/newsfirstlive-kannada/media/post_attachments/wp-content/uploads/2024/08/jaishil.jpg)
ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಕೈದಿಯೊಬ್ಬ ಬಳ್ಳಾರಿ ಜೈಲಿನಲ್ಲೂ ರಾಜಾತಿಥ್ಯ ಸಿಗುತ್ತೆ ಎಂಬ ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾನೆ. ದುಡ್ಡ ಕೊಟ್ಟರೆ ಬಳ್ಳಾರಿ ಜೈಲ್‌ನಲ್ಲಿ ಎಲ್ಲಾ ಸಿಗುತ್ತೆ. ಆ್ಯಂಡ್ರಾಯ್ಡ್​​ ಫೋನ್​, ಗಾಂಜಾ, ಸಿಗರೇಟ್ ಎಲ್ಲಾ ಸಿಗುತ್ತೆ ಎಂದು ಹೇಳಿದ್ದಾನೆ.
ಆರು ವರ್ಷಗಳ ಕಾಲ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿದ್ದ ಆರೋಪಿ ಆನಂದಿ ಕೊಟ್ಟಂ ಜಯಶೀಲ ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ್ದು, ಹಲವು ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾನೆ.
ದುಡ್ಡು ಕೊಟ್ರೆ ಗಾಂಜಾ, ಸಿಗರೇಟ್​, ತಂಬಾಕು, ಗುಟ್ಕಾ ಸಿಗುತ್ತೆ. ಬೆಂಗಳೂರೇ ದರ್ಶನ್​ಗೆ ಒಳ್ಳೆದಿತ್ತು. ಆದ್ರೆ ಬಳ್ಳಾರಿ ಬಂದ್ರೆ ಮತ್ತಷ್ಟು ಕೆಟ್ಟೋಗ್ತಾರೆ ಎಂದು ಹೇಳಿದ್ದಾರೆ.
ದುಡ್ಡು ಕೊಟ್ಟರೆ ಬಳ್ಳಾರಿಯಲ್ಲಿ ರಾಯಲ್ ಟ್ರೀಟ್ ಇದೆ. ಜೈಲ್‌ನ ಅಧಿಕಾರಿಗಳೇ ದುಡ್ಡು ತೆಗೆದುಕೊಂಡು ಸಪ್ಲೈ ಮಾಡ್ತಾರೆ. ದುಡ್ಡು ಕೊಟ್ರೆ ಹೊರಗಿನ ಊಟ ಕೂಡ ಸಿಗುತ್ತೆ. ಜೈಲಿನಲ್ಲಿ ತಯಾರಿಸಿದ ಅಡುಗೆ ಸರಿಯಾಗಿರೋದಿಲ್ಲ. ಬಡ ಖೈದಿಗಳನ್ನ ಅಧಿಕಾರಿಗಳು ಸರಿಯಾಗಿ ನಡೆಸಿಕೊಳ್ಳಲ್ಲ. ವಾರಕ್ಕೆ ಜೈಲಾಧಿಕಾರಿಗಳಿಗೆ ದುಡ್ಡು ಕೊಡಬೇಕು. ಇಲ್ಲವಾದ್ರೆ ಕಿರುಕುಳ ಮಾಡ್ತಾರೆ. ಹೊಡಿತಾರೆ ಎಂದು ಆನಂದಿ ಕೊಟ್ಟಂ ಜಯಶೀಲ ಹೇಳಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ 326km ದೂರ, 150 ವರ್ಷಗಳ ಇತಿಹಾಸ! ಬಳ್ಳಾರಿ ಜೈಲು ಅಂದ್ರೆ ಭಯ ಬೀಳೋದ್ಯಾಕೆ ಕೈದಿಗಳು?
ಅಧಿಕಾರಗಳೇ ಒಳಗೆ ಕ್ಯಾಂಟಿನ್ ವ್ಯವಸ್ಥೆ ಮಾಡಿದ್ದಾರೆ. ಅಲ್ಲೇ ದುಡ್ಡು ಕೊಟ್ರೆ ಗಾಂಜಾ ಸಿಗುತ್ತೆ. ದುಡ್ಡು ಕೊಡಲಿಲ್ಲ ಅಂದ್ರೆ ಬೇರೆ ಜೈಲಿಗೆ ಹಾಕುವ ಬೆದರಿಕೆ ಹಾಕ್ತಾರೆ. ಬಳ್ಳಾರಿ ಜೈಲಿನಲ್ಲೂ ವಿಐಪಿ ಟ್ರೀಟ್ ಇದೆ. ಈ ಜೈಲಿನಲ್ಲಿ ಸರಿಯಾದ ಊಟದ ಕ್ರಮ ಇಲ್ಲ. ನಾನು ಆರು ವರ್ಷ ಜೈಲಿನಲ್ಲಿ ಇದ್ದೆ. ವಾರಕ್ಕೆ ದುಡ್ಡು ಕೊಡಲಿಲ್ಲ ಅಂದ್ರೆ ಹೊಡಿತಾರೆ. ಹಣ ಇದ್ರೆ ಬಳ್ಳಾರಿ ಜೈಲಿನಲ್ಲೂ ಎಲ್ಲವೂ ಸಿಗುತ್ತೆ ಎಂದು ಆನಂದಿ ಕೊಟ್ಟಂ ಜಯಶೀಲ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us