newsfirstkannada.com

×

ಕೃಪೆ ತೋರದ ಮಳೆರಾಯ.. ದೆಹಲಿಯಲ್ಲಿ 48 ಗಂಟೆಯಲ್ಲಿ 50 ಮಂದಿ ಸಾವು.. ಏನಾಯ್ತು..

Share :

Published June 20, 2024 at 7:16am

    ಉತ್ತರ ಭಾರತದಲ್ಲಿ ವಾರಗಟ್ಟಲೆಯಿಂದ ಕಾಡ್ತಿದೆ ಬಿಸಿ ಶಾಖ

    2,000ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

    ಚಿಕಿತ್ಸೆಗೆ ಆದ್ಯತೆ ನೀಡಲು ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ಆದೇಶ

ಕಂಡು ಕೇಳರಿಯದಂತ ಬಿಸಿಲು ಉತ್ತರ ಭಾರತದ ಜನರನ್ನ ಸುಡುತ್ತಿದೆ. ಉಸಿರಾಡೋ ಗಾಳಿ ಕೂಡ ಬಿಸಿ ಬಿಸಿ. ಆರೋಗ್ಯದ ಮೇಲೆ ತುಂಬಾನೇ ಅಡ್ಡ ಪರಿಣಾಮಗಳು ಬೀರ್ತಿದ್ದು, ಸಾವಿನ ಕೊಡ ತುಂಬುತಲ್ಲೇ ಹೋಗ್ತಿದೆ.

ಭಾರತದಲ್ಲಿರುವ ಹವಾಗುಣ ಒಂಥರಾ ವಿಚಿತ್ರ.. ಇತ್ತ ದಕ್ಷಿಣ ಭಾರತದಲ್ಲಿ ತುಂತುರು ಮಳೆ ಇದ್ರೆ, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗ್ತಿದೆ. ಇನ್ನು ಉತ್ತರ ಪ್ರದೇಶ ಸೇರಿ ಮಧ್ಯ ಭಾರತದಲ್ಲಿ ಬಿಸಿಲು ನೆತ್ತಿಯನ್ನು ಸುಡುತ್ತಿದೆ. ಇದೊಂಥರಾ ಬಿಸಿಯ ಸ್ಟೌ ಮೇಲೆ ನಡೆದಾಡುವಂತಾಗ್ತಿದೆ.

ಇದನ್ನೂ ಓದಿ:ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

48 ಗಂಟೆಗಳಲ್ಲಿ ದೆಹಲಿಯಲ್ಲಿ 50 ಮೃತದೇಹಗಳು ಪತ್ತೆ
ದೆಹಲಿಯಲ್ಲಿ ಬಿಸಿಗಾಳಿ ಬೀಸುತ್ತಿರುವ ಶಾಖದ ಅಲೆಯು ಸಾವುನೋವುಗಳು ಮತ್ತು ಹೀಟ್‌ಸ್ಟ್ರೋಕ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ 48 ಗಂಟೆಗಳಲ್ಲಿ ದಿಲ್ಲಿಯ ಸುತ್ತಮುತ್ತಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಗೆ ಸೇರಿದ 50 ಮಂದಿಯ ಮೃತದೇಹಗಳು ಸಿಕ್ಕಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೂನ್ 11 ರಿಂದ 19 ರವರೆಗಿನ ಶಾಖದ ಅಲೆಯಿಂದಾಗಿ ದೆಹಲಿಯಲ್ಲಿ 192 ನಿರಾಶ್ರಿತ ಸಾವುಗಳು ದಾಖಲಾಗಿವೆ ಎಂದು ನಿರಾಶ್ರಿತರಿಗಾಗಿ ಕೆಲಸ ಮಾಡುವ ಎನ್‌ಜಿಒ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಮಾಹಿತಿ ಕೊಟ್ಟಿದೆ.

ಈ ಬಿಸಿಯ ಶಾಖದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಸ್ಥಳೀಯ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಹೀಟ್ ಸ್ಟ್ರೋಕ್ ರೋಗಿಗಳಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡಲು ಸಲಹೆ ನೀಡಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಅಧಿಕಾರಿಗಳಿಗೆ ನಿರ್ದೇಶನಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

ಹೀಟ್ ವೇವ್‌ನಿಂದಾಗಿ ವಿಶ್ವದಾದ್ಯಂತ 2 ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾ ಮತ್ತು ಇರಾಕ್‌ನ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶಗಳು ಸಹ ಸಾವುನೋವುಗಳನ್ನು ದೃಢಪಡಿಸಿವೆ. ನಿನ್ನೆಯಷ್ಟೇ ಮುಸ್ಲಿಮರ ಪವಿತ್ರ ಭೂಮಿ ಮೆಕ್ಕಾದಲ್ಲಿ ಘೋರ ದುರಂತ ನಡೆದಿದೆ.

ಹಜ್ ಯಾತ್ರೆ ವೇಳೆ ತಾಪಮಾನ ಹೆಚ್ಚಾಗಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 645 ಹಜ್ ಯಾತ್ರಿಕರು ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಸಿಕ್ಕಿವೆ. ಒಟ್ಟಾರೆ, ಬಿಸಿಲ ಶಾಖದಿಂದ ತಪ್ಪಿಸಿಕೊಳ್ಳಲು ಜನ ನೀರು, ಫ್ಯಾನ್.. ಎಸಿ ಮೊರೆ ಹೋಗ್ತಿದ್ದಾರೆ. ಹೋಗದೇ ಇನ್ನೇನು? ಎಲ್ಲಾ ಕಾಡನ್ನು ಹಂತ ಹಂತವಾಗಿ ನಾಶ ಮಾಡ್ತಾ ಕಾಂಕ್ರೀಟ್​ ಕಾಡು ನಿರ್ಮಿಸ್ತಿದ್ರೆ ಮತ್ತೇನಾಗುತ್ತದೆ. ಇನ್ಮುಂದಾದ್ರೂ ಹೆಚ್ಚೆಚ್ಚು ಮರಗಳನ್ನು ಬೆಳೆಸುವಂತೆ ಸರ್ಕಾರಗಳು ಜನರನ್ನು ಜಾಗೃತಿ ಮೂಡಿಸುವ ಜೊತೆಗೆ ಪ್ರೋತ್ಸಾಹಿಸಬೇಕಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೃಪೆ ತೋರದ ಮಳೆರಾಯ.. ದೆಹಲಿಯಲ್ಲಿ 48 ಗಂಟೆಯಲ್ಲಿ 50 ಮಂದಿ ಸಾವು.. ಏನಾಯ್ತು..

https://newsfirstlive.com/wp-content/uploads/2024/06/DELHI-1.jpg

Load More