newsfirstkannada.com

ಭಾರತ-ಪಾಕ್ ನಡುವಿನ ಪಂದ್ಯಕ್ಕೆ 3 ಹಂತದ ಭದ್ರತೆ.. 50 ಮೀ. ಒಳಗೆ ಪ್ರವೇಶ ನಿರ್ಬಂಧ..!

Share :

Published June 1, 2024 at 1:08pm

Update June 1, 2024 at 2:03pm

    ಜೂನ್​ 2 ರಿಂದ T20 ವಿಶ್ವಕಪ್​ ಮಹಾಹಬ್ಬ..!

    ಜೂನ್​ 9 ರಂದು ಇಂಡೋ-ಪಾಕ್​ ಬ್ಯಾಟಲ್

    ಬದ್ಧವೈರಿಗಳ ಪಂದ್ಯಕ್ಕೆ ಉಗ್ರರ ಕರಿಛಾಯೆ..!

ಟಿ20 ವಿಶ್ವಕಪ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ಕಾಯ್ತಿದೆ. ಅದ್ರಲ್ಲೂ ಬದ್ಧವೈರಿ ಇಂಡೋ-ಪಾಕ್​​​​ ಪಂದ್ಯವೇ ಪಂದ್ಯಾವಳಿಯ ಕೇಂದ್ರಬಿಂದು. ಈ ಬಿಗ್​​ ಮ್ಯಾಚ್​​ಗಾಗಿ ಎಲ್ಲರೂ ತಡಬಡಿಸ್ತಿದ್ದಾರೆ. ಇಂತಹ ಹೊತ್ತಲ್ಲೇ ಸಾಗರದಾಚೆಗಿನ ಅಮೆರಿಕಾದಿಂದ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಜೂನ್​​ 2. ನೀವೆಲ್ಲರೂ ಕಾಯ್ತಿದ್ದ ಆ ಬಿಗ್ ಡೇ ಬಂದೇ ಬಿಡ್ತು. ಆ ದಿನದಿಂದ ಕ್ರಿಕೆಟ್​ ಪ್ರೇಮಿಗಳು ಸಂಪೂರ್ಣ ಮನರಂಜನೆಯಲ್ಲಿ ಮುಳುಗಲಿದ್ದಾರೆ. ಯಾಕಂದ್ರೆ ಅಂದು ಆರಂಭಗೊಳ್ತಿರೋದು ಐಸಿಸಿ ಟಿ20 ವಿಶ್ವಕಪ್​​ ಸಮರ. ಈ ವಾರ್​​ನಲ್ಲಿ ಗೆಲ್ಲಲು 20 ತಂಡಗಳು ಸಜ್ಜಾಗಿವೆ. ಬಲಿಷ್ಠ ತಂಡಗಳ ಜೊತೆ ಕ್ರಿಕೆಟ್​ ಶಿಶುಗಳ ಕದನ ಇನ್ನಿಲ್ಲದ ಕ್ರೇಜ್​​ ಹುಟ್ಟು ಹಾಕಿದೆ.

ಇದನ್ನೂ ಓದಿ:ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.. ಆದರೆ ಈ ಗ್ರಾಹಕರಿಗೆ ಮೂರು ತಿಂಗಳಿನಿಂದ ರಿಲೀಫ್ ಸಿಕ್ಕಿಲ್ಲ..!

ಜೂನ್​ 2 ರಂದು ಟೂರ್ನಿಗೆ ಅಧಿಕೃತವಾಗಿ ಚಾಲನೆ ಸಿಕ್ರೂ, ಕಿಕ್ಕೇರೋದು ಮಾತ್ರ ಜೂನ್​ 9 ರಿಂದ. ಯಾಕಂದ್ರೆ ಅಂದು ಬದ್ಧವೈರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ರಣರಂಗದಲ್ಲಿ ತೊಡೆತಟ್ಟಲಿವೆ. ಇದು ಮೋಸ್ಟ್​ ಎಕ್ಸೈಟಿಂಗ್​​, ಮೋಸ್ಟ್​ ಡಿಬೇಟೆಬಲ್​​​​​​ ಪಂದ್ಯ.ಇದು ಬರೀ ಪಂದ್ಯ ಮಾತ್ರವಲ್ಲ. ಇದೊಂದು ಸೇಡಿನ ಜ್ವಾಲೆ, ಯುದ್ಧದಂತೆ ಭಾಸವಾಗುವ ಮಹಾಕದನ. ಈ ಹೈವೋಲ್ಟೇಜ್​ ಮ್ಯಾಚ್​​ಗೆ ಕ್ರಿಕೆಟ್​ ಜಗತ್ತು ಬಕ ಪಕ್ಷಿಯಂತೆ ಕಾದು ಕುಳಿತಿದೆ. ಇದೇ ಹೊತ್ತಲ್ಲಿ ಇಂಡೋ-ಪಾಕ್​​​ ಪಂದ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಬದ್ಧವೈರಿ ಇಂಡೋ-ಪಂದ್ಯಕ್ಕೆ ಉಗ್ರರ ಕರಿನೆರಳು

ಜಂಟಲ್​ಮ್ಯಾನ್ ಗೇಮ್ ಕ್ರಿಕೆಟ್ ಮೇಲೆ ಮತ್ತೆ ಉಗ್ರರ ಕರಿಛಾಯೆ ಆವರಿಸಿದೆ. ಜೂನ್​ 9 ರಂದು ಸಾಂಪ್ರದಾಯಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಈ ಥ್ರಿಲ್ಲಿಂಗ್ ಗೇಮ್​​​​​​​ ಆರಂಭಕ್ಕೆ ಇನ್ನೇನು 10 ದಿನ ಬಾಕಿ ಇದೆ ಅನ್ನೋವಾಗ್ಲೆ ಪಂದ್ಯಕ್ಕೆ ISIS-K ಉಗ್ರರಿಂದ ಬಾಂಬ್​​ ಬೆದರಿಕೆ ಕರೆ ಬಂದಿದೆ ಎಂದು ನ್ಯೂಯಾರ್ಕ್​ ಪೊಲೀಸರು ಹೇಳಿದ್ದಾರೆ.

3 ಹಂತದ ಭದ್ರತೆ.. 50 ಮೀ. ಒಳಗೆ ಪ್ರವೇಶ ನಿರ್ಬಂಧ..!
ಉಗ್ರರು ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬೆದರಿಕೆ ಹಾಕಿದ ಬೆನ್ನಲ್ಲೆ, ನಸ್ಸೌ ಅಂತರಾಷ್ಟ್ರೀಯ ಸ್ಟೇಡಿಯಂ ಸುತ್ತಮುತ್ತ ಭದ್ರತೆಯನ್ನ ಹೆಚ್ಚಿಸಲಾಗಿದೆ. ಆಟಗಾರರು ತಂಗಿರುವ ಹೋಟೆಲ್​ಗೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. 50 ಮೀಟರ್​​​ ಒಳಗೆ ಅತಿಥಿಗಳನ್ನ ಹೊರತುಪಡಿಸಿ ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ಸೂಕ್ತ ಭದ್ರತೆ ನೀಡಲು ಬದ್ಧ..!
ಪರಿಸ್ಥಿತಿಯನ್ನ ಅವಲೋಕನ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನ ಖಚಿತಪಡಿಸಿಕೊಳ್ಳಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಸುಧಾರಿತ ಕಣ್ಗಾವಲು ಮತ್ತು ಸಂಪೂರ್ಣ ಸ್ಕ್ರೀನಿಂಗ್​ ಪ್ರಕ್ರಿಯೆ ಸೇರಿದಂತೆ ಉನ್ನತ ಭದ್ರತಾ ಕ್ರಮಗಳನ್ನ ಅಳವಡಿಸಲು ನ್ಯೂಯಾರ್ಕ್​ ಪೊಲೀಸರಿಗೆ ನಿರ್ದೇಶನ ಮಾಡಿದ್ದೇನೆ-ಕ್ಯಾಥಿ ಹೋಚುಲ್​​, ನ್ಯೂಯಾರ್ಕ್​ ಗವರ್ನರ್​​​

ಡ್ರೋನ್​​ ಮೂಲಕ ದಾಳಿ ನಡೆಸಲು ಉಗ್ರರ ಸಂಚು..!
ಭಾರತ-ಪಾಕ್​ ಪಂದ್ಯದ ದಿನ ಡ್ರೋನ್ ಮೂಲಕ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ವಿಡಿಯೋದಲ್ಲಿ ಅದರ ಹಿಂಟ್​ ಕೂಡ ಸಿಕ್ಕಿದೆ. ಹೀಗಾಗಿ ಇಂಡೋ-ಪಾಕ್​​​​ ಪಂದ್ಯ ನಡೆಯುವ ನ್ಯೂಯಾರ್ಕ್​ನ ನಸ್ಸೌ ಸ್ಟೇಡಿಯಂ ಸುತ್ತಮುತ್ತ ಡ್ರೋನ್ ಹಾರಾಟ ನಿರ್ಬಂಧಿಸಲಾಗಿದೆ.

ಇಂಡೋ-ಪಾಕ್​​​ ಪಂದ್ಯವನ್ನ ಉಗ್ರರು ಟಾರ್ಗೆಟ್ ಮಾಡಿದ್ದೇಕೆ?
ಟಿ20 ವಿಶ್ವಕಪ್​ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಉಳಿದ ಎಲ್ಲಾ ಪಂದ್ಯಗಳನ್ನ ಬಿಟ್ಟು ಉಗ್ರರು ಇಂಡೋ-ಪಾಕ್​​ ಪಂದ್ಯವನ್ನೆ ಟಾರ್ಗೆಟ್​ ಮಾಡಲು ಕಾರಣವಿದೆ. ಅದೇನಂದ್ರೆ ಇಂಡೋ-ಪಾಕ್​​ ಪಂದ್ಯ ಎಲ್ಲೆ ನಡೆದ್ರೂ ಸ್ಟೇಡಿಯಂ ಬರ್ತಿಯಾಗುತ್ತೆ. ಅಭಿಮಾನಿಗಳ ಇವರನ್ನ ನಿಯಂತ್ರಸಿಸಲು ಹರಸಾಹಸ ಪಡಬೇಕು. ಅಲ್ಲದೇ ಉಭಯ ದೇಶಗಳ ರಾಜಕೀಯ ಸಂಬಂಧ ಚೆನ್ನಾಗಿಲ್ಲ.

ಭಯೋತ್ಪಾದನೆಯಿಂದಾಗಿ ಭಾರತ ಮಿತ್ರ ರಾಷ್ಟ್ರವನ್ನ ವಿರೋಧಿಸುತ್ತಿದೆ. ಹೀಗಾಗಿ ಉಗ್ರರು ದುಷ್ಕೃತ್ಯಕ್ಕೆ ಸಂಚು ಹೂಡಿದ್ದಾರೆ. ಒಟ್ಟಿನಲ್ಲಿ ಇಂಡೋ-ಪಾಕ್​​ ಪಂದ್ಯವನ್ನು ಉಗ್ರರು ಟಾರ್ಗೆಟ್ ಮಾಡಿದ್ದು ಉಭಯ ದೇಶಗಳ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಆತಂಕ ತಳ್ಳಿದೆ. ನ್ಯೂಯಾರ್ಕ್​ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಿ. ಪಂದ್ಯ ಸುಸೂತ್ರವಾಗಿ ನಡೆಯುವಂತಾಗಲಿ ಎಂಬುವುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತ-ಪಾಕ್ ನಡುವಿನ ಪಂದ್ಯಕ್ಕೆ 3 ಹಂತದ ಭದ್ರತೆ.. 50 ಮೀ. ಒಳಗೆ ಪ್ರವೇಶ ನಿರ್ಬಂಧ..!

https://newsfirstlive.com/wp-content/uploads/2024/06/BABAR-RIZWAN.jpg

Load More