ಕೆರೆಯಂತಾದ ರಸ್ತೆಗಳು, ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಳೆಯ ನೀರಿನಲ್ಲಿ ಕಾರಿನ ಡೋರ್ ಬಳಿ ನಿಂತುಕೊಂಡ ಸಾಕುಪ್ರಾಣಿ ಪರದಾಟ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ದುಬೈನಲ್ಲಿನ ಪ್ರವಾಹದ ದೃಶ್ಯಗಳು
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನಾದ್ಯಂತ ಮೊನ್ನೆಯಿಂದ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಮಂಗಳವಾರ ಸಂಜೆಯಿಂದ ಶುರುವಾದ ಜಿಟಿ ಜಿಟಿ ಮಳೆ ನೋಡನೋಡುತ್ತಿದ್ದಂತೆ ಇಂದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ರಣಭೀಕರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ
ನಿಧಾನಗತಿಯಲ್ಲಿ ನಗರಗಳಲ್ಲಿನ ಮುಖ್ಯ ರಸ್ತೆಗಳು, ಫುಟ್ ಪಾತ್ಗಳು, ದುಬೈನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮುಖ್ಯ ರಸ್ತೆಗಳು, ಮೆಟ್ರೋ ನಿಲ್ದಾಣ, ಬೃಹತ್ ಶಾಪಿಂಗ್ ಮಾಲ್ಗಳು ಅಕ್ಷರಶಃ ಕೆರೆಯಂತಾಗಿವೆ. ನಿಲ್ದಾಣದಲ್ಲೇ ನೀರು ತುಂಬಿಕೊಂಡಿದ್ದರಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
Dubai is a crazy place pic.twitter.com/qu5w41qvYX
— Cleared Improve (@ClearedImprove) April 17, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ದುಬೈನಲ್ಲಿನ ಪ್ರವಾಹದ ದೃಶ್ಯಗಳು ನೋಡುಗರಲ್ಲಿ ಅಚ್ಚರಿಯುಂಟು ಮಾಡುತ್ತಿದೆ. ಇನ್ನು ಈ ಭೀಕರ ಮಳೆಗೆ ಬೆಕ್ಕಿನ ಮರಿಯೊಂದು ಕಾರಿನ ಬಳಿ ನಿಂತುಕೊಂಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಳೆಯ ನೀರಿನಲ್ಲಿ ಕಾರಿನ ಡೋರ್ ಬಳಿ ಬೆಕ್ಕು ನಿಂತುಕೊಂಡಿತ್ತು. ಇದನ್ನು ಗಮನಿಸಿದ ವ್ಯಕ್ತಿಯೂ ಕೂಡಲೇ ಬೋಟ್ನಲ್ಲಿ ತೆರಳಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: 24 ಗಂಟೆಯಲ್ಲಿ ದಬದಬ ಸುರಿದ 1.5 ವರ್ಷದ ಮಳೆ.. ವರುಣಾಘಾತಕ್ಕೆ ದುಬೈ ತತ್ತರ; ಪರಿಸ್ಥಿತಿ ಹೇಗಿದೆ ನೋಡಿ!
Can you imagine how long that cat has been holding on to its life like this?
A beautiful cat and beautiful Dubai men ❤️ pic.twitter.com/6hRvEfFucu
— Cind (@JoliePagaille) April 17, 2024
ಇತ್ತ ನಿಧಾನವಾಗಿ ಮುಖ್ಯ ರಸ್ತೆಗಳಿಗೆ ಮಳೆ ನೀರು ಬಂದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ನೀರು ಬರುತ್ತಿದ್ದಂತೆ ವಾಹನ ಸವಾರರು ಕೂಡಲೇ ಅಲ್ಲಿಂದ ಹೊರ ಬಂದು ಜೀವವನ್ನು ಉಳಿಸಿಕೊಂಡಿದ್ದಾರೆ. ಈ ದಿಢೀರ್ ಮಳೆಯಿಂದ ದುಬೈನ ನಿವಾಸಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ