Advertisment

ಈ ಪಾನೀಯ ಕುಡಿದು ಕಾಯಿಲೆಗೆ ಹೇಳಿ ಗುಡ್ ಬೈ​; ಪ್ರಿಯಾಂಕಾ ಚೋಪ್ರಾ ಫಿಟ್‌ನೆಸ್​ಗೆ ಇದೇ ಕಾರಣ!

author-image
Veena Gangani
Updated On
ಈ ಪಾನೀಯ ಕುಡಿದು ಕಾಯಿಲೆಗೆ ಹೇಳಿ ಗುಡ್ ಬೈ​; ಪ್ರಿಯಾಂಕಾ ಚೋಪ್ರಾ ಫಿಟ್‌ನೆಸ್​ಗೆ ಇದೇ ಕಾರಣ!
Advertisment
  • ಪ್ರತಿ ನಿತ್ಯ ಬಿಸಿ ನೀರಿನಲ್ಲಿ ಇವುಗಳನ್ನು ಹಾಕಿ ಸೇವಿಸಬೇಕಂತೆ
  • ನಿಂಬೆಹಣ್ಣು, ಜೇನು ತುಪ್ಪ, ಶುಂಠಿ ಸೇವನೆಯಿಂದ ಏನಾಗುತ್ತದೆ?
  • ಇಮ್ಯುನಿಟಿ ಬೂಸ್ಟರ್ ಡ್ರಿಂಕ್​ನಿಂದ ಸೌಂದರ್ಯ ಹೆಚ್ಚಾಗುತ್ತಾ?

ಸಾಕಷ್ಟು ಜನರು ಆರೋಗ್ಯವಾಗಿ ಇರಬೇಕು ಅಂತ ಬಯಸುತ್ತಾರೆ. ಹೀಗಾಗಿ ನಾನಾ ರೀತಿಯಲ್ಲಿ ಗಿಡಮೂಲಿಕೆಯಿಂದ ತಯಾರಾದ ಔಷಧಿಗಳನ್ನು ತಯಾರಿಸಿಕೊಂಡು ಕುಡಿಯುತ್ತಾರೆ. ಆದರೆ, ಅದು ಅವರ ದೇಹಕ್ಕೆ ಅಷ್ಟಾಗಿ ಹೊಂದಿಕೊಳ್ಳುವುದಿಲ್ಲ. ಈ ಮೂಲಕ ಅವರು ಅನಾರೋಗ್ಯಕ್ಕೆ ತುತ್ತಾಗುವ ಸಂಭವ ಹೆಚ್ಚಾಗಬಹುದಾಗಿದೆ.

Advertisment

ಹೀಗಾಗಿ ಒಂದು ನಿಯಮಿತವಾದ ಮನೆಯಲ್ಲೇ ತಯಾರಿಸಿಕೊಂಡು ಕುಡಿಯುವುದರಿಂದ ನಾನಾ ರೀತಿಯಲ್ಲಿ ನಿಮ್ಮ ಆರೋಗ್ಯ ಸುಧಾರಿಸಬಹುದಾಗಿದೆ. ಹೀಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಫಿಟ್‌ನೆಸ್​ಗೆ ಆ ಒಂದು ಪಾನೀಯವೇ ಆಧಾರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತ್ವಚೆ ನ್ಯಾಚುರಲ್​ ಆಗಿ ಪಳಪಳ ಹೊಳೆಯುತ್ತೆ.. ಆದ್ರೆ ಐಸ್‌ ಕ್ಯೂಬ್​ ಬಳಸುವಾಗ ಈ ತಪ್ಪು ಮಾಡಬೇಡಿ!

ಹೌದು, ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ತಾರೆ. ಆಗಾಗ ತಮ್ಮ ದೈನಂದಿನ ದಿನಚರಿ ಮತ್ತು ಆರೋಗ್ಯ ಕಾಳಜಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ನಟಿ ಪ್ರಿಯಾಂಕಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸುವ ಪಾನೀಯ ಇದೀಗ ಟ್ರೆಂಡಿಂಗ್​ನಲ್ಲಿದೆ.

Advertisment

publive-image

ನಟಿ ಪ್ರಿಯಾಂಕಾ ಸೇವನೆ ಮಾಡುವ ಇಮ್ಯುನಿಟಿ ಬೂಸ್ಟರ್ ಡ್ರಿಂಕ್​, ರೋಗ ನಿರೋಧಕ ಶಕ್ತಿ ನಮ್ಮ ದೇಹದ ರಕ್ಷಣಾತ್ಮಕ ಪರಿಣಾಮ ಬೀರುತ್ತದೆ. ಇದು ನಮ್ಮ ದೇಹವು ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು, ಆಹಾರ, ಪಾನೀಯ, ನಿದ್ರೆಯ ಚಕ್ರ ಮತ್ತು ಜೀವನಶೈಲಿಗೆ ಗಮನ ನೀಡಬೇಕು. ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ದೇಹವನ್ನು ಹೈಡ್ರೀಕರಿಸಿ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದಾಗಿ ರೋಗಗಳು ಹತ್ತಿರ ಬರುವುದಿಲ್ಲ.

publive-image

ನಟಿ ಪ್ರಿಯಾಂಕಾ ಚೋಪ್ರಾ ತನ್ನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೈಸರ್ಗಿಕ ಮತ್ತು ಮನೆಯಲ್ಲಿ ತಯಾರಿಸಿದ ಪಾನೀಯವನ್ನು ಕುಡಿಯುತ್ತಾರೆ. ಇದು ದಿನವಿಡೀ ಸಕ್ರಿಯವಾಗಿ ಮತ್ತು ರೋಗಗಳಿಂದ ದೂರವಿರುತ್ತದೆ. ಈ ಇಮ್ಯುನಿಟಿ ಬೂಸ್ಟರ್ ಡ್ರಿಂಕ್​ನಿಂದ ನಟಿ ಹೊಳೆಯುವ ಚರ್ಮ ಮತ್ತು ಸೌಂದರ್ಯದ ರಹಸ್ಯ ಅಡಗಿದೆ. ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಮಾತಾಡಿದ ದೇಸಿ ಗರ್ಲ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಪ್ರತಿದಿನ ಬೆಳಿಗ್ಗೆ ಶುಂಠಿ, ಅರಿಶಿನ, ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬಿಸಿನೀರನ್ನು ಕುಡಿಯುತ್ತಾರಂತೆ. ಇದೇ ಪಾನೀಯ ಎಷ್ಟು ಪ್ರಯೋಜನಕಾರಿ ಎಂದು ತಿಳಿಯೋಣ.

ಇದನ್ನೂ ಓದಿ: ಊಟ ಮಾಡೋವಾಗ ಪದೇ ಪದೇ ನೀರು ಕುಡಿತಾ ಇದ್ದೀರಾ? ನಿಮಗಿದೆ ಅಪಾಯ! ಕೂಡಲೇ ಎಚ್ಚರ ವಹಿಸಿ!

Advertisment

publive-image

ಶುಂಠಿ

ಬಿಸಿ ನೀರಿನಲ್ಲಿ ಶುಂಠಿ ಮಿಕ್ಸ್ ಮಾಡುವುದರಿಂದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ಉರಿಯೂತ ಮತ್ತು ಆಸಿಡಿಟಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದಲ್ಲದೆ, ಇದು ಜೀರ್ಣಕ್ರಿಯೆ ಮತ್ತು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಇದು ಒಟ್ಟಾರೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.

publive-image

ಅರಿಶಿನ

ಅರಿಶಿನವು ಕರ್ಕ್ಯುಮಿನ್‌ನಲ್ಲಿ ಸಮೃದ್ಧವಾಗಿದೆ. ಅರಿಶಿನವು ಶಕ್ತಿಯುತವಾದ ಉರಿಯೂತದ ಏಜೆಂಟ್ ಆಗಿದೆ. ಕರ್ಕ್ಯುಮಿನ್‌ನ ಉತ್ಕರ್ಷಣ ನಿರೋಧಕ ಪರಿಣಾಮಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

publive-image

ನಿಂಬೆಹಣ್ಣು

ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ನಿಂಬೆ ಬಿಳಿ ರಕ್ತ ಕಣಗಳ ರಚನೆಗೆ ಅವಶ್ಯಕವಾಗಿದೆ. ದೇಹವನ್ನು ಸೋಂಕಿನಿಂದ ರಕ್ಷಿಸುವಲ್ಲಿ ಕೆಂಪು ರಕ್ತ ಕಣಗಳು ಪ್ರಮುಖ ಪಾತ್ರವಹಿಸುತ್ತವೆ. ಇದು ರೋಗಗಳನ್ನು ದೂರವಿಡುತ್ತದೆ. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

Advertisment

publive-image

ಜೇನು ತುಪ್ಪ

ಜೇನು ತುಪ್ಪ ಸ್ವಲ್ಪ ಪ್ರಮಾಣದ ಆಮ್ಲೀಯ ಗುಣಗಳನ್ನು ಒಳಗೊಂಡಿದೆ. ಇದು ನಿಮ್ಮ ಎನಾಮೆಲ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಇದು ನಿಮ್ಮ ಈಸೊಫಗುಸ್, ಕರುಳುಗಳು ಮತ್ತು ಜಠರಗಳ ಮೇಲೆ ಅಡ್ಡ ಪರಿಣಾಮ ಬೀರಿ, ನಿಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಅಂದರೆ ಎದೆ ಉರಿ ಬರುವಂತೆ ಮಾಡುತ್ತದೆ. ನೈಸರ್ಗಿಕ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳೊಂದಿಗೆ, ಜೇನುತುಪ್ಪವು ದೇಹವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ನೋಯುತ್ತಿರುವ ಗಂಟಲನ್ನು ಸಹ ಶಮನಗೊಳಿಸುತ್ತದೆ ಮತ್ತು ನೈಸರ್ಗಿಕ ಕೆಮ್ಮು ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment