ ಶಾಕಿಂಗ್​ ಸಮಾಚಾರ ರೀವಿಲ್​ ಆಗಿದೆ. ಸಿಲಿಕಾನ್‌ ಸಿಟಿಯಲ್ಲಿ ಒಂದೇ ವರ್ಷ ಶೇಕಡಾ 10 ರಿಂದ 250ರಷ್ಟು ಕೇಸ್​ಗಳು ಹೆಚ್ಚಳವಾಗಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ಅಂತಿದ್ದಾರೆ ವೈದ್ಯರು.

author-image
Ganesh Kerekuli
depression
Advertisment
  • ಒಂದೇ ವರ್ಷ.. ಶೇ.10ರಿಂದ ಶೇ.250ರಷ್ಟು ಕೇಸ್​ಗಳು ಹೆಚ್ಚಳ
  • 30-40 ವರ್ಷದವರಲ್ಲೇ ಹೆಚ್ಚಾಗಿ ಕಂಡು ಬರ್ತಿರೋದೇಕೆ ಖಿನ್ನತೆ?
  • ಮೆಂಟಲ್ ಹೆಲ್ತ್​ ಕಾಪಾಡಿಕೊಳ್ಳಲು ಮಾಡ್ಬೇಕಾರೋದು ಏನು?

ಮಾನಸಿಕ ನೆಮ್ಮದಿ, ಒಂಟಿತನ, ಖಿನ್ನತೆ ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಾಗ್ತಾಯಿದೆ ಅನ್ನೋ ಶಾಕಿಂಗ್​ ಸಮಾಚಾರ ರೀವಿಲ್​ ಆಗಿದೆ. ಅದರಲ್ಲೂ ಸಿಲಿಕಾನ್‌ ಸಿಟಿಯಲ್ಲಿ ಒಂದೇ ವರ್ಷ ಶೇಕಡಾ 10 ರಿಂದ 250ರಷ್ಟು ಕೇಸ್​ಗಳು ಹೆಚ್ಚಳವಾಗಿದ್ದು, ಮೆಂಟಲ್ ಹೆಲ್ತ್​ ಕಾಪಾಡಿಕೊಳ್ಳೋದು ವೇರಿ ವೇರಿ ಇಂಪಾರ್ಟೆಂಟ್​ ಆಂತಿದ್ದಾರೆ ಸೈಕ್ಯಾಟ್ರಿಕ್.

ಬೆಂಗಳೂರಿನ ಜೀವನದಿಂದ ಹದಗೆಡ್ತಿದ್ಯಾ ಮಾನಸಿಕ ನೆಮ್ಮದಿ? ಬ್ಯೂಸಿ ಲೈಫ್.. ಟ್ರಾಫಿಕ್ ಕಾಟ.. ನಗರದ ಮಂದಿಗೆ ಆಯ್ತಾ ಕಂಟಕ? ಐಟಿಯಲ್ಲಿ ಕೆಲಸ ಮಾಡೋರಿಗೆ ಹೆಚ್ಚಾಗಿ ಕಾಡ್ತಿದ್ಯಂತೆ ಡಿಪ್ರೆಷನ್..? ಈ ರೀತಿ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಳ್ಳೋದಕ್ಕೆ ಕಾರಣ, ಒಂದೇ ವರ್ಷ.. ಶೇಕಡಾ 10 ರಿಂದ ಶೇಕಡಾ 250ರಷ್ಟು ಖಿನ್ನತೆಯಿಂದ ಬಳಲ್ತಾಯಿರೋ ಕೇಸ್​ಗಳು ಹೆಚ್ಚಳವಾಗಿರೋದು.

ಇದನ್ನೂ ಓದಿ: ಮಕ್ಕಳಲ್ಲಿ ಅತಿಯಾದ ಮೊಬೈಲ್ ಚಟ.. ‘ಟೆಕ್ಸ್ಟ್ ನೆಕ್’ ಸಮಸ್ಯೆಗೆ ದಾರಿ.. ಪೋಷಕರೇ ಎಚ್ಚರ!

ಏನಿದು ಕ್ಲಿನಿಕಲ್ ಡಿಪ್ರೆಶನ್​? ಈ ಖಿನ್ನತೆ ಆವರಿಸಿಕೊಳ್ಳುವುದು ಏಕೆ? ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ?

ಶಾಕಿಂಗ್​ ಅನ್ಸಿದ್ರೂ ಇದು ಸತ್ಯ. 30-40 ವರ್ಷದವರಲ್ಲೇ ಹೆಚ್ಚಾಗಿ ಖಿನ್ನತೆ ಕಂಡುಬರ್ತಾಯಿದೆ. ಅದ್ರಲ್ಲೂ ಐಟಿಯಲ್ಲಿ ಕೆಲಸ ಮಾಡೋರಿಗೆ ಹೆಚ್ಚಾಗಿ ಡಿಪ್ರೆಷನ್ ಕಾಡ್ತಿದ್ಯಂತೆ. ಇದಕ್ಕೆ ನಿದರ್ಶನ ಎಂಬಂತೆ. ನಗರದಲ್ಲಿ ದಾಖಲೆ ಮಟ್ಟದಲ್ಲಿ ಸೈಕ್ಯಾಟ್ರಿಕ್ ಕ್ಲಿನಿಕ್​ಗಳು ಓಪನ್ ಆಗಿವೆ.

ಐಟಿ ಉದ್ಯೋಗಿಗಳಲ್ಲೇ ಖಿನ್ನತೆ ಯಾಕೆ?

ಡೆಡ್​ಲೈನ್ ಒಳಗೆ ಕೆಲಸ ಮಾಡೋ ಪ್ರೆಷರ್ ಇರುತ್ತೆ. ಐಟಿ ಉದ್ಯೋಗಿಗಳು ಅತಿ ಹೆಚ್ಚು ಸಮಯ ಕೆಲಸ ಮಾಡ್ಬೇಕಾಗುತ್ತೆ. ಕೆಲಸ ಮಾಡುವ ಜಾಗದ ವಾತಾವರಣವೂ ಕೂಡ ಮಾನಸಿಕ ನೆಮ್ಮದಿ ಕಿತ್ತುಕೊಳ್ತಿದೆ ಎನ್ನಲಾಗ್ತಾಯಿದೆ. ಯೋಗ, ಮೆಡಿಟೇಷನ್, ಜಂಕ್ ಫುಡ್ ಸೇವನೆ ನಿಷೇಧ.  8 ಗಂಟೆ ನಿದ್ದೆ, ಮದ್ಯಪಾನ ನಿಷೇದ ಜೊತೆಗೆ  ಸೆಲ್ಫ್ ಕೇರ್ ಹೆಚ್ಚಿಸಿಕೊಂಡ್ರೆ. ಡಿಪ್ರೆಷನ್​ನಿಂದ ಚಿಟಿಕೆ ಹೊಡೆಯೋದ್ರೋಳಗೆ ನೀವು ಹೊರಬರಬಹುದು ಅಂತಿದ್ದಾರೆ ಸೈಕ್ಯಾಟ್ರಿಕ್. 

ಇದನ್ನೂ ಓದಿ:ಚೆನ್ನಾಗಿದ್ರೆ ದೋಸ್ತಿ, ಎದುರು ಹಾಕಿಕೊಂಡ್ರೆ ಉಡೀಸ್.. ಪಂಚ್‌ ಮಾಸ್ಟರ್‌ ಗಿಲ್ಲಿ ಸಕ್ಸಸ್‌ಗೆ 10 ಕಾರಣಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bengaluru News depression Mental health
Advertisment