/newsfirstlive-kannada/media/post_attachments/wp-content/uploads/2024/02/GMAIL.jpg)
ಜನಪ್ರಿಯ ಗೂಗಲ್​​ ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದೆ. ಸರಿಯಾಗಿ ಬಳಕೆ ಮಾಡದಿರುವ ಜಿಮೇಲ್​​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಿಂದ ಈ ಕಾರ್ಯವನ್ನು ಮುಂದುವರೆಸಲಿದೆ.
ಗೂಗಲ್​ ಜಿಮೇಲ್​ ಬಳಕೆದಾರರಿಗಾಗಿ ಹೊಸ ರೂಲ್ಸ್​ ತರುತ್ತಿದೆ. ಒಂದು ವೇಳೆ ಬಳಕೆಯಲ್ಲಿಲ್ಲದ ಜಿಮೇಲ್​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಂದು ಸರಿಯಾಗಿ ಪರಿಶೀಲಿಸುವುದರ ಮೂಲಕ ಬೇಡವಾದ ಖಾತೆಯನ್ನು ನಿಷ್ಕ್ರೀಯಗೊಳಿಸಲಿದೆ.
2 ವರ್ಷದಿಂದ ಸರಿಯಾಗಿ ಆ್ಯಕ್ಟೀವ್ ಇಲ್ಲದ ಜಿಮೇಲ್​ ಖಾತೆಯನ್ನು ನಿಷ್ಕ್ರೀಯ ಗೊಳಿಸಲಿದೆ. ಸರ್ವರ್​ ದಾರಿಯನ್ನು ಸುಗಮಗೊಳಿಸುವ ನಿರ್ಧಾರದಿಂದ ಈ ನಿರ್ಣಯವನ್ನು ಕಂಡುಕೊಂಡಿದೆ. ಸಾಕಷ್ಟು ಜನರು ಎರಡಕ್ಕಿಂತ ಹೆಚ್ಚು ಜಿಮೇಲ್​ ಖಾತೆಯನ್ನು ತೆರೆಯುತ್ತಾರೆ. ಮತ್ತು ಅದನ್ನು ಬಳಸದೆ ಹಾಗೆಯೇ ಬಿಡುತ್ತಾರೆ. ಆದರೀಗ ಸರ್ವರ್​ ಸ್ಟೊರೇಜ್​ ತೊಂದರೆಯಿಂದಾಗಿ ಬಳಕೆ ಮಾಡದ ಖಾತೆಯನ್ನು ನಿಷ್ಕೀಯಗೊಳಿಸಲಿದೆ.
ಗೂಗಲ್​​ ಇನ್​ಆ್ಯಕ್ಟೀವ್​ ಪಾಲಿಸಿಯಂತೆ 2 ವರ್ಷಕ್ಕಿಂತ ಬಳಸದೇ ಇರುವ ಜಿಮೇಲ್​​ ಖಾತೆಯನ್ನು ನಿಷ್ಕೀಯಗೊಳಿಸುತ್ತದೆ. ಅದಕ್ಕೂ ಮೊದಲು ಗೂಗಲ್​​ ನೋಟಿಫಿಕೇಶನ್​​ ಕಳುಹಿಸುತ್ತದೆ. ಒಂದು ವೇಳೆ ಈ ನೋಟಿಫಿಕೇಶನ್​ ಸ್ವೀಕರಿಸಿದರೆ ಖಾತೆಯನ್ನು ಉಳಿಸಿಕೊಳ್ಳಬಹುದಾಗಿದೆ.
ಸದ್ಯ ಯಾವುದೇ ಖಾತೆ ತೆರೆಯಬೇಕಾದರೂ ಜಿಮೇಲ್​ ಖಾತೆ ಅತ್ಯಗತ್ಯ. ಪ್ರತಿಯೊಬ್ಬರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಜಿಮೇಲ್​ ಖಾತೆಯನ್ನು ಹೊಂದಿರುತ್ತಾರೆ. ಇದರ ಮೂಲಕವೇ ಕೆಲವೊಂದು ಆ್ಯಪ್​ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಬಳಕೆದಾರರ ಕಾರ್ಯಚಟುವಟಿಕೆಯನ್ನು ಜಿಮೇಲ್​​ ಪರಿಶೀಲಿಸುತ್ತಿರುತ್ತದೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us