/newsfirstlive-kannada/media/post_attachments/wp-content/uploads/2024/09/KL-Rahul_Fifty.jpg)
ಬಲಿಷ್ಠ ಪಾಕಿಸ್ತಾನ ಮಣಿಸಿದ ಬಾಂಗ್ಲಾ ತಂಡ ಟೀಮ್ ಇಂಡಿಯಾ ಬೇಟೆಗೆ ಹಪಾಹಪಿಸ್ತಿದೆ. ಆದ್ರೆ ಇದಕ್ಕೆ ಚಾನ್ಸ್​ ಕೊಡದಿರಲು ರೋಹಿತ್​​​ ಶರ್ಮಾ ಅಂಡ್ ಗ್ಯಾಂಗ್ ನಿರ್ಧರಿಸಿದೆ. ಇದಕ್ಕಾಗಿ ಚೆನ್ನೈ ಕ್ಯಾಂಪ್​​ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದೆ. ಹೆಡ್​ಕೋಚ್​​ ಗೌತಮ್ ಗಂಭೀರ್​​ ಎಲ್ಲ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಕ್ಯಾಂಪ್​ ರಂಗೇರಿದೆ.
ಗುರುವಾರದಿಂದ ಭಾರತ-ಬಾಂಗ್ಲಾದೇಶ ನಡ್ವೆ ಟೆಸ್ಟ್​ ವಾರ್​ ಆರಂಭಗೊಳ್ಳಲಿದೆ. ಈ ಸರಣಿಯನ್ನ ಮೆನ್​​ ಇನ್​ ಬ್ಲೂ ಪಡೆ ಸವಾಲಾಗಿ ಸ್ವೀಕರಿಸಿದ್ದು, ಚೆನ್ನೈನ ಚೆಪಾಕ್​​​ ಮೈದಾನದಲ್ಲಿ 4 ದಿನಗಳ ಕ್ಯಾಂಪ್​​ ಆಯೋಜಿಸಿದೆ. ಇಡೀ ತಂಡ ಹಠಕ್ಕೆ ಬಿದ್ದು, ಅಭ್ಯಾಸ ನಡೆಸಿದ್ದು ಗೆಲುವಿಗೆ ಪಣತೊಟ್ಟು ನಿಂತಿದೆ. ಅದಕ್ಕೆ ಆಟಗಾರರ ಈ ಹೈ ಜೋಶ್​​ ಅಭ್ಯಾಸವೇ ಸಾಕ್ಷಿ.
ಇದನ್ನೂ ಓದಿ:6.5 ಅಡಿ ಎತ್ತರ..! ಟೀಂ ಇಂಡಿಯಾಗೆ ನೀಳಕಾಯದ ಬೌಲರ್​ ಎಂಟ್ರಿ.. ಬಾಂಗ್ಲಾಗೆ ಪುಕಪುಕ..!
ರೋಹಿತ್​ ಡಿಫೆನ್ಸಿವ್​​​..! ಜೈಸ್ವಾಲ್ ಅಟ್ಯಾಕಿಂಗ್​​​ ಆಟ
ಆರಂಭಿಕರಾಗಿ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್​ ಬಾಂಗ್ಲಾ ಮೇಲೆ ಸವಾರಿ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದಾರೆ. ರೋಹಿತ್​ ರಕ್ಷಣಾತ್ಮಕ ಆಟವಾಡಿದ್ರೆ ಹಾಗೂ ಜೈಸ್ವಾಲ್​​​ ಅಟ್ಯಾಕಿಂಗ್​​ ಮೈಂಡ್​ಸೆಟ್​ನಲ್ಲಿ ಬ್ಯಾಟ್ ಬೀಸಿದ್ರು.
ಕೊಹ್ಲಿ ವೀರಾವೇಶ..! ಡೋರ್​​​​ ಪೀಸ್ ಪೀಸ್​​​..!
8 ತಿಂಗಳ ಬಳಿಕ ಟೆಸ್ಟ್​ ಕ್ರಿಕೆಟ್ ಆಡಲು ಸಜ್ಜಾಗಿರೋ ಕಿಂಗ್ ಕೊಹ್ಲಿ ಅಭ್ಯಾಸದ ಕಣದಲ್ಲಿ ವೀರಾವೇಶ ತೋರಿದ್ದಾರೆ. ಸ್ಪಿನ್ ಹಾಗೂ ಫಾಸ್ಟ್ ಬೌಲರ್ಸ್​ ವಿರುದ್ಧ ಘರ್ಜಿಸಿದ್ದು, ಅವರು ಬಾರಿಸಿದ ಸಿಕ್ಸ್​ವೊಂದು ಸ್ಟೇಡಿಯಂನ ಡೋರ್​ಗೆ ಬಡಿದಿದ್ದು ಅದು ಪೀಸ್ ಪೀಸ್ ಆಗಿದೆ.
ಹೈ-ಎನರ್ಜಿಯಲ್ಲಿ ಗಿಲ್​ ಬ್ಯಾಟಿಂಗ್​
ದುಲೀಪ್ ಟ್ರೋಫಿಯಲ್ಲಿ ವೈಫಲ್ಯ ಕಂಡ ಶುಭ್​​ಮನ್​​ ಗಿಲ್​​​ ಬಾಂಗ್ಲಾ ಸರಣಿಯಲ್ಲಿ ಲಯಕ್ಕೆ ಮರಳುವ ಇರಾದೆಯಲ್ಲಿದ್ದಾರೆ. ಅದಕ್ಕಾಗಿ ನೆಟ್ಸ್​​ನಲ್ಲಿ ಹೈ ಎನರ್ಜಿಯಲ್ಲಿ ಬ್ಯಾಟ್​ ಬೀಸಿದ್ದಾರೆ. ಕನ್ನಡಿಗ ಕೆಎಲ್​ ರಾಹುಲ್​​​ ಡಿಫೆನ್ಸಿವ್​ ಆಟಕ್ಕೆ ಒತ್ತು ನೀಡಿದ್ದಾರೆ. ಸ್ಪಿನ್ ಹಾಗೂ ಎದೆ ಎತ್ತರಕ್ಕೆ ನುಗ್ಗಿ ಬರುತ್ತಿದ್ದ ಬೌನ್ಸಿ ಎಸೆತಗಳನ್ನ ರಕ್ಷಣಾತ್ಮಕವಾಗಿ ಆಡಿದ್ದಾರೆ. ಆ ಮೂಲಕ ಬಾಂಗ್ಲಾಗೆ ನಾನು ಎಂತಹ ಎಸೆತಗಳನ್ನೂ ಎದುರಿಸಲು ಸಿದ್ಧ ಅನ್ನೋ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು​.. 8 ವೇಗಿಗಳು ಅಸಮಾಧಾನ..!
ಸ್ಪಿನ್ನರ್​​ಗಳ ಮೇಲೆ ಡೈನಾಮೆಟ್​​​​ ಪಂತ್ ಸವಾರಿ
ಎಂದಿನಂತೆ ಡೈನಾಮೆಟ್​ ರಿಷಬ್​ ಪಂತ್​ ಬಿರುಸಿನ ಆಟವಾಡಿ ಗಮನ ಸೆಳೆದಿದ್ರು. ಎಸ್ಪೆಷಲಿ ಸ್ಪಿನ್ನರ್​​​​​ಗಳನ್ನ ಟಾರ್ಗೆಟ್ ಮಾಡಿದ ಲೆಫ್ಟಿ ಬ್ಯಾಟರ್​​​​ ಸ್ಕೂಪ್ ಶಾಟ್​​, ರಿವರ್ಸ್​ ಸ್ವೀಪ್​​​​​ ಶಾಟ್ಸ್​​​​​ ಮೂಲಕ ಅಗ್ರೆಸ್ಸಿವ್​ ಆಟಕ್ಕೆ ಒತ್ತು ನೀಡಿದ್ರು. ಬರೀ ಟಾಪ್​ ಆರ್ಡರ್​ ಹಾಗೂ ಮಿಡಲ್ ಆರ್ಡರ್​​​​​ ಅಷ್ಟೇ ಅಲ್ಲ. ಕೆಳ ಕ್ರಮಾಂಕದ ಬ್ಯಾಟ್ಸ್​​​​ಮನ್​ಗಳು ನೆಟ್ಸ್​​ನಲ್ಲಿ ಹೆಚ್ಚುಕಾಲ ಅಭ್ಯಾಸ ನಡೆಸಿದ್ದು ಹೈಲೆಟ್​ ಆಗಿತ್ತು. ವಿಶೇಷವಾಗಿತ್ತು. ವೇಗಿ ಆಕಾಶ್​ ದೀಪ್​ ಸಿಂಗ್​​​ಗೆ ಅಸಿಸ್ಟಂಟ್ ಕೋಚ್​​ ಅಭಿಷೇಕ್ ನಾಯರ್​ ಬ್ಯಾಟಿಂಗ್ ಟಿಪ್ಸ್​​​ ನೀಡಿದ್ರು.
ನೆಟ್ಸ್​​​​​ನಲ್ಲಿ ಜೈಸ್ವಾಲ್​ ಸ್ಪಿನ್ ಬೌಲಿಂಗ್ ಅಭ್ಯಾಸ
ಓಪನರ್​​ ಯಶಸ್ವಿ ಜೈಸ್ವಾಲ್​ ಬರೀ ಬ್ಯಾಟಿಂಗ್ ಅಷ್ಟೇ ಅಲ್ಲದೇ ಸ್ಪಿನ್​ ಬೌಲಿಂಗ್ ಅಭ್ಯಾಸ ನಡೆಸಿದ್ರು. ಹೆಡ್​ಕೋಚ್ ಗಂಭೀರ್​ ಇದನ್ನ ಗಂಭೀರವಾಗಿ ವೀಕ್ಷಿಸಿದ್ದಾರೆ. ವೇಗಿಗಳಾದ ಜಸ್​ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಕಠಿಣ ತಾಲೀಮು ನಡೆಸಿದ್ರು. ಇಬ್ಬರ ಬೌಲಿಂಗ್​ ಅನ್ನ ಬ್ಯಾಟರ್ಸ್​ ದಿಟ್ಟವಾಗಿ ಎದುರಿಸಿದ್ರು. ಒಟ್ಟಿನಲ್ಲಿ ಚೆಪಾಕ್​​ನಲ್ಲಿ ಬೀಡುಬಿಟ್ಟಿರೋ ರೋಹಿತ್​​ ಪಡೆ, ಬಾಂಗ್ಲಾ ಬೇಟೆಗೆ ಭರ್ಜರಿ ಸಮರಾಭ್ಯಾಸ ನಡೆಸಿದೆ. ಇನ್ನೂ ಒಂದು ದಿನ ಕ್ಯಾಂಪ್​ ಬಾಕಿ ಇದ್ದು, ಬೇರೆ ಯಾವ ರೀತಿ ಸಿದ್ಧತೆ ನಡೆಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್