ಬೆಂಗಳೂರು ಮತ್ತು ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗೋ ಮುನ್ಸೂಚನೆ.. ಇಂದು ಎಷ್ಟು ಗಂಟೆಗೆ ಮಳೆ ಸುರಿಯಲಿದೆ?

author-image
AS Harshith
Updated On
ಬೆಂಗಳೂರಿಗರಿಗೆ ಬೆಳ್ಳಂಬೆಳಗ್ಗೆ ಮಳೆರಾಯ ಕಿರಿಕಿರಿ; ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?
Advertisment
  • ಇಂದು ಬೆಂಗಳೂರಿನ ಈ ಭಾಗಗಲ್ಲಿ ಮಳೆಯಾಗುವ ಸಾಧ್ಯತೆ
  • ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ
  • ಇಂದು ಈ ಭಾಗದಲ್ಲಿ ಆಲಿಕಲ್ಲು ಮಳೆ ಸುರಿಯುತ್ತಾ? ಹವಾಮಾನ ಇಲಾಖೆ ಏನು ಹೇಳುತ್ತಿದೆ?

ಬೆಂಗಳೂರು ನಗರ ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ಭಾರೀ ಮಳೆಯಾಗೋ ಮನ್ಸೂಚನೆ ಸಿಕ್ಕಿದೆ. ನಗರದ ಕೆಲ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಮಂಡ್ಯ, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: ಗಂಡ ಕುರ್ಕುರೆ ತಂದು ಕೊಡದಿದ್ದಕ್ಕೆ ವಿಚ್ಛೇದನ ನೀಡಿದ ಪತ್ನಿ! ಇಂದು ನಂಬಲಸಾಧ್ಯವಾದ ಸ್ಟೋರಿ

ಈಗಾಗಲೇ ರಾಜ್ಯದಲ್ಲಿ ಸುರಿದ ಮಳೆಗೆ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲೂ ಗಾಳಿ, ಮಳೆ, ಸಿಡಿಲಬ್ಬರಕ್ಕೆ ಪ್ರಾಣಿಗಳು, ಮನುಷ್ಯರು ಸಾವನ್ನಪ್ಪಿದ ಪ್ರಸಂಗಗಳು ಬೆಳೆಕಿಗೆ ಬಂದಿವೆ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ಬೆಳೆಗಳು ನಾಶವಾಗಿವೆ.

publive-image

ಇದನ್ನೂ ಓದಿ: ಬಿಜೆಪಿ ಮುಖಂಡ ದೇವರಾಜೇಗೌಡ, ಮಾಜಿ ಶಾಸಕ ಪ್ರಿತಮ್ ಗೌಡ ಆಪ್ತರ ಮನೆ ಮೇಲೆ SIT ದಾಳಿ.. ಏನೆಲ್ಲಾ ಸಿಕ್ತು ಗೊತ್ತಾ?

ಅಂತೂ ಇಂತೂ ಆರಂಭಿಕ ಮಳೆಗೆ ರಾಜ್ಯದಲ್ಲಿ ಕೆಲವಡೆ ಅವಾಂತರಗಳು ಬೆಳಕಿಗೆ ಬರುತ್ತಿವೆ. ಇನ್ನು ನಿರಂತರ ಮಳೆಗೆ ರಾಜ್ಯದ ಪರಿಸ್ಥಿತಿ ಏನಾಗಲಿದೆಯೋ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment