/newsfirstlive-kannada/media/post_attachments/wp-content/uploads/2024/05/prajwal-revanna-3-1.jpg)
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಮುನ್ನಲೆಗೆ ಬಂದ ಬೆನ್ನಲ್ಲೇ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ತೆರಳಿದ್ದರು. ಜರ್ಮನಿಯತ್ತ​ ಕಡೆ ಮುಖ ಮಾಡಿದ್ದರು. ಆದರೆ ಬರೋಬ್ಬರಿ 34 ದಿನಗಳ ಬಳಿಕ ಪ್ರಜ್ವಲ್​ ವಿದೇಶದಿಂದ ಭಾರತಕ್ಕೆ ಬಂದಿದ್ದಾರೆ. ಕೊನೆಗೂ ಅವರನ್ನು ಎಸ್​ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳ ತಂಡ ಅವರನ್ನು ಏರ್​ಪೋರ್ಟ್​ನಲ್ಲಿ ಬಂಧಿಸಿ ನಂತರ ತನಿಖೆಗಾಗಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಅವರ ಮುಂದಿನ ತನಿಖೆ ಹೇಗಿರುತ್ತೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ತನಿಖೆಯಲ್ಲಿ ಕೆಲವೊಂದು ಸಂಗತಿಗಳ ಕುರಿತು ತನಿಖೆ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.
ಪ್ರಜ್ವಲ್​ ರೇವಣ್ಣ ಅರೆಸ್ಟ್​ ಬಳಿಕ ಎಸ್​ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಬಹುಮುಖ್ಯವಾಗಿ ಮದರ್ ಡಿವೈಸ್ ಯಾರ ಬಳಿ ಇದೆ ಎಂಬ ತನಿಖೆ ನಡೆಯಲಿದೆ. ಯಾವ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ್ದೀರಾ?. ಆ ಮೊಬೈಲ್ ಎಲ್ಲಿದೆ ಅನ್ನೋದರ ಬಗ್ಗೆಯೂ ತನಿಖೆ ನಡೆಯಲಿದೆ. ಒಂದು ವೇಳೆ ಮದರ್ ಡಿವೈಸ್ ಡೆಸ್ಟ್ರಾಯ್ ಮಾಡಿದ್ರೆ ಪ್ರಜ್ವಲ್​ಗೆ ಸಂಕಷ್ಟ ಫಿಕ್ಸ್ ಆಗುವ ಸಾಧ್ಯತೆ ಇದೆ. ಸಾಕ್ಷಿ ನಾಶದ ಅಡಿ ಪ್ರಜ್ವಲ್ ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆ ಹೆಚ್ಚು ಇದೆ.
ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಅವರ ಇಂದಿನ ರಾಶಿ ಭವಿಷ್ಯ ಹೇಗಿದೆ?
ಅಧಿಕಾರಿಗಳು ಮದರ್ ಡಿವೈಸ್ ಯಾರ ಬಳಿ ಇದೆ ಅಂತ ಪ್ರಶ್ನೆ ಮಾಡಲಿದ್ದಾರೆ. ಜೊತೆಗೆ ಈಗ ಆ ಮೊಬೈಲ್ ಎಲ್ಲಿದೆ ಅನ್ನೋದರ ಕುರಿತು ತನಿಖೆ ನಡೆಸಲಿದ್ದಾರೆ. ಹಾಸನದಲ್ಲಿ ಹರಿದಾಡಿರುವ ಅಶ್ಲೀಲ ವಿಡಿಯೋಗಳು ಸೆಕೆಂಡರಿ ಎವಿಡೆನ್ಸ್ ಆಗಿದ್ದು, ಹೀಗಾಗಿ ಮದರ್ ಡಿವೈಸ್ ಬಗ್ಗೆ ಎಸ್​ಐಟಿ ತನಿಖೆಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan)
SIT ಮಹಿಳಾ ಅಧಿಕಾರಿಗಳ ಸ್ಟ್ರಾಂಗ್ ಟೀಮ್ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿ SIT ಆಫೀಸ್ಗೆ ಕರೆತಂದಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡಿದ್ಯಾಕೆ?#PrajwalRevanna#SITOffice#SIT#HassanPendriveCase#KIAL#NewsFirstKannadapic.twitter.com/RPS280HGe6
— NewsFirst Kannada (@NewsFirstKan) May 30, 2024
">May 30, 2024
ಮದರ್ ಡಿವೈಸ್ ಡೆಸ್ಟ್ರಾಯ್ ಮಾಡಿದ್ದು ಕಂಡು ಬಂದರೆ ಪ್ರಜ್ವಲ್​ ರೇವಣ್ಣ ಅವರಿಗೆ ಕಷ್ಟ ಸಾಧ್ಯತೆ ಇದೆ. ಸಾಕ್ಷಿ ನಾಶದಡಿ ಮತ್ತೊಂದು ಸೆಕ್ಷನ್ ದಾಖಲಿಸೋ ಸಾಧ್ಯತೆ ಇದೆ. ಮದರ್ ಡಿವೈಸ್ ಸಿಗದಿದ್ರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರೆಯಲಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us