/newsfirstlive-kannada/media/post_attachments/wp-content/uploads/2024/03/JAYA_SHAH.jpg)
ಜಯ್ ಶಾ ಅವರು 2019 ರಿಂದ ಬಿಸಿಸಿಐ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಇದೀಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಡಿಸೆಂಬರ್ 1, 2024 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜೈ ಶಾಗೆ ಕೇವಲ 35 ವರ್ಷ. ಅವರ ನಿವ್ವಳ ಮೌಲ್ಯ 124 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಕ್ರಿಕೆಟ್ ಮಾತ್ರವಲ್ಲದೇ ವ್ಯಾಪಾರ, ಹೂಡಿಕೆ ಅವರ ಆದಾಯದ ಪ್ರಮುಖ ಮೂಲವಾಗಿದೆ.
ಅವರು ಹೇಗೆ ಹಣ ಗಳಿಸುತ್ತಾರೆ ಎಂಬುದು ಸಹ ದೊಡ್ಡ ರಹಸ್ಯವಾಗಿದೆ. ಕುಸುಮ್ ಫಿನ್‌ಸರ್ವ್ ಪ್ರೈವೇಟ್ ಲಿಮಿಟೆಡ್ ಕಂಪನಿಯ 60 ಪ್ರತಿಶತ ಷೇರುಗಳನ್ನು ಹೊಂದಿದ್ದಾರೆ. ಈ ಹಿಂದೆ ಟೆಂಪಲ್ ಎಂಟರ್‌ಪ್ರೈಸ್ ಹೆಸರಿನ ಕಂಪನಿಯೊಂದರಲ್ಲಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬಿಸಿಸಿಐನಿಂದ ಅವರು ಪಡೆಯುವ ಸಂಭಾವನೆ ನಿಗದಿತ ಮೊತ್ತವಲ್ಲ. ಉದಾಹರಣೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಭೆಗೆ ಅಥವಾ ಯಾವುದೇ ಪ್ರವಾಸಕ್ಕೆ ಹೋದರೆ 84 ಸಾವಿರ ಡಾಲರ್ ಅಂದರೆ ಸುಮಾರು 70.5 ಲಕ್ಷ ರೂಪಾಯಿ ಭತ್ಯೆಯಾಗಿ ಸಿಗುತ್ತದೆ.
ಅದೇ ರೀತಿ ಭಾರತದಲ್ಲಿ ಯಾವುದೇ ಸಭೆ ಅಥವಾ ಪ್ರವಾಸಕ್ಕೆ ಹೋದರೆ 40 ಸಾವಿರ ರೂಪಾಯಿ ಹಣವನ್ನು ಪಡೆಯುತ್ತಾರೆ.
ಬಿಸಿಸಿಐನಂತೆ ಐಸಿಸಿಯಿಂದ ಪಡೆಯುವ ಸಂಭಾವನೆಯೂ ನಿಗದಿಯಾಗಿಲ್ಲ. ICC ಕೆಲಸದಿಂದಾಗಿ, ಅವರು ಸಭೆಗಳಿಗೆ ಮತ್ತು ಕೆಲಸಕ್ಕೆ ಹೋಗಲು ಭತ್ಯೆಗಳನ್ನು ನೀಡಲಾಗುತ್ತದೆ. ವಿಮಾನಗಳಲ್ಲಿ ಎಕನಾಮಿಕ್ ಕ್ಲಾಸ್ ಸೀಟುಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ:ಕೈಕೊಟ್ಟ ಸಿರಾಜ್, ಜಡೇಜಾ.. ಬಾಂಗ್ಲಾ ಸರಣಿ ಕನಸು ಛಿದ್ರಗೊಳ್ಳುವ ಆತಂಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us