ಕೈ ಕೈ ಹಿಡಿದುಕೊಂಡು ಕೋರ್ಟ್ಗೆ ಎಂಟ್ರಿ ಕೊಟ್ಟ ಶಾಕ್ ಕೊಟ್ಟಿದ್ದ ಜೋಡಿ
ಅಯ್ಯೋ.. ಏನ್ ಗುರು ಇದು ಅಂತಾ ಕಾಮೆಂಟ್ ಮಾಡಿ ಫ್ಯಾನ್ಸ್ ತರಾಟೆ
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಈ ವಿಚಾರ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಈ ಇಬ್ಬರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೂ ಸುದ್ದಿಯಾಗುತ್ತಲೇ ಇದ್ದರು. ಮೊದಲು ಅಣ್ಣ ತಂಗಿ ಅಂತ ಇದ್ದ ಈ ಜೋಡಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಹೀಗೆ ದಿನ ಕಳೆದಂತೆ ಸ್ನೇಹಿತರಾಗಿದ್ದ ಈ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಈ ವಿಚಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?
ಇದಾದ ಬಳಿಕ ಬಿಗ್ಬಾಸ್ ಶೋ ಮುಕ್ತಾಯಗೊಳ್ಳುತ್ತಿದ್ದಂತೆ 2019ರಂದು ಮೈಸೂರು ದಸರಾ ಈವೆಂಟ್ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು. ಈ ವಿಚಾರ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಂದನ್ ಶೆಟ್ಟಿ ಸಾರ್ವಜನಿಕವಾಗಿ ನಿವೇದಿತಾ ಗೌಡಗೆ ಲವ್ ಪ್ರಪೋಸ್ ಮಾಡಿ ಸಖತ್ ಕಾಂಟ್ರೋವರ್ಸಿ ಮಾಡಿಕೊಂಡು ಸುದ್ದಿಯಲ್ಲಿದ್ದರು. ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ 2020ರ ಫೆಬ್ರವರಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬಿಗ್ಬಾಸ್ನಲ್ಲಿ ಪರಿಚಯ.. ಮೈಸೂರು ದಸರಾದಲ್ಲಿ ಪ್ರಪೋಸ್.. ಅದ್ಧೂರಿ ಮದುವೆ.. ಇನ್ಸ್ಟಾಗ್ರಾಮ್ನಲ್ಲಿ ಸಖತ್ ಫೇಮಸ್. ಹೀಗೆ ಪ್ರತಿ ಹಂತದಲ್ಲೂ ಈ ಕ್ಯೂಟ್ ಜೋಡಿ ಸುದ್ದಿಯಾಗುತ್ತಲೇ ಇತ್ತು. ಆದರೆ ತಂಬಾ ಗ್ರ್ಯಾಂಡ್ ಆಗಿ ಸಪ್ತಪದಿ ತುಳಿದಿದ್ದ ಕ್ಯೂಟ್ ಜೋಡಿಯ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದೆ. ಕೇವಲ ನಾಲ್ಕೇ ವರ್ಷಕ್ಕೆ ಸಂಸಾರದ ಜಂಜಾಟಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಗುಡ್ ಬಾಯ್ ಹೇಳಿದ್ದಾರೆ. ಇನ್ನು, ಈ ವಿಚಾರವಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು ಬರೀ ಈ ಜೋಡಿ ಬಗ್ಗೆನೇ ಸದ್ದು ಗದ್ದಲ. ಹೀಗಾಗಿ ಸಾಮಾಜಿಕ ಜಾಲತಾಣಲ್ಲಿ ಈ ಜೋಡಿ ಹಲ್ ಚಲ್ ಎಬ್ಬಿಸಿದೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಟ್ವಿಟರ್ ಸೇರಿ ಎಲ್ಲಾ ಕಡೆ ಕೇವಲ ಚಂದನ್ ಹಾಗೂ ನಿವೇದಿತಾ ಗೌಡ ಬಗ್ಗೆ ಚರ್ಚೆ ಶುರುವಾಗಿದೆ. ಬರೀ ಚಂದನ್ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ಕೇಳಿ, ನೋಡಿ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ. ಇನ್ನೂ ಕಳೆದ ಎರಡು ದಿನಗಳಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಗ್ಗೆ ಗೂಗಲ್ನಲ್ಲಿ ಸಾಕಷ್ಟು ಜನರು ಹುಡುಕಿದ್ದಾರೆ. ಹೀಗಾಗಿ ಈ ಜೋಡಿ ಇಲ್ಲೂ ಕೂಡ ಟಾಪ್ ಟ್ರೆಂಡಿಂಗ್ನಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ