newsfirstkannada.com

×

‘ನಿನ್ನ ಜೊತೆ 5 ನಿಮಿಷ ಕೆಲಸ ಇದೆ’ ದಯಾಳ್ 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ

Share :

Published September 18, 2024 at 2:52pm

    ಯಶ್ ದಯಾಳ್ ಲೈಫ್ ಬದಲಾಯಿಸಿದ್ದು ಕಿಂಗ್ ಕೊಹ್ಲಿ!

    ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ

    ಎಡಗೈ ವೇಗಿ ಯಶ್​ ದಯಾಳ್ ಲೈಫ್ ಬದಲಾಗಿದ್ದು ಹೇಗೆ?

ಯಶ್ ದಯಾಳ್​.. ಟೀಕೆ, ಟಿಪ್ಪಣೆ.. ಅಪಮಾನದಿಂದ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಕಥೆ ನಿಜಕ್ಕೂ ರೋಚಕ.. ಯಶ್​ ದಯಾಳ್​, 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ ಇದೆ.

ಯಶ್​ ದಯಾಳ್​​. ಟೀಮ್ ಇಂಡಿಯಾದ ನ್ಯೂ ಪೇಸ್ ಸೆನ್ಸೇಷನ್. ಸದ್ಯ ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ, ಬಾಂಗ್ಲಾ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಡೆಬ್ಯು ಮಾಡುವ ಉತ್ಸಾಹದಲ್ಲಿದ್ದಾರೆ. ಈ ಎಡಗೈ ವೇಗಿ ಯಶ್​ ದಯಾಳ್,​ 2.0 ಆಗಿ ಬದಲಾದ ಹಿಂದಿನ ಕಾರಣ ವಿರಾಟ್​ ಕೊಹ್ಲಿ.

ಇದನ್ನೂ ಓದಿ:‘ನನಗಿಂತ ನಿಮಗೇ ಹೆಚ್ಚು ವಿವಾದಗಳಿವೆ..’ ಕೊಹ್ಲಿ-ಗಂಭೀರ್ ಮತ್ತೆ​​​ ಮುಖಾಮುಖಿ -VIDEO

ಗುಜರಾತ್ ಪರ ವೈಫಲ್ಯ ಅನುಭವಿಸಿದ ಹೊರತಾಗಿಯೂ ಆರ್​​ಸಿಬಿ, ಹರಾಜಿನಲ್ಲಿ ಖರೀದಿ ಮಾಡಿತ್ತು. ಇದಕ್ಕೆ ಟೀಕೆಗಳೂ ಅನುಭವಿಸಬೇಕಾಯ್ತು. ಸೀಸನ್​​-17ರಲ್ಲಿ ಯಶ್​ ದಯಾಳ್​, ಯಶಸ್ಸಿಗೆ ಕಾರಣವಾಗಿದ್ದೇ ವಿರಾಟ್​ ಕೊಹ್ಲಿ ತುಂಬಿದ್ದ ಆತ್ಮಸ್ಥೈರ್ಯದ ಮಾತುಗಳಾಗಿತ್ತು. ಆರ್​ಸಿಬಿ ಕ್ಯಾಂಪ್ ಸೇರಿದ್ದ ಯಶ್ ದಯಾಳ್​ಗೆ ವಿರಾಟ್​, ನಿನ್ನ ಜೊತೆ ಕೆಲ್ಸ ಇದೆ. 5 ನಿಮಿಷ ರೂಮ್​ಗೆ ಆಹ್ವಾನಿಸಿದ್ರು.

ಸೋಫಾ ಮೇಲೆ ಕುಳಿತ ವಿರಾಟ್​, ರಿಂಕು ಜೊತೆ ನಡೆದ ಘಟನೆ ಆಟದ ಭಾಗವಷ್ಟೇ. ಆ ಬಗ್ಗೆ ನೀನು ಚಿಂತಿಸಬೇಡ. ನಾವು ಇಡೀ ಸೀಸನ್​​​ ನಿನ್ನ ಬೆಂಬಲಿಸುತ್ತೇವೆ. ಇದೇ ಕಾರಣಕ್ಕೆ ನಾವು ನಿನ್ನನ್ನು ಖರೀದಿ ಮಾಡಿದ್ದೇವೆ. ನೀನು ಉತ್ತಮ ಪ್ರದರ್ಶನ ನೀಡು, ನೀಡದಿರು. ಗ್ರೌಂಡ್​​ಗೆ ಹೋದಾಗ ಯಾವಾಗಲೂ ಸಂತೋಷದಿಂದ ಹಾಗೂ ಉತ್ಸಾಹದಿಂದ ಇರುವಂತೆ ಸಲಹೆ ನೀಡಿದ್ರು. ಈ ಬಳಿಕ ಯಶ್ ದಯಾಳ್, 2.0 ಆಗಿ ಸಕ್ಸಸ್​ ಕಾಣಲು ಸಹಕಾರಿಯಾಯ್ತು. ಟೀಮ್ ಇಂಡಿಯಾಗೆ ಬರಲು ಕಾರಣವಾಯ್ತು.

ಇದನ್ನೂ ಓದಿ:ಸ್ಟಾರ್​ಗಳಿಗೆ ಟಿ ದಿಲೀಪ್​ ಸರ್ ಡ್ರಿಲ್​; ಕಠಿಣ ಅಭ್ಯಾಸದಲ್ಲಿ ಕೊಹ್ಲಿ ತಂಡಕ್ಕೆ ಗೆಲುವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನಿನ್ನ ಜೊತೆ 5 ನಿಮಿಷ ಕೆಲಸ ಇದೆ’ ದಯಾಳ್ 2.0 ರೂಪುಗೊಂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆ

https://newsfirstlive.com/wp-content/uploads/2024/09/DAYAL.jpg

Load More