/newsfirstlive-kannada/media/post_attachments/wp-content/uploads/2024/09/gicchi-gili-gili.jpg)
ಹುಲಿ ಕಾರ್ತಿಕ್.. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ನಟ. ಸ್ಟೇಜ್​ ಮೇಲೆ ಪಂಚಿಂಗ್ ಡೈಲಾಗ್​ಗಳ ಹೊಡೀತಾ ಜನರನ್ನ ನಗೆಗಡಲಲ್ಲಿ ತೇಲಿಸೋ ನಟ. ಎಲ್ಲದಕ್ಕಿಂತ ಹೆಚ್ಚಾಗಿ ಗಿಚ್ಚಿ ಗಿಲಿ ಗಿಲಿ ಸೀಸನ್-3 ರಿಯಾಲಿಟಿ ಶೋ ವಿಜೇತ ಕೂಡ. ಆದ್ರೀಗ ಹುಲಿ ಕಾರ್ತಿಕ್ ಮಾಡಿದ ಅದೊಂದು ಎಡವಟ್ಟು ಕಾನೂನು ಸಂಕಷ್ಟ ತಂದೊಡ್ಡಿದೆ.
ನಟ ಕಾರ್ತಿಕ್ @ ಹುಲಿ ಕಾರ್ತಿಕ್​ಗೆ ಅಟ್ರಾಸಿಟಿ ಸಂಕಷ್ಟ!
ರಿಯಾಲಿಟಿ ಶೋಗಳಲ್ಲಿ ಹೇಳೋ ಡೈಲಾಗ್​ಗಳು ಕೆಲವೊಂದು ಸಾರಿ ಮುಜುಗರಕ್ಕೀಡು ಮಾಡುತ್ತವೆ. ಆದ್ರೆ ಪಂಚ್​ ಹೊಡೀಬೇಕಾದ್ರೆ ಅಂತ ಡೈಲಾಗ್​ಗಳು ಬೇಕೆ ಬೇಕು. ಹೀಗೆ ಸ್ಕಿಟ್​ ವೇಳೆ ಕಾರ್ತಿಕ್ ಬಳಸಿದ್ದ ಅದೊಂದು ಪದಕ್ಕಾಗಿ ಕಾರ್ತಿಕ್​ ಕೇಸ್ ದಾಖಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
/newsfirstlive-kannada/media/post_attachments/wp-content/uploads/2024/10/Huli-karthik.jpg)
ಹಾಸ್ಯ ನಟ ಹುಲಿ ಕಾರ್ತಿಕ್ ಅವರು ಇತ್ತೀಚೆಗಷ್ಟೇ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್​ನ ವಿನ್​ ಆಗಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಾಗಿತ್ತು. ಇತ್ತೀಚೆಗಷ್ಟೆ ರಿಲೀಸ್ ಆದ ‘ಪೌಡರ್’ ಸೇರಿ ಕೆಲವು ಸಿನಿಮಾಗಳಲ್ಲಿ ಕೂಡ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಬಿಗ್​ಬಾಸ್​ಗೂ ಕಾರ್ತಿಕ್​ ಎಂಟ್ರಿ ಕೊಡ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈಗ ಕಾರ್ತಿಕ್ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದು, ಇದೇ ಕಾರಣಕ್ಕೆ ಎಫ್​ಐಆರ್ ದಾಖಲಾಗಿದೆ.
/newsfirstlive-kannada/media/post_attachments/wp-content/uploads/2024/09/anubandha-awards.jpg)
ಬೋವಿ ಸಮಾಜಕ್ಕೆ ನಿಂದಿಸಿದ್ರಾ ಹುಲಿ ಕಾರ್ತಿಕ್?
ರಿಯಾಲಿಟಿ ಶೋನಲ್ಲಿ ಗೆದ್ದು ಕಿರುತೆರೆಯಲ್ಲಿ ಮಿಂಚುತ್ತಿರುವ ಕಾರ್ತಿಕ್, ಕಾರ್ಯಕ್ರಮವೊಂದರಲ್ಲಿ ಬೋವಿ ಜನಾಂಗವನ್ನು ನಿಂದಿಸಿ ಪದ ಬಳಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಸಮುದಾಯವನ್ನು ಹಿಯಾಳಿಸುವ ರೀತಿ ಮಾತನಾಡಿದ್ದಾರೆ ಅಂತ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ತಿಕ್ ಮಾತ್ರವಲ್ಲ ಸ್ಕಿಟ್​ ಬರೆಯೋ ಸಂಭಾಷಣೆಕಾರ, ನಿರ್ಮಾಪಕ, ನಿರ್ದೇಶಕನ ಮೇಲೂ ಕೇಸ್ ದಾಖಲು ಮಾಡಲಾಗಿದೆ. ಲೋಕೇಶ್​ ಶ್ರೀನಿವಾಸ್ ಅನ್ನೋರು ಈ ಕಂಪ್ಲೇಟ್​ ಕೊಟ್ಟಿದ್ದು, ಕಾರ್ತಿಕ್​​ಗೆ ವಿಚಾರಣಗೆ ಹಾಜರಾಗುವಂತೆ ಕೆಂಗೇರಿ ಉಪವಿಭಾಗ ಎಸಿಪಿ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಗೆದ್ದ ಹುಲಿ ಕಾರ್ತಿಕ್, ರನ್ನರ್-ಅಪ್ ಯಾರು? ಸಿಕ್ಕ ಹಣವೆಷ್ಟು?
ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ’ ಅವಾರ್ಡ್ಸ್​ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ಕೇಸ್ ದಾಖಲಾಗಿದೆ. ನಟ ಬಾಯ್ ತಪ್ಪಿ ಆಡಿದ ಅದೊಂದು ಕಾರ್ತಿಕ್​ಗೆ ಕಾನೂನು ಸಂಕಷ್ಟ ತಂದೊಡ್ಡಿದೆ. ಇನ್ನಾದ್ರೂ ರಿಯಾಲಿಟಿ ಶೋಗಳಲ್ಲಿ ಸ್ವಲ್ಪ ಅಲರ್ಟ್ ಆಗಿರೋದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us