Advertisment

ಹತ್ಯೆಯಾದ ಮೇಲೂ ಅತ್ಯಾಚಾರ.. ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ 10 ಸ್ಫೋಟಕ ಸತ್ಯಗಳು ಇಲ್ಲಿವೆ

author-image
admin
Updated On
ಹತ್ಯೆಯಾದ ಮೇಲೂ ಅತ್ಯಾಚಾರ.. ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ 10 ಸ್ಫೋಟಕ ಸತ್ಯಗಳು ಇಲ್ಲಿವೆ
Advertisment
  • ಅಶ್ಲೀಲ ಚಿತ್ರ ವ್ಯಸನಿಯಾಗಿದ್ದ! ಹೆಣ್ಣು ಬಾಕ ಅದೆಂಥಾ ಕ್ರೂರಿ?
  • ವೈದ್ಯೆ ಭೀಭತ್ಸ ಹತ್ಯೆ... ಬೆಚ್ಚಿ ಬೀಳಿಸಿದ ಕ್ರೂರಿಯ ರಾಕ್ಷಸತನ!
  • ಹತ್ಯೆಯಾದ್ಮೇಲೆ ಅತ್ಯಾಚಾರ ಮಾಡಿದ್ನಾ ರಾಕ್ಷಸ ಸಂಜಯ್‌ ರಾಯ್‌?

ಕೋಲ್ಕತ್ತಾ ವೈದ್ಯೆಯ ರೇಪ್​ & ಮರ್ಡರ್ ಪ್ರಕರಣಕ್ಕೆ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಇದೀಗ ವೈದ್ಯೆಯ ಮರಣೋತ್ತರ ಪರೀಕ್ಷೆಯ ವರದಿ ಆ ಕಟುಕ ಎಂಥಾ ರಾಕ್ಷಸ ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ವರದಿಯ ಭೀಕರ ಸತ್ಯಗಳು ಅಕ್ಷರಶಃ ನಡುಕ ಹುಟ್ಟಿಸುತ್ತಿವೆ. ಪರಮಪಾಪಿ 31 ವರ್ಷದ ಆ ಹೆಣ್ಣು ಮಗಳಿಗೆ ಬದುಕಿದ್ದಾಗಲೇ ರೌರವ ನರಕ ತೋರಿಸಿದ್ದಾನೆ. ಟ್ರೈನಿ ವೈದ್ಯೆ ಅನುಭವಿಸಿದ ನೋವು, ಸಂಕಟ, ಯಾತನೆ ಎಂಥದ್ದು ಅನ್ನೋದನ್ನ ಶವ ಪರೀಕ್ಷೆಯ ವರದಿ ಕಣ್ಣಿ ಕಟ್ಟುವಂತೆ ಹೇಳುತ್ತಿದೆ.

Advertisment

ಇದನ್ನೂ ಓದಿ: ರೇಪ್ ಮಾಡಿ ಮುಖಕ್ಕೆ ಗುದ್ದಿದ.. ವೈದ್ಯೆಯ ಕಣ್ಣಿಗೆ ಹೊಕ್ಕ ಚಸ್ಮಾ ಗ್ಲಾಸ್; ಕೊಲ್ಕತ್ತಾ ಕಿರಾತಕನ ಮತ್ತಷ್ಟು ಕ್ರೌರ್ಯ ಬಯಲು

ಕೋಲ್ಕತ್ತಾದ ಡಾ. ರಾಧಾ ಗೋಬಿಂದ ಕರ್​ ಮೆಡಿಕಲ್​ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿದ್ದು ಅಕ್ಷರಶಃ ಬರ್ಬರ ಅತ್ಯಾಚಾರ ಹಾಗೂ ಭೀಕರ ಕೊಲೆ. ಈ ಘೋರ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

publive-image

ನಾರಾಯಣ ಹರಿಃ ಅನ್ನೋ ಮಾತು ಬರೀ ಮಾತಲ್ಲ. ಜೀವ ಉಳಿಸೋ ವೈದ್ಯ ವೃತ್ತಿ ಮಾಡೋರನ್ನ ದೇವರಂತೆಯೇ ಕಾಣಬೇಕು. ಆದರೆ, ಇದೇ ಡಾ. ರಾಧಾ ಗೋಬಿಂದ ಕರ್​ ಮೆಡಿಕಲ್​ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದಿದ್ದು ಅಮಾನುಷ.. ಅತಿ ದಾರುಣ.. ಪೈಶಾಚಿಕ ಅನ್ಯಾಯ.

Advertisment

ಪೊಲೀಸರ ವಶದಲ್ಲಿರೋ ಆರೋಪಿ ಸಂಜಯ್​ ರಾಯ್​ ಮೇಲೆ ವೈದ್ಯರು ಕೊಚ್ಚಿ ಕೊಲ್ಲುವ ಕೋಪದಲ್ಲಿದ್ದಾರೆ. ಯಾಕಂದ್ರೆ ಮರಣೋತ್ತರ ಪರೀಕ್ಷೆಯ ವರದಿ ಅಮಾನುಷ ರಕ್ತ ಚರಿತ್ರೆಯ ಕಥೆ ಹೇಳುತ್ತಿದೆ. ರಕ್ತ ರಾಕ್ಷಸನ ಕ್ರೌರ್ಯ ಹೇಗಿತ್ತು ಅನ್ನೋ ದಾರುಣ ದೃಶ್ಯಗಳನ್ನು ಕಣ್ಮುಂದೆ ಕಟ್ಟಿ ಕೊಡುತ್ತಿದೆ. ಆ ಕಟುಕ ಎಂಥಾ ರಾಕ್ಷಸ ಅನ್ನೋದಕ್ಕೆ ಇದೀಗ ಹೊರ ಬಿದ್ದಿರೋ ಮರಣೋತ್ತರ ಪರೀಕ್ಷೆಯ ವರದಿ ಸಾಕ್ಷ್ಯ ನುಡಿಯುತ್ತಿದೆ.

publive-image

ರಕ್ತ ರಾಕ್ಷಸನ ಕೈಗೆ ಸಿಕ್ಕಿ ವಿಲವಿಲ ಒದ್ದಾಡಿ ಸತ್ತಿದ್ದಾಳೆ ಟ್ರೈನಿ ವೈದ್ಯೆ!
ಶವ ಪರೀಕ್ಷೆಯ ವರದಿಯಲ್ಲಿರೋ 10 ಸಂಗತಿ ಬೆಚ್ಚಿ ಬೀಳಿಸುತ್ತಿದೆ!
ದಾರುಣ.. ಇರುವೆಯೊಂದನ್ನ ಕಾಲಡಿ ಹೊಸಕುವಂಥಾ ಕ್ರೌರ್ಯ. ಬಕಾಸುರನಂತೆ ಬಗೆ ಬಗೆದು ಸಿಗಿದು ತಿಂದು ತೇಗಿದವನು ಉಳಿಸಿದ್ದು ರಕ್ತದ ಭಯಾನಕತೆ. ವರದಿಯ ಸಾಲುಗಳನ್ನು ಓದಿದರೂ ಭಯವಾಗುತ್ತದೆ. ಇನ್ನು, ಆ ದೃಶ್ಯವನ್ನು ಕಣ್ಮುಂದೆ ಕಲ್ಪಿಸಿಕೊಂಡು ಬಿಟ್ರೆ ನಿಜಕ್ಕೂ ಸಂಕಟವಾಗುತ್ತದೆ. ಯಾಕಂದ್ರೆ, ಟ್ರೈನಿ ವೈದ್ಯೆಯ ಮೃತ ದೇಹವನ್ನು ಕಂಡ ಕುಟುಂಬಸ್ಥರು ಮೊದಲಿಗೆ ನಂಬಲೇ ಇಲ್ಲ. ಇದು ನಮ್ಮ ಮಗಳ ಶವವಲ್ಲ ಅಂದ್ಬಿಟ್ಟಿದ್ರು. ಅಷ್ಟರಮಟ್ಟಿಗೆ ಮಗಳ ಶವವನ್ನು ಕಂಡು ಬೆಚ್ಚಿ ಬಿದ್ದಿದ್ದರು. ವೈದ್ಯ ವಿದ್ಯಾರ್ಥಿನಿಯ ದೇಹ. ಅದರ ಮೇಲಿನ ಗಾಯ ರಕ್ಕಸನ ಕಥೆ ಹೇಳುತ್ತಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸೋ ಹತ್ತು ಸಂಗತಿಗಳು ರಕ್ತ ರಾಕ್ಷಸ ಕೊಟ್ಟ ನರಕ ಎಂಥದ್ದು ಅನ್ನೋದನ್ನ ಸಾರಿ ಸಾರಿ ಹೇಳುತ್ತಿವೆ.

ವೈದ್ಯೆ ಕಂಡ ನರಕ 1
ಗಂಟಲಿನ ಎಲುಬು ತುಂಡಾಗಿತ್ತು
ಸಂಜಯ್​​ ರಾಯ್ ಅನ್ನೋ ಕಟುಕನ ಎದುರು ಸಿಕ್ಕ ಟ್ರೈನಿ ವೈದ್ಯೆ ಅಕ್ಷರಶಃ ತರಗೆಲೆಯಂತಾಗಿದ್ದಳು. ಅತ್ಯಂತ ಬರ್ಬರವಾಗಿ ಅತ್ಯಾಚಾರ ಎಸಗಿದ್ದ ಕಟುಕ ಆಕೆಯನ್ನು ನಿರ್ದಯವಾಗಿ ನರಳಿಸಿ ನರಳಿಸಿ ಕೊಂದಿದ್ದಾನೆ. ಇದಕ್ಕೆ ಸಾಕ್ಷಿಯಾಗಿದೆ ವೈದ್ಯೆಯ ಮುರಿದ ಗಂಟಲಿನ ಎಲುಬು. ಅತ್ಯಾಚಾರ ಎಸಗಿದ ಕ್ರೂರಿಯು ಆಕೆಯ ಕತ್ತು ಹಿಸುಕಿದ್ದಾನೆ. ಅದರಿಂದ ಆಕೆಯ ಥೈರಾಯ್ಡ್ ಎಲುಬು ತುಂಡಾಗಿದೆ. ಅಷ್ಟರ ಮಟ್ಟಿಗೆ ಆ ಕಟುಕ ಟ್ರೈನಿ ವೈದ್ಯೆಯನ್ನು ಹಿಂಸಿಸಿ ಕೊಂದಿದ್ದಾನೆ.

Advertisment

ಇದನ್ನೂ ಓದಿ:ನೈಟ್ ಡ್ಯೂಟಿ ವೈದ್ಯೆಗೆ ರೇಪ್‌ ಆದ್ರೆ ಇನ್ನೆಲ್ಲಿ ರಕ್ಷಣೆ; ಸಿಡಿದೆದ್ದ ಆಶಿಕಾ ರಂಗನಾಥ್; ಹೇಳಿದ್ದೇನು?

ವೈದ್ಯೆ ಕಂಡ ನರಕ 2
ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿದ್ದಾನೆ
ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರನ್ನೂ ಡಿಸ್ಟರ್ಬ್ ಮಾಡಿದ ಸಂಗತಿ ಇದು. ಪೋಷಕರೂ ಸಹ ದೇಹದ ಮೇಲಿನ ಒಂದಷ್ಟು ಗಾಯಗಳನ್ನು ಕಂಡು ಎದೆ ಬಡಿದುಕೊಂಡು ಗೋಳಾಡಿದ್ರು. ಸಂಜಯ್​ ರಾಯ್ ಅನ್ನೋ ನರರೂಪ ರಾಕ್ಷಸ ಟ್ರೈನಿ ವೈದ್ಯೆಯನ್ನು ಅದೆಷ್ಟು ಬರ್ಬರವಾಗಿ ಅತ್ಯಾಚಾರ ಮಾಡಿದ್ದ ಅಂದ್ರೆ ಪೋಸ್ಟ್​ ಮಾರ್ಟ್ಂ ರಿಪೋರ್ಟ್​​ನಲ್ಲಿ ಬೇಸರ ಹುಟ್ಟಿಸೋದು ಗುಪ್ತಾಂಗಕ್ಕೆ ನೀಡಿರೋ ಚಿತ್ರಹಿಂಸೆಯ ವಿವರಗಳು. ಆಕೆಯ ಗುಪ್ತಾಂಗಗಳಲ್ಲಿ ಆಳವಾದ ಗಾಯಗಳಾಗಿದ್ದು, ಪಾಪಿಯ ಪೈಶಾಚಿಕತೆಯನ್ನು ತೆರೆದಿಟ್ಟಿದೆ. ಇದು 'ಮರ್ಮಾಂಗಕ್ಕೆ ಚಿತ್ರಹಿಂಸೆ' ನೀಡಿದ್ದಾನೆ. ಮರ್ಮಾಂಗಕ್ಕೆ ಆಳವಾದ ಗಾಯಗಳನ್ನು ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದಾಖಲಾಗಿದೆ.

publive-image

ವೈದ್ಯೆ ಕಂಡ ನರಕ 3
ಹೊಟ್ಟೆ, ತುಟಿಗಳ ಕಚ್ಚಿದ ಗಾಯ
ಮಹಿಳಾ ವೈದ್ಯೆಯ ದೇಹದ ಮೇಲಿನ ಗಾಯದ ಗುರುತುಗಳಿಂದ ಆಕೆಯನ್ನು ಕ್ರೂರವಾಗಿ ಥಳಿಸಿರುವುದು ಸ್ಪಷ್ಟವಾಗಿದೆ. ಸಂತ್ರಸ್ತ ಮಹಿಳೆಯ ನಾಲ್ಕು ಪುಟಗಳ ಶವಪರೀಕ್ಷೆ ವರದಿಯು ಮಹಿಳೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿದ್ದು, ಆಕೆಯ ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. ಟ್ರೈನಿ ವೈದ್ಯೆಯ ಹೊಟ್ಟೆ ಹಾಗೂ ತುಟಿಗಳನ್ನೂ ಕಚ್ಚಿರೋ ಸಾಧ್ಯತೆ ಇದೆ ಅನ್ನೋ ಸಂಗತಿಯನ್ನು ಗಾಯಗಳು ಹೇಳುತ್ತಿವೆ.

Advertisment

ವೈದ್ಯೆ ಕಂಡ ನರಕ 4
ಕುತ್ತಿಗೆ ಹಿಚುಕಿ ಕೊಲೆ, ನೆಲಕ್ಕೆ ಅಪ್ಪಳಿಸಿದ್ದ
ಟ್ರೈನಿ ವೈದ್ಯೆಯನ್ನು ಅದೆಷ್ಟು ಬರ್ಬರವಾಗಿ ಕೊಲ್ಲಲಾಗಿದೆ ಅಂದ್ರೆ ಮರಣೋತ್ತರ ಪರೀಕ್ಷೆಯ ವಿವರ ಸಾವಿನ ಆ ದೃಶ್ಯವನ್ನು ಕಟ್ಟಿಕೊಡುತ್ತಿದೆ. ಆಕೆ ಕಿರುಚಾಡದಂತೆ ತಡೆಯಲು ಬಾಯಿ ಹಾಗೂ ಗಂಟಲನ್ನು ನಿರಂತರವಾಗಿ ಒತ್ತಿಹಿಡಿಯಲಾಗಿದೆ. ಆಕೆ ಉಸಿರಾಟಕ್ಕೆ ಪರದಾಡಲು ಗಂಟಲನ್ನು ಹಿಸುಕಲಾಗಿದೆ. ಆಕೆ ಕಿರುಚದಂತೆ ತಡೆಯಲು ತಲೆಯನ್ನು ಗೋಡೆ ಅಥವಾ ನೆಲಕ್ಕೆ ಬಲವಾಗಿ ಅಪ್ಪಳಿಸಲಾಗಿದೆ. ಆ ಕಟುಕನ ಕೈಗೆ ಸಿಕ್ಕಿದ್ದ ಟ್ರೈನಿ ವೈದ್ಯೆ ತಲೆಗೆ ಕೂಡ ಬಲವಾಗಿ ಪೆಟ್ಟು ಬಿದ್ದಿದೆ.

publive-image

ವೈದ್ಯೆ ಕಂಡ ನರಕ 5
ಮುಖದ ಮೇಲೆ ಉಗುರಿನ ಗೀಚು ಗಾಯ
ಸಂತ್ರಸ್ತೆಯ ಮುಖದಲ್ಲಿ ಆರೋಪಿಯ ಉಗುರಿನಿಂದ ಗೀಚಿದ ಗಾಯದ ಗುರುತುಗಳಿವೆ. ಮಹಿಳೆ ತನ್ನ ಮಾನ ಹಾಗೂ ಜೀವ ಉಳಿಸಿಕೊಳ್ಳಲು ಹತಾಶೆಯಿಂದ ಹೋರಾಡಿದ್ದನ್ನು ಇದು ಸೂಚಿಸುತ್ತದೆ. ಇವನೊಬ್ಬ ಹ್ಯಾಬಿಚುವಲ್ ಅಫೆಂಡರ್ ಅನ್ನೋದನ್ನ ಸಾರಿ ಸಾರಿ ಹೇಳೋ ಸಾಕ್ಷ್ಯಗಳು ವರದಿಯಲ್ಲಿವೆ. ಯಾಕಂದ್ರೆ, ಮೃತ ದೇಹದ ಮೇಲಿನ ಗಾಯಗಳು ಹಾಗೂ ಕ್ರೌರ್ಯ. ಆರೋಪಿಗೆ ಅತ್ಯಾಚಾರವಷ್ಟೇ ಉದ್ಧೇಶದಂತೆ ಕಾಣುತ್ತಿಲ್ಲ ಅನ್ನೋ ಸಂಗತಿ ಕೂಡ ಮರಣೋತ್ತರ ಪರೀಕ್ಷೆಯಲ್ಲಿ ದಾಖಲಾಗಿದೆ.

ವೈದ್ಯೆ ಕಂಡ ನರಕ 6
ಕಣ್ಣು, ಬಾಯಿ, ಅಲ್ಲೂ.. ವಿಪರೀತ ರಕ್ತ
ಮರಣೋತ್ತರ ಪರೀಕ್ಷೆಗೆ ಬಂದ ವೈದ್ಯರನ್ನೂ ಬೆಚ್ಚಿಬೀಳಿಸಿದ ಪ್ರಕರಣವಿದು. ಯಾಕಂದ್ರೆ, ಮೃತ ದೇಹದ ಬಹುಪಾಲು ಭಾಗಗಳಿಂದ ವಿಪರೀತ ರಕ್ತಸ್ರಾವ ಆಗಿತ್ತು. ಟ್ರೈನಿ ವೈದ್ಯೆಯ ಕಣ್ಣು, ಕಿವಿ, ಮೂಗು, ಬಾಯಿ ಕೊನೆಗೆ ಆಕೆಯ ಮರ್ಮಾಂಗದಲ್ಲೂ ವಿಪರೀತ ರಕ್ತ ಸುರಿದಿದೆ ಅನ್ನೋ ಸಂಗತಿ ಶವ ಪರೀಕ್ಷೆಯ ವರದಿಯಲ್ಲಿದೆ. ಆಕೆಯ ಮೇಲೆ ನಡೆದ ದೈಹಿಕ ದೌರ್ಜನ್ಯ ಹೇಗಿತ್ತು? ಎದ್ದು ನಿಲ್ಲೋಕಾಗದ ಸ್ಥಿತಿಯಲ್ಲಿ ಆಕೆ ಮೇಲೆ ನಡೆದ ಮತ್ತೊಂದು ಸುತ್ತಿನ ದಾಳಿ ಎಂಥದ್ದು? ಇವೆಲ್ಲಕ್ಕೂ ಸಾಕ್ಷಿ ಆಕೆಯ ದೇಹದ ಹಲವು ಭಾಗಗಗಳಿಗೆ ಸುರಿದ ವಿಪರೀತ ರಕ್ತ.

Advertisment

ಇದನ್ನೂ ಓದಿ:ನೈಟ್ ​ಶಿಫ್ಟ್ ಡ್ಯೂಟಿಗೆ ಬಂದ ವೈದ್ಯೆ ರೇಪ್ & ಮರ್ಡರ್‌ ಕೇಸ್‌ಗೆ ಭಯಾನಕ ಟ್ವಿಸ್ಟ್‌; ಆಗಿದ್ದೇನು?

ವೈದ್ಯೆ ಕಂಡ ನರಕ 7
ವೈದ್ಯೆಯ ಕಣ್ಣಿನೊಳಕ್ಕೆ ಸೇರಿದೆ ಗಾಜು
ಹೌದು.. ಸಂಜಯ್​ ರಾಯ್ ಅನ್ನೋ ಕಟುಕ ಟ್ರೈನಿ ವೈದ್ಯೆಗೆ ಹೇಗೆ ಹೊಡೆದಿದ್ದಾನೆ ಅನ್ನೋದಕ್ಕೆ ಇದು ಅಸಲಿ ಸಾಕ್ಷಿ. ಕನ್ನಡಕ ಹಾಕಿಕೊಂಡಿದ್ದ ವೈದ್ಯೆಯನ್ನು ಥಳಿಸಿದ ರೀತಿ ಹೇಗಿತ್ತು ಅಂದ್ರೆ ಕನ್ನಡಕ ಒಡೆದು ಗಾಜಿನ ಚೂರು ಸಹ ಕಣ್ಣೊಳಗೆ ಸೇರಿತ್ತು. ಆ ಕಾರಣಕ್ಕೂ ವಿಪರೀತ ರಕ್ತ ಸ್ರಾವ ಆಗಿದೆ ಅನ್ನೋ ಸಂಗತಿಯನ್ನು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತಿದೆ.

ವೈದ್ಯೆ ಕಂಡ ನರಕ 8
ಉಂಗುರದ ಬೆರಳನ್ನೂ ಕಚ್ಚಿದ ವಿಕೃತಿ
ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮಾಡಿದವನು ವಿಕೃತ ಕಾಮುಕ. ಆತ ತನ್ನ ಲೈಂಗಿಕ ಅಭಿಲಾಷೆಗಳನ್ನ, ವಿಲಕ್ಷಣ, ವಿಕೃತ ಪ್ರಯೋಗಗಳನ್ನು ಬಯಸುತ್ತಿದ್ದ. ಅವನ ಸ್ಯಾಡೋ ಪರ್ಸನಾಲಿಟಿ ಎಂಥದ್ದು ಅನ್ನೋದಕ್ಕೆ ಪೋಸ್ಟ್​ ಮಾರ್ಟ್ಂ ರಿಪೋರ್ಟ್​ನ ಈ ಅಂಶ ಸಾಕ್ಷಿ ನುಡಿಯುತ್ತಿದೆ. ಮೃತ ದೇಹದ ಮೇಲಿನ ಎಲ್ಲಾ ಗಾಯಗಳಿಗಿಂತ್ಲೂ.. ಬಲಗೈ ಹಾಗೂ ಉಂಗುರದ ಬೆರಳಿನ ಗಾಯ ಇಂಥದ್ದೊಂದು ಸಂಗತಿಯನ್ನು ಹೇಳುತ್ತಿದೆ. ಬಲಗೈ, ಉಂಗುರ ಬೆರಳು ಮತ್ತು ತುಟಿಯ ಮೇಲೆ ಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.

ವೈದ್ಯೆ ಕಂಡ ನರಕ 9
ಜೀವಂತ ಇರುವಾಗಲೇ ಆದ ಗಾಯಗಳು
ಟ್ರೈನಿ ವೈದ್ಯೆ ಅಕ್ಷರಶಃ ನರಕ ಕಂಡಿದ್ದಾಳೆ ಅನ್ನೋದಕ್ಕೆ ಅಸಲಿ ರುಜುವಾತು ಇದೇ ನೋಡಿ. ಮರಣೋತ್ತರ ಪರೀಕ್ಷೆಯ ನಾಲ್ಕನೇ ಪುಟದಲ್ಲಿರೋ ಸಂಗತಿ ಇದು. ಇದನ್ನ ನೋಡಿದ್ರೂ ಬೆಚ್ಚಿ ಬೀಳ್ತೀರಿ. ಯಾಕಂದ್ರೆ, 31 ವರ್ಷದ ಆ ವೈದ್ಯ ವಿದ್ಯಾರ್ಥಿನಿ ದೇಹದ ಮೇಲೆ ಆಗಿರೋ ಬಹುಪಾಲು ಗಾಯಗಳು ಆಕೆ ಜೀವಂತವಾಗಿದ್ದಾಗಲೇ ಮಾಡಿರೋ ದಾಳಿಯ ಸಾಕ್ಷಿಗಳು. ನರಹತ್ಯೆ ಗಾಯಗಳು ಲೈಂಗಿಕ ದೌರ್ಜನ್ಯದ ಸ್ವರೂಪವನ್ನು ಹೊಂದಿವೆ. ಇದರ ಅರ್ಥ ಟ್ರೈನಿ ವೈದ್ಯೆಯು ಜೀವಂತ ಇರುವಾಗಲೇ ಗಾಯಗಳು ಉಂಟಾಗಿವೆ. ಆಕೆಯ ಗುಪ್ತಾಂಗಗಳಲ್ಲಿನ ಗಾಯಗಳು ಆಕೆಯ ಮೇಲಿನ ಅತ್ಯಾಚಾರವನ್ನು ಸಾಬೀತುಪಡಿಸುತ್ತವೆ ಎಂದು ವರದಿ ಹೇಳಿದೆ.

ವೈದ್ಯೆ ಕಂಡ ನರಕ 10
ಡೀಪ್​ ಸ್ಲೀಪ್​​ನಲ್ಲಿದ್ದಾಗ ಕಟುಕನ ದಾಳಿ
ಟ್ರೈನಿ ವೈದ್ಯೆ ಊಟ ಮಾಡಿ ಮಲಗಿದ್ದ ಸಂದರ್ಭ.. ಅದ್ರಲ್ಲೂ.. ಡೀಪ್​ ಸ್ಲೀಪ್​​ನಲ್ಲಿದ್ದ ವೇಳೆ ಸಂಜಯ್​ ರಾಯ್​ ದಾಳಿ ಮಾಡಿದ್ದಾನೆ. ಹಾಗಾಗಿಯೇ ಆಕೆಯ ದೇಹದ ಮೇಲೆ ವಿಕೃತಿ ಮೆರೆಯೋದಕ್ಕೆ ಸಾಧ್ಯವಾಗಿದೆ ಅನ್ನೋದನ್ನ ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತಿದೆ. ಆಗಸ್ಟ್ 9ರ ನಸುಕಿನ 3 ರಿಂದ 5 ಗಂಟೆ ನಡುವೆ ಅತ್ಯಾಚಾರ ಹಾಗೂ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ವರದಿ ಹೇಳ್ತಿದೆ.

publive-image

ನೀರಜ್​ ಚೋಪ್ರಾ ಜಾವೆಲಿನ್ ಸ್ಪರ್ಧೆ ನೋಡಿ ಮಲಗಿದ್ದಳು ಟ್ರೈನಿ ವೈದ್ಯೆ!
ಕೋಲ್ಕತ್ತಾದ ಪ್ರತಿಷ್ಠಿತ ಪತ್ರಿಕೆಯೊಂದು ಟ್ರೈನಿ ವೈದ್ಯೆ ಬರ್ಬರ ಹತ್ಯೆಗೆ ಬಲಿಯಾಗೋಕೆ ಮುಂಚಿನ ಕ್ಷಣಗಳನ್ನು ದಾಖಲಿಸಿದೆ. ಸಂತ್ರಸ್ತೆ ತನ್ನ ನಾಲ್ವರು ಸಹೋದ್ಯೋಗಿಗಳೊಂದಿಗೆ ರಾತ್ರಿ 2:30 ಕ್ಕೆ ಊಟ ಮಾಡುವ ಮೊದಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ವೀಕ್ಷಿಸಿದ್ದರು. ಇದಾದ ನಂತರ ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್‌ಗೆ ಹೋಗಿದ್ದಾರೆ. ಪೊಲೀಸರು ಏಳು ಕಿರಿಯ ವೈದ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ, ಅವರಲ್ಲಿ ನಾಲ್ವರು ಸಂತ್ರಸ್ತೆಯೊಂದಿಗೆ ರಾತ್ರಿ ಊಟ ಮಾಡಿದ್ದರು.

ಆ ದಿನ ರಾತ್ರಿ 11 ಗಂಟೆಗೆ ಸಂತ್ರಸ್ತೆ ತನ್ನ ತಾಯಿಯೊಂದಿಗೆ ಮಾತನಾಡಿ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿರುವುದಾಗಿ ಹೇಳಿದ್ದಳು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಭೋಜನದ ನಂತರ, ಸಂತ್ರಸ್ತೆ ಸೆಮಿನಾರ್ ಹಾಲ್‌ಗೆ ಹೋಗಿ ಅಲ್ಲಿ ಕೆಂಪು ಬಣ್ಣದ ಹೊದಿಕೆಯನ್ನು ಹೊದ್ದು ನೀಲಿ ಕಾರ್ಪೆಟ್ ಮೇಲೆ ಮಲಗಿದ್ದಳು. ಮಲಗಿದ್ದ ವೇಳೆ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದೇ ಸಂಗತಿಯನ್ನೇ ಮರಣೋತ್ತರ ಪರೀಕ್ಷೆ ಕೂಡ ಸಾರಿ ಸಾರಿ ಹೇಳುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment