newsfirstkannada.com

×

ಕೊಹ್ಲಿ ಸ್ಲೆಡ್ಜಿಂಗ್ ಪ್ರಶ್ನೆಗೆ ಗಂಭೀರ್ ಕೌಂಟರ್.. ಗುರು-ಶಿಷ್ಯನ ಮಾತು ತುಂಬಾನೇ ಇಂಟ್ರೆಸ್ಟಿಂಗ್..! Video

Share :

Published September 19, 2024 at 12:46pm

    ವಿರಾಟ್​ ಬೆಸ್ಟ್ ಇನ್ನಿಂಗ್ಸ್​ ಬಗ್ಗೆ ಗಂಭೀರ್​ ಮಾತೇನು?

    ಕೊಹ್ಲಿ ಟೆಸ್ಟ್​ ಕ್ಯಾಪ್ಟನ್ಸಿ ಬಗ್ಗೆ ಗುಣಗಾನ ಮಾಡಿದ್ದೇಕೆ?

    ಹೆಡ್ ಕೋಚ್ ಹುದ್ದೆ.. ಮುಂದಿನ ಸವಾಲು ಬಗ್ಗೆ ಮಾತು

ವಿರಾಟ್ ಕೊಹ್ಲಿ ಆ್ಯಂಡ್​ ಗೌತಮ್ ಗಂಭೀರ್. ಒಟ್ಟಿಗೆ ಕುಳಿತು ಸಂದರ್ಶನ ಮಾಡ್ತಾರಾ ಅನ್ನೋ ಯೋಚನೆ ಯಾರೋಬ್ಬರ ಕನಸಲ್ಲೂ ಇರಲ್ಲ. ಯಾಕಂದ್ರೆ ಗಂಭೀರ್ ಹೆಡ್​ ಕೋಚ್ ಆಗುವ ಮುನ್ನ ಇವರಿಬ್ಬರ ನಡುವಿನ ಜಗಳ. ಆದ್ರೀಗ ಇವೆಲ್ಲವೂ ಸುಳ್ಳಾಗಿದೆ. ವಿರಾಟ್​ ಕೊಹ್ಲಿ ನಡೆಸಿರುವ ಸಂದರ್ಶನದಲ್ಲಿ ಗಂಭೀರ್, ಮನಬಿಚ್ಚಿ ಮಾತನಾಡಿದ್ದಾರೆ.

ವಿರಾಟ್​ ಮತ್ತು ಗೌತಮ್ ಗಂಭೀರ್. ಅಗ್ರೆಸ್ಸಿವ್ ಪ್ಲೇಯರ್ಸ್​. ಟೀಮ್ ಇಂಡಿಯಾ ಪರ ಜೊತೆಯಾಗಿ ಆಡಿದ್ದ ಈ ಜೋಡಿ, ಕಾಲ ಕಳೆದಂತೆ ಕಂಡಿದ್ದು ಮಾತ್ರ ದುಷ್ಮನ್​​ಗಳ ರೀತಿಯಲ್ಲಾಗಿತ್ತು. ಆದ್ರೀಗ ಇವ್ರೇ ಈ ಮಸಾಲ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಹಿಂದೆ ವಿರಾಟ್​ ಕೊಹ್ಲಿಯನ್ನ ಟೀಕಿಸಿಯೇ ಸುದ್ದಿಯಾಗ್ತಿದ್ದ ಗಂಭೀರ್, ಈಗ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ಗಿಲ್, ರೋಹಿತ್ ಠುಸ್​.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!

ಜಸ್ಟ್​ 3 ತಿಂಗಳ ಹಿಂದೆ ಕ್ರಿಕೆಟ್​​​​ ಲೋಕದ ಹಾಟ್ ಡಿಬೇಟ್ ಆಗಿದ್ದ ಇವರು, ಈ ರೀತಿ ಸಂದರ್ಶನ ಮಾಡ್ತಾರೆ ಅನ್ನೋ ಊಹೆಯೂ ಇರಲಿಲ್ಲ. ಆದ್ರೀಗ ವಿರಾಟ್​ ಕೊಹ್ಲಿಯ ಸಂದರ್ಶನದಲ್ಲಿ ಕುಳಿತ ಗಂಭೀರ್, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ ಆಟದ ವೈಖರಿ, ನಾಯಕತ್ವದ ಯಶಸ್ಸಿನ ಬಗ್ಗೆ ಹೆಡ್ ಕೋಚ್ ಗಂಭೀರ್​ ಕೊಂಡಾಡಿದ್ದಾರೆ.

ನಾವು ಬಹಳ ದೂರ ಸಾಗಿ ಬಂದಿದ್ದೇವೆ. ನಿನ್ನ ಡೆಬ್ಯು ನೋಡಿದ್ದೇನೆ. ನಿನ್ನ ಅದ್ಭುತ ಇನ್ನಿಂಗ್ಸ್​ಗಳನ್ನು ನೋಡಿದ್ದೇನೆ. ಸೌತ್ ಆಫ್ರಿಕಾದ ಚಾಂಪಿಯನ್ಸ್ ಟ್ರೋಫಿಯ ಕಷ್ಟದ ವಿಕೆಟ್​ನಲ್ಲಿ ವೆಸ್ಟ್​ ಇಂಡೀಸ್ ಎದುರಿನ ಇನ್ನಿಂಗ್ಸ್​ ನಿಜಕ್ಕೂ ಅದ್ಭುತ. ಭಾರತೀಯನೊಬ್ಬ ಆಡಿರುವ ಬೆಸ್ಟ್ ಒಡಿಐ ಇನ್ನಿಂಗ್ಸ್. ಈ ಹಿಂದೆಯೇ ನಾನು ಹೇಳಿದ್ದೇನೆ. ಆ ಇನ್ನಿಂಗ್ಸ್​ ದ್ವಿಶತಕಕ್ಕೂ ಕಡಿಮೆ ಅಲ್ಲ. ನಾನು ನೋಡಿದ ಬೆಸ್ಟ್ ಇನ್ನಿಂಗ್ಸ್, ಕ್ವಾಲಿಟಿ ಬೌಲಿಂಗ್ ಅಟ್ಯಾಕ್, ಕಂಡೀಷನ್ಸ್. ಚೇಸಿಂಗ್​​ 300 ಪ್ಲಸ್ ರನ್ ಪಾಕಿಸ್ತಾನ ವಿರುದ್ಧ. ನೀವು ಭಾರತೀಯ ಕ್ರಿಕೆಟ್ ಪರಂಪರೆಯನ್ನು ಮುಂದಿನ ಜನರೇಷನ್​​ಗೆ ತೆಗೆದುಕೊಂಡು ಹೋಗಿದ್ದೀರಿ-ಗೌತಮ್ ಗಂಭೀರ್​, ಹೆಡ್ ಕೋಚ್

ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೆಸ್ಟ್ ತಂಡವನ್ನು ಮುನ್ನಡೆಸಿದ ರೀತಿಗೂ ಗಂಭೀರ್ ಬಹುಪರಾಕ್ ಅಂದಿದ್ದಾರೆ. ವಿರಾಟ್​ ಮೈಂಡ್​ಸೆಟ್​​​, ಬೆಳೆಸಿದ ಕಲ್ಚರ್​​ ಬಗ್ಗೆ ಶಹಬ್ಬಾಶ್​ ಎಂದಿರುವ ಗಂಭೀರ್, ಅದನ್ನು ಮುಂದಕ್ಕೆ ಕೊಡೊಯ್ಯಬೇಕು ಎಂದಿದ್ದಾರೆ.

ನೀವು ನಿಜಕ್ಕೂ ಅದ್ಭುತ ಬೌಲಿಂಗ್ ಯುನಿಟ್ ಕಟ್ಟಿದ್ದೀರಿ. ಟೆಸ್ಟ್ ಮ್ಯಾಚ್ ಗೆಲ್ಲಬೇಕಾದ್ರೆ, 20 ವಿಕೆಟ್ ಪಡೆಯಬೇಕು. ಅಲ್ಲಿಯ ತನಕ ಸ್ಟ್ರಾಂಗ್ ಬೌಲಿಂಗ್ ಇರಲಿಲ್ಲ. ಅದೇ ನೀವು ದೇಶದ ಸಕ್ಸಸ್​ಫುಲ್ ಟೆಸ್ಟ್​ ಕ್ಯಾಪ್ಟನ್ ಆಗಲು ಕಾರಣ.​ ಈ ಕ್ರೆಡಿಟ್ ಎಲ್ಲವೂ ನಿಮಗೆ ಸೇರಬೇಕು. 7 ಬ್ಯಾಟರ್ಸ್ ರನ್​ ಗಳಿಸುವುದು ಸುಲಭ. ನೀವು ಆನ್​ಫೀಲ್ಡ್​ನಲ್ಲಿ ತಂದ ಮನೋಭಾವವೇ ವಿನ್ನಿಂಗ್ ಮೂಮೆಂಟ್​ಗೆ ಕಾರಣ. ಇಶಾಂತ್, ಶಮಿ, ಉಮೇಶ್​​ರಿಂದ​ ಓವರ್​​ಸೀಸ್​ನಲ್ಲಿ ಗೆಲ್ಲುವಂತಾಯ್ತು. ನೀವು ಅಡಿಲೇಡ್​ನಲ್ಲಿ ಆಡಿದ ಇನ್ನಿಂಗ್ಸ್​ ನೆನಪಿದೆ. 400 ಪ್ಲಸ್ ರನ್ ಚೇಸ್ ಮಾಡಿದ್ರೆ, ನಿಮ್ಮ ನಾಯಕತ್ವದಲ್ಲಿ ಆ ಪಂದ್ಯ ಗೆಲ್ತು. ನೀವು ತಂದ ಆ ಮೈಂಡ್​ಸೆಟ್, ಆ ಕಲ್ಚರ್ ಮುಂದೆ ಕೊಡೊಯ್ಯಬೇಕು. ಒಬ್ಬರ ಶಕ್ತಿ, ಸಾಮರ್ಥ್ಯ ಗುರುತಿಸಲು ಕ್ರಿಕೆಟ್​ನ ಬೆಸ್ಟ್​ ಫಾರ್ಮೆಟ್​ ಟೆಸ್ಟ್. ನೀವು ಸಕ್ಸಸ್​ಫುಲ್ ಕ್ರಿಕೆಟರ್ ಆಗಬೇಕಾದ್ರೆ, ನೀವು ಟೆಸ್ಟ್​ ಕ್ರಿಕೆಟ್ ಆಡಬೇಕು-ಗೌತಮ್ ಗಂಭೀರ್​, ಹೆಡ್ ಕೋಚ್

ಕ್ರಿಕೆಟ್​​ನ ಇಂಪಾರ್ಟೆನ್ಸ್​​ ಹಾಗೂ ಓರ್ವ ಆಟಗಾರನ ಶಕ್ತಿ ಸಾಮರ್ಥ್ಯಕ್ಕೆ ಗೊತ್ತಾಗುವುದೇ ಟೆಸ್ಟ್​ನಿಂದ ಎಂದಿರುವ ಗಂಭೀರ್​, ಹೆಡ್ ಕೋಚ್ ಆಗಿ ಮುಂದಿನ ಸವಾಲುಗಳೇನು ಅನ್ನೋದನ್ನ ರಿವೀಲ್ ಮಾಡಿದ್ದಾರೆ. ಕೋಚ್ ಹುದ್ದೆಯ ವಹಿಸಿಕೊಳ್ಳುವ ಉದ್ದೇಶ ಇತ್ತಾ ಅನ್ನೋದರ ಬಗ್ಗೆಯೂ ಮನಬಿಚ್ಚಿದ್ದಾರೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ನನಗೆ ಈ ಬಗ್ಗೆ ಯಾವುದೇ ಯೋಚನೆ ಇರಲಿಲ್ಲ. ಕೆಲ ತಿಂಗಳ ಹಿಂದೆಯೂ ಭಾರತ ತಂಡದ ಕೋಚ್ ಆಗುವ ಯೋಚನೆ ಇರಲಿಲ್ಲ. ಇದು ನನಗೆ ಸಿಕ್ಕಿರುವ ಗೌರವವಾಗಿದೆ. ಮತ್ತೊಮ್ಮೆ ನಿಮ್ಮ ದೇಶವನ್ನ ಪ್ರತಿನಿಧಿಸುವುದು. ಮತ್ತೊಮ್ಮೆ ನೀವು ಕಳೆದಿರುವ ಡ್ರೆಸ್ಸಿಂಗ್ ರೂಮ್​​ಗೆ ಹಿಂತಿರುವುದು ನಿಜಕ್ಕೂ ಸ್ಪೆಷಲ್​. ನಿಮ್ಮೊಂದಿಗೆ ಒಳ್ಳೆಯ ನೆನಪುಗಳಿವೆ. ಈಗ ಮುಂದೆ ನೋಡಿದ್ರೆ, 2025ರ ಚಾಂಪಿಯನ್ಸ್​ ಟ್ರೋಫಿ, 2026ರಲ್ಲಿ ಟಿ20 ವಿಶ್ವಕಪ್, 2027ರ ಏಕದಿನ ವಿಶ್ವಕಪ್​ ಚಾಲೆಂಜ್ ಇದೆ. ಗೌತಮ್ ಗಂಭೀರ್​, ಹೆಡ್ ಕೋಚ್

​ಇದೇ ಸಂದರ್ಶನದಲ್ಲಿ ಆನ್​ಫೀಲ್ಡ್​ನ ಸ್ಲೆಡ್ಜಿಂಗ್ ವಿಚಾರವಾಗಿ ಮಾತನಾಡಿದ ಕೊಹ್ಲಿಗೆ, ಗಂಭೀರ್ ಸಖತ್ ಆಗಿಯೇ ಕಾಲೆಳೆದಿದ್ದಾರೆ.
ನೀವು ಬ್ಯಾಟಿಂಗ್​​ ಮಾಡುವಾಗ, ಎದುರಾಳಿಗಳೊಂದಿಗೆ ಸಂಘರ್ಷ ಎದುರಾದರೆ, ಅದು ನಿಮ್ಮನ್ನು ಕಂಫರ್ಟ್‌ ಝೋನ್‌ನಿಂದ ಹೊರಹಾಕುತ್ತದೆಯೇ? ಅಥವಾ ಪ್ರೇರೇಪಿಸುತ್ತದೆಯೇ? ನೀವು ನನಗಿಂತ ಹೆಚ್ಚು ಜಗಳವಾಡುತ್ತೀರಾ? ಇದಕ್ಕೆ ಉತ್ತರ ನಿಮಗೇ ಗೊತ್ತಿರಬೇಕು. ಗಂಭೀರ್, ಕೊಹ್ಲಿ ಅಂದ್ರೆ, ಜಸ್ಟ್ ವಾಕ್ಸಮರ.. ಕಿರಿಕ್ ಅಂತಿದ್ದ ಮಂದಿಗೆ ಈ ಸಂದರ್ಶನ ಇಬ್ಬರ ನಡುವಿನ ಪರಸ್ಪರ ಗೌರವ ಎಂಥದ್ದು ಅನ್ನೋದನ್ನು ತಿಳಿಸಿದೆ.

ಇದನ್ನೂ ಓದಿ:ಭಾರತ-ಬಾಂಗ್ಲಾ ಮೊದಲ ಟೆಸ್ಟ್​; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಸ್ಲೆಡ್ಜಿಂಗ್ ಪ್ರಶ್ನೆಗೆ ಗಂಭೀರ್ ಕೌಂಟರ್.. ಗುರು-ಶಿಷ್ಯನ ಮಾತು ತುಂಬಾನೇ ಇಂಟ್ರೆಸ್ಟಿಂಗ್..! Video

https://newsfirstlive.com/wp-content/uploads/2024/09/Kohli_Gautam.jpg

Load More