newsfirstkannada.com

×

‘ನನಗಿಂತ ನಿಮಗೇ ಹೆಚ್ಚು ವಿವಾದಗಳಿವೆ..’ ಕೊಹ್ಲಿ-ಗಂಭೀರ್ ಮತ್ತೆ​​​ ಮುಖಾಮುಖಿ -VIDEO

Share :

Published September 18, 2024 at 12:17pm

Update September 18, 2024 at 12:19pm

    ರನ್​ ಮಷಿನ್ ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟ ಗಂಭೀರ್

    ಗಂಭೀರ್, ಕೊಹ್ಲಿ ನಡುವಿನ ಸಂದರ್ಶನ ಹಂಚಿಕೊಂಡ ಬಿಸಿಸಿಐ

    ಆತ್ಮೀಯ ಮಾತುಕತೆ, ಜೋರಾದ ನಗು.. ಹೇಗಿದೆ ಬಾಂಡಿಂಗ್?

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ ಇಬ್ಬರೂ ಟೀಂ ಇಂಡಿಯಾದ ದಿಗ್ಗಜರು. ಐಪಿಎಲ್​​ನಲ್ಲಿ ಹತ್ತಿದ ಹಗೆಯಿಂದಾಗಿ ಇಬ್ಬರು ಒಂದಷ್ಟು ದಿನಗಳ ಕಾಲ ಶುತ್ರುಗಳಂತೆ ಅಭಿಮಾನಿಗಳಿಗೆ ಕಂಡವರು. ಇಂದು ಗುರು ಶಿಷ್ಯರಾಗಿ ಟೀಂ ಇಂಡಿಯಾದಲ್ಲಿದ್ದಾರೆ. ಅಂದು ಶತ್ರುಗಳಂತೆ ವರ್ತಿಸುತ್ತಿದ್ದ ಕೊಹ್ಲಿ, ಗಂಭೀರ್ ಸಂದರ್ಶನದಲ್ಲಿ ಮುಖಾಮುಖಿ ಆಗಿದ್ದಾರೆ.

ಕೊಹ್ಲಿ ಹಾಗೂ ಗಂಭೀರ್ ನಡುವಿನ ಮಾತುಕತೆಯ ವಿಡಿಯೋವನ್ನು ಬಿಸಿಸಿಐ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 2011ರ ವಿಶ್ವಕಪ್​ ಫೈನಲ್​ನಲ್ಲಿ ಗಂಭೀರ್ ಹಾಗೂ ಕೊಹ್ಲಿಯ ಜೊತೆಯಾಟದೊಂದ ವಿಡಿಯೋದೊಂದಿಗೆ ಇಬ್ಬರ ನಡುವಿನ ಮಾತುಕತೆ ಆರಂಭವಾಗುತ್ತದೆ. 28 ವರ್ಷಗಳ ಬಳಿಕ ಭಾರತ ತಂಡವು ಏಕದಿನ ವಿಶ್ವಕಪ್ ಗೆದ್ದ ಕ್ಷಣವನ್ನು ತೋರಿಸಿ, ಇಬ್ಬರು ಮಾತುಕತೆ ಶುರುಮಾಡ್ತಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್​ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!

ಗೌತಮ್ ಗಂಭೀರ್ ಮಾತನಾಡಿ.. ಆಸ್ಟ್ರೇಲಿಯಾದಲ್ಲಿ ನೀವು, ಒಂದು ಬಂಪರ್ ಸೀಸನ್ ಹೊಂದಿದ್ದೀರಿ. ಅಲ್ಲಿ ನೀವು ಸಾಕಷ್ಟು ರನ್ ಗಳಿಸಿದ್ದೀರಿ. ಅದು ನಿಮ್ಮನ್ನು ಬೇರೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ನೇಪಿಯರ್‌ನಲ್ಲಿ ಆಡಿದಾಗ ನನಗೂ ಅದೇ ಆಗಿತ್ತು. ಹಿಂತಿರುಗಿ ನೋಡಿದರೆ, ನಾನು ಮತ್ತೆ ಎರಡೂವರೆ ದಿನಗಳವರೆಗೆ ಬ್ಯಾಟಿಂಗ್ ಮಾಡಬಹುದೇ? ಎಂಬ ಪ್ರಶ್ನೆ ಕಾಡಿತ್ತು. ಅದೊಂದು ಅದ್ಭುತ ಅನುಭವ. ನೀವು ಕೂಡ ಇಂಥ ಫೀಲಿಂಗ್ಸ್ ಅನೇಕ ಬಾರಿ ಅನುಭವಿಸಿದ್ದೀರಿ ಎಂದು ಗಂಭೀರ್ ಹೇಳ್ತಾರೆ.

ನಂತರ ಕೊಹ್ಲಿ ಮಾತನಾಡಿ.. ಆದರೆ, ನೀವು ಬ್ಯಾಟಿಂಗ್ ಮಾಡುವಾಗ ಮತ್ತು ಎದುರಾಳಿಗಳೊಂದಿಗೆ ಸ್ವಲ್ಪ ಜಗಳವಾಡಿದಾಗ ನೀವು ಕ್ರೀಸ್​​ನಿಂದ ಹೊರಗೆ ಹೋಗಬಹುದು ಎಂದು ಎಂದಾದರೂ ಭಾವಿಸಿದ್ದೀರಾ ಮತ್ತು ನೀವು ಔಟ್ ಆಗಲು ಪ್ರಾರಂಭಿಸಿದ್ದೀರಾ? ಒಂದು ಪ್ರೇರಿತ ಜಾಗ ಎನ್ನುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಗಂಭೀರ್.. ನನಗಿಂತ ಹೆಚ್ಚು ವಿವಾದಗಳನ್ನು ನೀವು ಎದುರಿಸಿದ್ದೀರಿ. ಇದನ್ನು ಕೇಳಿದ ಕೊಹ್ಲಿ ನಗಲು ಪ್ರಾರಂಭಿಸಿದರು.

ಇದನ್ನೂ ಓದಿ:ಗಿಲ್ ಅಲ್ಲ.. ಈತ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಒಂದೇ ವರ್ಷಕ್ಕೆ ಸೂಪರ್ ಸ್ಟಾರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನನಗಿಂತ ನಿಮಗೇ ಹೆಚ್ಚು ವಿವಾದಗಳಿವೆ..’ ಕೊಹ್ಲಿ-ಗಂಭೀರ್ ಮತ್ತೆ​​​ ಮುಖಾಮುಖಿ -VIDEO

https://newsfirstlive.com/wp-content/uploads/2023/10/Kohli_Gambhir.jpg

Load More