newsfirstkannada.com

×

ಭಾರತ-ಬಾಂಗ್ಲಾ ಮೊದಲ ಟೆಸ್ಟ್​; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!

Share :

Published September 19, 2024 at 8:12am

Update September 19, 2024 at 8:15am

    ನ್ಯೂ ಸೀಸನ್​.. ಹೊಸ ಭರವಸೆಯಲ್ಲಿ ಇಂಡಿಯಾ..!

    ರೋಹಿತ್​-ಗಂಭೀರ್​​ಗೆ ಫಸ್ಟ್​ ರೆಡ್​ ಬಾಲ್ ಟಾಸ್ಕ್​..!

    ಬಲಿಷ್ಠ ಟಾಪ್ ಆರ್ಡರ್​​ಗೆ ಸೆಡ್ಡು ಹೊಡೆಯುತ್ತಾ ಬಾಂಗ್ಲಾ?

ಇಂದಿನಿಂದ ಟೀಮ್ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳಿಗೆ ಮನರಂಜನೆ ಶುರುವಾಗಲಿದೆ. 45 ದಿನಗಳ ಬಳಿಕ ಟೀಮ್ ಇಂಡಿಯಾ ಆಟಗಾರರು ಅಖಾಡಕ್ಕೆ ಇಳಿಯುತ್ತಿದ್ದು, ಬಾಂಗ್ಲಾ ಬೇಟೆಗೆ ಸಜ್ಜಾಗಿದ್ದಾರೆ. ಭಾರತದ ದಂಡಯಾತ್ರೆಗೆ ಆಗಮಿಸಿರುವ ಬಾಂಗ್ಲಾ, ಇತಿಹಾಸ ಸೃಷ್ಟಿಸುವ ಕಾನ್ಫಿಡೆನ್ಸ್​ನಲ್ಲಿದೆ.

ಭಾರತ, ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಚೆನ್ನೈನ ಚೆಪಾಕ್​​ ವೇದಿಕೆ ಸಜ್ಜಾಗಿದ್ದು, ಉಭಯ ತಂಡಗಳು ಶುಭಾರಂಭ ಮಾಡುವ ತವಕದಲ್ಲಿವೆ. ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​ ದೃಷ್ಟಿಯಿಂದ ಟೀಮ್ ಇಂಡಿಯಾಗೆ ಮಹತ್ವದಾಗಿರುವ ಈ ಪಂದ್ಯದಲ್ಲಿ, ಹಿಟ್​ಮ್ಯಾನ್ ಪಡೆ ಶತಾಯ ಗತಾಯ ಗೆಲ್ಲೋ ತವಕದಲ್ಲಿದೆ.

ಇದನ್ನೂ ಓದಿ:ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ಕನ್ನಡಿಗ KL ರಾಹುಲ್; ಟೀಂ ಇಂಡಿಯಾ ಗೆಲುವಿನ ಸೂತ್ರ ಹೇಗಿದೆ..?

ಅತ್ತ ಪಾಕಿಸ್ತಾನವನ್ನ ಅವರದ್ದೇ​ ತವರಿನಲ್ಲಿ ಸೋಲಿಸಿ ಟೆಸ್ಟ್ ಸರಣಿ​ ಗೆದ್ದ ರಣ ಉತ್ಸಾಹದಲ್ಲಿರುವ ಬಾಂಗ್ಲಾ ಟೈಗರ್ಸ್, ಭಾರತದಲ್ಲೂ ಗೆಲುವಿನ ಕನವರಿಕೆಯಲ್ಲಿದೆ. ಹೀಗಾಗಿ ಈ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಫೇವರಿಟ್ಸ್​ ಆಗಿ ಕಣಕ್ಕಿಳಿದರೂ, ಬಾಂಗ್ಲಾ ಟೈಗರ್ಸ್ ಇಂಡಿಯನ್ ಟೈಗರ್ಸ್​ ಟಕ್ಕರ್​ ನೀಡ್ತಾರಾ ಅನ್ನೋ ಕುತೂಹಲವಿದೆ.

ಹೊಸ ಭರವಸೆಯಲ್ಲಿ ಟೀಮ್ ಇಂಡಿಯಾ
45 ದಿನಗಳ ಕಾಲ ರೆಸ್ಟ್​ನಲ್ಲಿದ್ದ ಟೀಮ್ ಇಂಡಿಯಾಗೆ ನ್ಯೂ ಸೀಸನ್ ಶುರುವಾಗಿದೆ. ಹೊಸ ಭರವಸೆಯಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾಗೆ ಮೊದಲ ಟೆಸ್ಟ್​ ಸರಣಿಯೇ ಅಗ್ನಿ ಪರೀಕ್ಷೆಯಾಗಿದೆ. ಈ ಹಿಂದಿನ ಏಕದಿನ ಸರಣಿ ಸೋತಿರೋ, ರೋಹಿತ್ ಆ್ಯಂಡ್ ಗಂಭೀರ್​​​​ ಜೋಡಿಗೆ ಮೊದಲ ರೆಡ್​ ಬಾಲ್​ ಸಿರೀಸ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಬಲಿಷ್ಠ ಭಾರತದ ಮುಂದೆ ಗೆಲುವು ಸುಲಭವೇ ಆಗಿದ್ರೂ, ಕೆಲ ವಿಕ್ನೇಸ್ ಆ್ಯಂಡ್ಸ್​ ಎದುರಾಳಿಗಳ ಸ್ಟ್ರೆಂಥ್​ ಮಾರಕವಾಗಿದೆ.

ಇದನ್ನೂ ಓದಿ:‘ನಿನ್ನ ಜೊತೆ 5 ನಿಮಿಷ ಕೆಲಸ ಇದೆ’ ದಯಾಳ್ 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ

ಈ ಟೆಸ್ಟ್​ ಸರಣಿಯ ಸೆಂಟರ್ ಆಫ್ ಅಟ್ರಾಕ್ಷನ್ ಯಶಸ್ವಿ ಜೈಸ್ವಾಲ್. ಅಟ್ಯಾಕಿಂಗ್ ಬ್ಯಾಟಿಂಗ್​ನಿಂದ ಸೆನ್ಸೇಷನ್ ಸೃಷ್ಟಿಸಿರುವ ಈ ಮುಂಬೈಕರ್, ಬಾಂಗ್ಲಾ ಎದುರು ಬೆಂಕಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯೋ ನಿರೀಕ್ಷೆ ಇದೆ. ಇವರ ಜೊತೆಗೆ ಹಿಟ್​ಮ್ಯಾನ್ ರೋಹಿತ್, ಶುಭ್​ಮನ್ ಬಾಂಗ್ಲಾ ಮೇಲೆ ಸವಾರಿ ಮಾಡಲು ರೆಡಿಯಾಗಿದ್ದಾರೆ.

ವಿರಾಟ್​​​​​ ವರ್ಸಸ್​ ಬಾಂಗ್ಲಾ ಸ್ಪಿನ್ನರ್ಸ್ ಬ್ಯಾಟಲ್
ಚೆಪಾಕ್​ ಟೆಸ್ಟ್​ ವಿರಾಟ್​ ಕೊಹ್ಲಿ ವರ್ಸಸ್​ ಬಾಂಗ್ಲಾ ಸ್ಪಿನ್ನರ್​ಗಳ ಬ್ಯಾಟಲ್ ಅಂತಾನೇ ಬಿಂಬಿತವಾಗಿದೆ. 9 ತಿಂಗಳ ಬಳಿಕ ಟೆಸ್ಟ್​ ಕ್ರಿಕೆಟ್​​ ಆಡ್ತಿರುವ ವಿರಾಟ್​ ಕೊಹ್ಲಿಗೆ, ಬಾಂಗ್ಲಾ ಸ್ಪಿನ್ನರ್​ಗಳಾದ ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಬಿಗ್ ಥ್ರೆಟ್ ಆಗಬಲ್ಲರು. ರನ್​ ಗಳಿಕೆಯ ಹಸಿವಿನಲ್ಲಿರುವ ವಿರಾಟ್, ಇವರಿಬ್ಬರ ಚಾಲೆಂಜ್ ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದೇ ಪ್ರಶ್ನೆ. ಮಿಡಲ್ ಆರ್ಡರ್ ಜವಾಬ್ದಾರಿ ವಹಿಸಿಕೊಳ್ಳಲಿರುವ ಕೆ.ಎಲ್.ರಾಹುಲ್​​ಗೆ ಈ ಟೆಸ್ಟ್​ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬಿಸಿಸಿಐನ ನಂಬಿಕೆ ಉಳಿಸಿಕೊಳ್ಳಬೇಕಾದ ಸವಾಲು ರಾಹುಲ್​ ಮುಂದಿದೆ.

ರಿಷಬ್ ಮತ್ತು ಬೂಮ್ರಾ ಬ್ಯಾಕ್​..​​​​​​​​​​​​​​​​​!
2 ವರ್ಷಗಳ ಬಳಿಕ ಪಂತ್, ಟೆಸ್ಟ್ ಅಖಾಡಕ್ಕೆ ಇಳಿಯುತ್ತಿದ್ರೆ, ಟಿ20 ವಿಶ್ವಕಪ್​​ ಬಳಿಕ ಬೂಮ್ರಾ ಇದೇ ಮೊದಲ ಬಾರಿಗೆ ಆನ್​ಫೀಲ್ಡ್​ ಬ್ಯಾಟಲ್​​ಗೆ ಇಳಿಯುತ್ತಿದ್ದಾರೆ. ಅದು ಕೂಡ ಸ್ಪಿನ್ ಅಡ್ಡದಲ್ಲಿ. ಹೀಗಾಗಿ ಬೂಮ್ರಾ, ಯಾವ ರೀತಿಯ ದಾಳಿ ಸಂಘಟಿಸ್ತಾರೆ ಅನ್ನೋದೇ ಕ್ಯುರಿಯಾಸಿಟಿ. ಚೆನ್ನೈ ಟೆಸ್ಟ್​ನ ಸೆಂಟರ್ ಆಫ್ ಅಟ್ರಾಕ್ಷನ್ ಆರ್​.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಕುಲ್​ದೀಪ್​ ಯಾದವ್​​. ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಈ ಮೂವರು ಬಾಂಗ್ಲಾ ಪಾಲಿಗೆ ಕಂಟಕವಾಗೋದು ಗ್ಯಾರಂಟಿ. ಈ ಮೂವರಲ್ಲಿ ಯಾರ್​ ಮ್ಯಾಚ್ ವಿನ್ನರ್​ಗಳಾಗ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್​ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!

ಬಾಂಗ್ಲಾ ಟೈಗರ್ಸ್ ಕನಸು ನಿಜವಾಗುತ್ತಾ?
ಭಾರತದಲ್ಲಿ ಬಾಂಗ್ಲಾಗೆ ಟೆಸ್ಟ್ ಗೆಲ್ಲೋದು ನಿಜಕ್ಕೂ ಸುಲಭದ ಮಾತಲ್ಲ. ಬಾಂಗ್ಲಾ ತಂಡದಲ್ಲಿರುವ ಬಹುತೇಕ ಆಟಗಾರರು ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಭಾರತದಲ್ಲಿ ಆಡಿದ ಅನುಭವವೂ ಹೊಂದಿದ್ದಾರೆ. ಹೀಗಾಗಿ ಪಾಕ್​ನಂತೆ ಭಾರತದಲ್ಲೂ ಬಾಂಗ್ಲಾ ಮೊದಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ರಚಿಸುವ ಉತ್ಸಾಹದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಭಾರತ-ಬಾಂಗ್ಲಾ ಮೊದಲ ಟೆಸ್ಟ್​; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!

https://newsfirstlive.com/wp-content/uploads/2024/09/IND-vs-BAN-1.jpg

Load More