newsfirstkannada.com

ಪ್ಲೇ ಆಫ್​ ಎಂಟ್ರಿ ಜೊತೆಗೆ ಅದೃಷ್ಟದ ಹುಡುಕಾಟದಲ್ಲಿ RCB.. ಭಯ ಹೆಚ್ಚಿಸಿದ ಡೆಲ್ಲಿಯ ಈ ಇಬ್ಬರ ಬ್ಯಾಟಿಂಗ್​!

Share :

Published May 12, 2024 at 12:50pm

    ಡೆಲ್ಲಿಯಲ್ಲಿದ್ದಾರೆ ಇಬ್ಬರು ಯಂಗ್​​ ಡೇಂಜರಸ್​​ ಬ್ಯಾಟ್ಸ್​​ಮನ್ಸ್​

    RCB ಬೌಲರ್​​ಗಳ ಆತಂಕ ಹೆಚ್ಚಿಸಿರುವ ಡೆಲ್ಲಿ ಬ್ಯಾಟ್ಸ್​ಮನ್ಸ್​

    ಡೆಲ್ಲಿ ಕ್ಯಾಪಿಟಲ್ಸ್​ VS ಆರ್​​ಸಿಬಿ ಮಾಡು ಇಲ್ಲವೇ ಮಡಿ ಕದನ

ಡು ಆರ್​​ ಡೈ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸವಾಲನ್ನ ಎದುರಿಸಲು ಆರ್​​ಸಿಬಿ ಸಜ್ಜಾಗಿದೆ. ಸತತ 4 ಪಂದ್ಯ ಗೆದ್ದ ಆತ್ಮವಿಶ್ವಾಸದಲ್ಲಿದ್ರೂ, ಅರ್​​ಸಿಬಿ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿ ಅಂಗಳದಲ್ಲಿ ಡೆಲ್ಲಿಯ ಡೇರ್​ಡೆವಿಲ್​ ಬ್ಯಾಟರ್​ಗಳನ್ನ ಕಟ್ಟಿ ಹಾಕೋದೆ ದೊಡ್ಡ ಸವಾಲಾಗಿದೆ. ಭಯಾನಕ ಆಟವನ್ನಾಡ್ತಿರೋ ಡೇಂಜರಸ್​​ ಬ್ಯಾಟರ್ಸ್​​​, ಆರ್​​ಸಿಬಿ ಬೌಲರ್​​ಗಳಿಗೆ ನುಂಗಲಾರದ ತುತ್ತಾಗಿದ್ದಾರೆ.

ಹೋಮ್​​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸಜ್ಜಾಗಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿರೋ ಆರ್​​ಸಿಬಿ, ಸತತ 4 ಪಂದ್ಯಗಳನ್ನ ಗೆದ್ದ ಅಪಾರ ಆತ್ಮವಿಶ್ವಾಸದಲ್ಲಿದೆ. ಪ್ಲೇ ಆಫ್​ ಎಂಟ್ರಿಗೆ ಆಟದ ಜೊತೆಗೆ ಅದೃಷ್ಟದ ಹುಡುಕಾಟ ನಡೆಸ್ತಿರೋ ಡುಪ್ಲೆಸಿ ಪಡೆಗೆ ಇಂದಿನ ಪಂದ್ಯಕ್ಕೂ ಮುನ್ನವೇ ಗುಡ್​ನ್ಯೂಸ್​ ಸಿಕ್ಕಿದೆ. ಯಾವ ಆಟಗಾರ ತಂಡಕ್ಕೆ ವಿಲನ್​ ಆಗ್ತಾನೆ ಎಂಬ ಆತಂಕ ಕಾಡ್ತಿತ್ತೋ ಆ ಆಟಗಾರ ಇಂದಿನ ಪಂದ್ಯಕ್ಕೆ ಅಲಭ್ಯನಾಗಿದ್ದಾನೆ.

ಇದನ್ನೂ ಓದಿ: ಸೂಪರ್ ಸಂಡೇ.. ಫ್ಯಾನ್ಸ್​ಗೆ ಡಬಲ್ ಧಮಾಕಾ.. ರಾಜಸ್ಥಾನ- ಚೆನ್ನೈ ಫಲಿತಾಂಶದ ಮೇಲೆ RCB ಭವಿಷ್ಯ!

ಪಂದ್ಯಕ್ಕೂ ಮೊದಲೇ ಆರ್​​ಸಿಬಿಗೆ ಗುಡ್​ನ್ಯೂಸ್​​.!

ಚಿನ್ನಸ್ವಾಮಿಯಂತಾ ಚಿಕ್ಕ ಮೈದಾನದಲ್ಲಿ ಡೆಲ್ಲಿ ಕ್ಯಾಪ್ಟನ್​​ ರಿಷಬ್​ ಪಂತ್​ ನೀರು ಕುಡಿದಷ್ಟು ಸುಲಭಕ್ಕೆ ರನ್​ಗಳಿಸಬಲ್ಲ ತಾಕತ್ತು ಹೊಂದಿದ್ದಾರೆ. ಪಂತ್​ ಸಾಲಿಡ್​ ಫಾರ್ಮ್​ನಲ್ಲಿದ್ರೆ, ಆರ್​ಸಿಬಿ ಬೌಲಿಂಗ್​ ವಿಭಾಗ ಇನ್​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದೆ. ಹೀಗಾಗಿ, ಪಂತ್​​ ಆರ್​​ಸಿಬಿ ಪಾಲಿಗೆ ಕಂಟಕವಾಗ್ತಾರೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದ್ರೀಗ ಪಂತ್​ ಇಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.

RCBಗೆ ಒಂದು ರಿಲೀಫ್​​​.. ಎರಡೆರಡು ಆತಂಕ..!

ರಾಜಸ್ಥಾನ​ ರಾಯಲ್ಸ್​ ಎದುರಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ ನಡೆಸಿದ ಕಾರಣಕ್ಕೆ ಪಂತ್​ಗೆ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಇಂದಿನ ಪಂದ್ಯದಲ್ಲಿ ಪಂತ್​ ಕಣಕ್ಕಿಳಿಯಲ್ಲ. ಇದು ಆರ್​​ಸಿಬಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತರಿಸಿದೆ. ಆದ್ರೆ, ಸಂಪೂರ್ಣ ರಿಲೀಫ್​​ ಆಗಿಲ್ಲ. ಯಾಕಂದ್ರೆ, ಡೆಲ್ಲಿ ತಂಡದ ಇನ್ನಿಬ್ಬರು ಸ್ಪೋಟಕ ಬ್ಯಾಟ್ಸ್​ಮನ್​ಗಳಿಗೆ ಆರ್​​ಸಿಬಿ ಕನಸನ್ನೇ ನುಚ್ಚು ನೂರು ಮಾಡೋ ತಾಕತ್ತಿದೆ.

235.17.. ಭಯಂಕರ ಸ್ಟ್ರೈಕ್​ರೇಟ್​ನಲ್ಲಿ ಮೆಕ್​​ಗುರ್ಕ್​​​​​ ಮಿಂಚಿಂಗ್​.!

ಜೇಕ್​ ಫ್ರೆಸರ್​ ಮೆಕ್​ಗುರ್ಕ್​​.. ಐಪಿಎಲ್​ನಲ್ಲಿ ರನ್​ ಸುನಾಮಿ ಎಬ್ಬಿಸಿರೋ ಯುವ ದಾಂಡಿಗ. ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸ್ತಾ ಇರೋ ಮೆಕ್​ಗುರ್ಕ್​​, ಕನ್ಸಿಸ್ಟೆಂಟ್ ಪರ್ಫಾಮೆನ್ಸ್​ನಿಂದ ಗಮನ ಸೆಳೆದಿದ್ದಾರೆ. ಡೆಲ್ಲಿ ತಂಡದ ಬ್ಯಾಟಿಂಗ್​ ಬಲವಾಗಿರೋ ಮೆಕ್​ಗುರ್ಕ್​ ಆರ್​​ಸಿಬಿ ಪಾಲಿಗೆ ವಿಲನ್​ ಆಗೋ ಎಲ್ಲ ಸಾಧ್ಯತೆಯಿದೆ. ಬ್ಯಾಟಿಂಗ್​ ಫ್ರೆಂಡ್ಲಿ ಚಿನ್ನಸ್ವಾಮಿ ಮೈದಾ​ನದ ಪಿಚ್​​ನಲ್ಲಿ ರನ್​​ ಕೊಳ್ಳೆ ಹೊಡೆಯಲು ಸಜ್ಜಾಗಿದ್ದಾರೆ.

ಸೀಸನ್​​ 17ರಲ್ಲಿ ಮೆಕ್​​ಗುರ್ಕ್​​​​​​

ಸೀಸನ್​ 17ರ ಐಪಿಎಲ್​ನಲ್ಲಿ 7 ಪಂದ್ಯಗಳನ್ನಾಡಿರುವ ಮೆಕ್​ಗುರ್ಕ್​​​​ 309 ರನ್​​ ಕಲೆ ಹಾಕಿದ್ದಾರೆ. 44.14ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದು, 33 ಬೌಂಡರಿ, 26 ಸಿಕ್ಸರ್​​ ಸಿಡಿಸಿದ್ದಾರೆ. ಬರೋಬ್ಬರಿ 235.87ರ ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಆರ್​​ಸಿಬಿ ಬೌಲರ್​​ಗಳ ಆತಂಕ ಹೆಚ್ಚಿಸಿದ ಟ್ರಿಸ್ಟನ್​ ಸ್ಟಬ್ಸ್​​.!

ಡೆಲ್ಲಿ ತಂಡದ ಮತ್ತೊರ್ವ ದಾಂಡಿಗ ಟ್ರಿಸ್ಟನ್​ ಸ್ಟಬ್ಸ್​ ಕೂಡ ಆರ್​​ಸಿಬಿ ಕ್ಯಾಂಪ್​ನಲ್ಲಿ ಆತಂಕಕ್ಕೆ ಕಾರಣರಾಗಿದ್ದಾರೆ. ಮಿಡಲ್​ ಆರ್ಡರ್​​ನಲ್ಲಿ ಡೆಲ್ಲಿ ಪಾಳೆಯದ ಬ್ಯಾಟಿಂಗ್​ ಶಕ್ತಿಯಾಗಿರುವ ಸ್ಟಬ್ಸ್​ಗೆ ಕೆಲವೇ ಎಸೆತಗಳಲ್ಲಿ ಗೇಮ್​ ಚೇಂಜ್​ ಮಾಡೋ ತಾಕಕ್ಕಿದೆ. ಈ ಸೀಸ ನ್​ನಲ್ಲಿ ಆಡಿದ ಕೆಲ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನ ನಿರೂಪಿಸಿದ್ದಾರೆ ಕೂಡ.

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ಸೀಸನ್​​ 17ರಲ್ಲಿ ಟ್ರಿಸ್ಟನ್​ ಸ್ಟಬ್ಸ್​

ಈ ಸೀಸನ್​ನಲ್ಲಿ ಬ್ಯಾಟಿಂಗ್​ ನಡೆಸಿರುವ 11 ಇನ್ನಿಂಗ್ಸ್​​​ಗಳಲ್ಲಿ, 53ರ ಸರಾಸರಿಯಲ್ಲಿ ಟ್ರಿಸ್ಟನ್​​ ಸ್ಟಬ್ಸ್​ 318 ರನ್​ಗಳಿಸಿದ್ದಾರೆ. 21 ಫೋರ್​, 22 ಸಿಕ್ಸರ್ಸ್​​ ಸಿಡಿಸಿರುವ ಸ್ಟಬ್ಸ್​, 188.16ರ ಅದ್ಭುತ ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಉತ್ತಮ ಟಚ್​ನಲ್ಲಿರೋ ಟ್ರಿಸ್ಟನ್​ ಸ್ಟಬ್ಸ್​, ಮೆಕ್​ಗುರ್ಕ್​​ ಇಂದಿನ ಪಂದ್ಯಕ್ಕೂ ಮುನ್ನ ಆರ್​​ಸಿಬಿ ತಂಡಕ್ಕೆ ದೊಡ್ಡ ತಲೆನೋವು ತಂದಿಟ್ಟಿದ್ದಾರೆ. ಪ್ಲೇ ಆಫ್​ಗೆ ಎಂಟ್ರಿ ಕೊಡೋ ಕನವರಿಕೆಯಲ್ಲಿರೋ ಆರ್​​ಸಿಬಿ ಕನಸನ್ನ ನನಸು ಮಾಡಿಕೊಳ್ಳಬೇಕಂದ್ರೆ, ಇವ್ರ ಆಟಕ್ಕೆ ಬ್ರೇಕ್​ ಹಾಕಬೇಕಿದೆ. ಚಿಕ್ಕದಾದ ಬೌಂಡರಿ ಹೊಂದಿರೋ ಚಿನ್ನಸ್ವಾಮಿ ಮೈದಾನದಲ್ಲಿ, ಇನ್​ಕನ್ಸಿಸ್ಟೆಂಟ್​ ಬೌಲಿಂಗ್​ ವಿಭಾಗವನ್ನ ಹೊಂದಿರೋ ಆರ್​​ಸಿಬಿ, ಭಯಂಕರ ಸ್ಟ್ರೈಕ್​ರೇಟ್​ನಲ್ಲಿ ಆರ್ಭಟಿಸ್ತೋರೋ ಈ ಇಬ್ಬರನ್ನ ಕಟ್ಟಿಹಾಕುತ್ತಾ.?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ಲೇ ಆಫ್​ ಎಂಟ್ರಿ ಜೊತೆಗೆ ಅದೃಷ್ಟದ ಹುಡುಕಾಟದಲ್ಲಿ RCB.. ಭಯ ಹೆಚ್ಚಿಸಿದ ಡೆಲ್ಲಿಯ ಈ ಇಬ್ಬರ ಬ್ಯಾಟಿಂಗ್​!

https://newsfirstlive.com/wp-content/uploads/2024/05/VIRAT_KOHLI_SIRAJ.jpg

Load More