newsfirstkannada.com

×

4 ವಿಕೆಟ್ ಕಳ್ಕೊಂಡು ಆಘಾತದಲ್ಲಿ ಟೀಂ ಇಂಡಿಯಾ.. 629 ದಿನಗಳ ಬಳಿಕ ಪಂತ್ ಕಂಬ್ಯಾಕ್, ಆದರೆ..!

Share :

Published September 19, 2024 at 1:39pm

Update September 19, 2024 at 1:40pm

    ಭಾರತ-ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್

    52 ಬಾಲ್​ನಲ್ಲಿ 39 ರನ್​ಗಳಿಸಿದ ರಿಷಬ್ ಪಂತ್

    96 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿರುವ ಭಾರತ

ಇಂಡೋ-ಬಾಂಗ್ಲಾ ಟೆಸ್ಟ್​ ಸರಣಿ ಟೀಮ್​ ಇಂಡಿಯಾದ ಡೇರ್​​ಡೆವಿಲ್​ ಬ್ಯಾಟರ್​​ ರಿಷಭ್​ ಪಂತ್​ ಪಾಲಿಗೆ ಅಗ್ನಿ ಪರೀಕ್ಷೆಯ ಕಣ ಶುರುವಾಗಿದೆ. ಬರೋಬ್ಬರಿ 2 ವರ್ಷ, 9 ತಿಂಗಳ ಬಳಿಕ ಟೆಸ್ಟ್​ ಕ್ರಿಕೆಟ್​ ಆಡ್ತಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಪ್ಲೇಯಿಂಗ್​​-11ನಲ್ಲಿ ಸ್ಥಾನ ಪಡೆದುಕೊಂಡಿರುವ ಅವರು, ಮೊದಲ ಇನ್ನಿಂಗ್ಸ್​ನಲ್ಲಿ 39 ರನ್​ಗೆ ಸುಸ್ತಾಗಿದ್ದಾರೆ. 52 ಬಾಲ್​ನಲ್ಲಿ 39 ರನ್​ಗಳಿಸಿರುವ ಪಂತ್, ಐದು ಬೌಂಡರಿ ಬಾರಿಸಿ ಗಮನ ಸೆಳೆದರು.

629 ದಿನ..!
2022ರ ಡಿಸೆಂಬರ್​ 22… ಇದೇ ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾ ಟೆಸ್ಟ್​ ಸರಣಿಯನ್ನಾಡಿತ್ತು. ಬಾಂಗ್ಲಾದೇಶದ ಮೀರ್​​ಪುರ್​ನಲ್ಲಿ ನಡೆದ ಟೆಸ್ಟ್​​ನಲ್ಲಿ 3 ವಿಕೆಟ್​​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ ಸರಣಿಯನ್ನ ಗೆದ್ದು ಬೀಗಿತ್ತು. ಅದಾಗಿ ಕೆಲವೇ ದಿನಕ್ಕೆ ಬಿಗ್​ ಶಾಕಿಂಗ್​ ಸುದ್ದಿ ಹೊರ ಬಿತ್ತು. ಟೀಮ್​ ಇಂಡಿಯಾದ ಡೇರ್​​​ ಡೆವಿಲ್​ ಬ್ಯಾಟ್ಸಮನ್​ ರಿಷಭ್​ ಪಂತ್​, ಡೆಡ್ಲಿ ಆಕ್ಸಿಡೆಂಟ್​​ನಲ್ಲಿ ಸಿಲುಕಿದ್ರು.

ಇದನ್ನೂ ಓದಿ:ಕೊಹ್ಲಿ ಸ್ಲೆಡ್ಜಿಂಗ್ ಪ್ರಶ್ನೆಗೆ ಗಂಭೀರ್ ಕೌಂಟರ್.. ಗುರು-ಶಿಷ್ಯನ ಮಾತು ತುಂಬಾನೇ ಇಂಟ್ರೆಸ್ಟಿಂಗ್..! Video

ಭೀಕರ ಅಪಘಾತದಲ್ಲಿ ಸಿಲುಕಿದ್ದ ಪಂತ್​, ಪವಾಡ ಸದೃಷ ರೀತಿಯಲ್ಲಿ ಬದುಕುಳಿದಿದ್ರು. ಬಳಿಕ ಸಾವಿನ ಜೊತೆಗೆ ಹೋರಾಟ ನಡೆಸಿದ ಪಂತ್​, ವಿಶ್ವವೇ ನಿಬ್ಬೆರಗಾಗುವ ರೀತಿಯಲ್ಲಿ ಕ್ರಿಕೆಟ್​​ ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಿದ್ರು. ಐಪಿಎಲ್​ನಲ್ಲಿ ಆಡಿದ ಟೀಮ್​ ಇಂಡಿಯಾಗೂ ಎಂಟ್ರಿ ಕೊಟ್ಟ ಪಂತ್​, ಟಿ20 – ಏಕದಿನ ಎರಡೂ ಫಾರ್ಮೆಟ್​​ನಲ್ಲಿ ಆಡಿದ್ದಾಯ್ತು. ಇದೀಗ ಬರೋಬ್ಬರಿ 1 ವರ್ಷ, 9 ತಿಂಗಳು.. ಅಂದ್ರೆ 629 ದಿನಗಳ ಬಳಿಕ ಟೆಸ್ಟ್​ ಕ್ರಿಕೆಟ್​​ ಆಡ್ತಿದ್ದಾರೆ.

ಪಂತ್​ಗೆ ರಿಯಲ್​ ‘ಟೆಸ್ಟ್​​’.!
ಟಿ20, ಏಕದಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿ ಸೈ ಎನಿಸಿಕೊಂಡಿರೋ ಪಂತ್​ ಮುಂದೆ ಇದೀಗ ರಿಯಲ್​ ಚಾಲೆಂಜ್​ ಇದೆ. ಈ ಟೆಸ್ಟ್​ಗೂ ಮುನ್ನ ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿ ಟೂರ್ನಿಯನ್ನಾಡಿದ್ದಾರೆ. ಸುದೀರ್ಘ ಕಾಲ ಫೀಲ್ಡ್​ನಲ್ಲಿ ಆ್ಯಕ್ಟಿವ್​ ಆಗಿರಲು ದೇಹ ಸ್ಪಂದಿಸುತ್ತಾ ಅನ್ನೋ ಪ್ರಶ್ನೆ ಇದೆ. ಆ್ಯಕ್ಸಿಡೆಂಟ್​​ಗೂ ಮುನ್ನ ಟೆಸ್ಟ್​ ಕ್ರಿಕೆಟ್​​ನಲ್ಲಿ ರಿಷಭ್​ ಪಂತ್​, ಫೆಂಟಾಸ್ಟಿಕ್​ ಆಟವಾಡ್ತಿದ್ರು. ಆ ಅದ್ಭುತ ಫಾರ್ಮ್​​ ಮತ್ತೆ ಮರುಕಳಿಸ್ತಾರಾ ಅನ್ನೋ ಕುತೂಹಲವೂ ಇದೆ. ಈ ಪ್ರಶ್ನೆಗಳಿಗೆ ಚೆಪಾಕ್​ನಲ್ಲಿ ಪಂತ್​ ಉತ್ತರ ನೀಡಬೇಕಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿ ಅಂತ್ಯದ ಬಳಿಕ ಟೀಮ್​ ಇಂಡಿಯಾ ಬರೋಬ್ಬರಿ ಮತ್ತೆ 8 ಟೆಸ್ಟ್​ ಪಂದ್ಯಗಳನ್ನಾಡಲಿದೆ. ನ್ಯೂಜಿಲೆಂಡ್​​ ವಿರುದ್ಧ ತವರಿನಲ್ಲಿ 3, ಬಳಿಕ ಕಾಂಗರೂ ನಾಡಲ್ಲಿ ಆಸಿಸ್​ ವಿರುದ್ಧ 5 ಟೆಸ್ಟ್​ ಪಂದ್ಯಗಳಿವೆ. ಹೀಗಾಗಿ ಬಾಂಗ್ಲಾ ಎದುರಿನ ರಿಯಲ್​​ ಟೆಸ್ಟ್​​ನಲ್ಲಿ ರಿಷಭ್​ ಪಂತ್​ ಸಾಮರ್ಥ್ಯ ನಿರೂಪಿಸಬೇಕಿದೆ. ಪಂತ್​​ ಅಗ್ನಿ ಪರೀಕ್ಷೆ ಗೆದ್ದರೆ ಟೀಮ್​ ಇಂಡಿಯಾನೂ ಸೇಫ್​​.. ಪಂತ್​ ಸ್ಥಾನವೂ ಸೇಫ್​. ಪಂತ್ ಫೇಲ್​ ಆದ್ರೆ, ಸ್ಥಾನ ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗಲಿದೆ. ಜೊತೆಗೆ ಟೀಮ್​ ಇಂಡಿಯಾ ಕೂಡ ಇನ್ನೊರ್ವ ಸಮರ್ಥ ಕೀಪರ್​ ಹುಡುಕಾಟ ನಡೆಸಬೇಕಾಗಲಿದೆ.

ಇದನ್ನೂ ಓದಿ:ಕೊಹ್ಲಿ, ಗಿಲ್, ರೋಹಿತ್ ಠುಸ್​.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

4 ವಿಕೆಟ್ ಕಳ್ಕೊಂಡು ಆಘಾತದಲ್ಲಿ ಟೀಂ ಇಂಡಿಯಾ.. 629 ದಿನಗಳ ಬಳಿಕ ಪಂತ್ ಕಂಬ್ಯಾಕ್, ಆದರೆ..!

https://newsfirstlive.com/wp-content/uploads/2024/09/RISHAB-PANT-1.jpg

Load More