newsfirstkannada.com

ಎರಡು ಹೊತ್ತಿನ ಊಟಕ್ಕೆ ಪರದಾಟ.. ಕೆಲಸಕ್ಕೆ ಅಲೆದಾಟ; ನಟಿ ಪವಿತ್ರ ಜಯರಾಮ್‌ ಮಹದಾಸೆ ಏನಾಗಿತ್ತು?

Share :

Published May 13, 2024 at 8:35pm

    ಕಿರುತೆರೆ ನಟಿ ಪವಿತ್ರಾ ಜಯರಾಮ್ ಬದುಕು ನಿಜಕ್ಕೂ ಸ್ಫೂರ್ತಿದಾಯಕ

    ತುಂಬಾ ಸೀರಿಯಲ್​ಗಳಲ್ಲಿ ಜ್ಯೂನಿಯರ್ ಕಲಾವಿದೆಯಾಗಿ ನಟಿಸಿದ್ದರು

    ಪವಿತ್ರ ಜಯರಾಮ್‌ ಬಣ್ಣದ ಲೋಕಕ್ಕೆ ಬಂದಿದ್ದು ಕೂಡ ಅನಿರೀಕ್ಷಿತ

ಬೆಂಗಳೂರು: ಕಿರುತೆರೆ ನಟಿ ಪವಿತ್ರಾ ಜಯರಾಮ್ ಬದುಕು ನಿಜಕ್ಕೂ ಸ್ಫೂರ್ತಿದಾಯಕ. ಪವಿತ್ರಾ ಇವತ್ತು ಸೀರಿಯಲ್ ಲೋಕದ ಸ್ಟಾರ್ ನಟಿಯಾಗಿರಬಹುದು. ಬ್ಯುಸಿಯೆಸ್ಟ್​ ನಟಿಯೂ ಆಗಿದ್ದಿರಬಹುದು. ತೆಲುಗು, ಕನ್ನಡ ಹೀಗೆ ಎರಡು ಇಂಡಸ್ಟ್ರಿ ಕೆಲಸ ಮಾಡ್ತಾ ಬೇಡಿಕೆಯನ್ನು ಉಳಿಸಿಕೊಂಡಿದ್ದಿರಬಹುದು. ಆದರೆ ಕರಿಯರ್​ ಶುರು ಮಾಡಿದ್ದ ದಿನ ನೆನಪಿಸಿಕೊಂಡರೇ ನಿಜಕ್ಕೂ ಪವಿತ್ರಾ ಅವರದ್ದು ಸ್ಫೂರ್ತಿದಾಯಕ ಬದುಕು, ಹೋರಾಟದ ಬದುಕು ಅನ್ನೋದು ತಿಳಿಯುತ್ತೆ.

ಪವಿತ್ರ ಬಣ್ಣದ ಲೋಕಕ್ಕೆ ಬಂದಿದ್ದು ಕೂಡ ಅನಿರೀಕ್ಷಿತ!
ಅದಾಗಲೇ ಜೀವನದಲ್ಲಿ ನೊಂದು ಬೆಂದು ಸಾಗ್ತಿದ್ದ ಪವಿತ್ರಾ ಜಯರಾಮ್, ಬಣ್ಣದ ಲೋಕಕ್ಕೆ ಬರಬೇಕು ಅಂತ ಬಂದವರಲ್ಲ. ತುತ್ತಿನ ಚೀಲಕ್ಕೆ ಒಂದು ದಾರಿಯಾದ್ರೆ ಸಾಕು ಅಂತ ಬಂದವರು. ಹೀಗೆ ಒಂದು ಪವಿತ್ರಾಗೆ ಆತ್ಮೀಯವಾಗಿದ್ದ ಪತ್ರಕರ್ತೆಯೊಬ್ಬರು ಸಿರಿಗಂಧಂ ಶ್ರೀನಿವಾಸನ್​ ಅನ್ನೋ ಡಾಕ್ಯುಮೆಂಟರಿ ಡೈರೆಕ್ಟರ್​ನ ಕಾಂಟೆಕ್ಟ್​ ಮಾಡಿಸ್ತಾರೆ. ಅವರನ್ನ ಮೀಟ್ ಮಾಡಿದ ಪವಿತ್ರಾ ಒಂದಷ್ಟು ದಿನ ಅವರ ಜೊತೆ ಅಸಿಸ್ಟೆಂಟ್​ ಆಗಿ ಕೆಲಸ ಮಾಡ್ತಾರಂತೆ. ಡಾಕ್ಯುಮೆಂಟರಿ ಅಂದ್ರೇನು? ಆ್ಯಕ್ಟಿಂಗ್ ಅಂದ್ರೆನೂ ಅನ್ನೋದರ ಬಗ್ಗೆ ಏನೂ ಗೊತ್ತಿಲ್ಲದೇ ಹೋದರೂ ಬದುಕಿನ ಹೆಜ್ಜೆಗಳನ್ನ ಇಡಬೇಕಾಗುತ್ತೆ. ಈ ನಡುವೆ ಕೆಲವು ನಟ-ನಟಿಯರ ಪರಿಚಯನೂ ಆಗುತ್ತೆ. ಆಗ ಸೀರಿಯಲ್​ಗಳಲ್ಲಿ ಜ್ಯೂನಿಯರ್​ ಆರ್ಟಿಸ್ಟ್​ಗಳು ಬೇಕಾದಾಗ ಪವಿತ್ರಾ ಅವರನ್ನ ಕರೆಸಿಕೊಳ್ಳುತ್ತಿದ್ದರಂತೆ. ಈ ರೀತಿಯಾಗಿಯೇ ಪವಿತ್ರಾ ಬದುಕಿನಲ್ಲಿ ಬಣ್ಣ ಬೆಸೆಯುತ್ತಾ ಬಂದಿದ್ದು.

ಇದನ್ನೂ ಓದಿ: ‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ.. 

ಇಲ್ಲಿಂದ ಪವಿತ್ರಾ ಜಯರಾಮ್ ಅವ್ರು ತುಂಬಾ ಸೀರಿಯಲ್​ಗಳಲ್ಲಿ ಜ್ಯೂನಿಯರ್ ಕಲಾವಿದೆಯಾಗಿ ನಟಿಸುತ್ತಾರೆ. ಆದರೆ ಯಾವುದು ಅವರಿಗೆ ಖ್ಯಾತಿ ತಂದುಕೊಡಲ್ಲ. ಆಗ ಪವಿತ್ರಾಗೆ ಖ್ಯಾತಿಯ ಉದ್ದೇಶವೂ ಇರಲಿಲ್ಲ ಬಿಡಿ. ಆಗೊಂದು ದಿನ ಜನಪ್ರಿಯ ಧಾರಾವಾಹಿ ಜೋಕಾಲಿಯಲ್ಲಿ ನಟಿಸುವ ಅವಕಾಶ ಸಿಗುತ್ತೆ. ಹೀರೋ ತಂಗಿ ಪಾತ್ರ ಮಾಡಬೇಕಿದ್ದ ನಟಿ ಕೈ ಕೊಟ್ಟಿದ್ದ ಕಾರಣ, ಆ ಅವಕಾಶ ಪವಿತ್ರಾಗೆ ಸಿಗುತ್ತೆ. ಸಿಕ್ಕ ಅವಕಾಶವನ್ನು ಪವಿತ್ರಾ ಕೂಡ ಎರಡು ಕೈಗಳಿಂದ ಅಪ್ಪಿಕೊಂಡರು. ಯಾಕಂದ್ರೆ ಈ ಸೀರಿಯಲ್​ನಲ್ಲಿ ನಟಿಸಿದ ಮೇಲೆ ಪವಿತ್ರಾ ಜಯರಾಮ್​ನ ಗುರುತಿಸೋಕೆ ಶುರು ಮಾಡುತ್ತಾರೆ. ಇದು ಪವಿತ್ರಾಗೆ ಖುಷಿ ಕೊಡೋದಲ್ಲದೇ ಈ ಇಂಡಸ್ಟ್ರಿಯಲ್ಲೇನೋ ಇದೆ ಅಂತ ಅನಿಸುತ್ತೆ. ಆಗ ನಟನೆಯನ್ನ ಸೀರಿಯಸ್ ಆಗಿ ತಗೊಂಡ ಪವಿತ್ರಾ, ಅಭಿನಯವನ್ನ ಅಭ್ಯಾಸ ಮಾಡೋಕೆ ಆರಂಭಿಸುತ್ತಾರೆ.

ಅಭ್ಯಾಸ ಅಂದಾಕ್ಷಣ ಆ್ಯಕ್ಟಿಂಗ್​ ತರಬೇತಿ ಕ್ಲಾಸ್​ಗೆ ಹೋದ್ರು ಅಂತ ಅಂದುಕೊಳ್ಳುವುದು ಬೇಡ. ಪವಿತ್ರಾ ಅವರು ಯಾವುದೇ ಆ್ಯಕ್ಟಿಂಗ್ ಕೋರ್ಸ್ ಮಾಡಿಲ್ಲ. ತನ್ನ ಜೀವನದ ಅನುಭವಗಳನ್ನೇ ಅನುಭವಿಸುತ್ತಾ ಬಂದವರು. ಇನ್​ಫ್ಯಾಕ್ಟ್​, ಪವಿತ್ರಾ ಅವರು ನಟನೆ ಬಗ್ಗೆ ಎಷ್ಟು ಸೀರಿಯಸ್ ಆಗಿದ್ದರೂ ಅಂದ್ರೆ, ಮನೆಯಲ್ಲಿ ಊಟ ಮಾಡಿ ಎಲ್ಲರೂ ಮಲಗಿದ ಮೇಲೆ ಕನ್ನಡಿ ಮುಂದೆ ನಿಂತ್ಕೊಂಡು ಪ್ರ್ಯಾಕ್ಟೀಸ್ ಮಾಡುತ್ತಿದ್ದರಂತೆ. ನಾಳೆ ಸೆಟ್​ನಲ್ಲಿ ಹೇಗೆ ಅಭಿನಯಿಸಬೇಕು, ಹೇಗೆ ಡೈಲಾಗ್ ಹೇಳಬೇಕು ಅಂತ ಅಭ್ಯಾಸ ಮಾಡುತ್ತಿದ್ದರಂತೆ. ಈ ಅನುಭವವೇ ನನ್ನ ವೃತ್ತಿ ಜೀವನಕ್ಕೆ ಬಹುದೊಡ್ಡ ವೇದಿಕೆಯಾಯ್ತು ಅಂತ ಖುದ್ದು ಪವಿತ್ರಾ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಪವಿತ್ರಾ ಜಯರಾಮ್ ಇತ್ತೀಚಿನ ವರ್ಷಗಳಲ್ಲಿ ತುಂಬಾ ಆ್ಯಕ್ಟಿವ್ ಅಗಿದ್ದರು ಹಾಗೂ ತುಂಬಾ ಬ್ಯುಸಿನೂ ಇದ್ದರು. ಒಂದೇ ದಿನ ಎರಡು ಮೂರು ಧಾರಾವಾಹಿಯಲ್ಲೂ ಕೆಲಸ ಮಾಡ್ತಿದ್ದರು. ಮದ್ದೂರಿನಲ್ಲಿ ತಂದೆ-ತಾಯಿಗೆ ಮನೆ ಮಾಡಿಕೊಟ್ಟಿದ್ದ ಪವಿತ್ರಾ, ಸ್ವಲ್ಪ ದಿನ ಬೆಂಗಳೂರಿನಲ್ಲಿದ್ದರು. ಇಲ್ಲಿಂದಲೇ ಹೈದರಾಬಾದ್​ ಹಾಗೂ ಚೆನ್ನೈಗೆ ಶೂಟಿಂಗ್ ಸಹ ಹೋಗಿ ಬರ್ತಿದ್ದರು. ಆಮೇಲೆ ಹೈದರಾಬಾದ್​ನಲ್ಲೇ ಮನೆ ಮಾಡ್ಕೊಂಡ ಪವಿತ್ರಾ, ಆಗಾಗ ಮದ್ದೂರಿಗೆ ಭೇಟಿ ಕೊಟ್ಟ ತಂದೆ-ತಾಯಿನ ನೋಡಿಕೊಂಡು ಹೋಗ್ತಿದ್ದರು. ಎರಡೂವರೆ ತಿಂಗಳ ಹಿಂದೆಯಷ್ಟೇ ಪವಿತ್ರಾ ಅವರ ತಂದೆ ಅನಾರೋಗ್ಯದಿಂದ ತೀರಿಕೊಂಡಿದ್ದರು. ಈ ಸಂದರ್ಭದಲ್ಲಿ ಪವಿತ್ರಾ ಜಯರಾಮ್​ಗೆ ನಾಗಾರ್ಜುನ ಅವರ ಅನ್ನಪೂರ್ಣ ಪ್ರೊಡಕ್ಷನ್​ ತುಂಬಾ ಸಹಾಯ ಮಾಡಿದೆ ಎನ್ನಲಾಗಿದೆ. ಅದಾದ ಮೇಲೆ ಅಮ್ಮನನ್ನ ನೋಡಿಕೊಂಡು ಹೋಗೋಕೆ ಮದ್ಧೂರಿಗೆ ಬರ್ತಿದ್ದ ಪವಿತ್ರಾ, ವಾಪಸ್ ಹೈದರಾಬಾದ್​ಗೆ ಹೋಗುವಾಗ ಈ ದುರಂತ ನಡೆದು ಹೋಗಿದೆ.

ಇದನ್ನೂ ಓದಿ: ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ 

ಅಂದ ಹಾಗೇ ಪವಿತ್ರಾ ಜಯರಾಮ್‌ ಹಗಲಿರುಳು ಶ್ರಮ ಪಡುತ್ತಿದ್ದದ್ದು ಇಬ್ಬರು ಮಕ್ಕಳಿಗಾಗಿ. ಮಗ ಮತ್ತು ಮಗಳಿಗಾಗಿ ಪವಿತ್ರಾ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ತಂದೆಯ ಸಾವಿನ ನಂತರ ಹೈದರಾಬಾದ್‌ನಲ್ಲಿ ಮನೆಯನ್ನೂ ಮಾಡಿದ್ದರು. ಪವಿತ್ರಾ ಮಗ ಇಂಡಸ್ಟ್ರಿಗೆ ಬರೋಕೆ ತಯಾರಿಯನ್ನೂ ನಡೆಸಿದ್ದ. ಮಗನ ಇಂಡಸ್ಟ್ರಿ ಎಂಟ್ರಿಗೆ ಪವಿತ್ರಾ ಬೆನ್ನೆಲುಬಾಗಿ ನಿಂತಿದ್ದರು. ಮಗಳಿಗೆ ಸಾಕಷ್ಟು ಅವಕಾಶ ಬಂದರೂ ಒಪ್ಪಿರಲಿಲ್ಲ. ಮಗಳಿಗೆ ಓದುವ ಬಗ್ಗೆ ಹೆಚ್ಚು ಆಸಕ್ತಿ. ಹೀಗಾಗಿ, ಮಗಳು ನಟಿಸಲು ಒಲ್ಲೆ ಎಂದಿದ್ದಳು. ಸಹ ನಟರೊಂದಿಗೆ ಮಾತನಾಡುವ ವೇಳೆ, ಮಕ್ಕಳು ಮತ್ತು ಪೋಷಕರ ಬಗ್ಗೆಯೂ ಹೆಚ್ಚು ಪ್ರಸ್ತಾಪ ಮಾಡುತ್ತಿದ್ದರು. ಆದ್ರೀಗ, ಇವರೆಲ್ಲರನ್ನೂ ಬಿಟ್ಟು ಪವಿತ್ರಾ ಹೋಗಿಬಿಟ್ಟಿದ್ದಾರೆ.

ಬಹುದೊಡ್ಡ ಆಸೆಯನ್ನ ಈಡೇರಿಸಿಕೊಳ್ಳದೇ ಹೋದ ಪವಿತ್ರಾ!
ಪವಿತ್ರಾ ಜಯರಾಮ್​ ಇತ್ತೀಚಿನ ದಿನಗಳಲ್ಲಿ ಡೈರೆಕ್ಷನ್ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಕೆಲವು ಸಾಂಗ್ಸ್‌ನ ಡೈರೆಕ್ಟ್​ ಸಹ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಬೇಕು ಅಂತ ತಯಾರಿನೂ ನಡೆಸಿದ್ದರು. ಪವಿತ್ರಾ ಜಯರಾಮ್​ ಓರ್ವ ನಟಿ ಅನ್ನೋದಕ್ಕಿಂತ ಡೈರೆಕ್ಟರ್ ಪವಿತ್ರಾ ಜಯರಾಮ್​ ಅಂತ ಗುರುತಿಸಿಕೊಳ್ಳುವ ಬಹುದೊಡ್ಡ ಆಸೆ ಹೊಂದಿದ್ದರು. ಆದ್ರೆ, ಈ ಆಸೆ ಬರೀ ಆಸೆಯಾಗಿಯೇ ಉಳಿದುಕೊಂಡು ಬಿಡ್ತು ಅನ್ನೋದು ಬೇಸರದ ಸಂಗತಿ.

ಇದನ್ನೂ ಓದಿ: VIDEO: ಮೈ ಚಳಿ ಬಿಟ್ಟು ರಾಗಿಣಿ ಜೊತೆ ಕಿಶನ್ ರೊಮ್ಯಾಂಟಿಕ್ ಡ್ಯಾನ್ಸ್​; ರಸಿಕರ ರಾಜ ನೀನೇ ಎಂದ ಫ್ಯಾನ್ಸ್‌! 

ತೆಲುಗಿನ ಮೊದಲ ಧಾರಾವಾಹಿ ‘ನಿನ್ನೆ ಪೆಲ್ಲಾಡುತಾ’ದಲ್ಲಿ ಮೊದಲ ಸಲ ನಟಿಸೋಕೆ ಬಂದಾಗ ತೆಲುಗು ಭಾಷೆ ಅರ್ಥ ಆಗ್ತಿಲ್ಲ ಅನ್ನೋ ಕಾರಣಕ್ಕೆ ಸೀರಿಯಲ್ಲೇ ಬೇಡ ಅಂತ ಬಿಟ್ಟು ಹೋಗಿದ್ದರಂತೆ. ಆದ್ರೀವತ್ತು ಅದೇ ತೆಲುಗು ಜನ ಮನಸ್ಸಿನಲ್ಲಿ ಪವಿತ್ರಾ ವಿಶೇಷ ಸ್ಥಾನ ಪಡೆದುಕೊಂಡಿದ್ದರು ಅನ್ನೋದು ಅಷ್ಟೇ ವಿಶೇಷ. ತೆಲುಗು ಇಂಡಸ್ಟ್ರಿ ಆಗ್ಲಿ ಅಥವಾ ಕನ್ನಡ ಧಾರಾವಾಹಿ ಲೋಕದಲ್ಲೇ ಆಗ್ಲಿ ಪವಿತ್ರಾ ಅವರನ್ನ ಡೇರಿಂಗ್ ಲೇಡಿ ಅಂತಾನೇ ಕರೀತಾರೆ. ಆಕೆಯ ಧೈರ್ಯವನ್ನ ಬಹಳ ಮೆಚ್ಚಿಕೊಳ್ತಾರೆ. ಯಾವುದೇ ಕೆಲಸವಾದ್ರೂ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುವ ಛಲ ಹೊಂದಿದ್ದರು ಅಂತ ಹೇಳುತ್ತಾರೆ. ಇಂಥ ನಟಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕೂ ಘನಘೋರ. ಪವಿತ್ರಾ ಜಯರಾಮ್​ ಅವರು ಈಗ ನೆನಪು ಮಾತ್ರ.. ಆದರೆ ಅವ್ರ ಸ್ಫೂರ್ತಿದಾಯಕ ಬದುಕು, ಹೋರಾಟದ ಸ್ವಭಾವ ನಿಜಕ್ಕೂ ಮಾದರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎರಡು ಹೊತ್ತಿನ ಊಟಕ್ಕೆ ಪರದಾಟ.. ಕೆಲಸಕ್ಕೆ ಅಲೆದಾಟ; ನಟಿ ಪವಿತ್ರ ಜಯರಾಮ್‌ ಮಹದಾಸೆ ಏನಾಗಿತ್ತು?

https://newsfirstlive.com/wp-content/uploads/2024/05/Pavithra-Jayaram-1.jpg

Load More