Advertisment

ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗೋ ಹಾಗೆ ಹಲ್ಲೆ; ದರ್ಶನ್ ಗ್ಯಾಂಗ್ ಭೀಕರತೆ ಬಿಚ್ಚಿಟ್ಟ 3 ಫೋಟೋ ಇಲ್ಲಿವೆ

author-image
admin
Updated On
ಹಗ್ಗದಿಂದ ಕಟ್ಟಿ ಹಾಕಿ ಲಾಠಿ ಪುಡಿಯಾಗೋ ಹಾಗೆ ಹಲ್ಲೆ; ದರ್ಶನ್ ಗ್ಯಾಂಗ್ ಭೀಕರತೆ ಬಿಚ್ಚಿಟ್ಟ 3 ಫೋಟೋ ಇಲ್ಲಿವೆ
Advertisment
  • ಹಗ್ಗದಿಂದ ಕಟ್ಟಿ ಹಾಕಿ ಮರದ ಕೊಂಬೆಯಿಂದ ದರ್ಶನ್ ಗ್ಯಾಂಗ್‌ ಹಲ್ಲೆ
  • ಒಂದೊಂದು ಫೋಟೋಗಳು ಬೇರೆ ಬೇರೆಯ ಕಥೆ ಹೇಳುತ್ತಿವೆ
  • ರೇಣುಕಾಸ್ವಾಮಿ ಮೇಲಿನ ಕ್ರೌರ್ಯಕ್ಕೆ ಈ ಫೋಟೋಗಳೇ ಸಾಕ್ಷಿ

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ನಡೆದ ಕ್ರೌರ್ಯಕ್ಕೆ ಮತ್ತಷ್ಟು ಫೋಟೋಗಳು ಸಾಕ್ಷಿಯಾಗಿವೆ. ಒಂದೊಂದು ಫೋಟೋಗಳು ಬೇರೆ ಬೇರೆಯ ಕಥೆಗಳನ್ನೇ ಹೇಳುತ್ತಿವೆ. ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಶರ್ಟ್ ಬಿಚ್ಚಿಸಿ ಹಿಂಸೆ ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ: ಅಂಗಲಾಚಿ, ಚೀರಾಡಿದ ರೇಣುಕಾಸ್ವಾಮಿ.. ಒಂದಲ್ಲ 10ಕ್ಕೂ ಹೆಚ್ಚು ಫೋಟೋ ರಿಟ್ರೀವ್‌; ಏನಿದರ ರಹಸ್ಯ? 

publive-image

ದರ್ಶನ್ ಗ್ಯಾಂಗ್‌ ಹೊಡೆಯುವಾಗ ರೇಣುಕಾಸ್ವಾಮಿ ಮೈಮೇಲಿದ್ದ ಬಟ್ಟೆಯನ್ನು ಬಿಚ್ಚಿಸಲಾಗಿದೆ. ಆದರೆ ರೇಣುಕಾಸ್ವಾಮಿಯ ಮೃತದೇಹ ಸಿಕ್ಕಾಗ ದೇಹದ ಮೇಲೆ ಟೀ ಶರ್ಟ್‌ ಹಾಕಲಾಗಿದೆ. ರೇಣುಕಾಸ್ವಾಮಿ ಮೇಲಿನ ಕ್ರೌರ್ಯಕ್ಕೆ ಈ ಫೋಟೋಗಳೇ ಸಾಕ್ಷಿಯಾಗಿದೆ.

ಇದನ್ನೂ ಓದಿ: EXCLUSIVE: ಅಂಗಿ, ಬನಿಯಾನ್​ ಹರಿದು ವಿಕೃತಿ.. ಡಿಲೀಟ್​ ಆದ ರೇಣುಕಾಸ್ವಾಮಿ ಫೋಟೋ ಪತ್ತೆ  

Advertisment

publive-image

ಫೋಟೋ ನಂ.1
ಭೀಕರತೆ ಬಿಚ್ಚಿಟ್ಟ ಲಾಠಿ!
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪುಡಿ, ಪುಡಿಯಾದ ಲಾಠಿ ಭೀಕರತೆಯನ್ನು ಬಿಚ್ಚಿಟ್ಟಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್‌ ಲಾಠಿ ಪುಡಿಯಾಗೋ ಹಾಗೆ ಹಲ್ಲೆ ಮಾಡಿದೆ.
ರೇಣುಕಾಸ್ವಾಮಿಯನ್ನು ಹಗ್ಗದಿಂದ ಕಟ್ಟಿ ಹಾಕಿ ಮರದ ಕೊಂಬೆಯಿಂದ ಹಲ್ಲೆ ಮಾಡಲಾಗಿದೆ. ಲಾಠಿ, ಹಗ್ಗ, ಕೊಂಬೆಯ ಫೋಟೋಗಳು ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.

publive-image

ಫೋಟೋ ನಂ.2
ಕರೆಂಟ್ ಶಾಕ್ ಕೊಟ್ಟ ಮೆಗ್ಗಾರ್!
ಶೆಡ್‌ಗೆ ಕರೆ ತಂದ ರೇಣುಕಾಸ್ವಾಮಿಗೆ ಮೆಗ್ಗರ್​ನಿಂದ ಕರೆಂಟ್ ಶಾಕ್ ನೀಡಲಾಗಿದೆ. ಮೆಗ್ಗಾರ್‌ನ ಫೋಟೋ ಕೂಡ ನ್ಯೂಸ್‌ ಫಸ್ಟ್‌ಗೆ ಲಭ್ಯವಾಗಿದೆ. ಇದರ ಜೊತೆಗೆ ‘ಡಿ’​ ಗ್ಯಾಂಗ್​ನಿಂದ ರೇಣುಕಾಸ್ವಾಮಿ ತಲೆಗೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ತಲೆಯಿಂದ ರಕ್ತ ಸುರಿಯುವಾಗ ಆರೋಪಿಗಳು ಅರಿಶಿಣ ಪುಡಿ ಹಚ್ಚಿದ್ದಾರೆ.

publive-image

ಇದನ್ನೂ ಓದಿ: EXCLUSIVE: ಕೈಮುಗಿದು ಬೇಡಿಕೊಳ್ತಿರುವ ರೇಣುಕಾಸ್ವಾಮಿ, ಡಿಲೀಟ್ ಮಾಡಿದ್ದ ಫೋಟೋಸ್ ಪತ್ತೆ 

Advertisment

ಫೋಟೋ ನಂ.3
ಘಟನೆ ದರ್ಶನ್ ಮನೆಗೆ ಡ್ರಾಪ್‌!
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕಥೆ ಮುಗಿದ ಬಳಿಕ ದರ್ಶನ್‌ರನ್ನು ಆರ್‌.ಆರ್‌ ನಗರದಲ್ಲಿರುವ ಅವರ ಮನೆಗೆ ಡ್ರಾಪ್ ಮಾಡಲಾಗಿದೆ. ಶೆಡ್‌ನಿಂದ ದರ್ಶನ್ ಅವರನ್ನು ಮನೆಗೆ ಡ್ರಾಪ್ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment