/newsfirstlive-kannada/media/post_attachments/wp-content/uploads/2024/07/gold1.jpg)
ಕೇರಳದ ಇತಿಹಾಸದಲ್ಲಿಯೇ ಹಿಂದೆಂದೂ ಕೇಳರಿಯದ ಒಂದು ಆಪರೇಷನ್ ನಡೆದಿದೆ.ರಾಜ್ಯ ಜಿಎಎಸ್​ಟಿಯ ಇಂಟಲಿಜೆನ್ಸ್​ ವಿಂಗ್ ನಡೆಸಿದ ದಾಳಿಯಲ್ಲಿ ಸುಮಾರು 108 ಕೆಜಿ ದಾಖಲೆಯಿಲ್ಲದ ಬಂಗಾರವನ್ನು ಜಪ್ತಿ ಮಾಡಲಾಗಿದೆ. ಕೇರಳದ ತ್ರಿಸ್ಸೂರ್ ಜಿಲ್ಲೆಯಲ್ಲಿ ಈ ಒಂದು ಆಪರೇಷನ್ ನಡೆದಿದ್ದು. ಒಟ್ಟು 78 ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ದಾಳಿಯಿಟ್ಟಿರುವ ಜಿಎಸ್​ಟಿ ಪಡೆ 108 ಕೆಜಿ ಈ ಒಂದು ದಾಳಿ ಬುಧವಾರ ನಡೆದಿದ್ದು ಮಧ್ಯಾಹ್ನ 4.30 ರಿಂದ ಬೆಳಗ್ಗೆ 11 ಗಂಟೆಯವರೆಗೂ ಶೋಧ ಕಾರ್ಯ ನಡೆಸಲಾಗಿದೆ.
ಈ ಒಂದು ಆಪರೇಷನ್ ನಡೆಸಲು ಒಟ್ಟು 700 ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಹಾಗೂ ದಾಳಿಯ ವಿಚಾರವನ್ನು ಪಕ್ಕಾ ರಹಸ್ಯವಾಗಿ ಇಡಲು ಅವರಿಗೆ ಖಡಕ್ ಸೂಚನೆ ನೀಡಲಾಗಿತ್ತು ಎಂದು ಜಿಎಸ್​ಟಿಯ ಸ್ಪೇಷಲ್ ಕಮಿಷನರ್ ರೆನ್ನಾ ಅಬ್ರಾಹಂ ಹೇಳಿದ್ದಾರೆ. ದೊಡ್ಡ, ಮಧ್ಯಮ ಹಾಗೂ ಚಿಕ್ಕ ಚಿನ್ನಾಭರಣ ತಯಾರಿಕ ಘಟಕಗಳ ಮೇಲೆ ನಾವು ದಾಳಿಯನ್ನು ನಡೆಸಿದ್ದೇವೆ. ಇವರಲ್ಲಿ ಒಬ್ಬ ವ್ಯಾಪಾರ ತಮ್ಮ ದೊಡ್ಡ ಮಟ್ಟದ ಆದಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ ಅವರ ಒಟ್ಟು ಆದಾಯ 1200 ಕೋಟಿರ ರೂಪಾಯಿ. ಕಳೆದು ಐದು ವರ್ಷಗಳಲ್ಲಿ ದಾಖಲೆ ಇಲ್ಲದ ಚಿನ್ನದ ವ್ಯಾಪಾರ ಹಾಗೂ ದಾಸ್ತಾನು ಎಷ್ಟು ಇದೆ ಎಂಬುದನ್ನು ನಮ್ಮ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅಬ್ರಾಹಂ ಹೇಳಿದ್ದಾರೆ.
ಜೆಎಸ್​ಟಿ ಅಧಿಕಾರಿಗಳು ಹೇಳಿದ ಪ್ರಕಾರ ಕೆಲವು ಬಂಗಾರ ತಯಾರಿಕಾ ಘಟಕಗಳ ದಾಖಲೆಯಿಲ್ಲದ ಆದಾಯ ಸುಮಾರು 10 ಕೋಟಿಯಷ್ಟು ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಹಲವು ಮಾಹಿತಿಗಳು ಸಿಗಬೇಕಿದೆ. ಸದ್ಯ ನಮಗೆ ಸಿಕ್ಕಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ನೋಡಬೇಕಿದೆ. ಈ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲು, ಪರೀಕ್ಷಿಸಲು ಒಂದು ದಿನವಾಗಬಹುದು, ಒಂದು ತಿಂಗಳಾಗಬಹುದು ಎಂದು ಅಬ್ರಾಹಂ ಹೇಳಿದ್ದಾರೆ.
ಸದ್ಯ ಸೀಜ್ ಮಾಡಿಕೊಂಡಿರುವ ಚಿನ್ನವನ್ನೆಲ್ಲಾ ಖಜಾನೆಯಲ್ಲಿ ಇಡಲಾಗುವುದು. ಸರಿಯಾದ ದಾಖಲೆ ಪ್ರಮಾಣ ಪತ್ರದೊಂದಿಗೆ ಸರಿಯಾದ ಜಿಎಸ್​ಟಿ ಪಾವತಿಸಿದ ದಾಖಲೆಗಳನ್ನು ತೆಗೆದುಕೊಂಡು ಬಂದಲ್ಲಿ ಅವರಿಗೆ ಮರಳಿ ಚಿನ್ನವನ್ನು ಕೊಡಲಾಗುವುದು ಎಂದು ಜಿಎಸ್​ಟಿ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನವನ್ನು ವಾಪಸ್ ಪಡೆಯಲು ಬಂದವರು ಬಂಗಾರದ ಬೆಲೆ ಶೇಕಡಾ 3 ರಷ್ಟು ದಂಡ ಹಾಗೂ ಶೇಕಡಾ 3 ರಷ್ಟು ಬಡ್ಡಿಯನ್ನು ಜಿಎಸ್​ಟಿಗೆ ಕಟ್ಟಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಅಬ್ಬಬ್ಬಾ ಇದು ಕಣ್ರಿ ಲಾಟರಿ ಅಂದ್ರೆ.. 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ!
ಸದ್ಯ ಮಾರುಕಟ್ಟೆಯ ಬೆಲೆಯ ಅನುಗುಣವಾಗಿ ಟ್ಯಾಕ್ಸ್​ ರೇಟ್​ನ್ನು ಫಿಕ್ಸ್ ಮಾಡಲಾಗುತ್ತದೆ. ಈಗಾಗಲೇ ಕೆಲವು ಘಟಕಗಳು ಸುಮಾರು 5.5 ಕೋಟಿ ರೂಪಾಯಿಯಷ್ಟು ದಂಡ ಹಾಗೂ ಸುಂಕ ಕಟ್ಟಿ ತಮ್ಮ ಬಂಗಾರವನ್ನು ವಾಪಸ್ ಪಡೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us