Advertisment

KAS ಅಧಿಕಾರಿಯ ಪತ್ನಿ, ಹೈಕೋರ್ಟ್​ ವಕೀಲೆ ಚೈತ್ರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

author-image
Ganesh
Updated On
KAS ಅಧಿಕಾರಿಯ ಪತ್ನಿ, ಹೈಕೋರ್ಟ್​ ವಕೀಲೆ ಚೈತ್ರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Advertisment
  • ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
  • ಅಣ್ಣಯ್ಯ ಲೇಔಟ್​ನಲ್ಲಿ ವಾಸವಿದ್ದ ಚೈತ್ರಾ ಬಿ.ಗೌಡ
  • ಘಟನಾ ಸ್ಥಳಕ್ಕೆ ಸಂಜಯನಗರ ಪೊಲೀಸರು ಭೇಟಿ

ಬೆಂಗಳೂರು: ಹೈಕೋರ್ಟ್ ಅಡ್ವೋಕೇಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೈತ್ರಾ ಬಿ.ಗೌಡ (35) ಸಾವನ್ನಪ್ಪಿದ ವಕೀಲೆ.

Advertisment

publive-image

ಠಾಣಾ ವ್ಯಾಪ್ತಿಯ ಮನೆ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೈಕೋರ್ಟ್​ನಲ್ಲಿ ಅಡ್ವೋಕೇಟ್ ಆಗಿದ್ದ ಚೈತ್ರಾ, ಅಣ್ಣಯ್ಯ ಲೇಔಟ್​ನಲ್ಲಿ ವಾಸವಿದ್ದರು. ಇನ್ನು ಇವರ ಪತಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಅಸ್ಟಿಸೆಂಟ್ ಕಮೀಷನರ್ ಆಗಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್​ ರೇಸ್​ನಲ್ಲಿ ಮೂವರ ಹೆಸರು.. ಯಾರಿಗೆ ಒಲಿಯುತ್ತೆ ಲಕ್..

publive-image

ವೃತ್ತಿಯಲ್ಲಿ ವಕೀಲೆಯಾಗಿದ್ದ ಇವರು ಪ್ರವೃತ್ತಿಯಲ್ಲಿ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು. ದಂಪತಿ ನಡುವೆ ವೈಮನಸ್ಸು ಇತ್ತು ಎನ್ನಲಾಗಿದೆ. ‌ಮನೆಯವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಮೃತದೇಹವನ್ನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisment

publive-image

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment