newsfirstkannada.com

T20 ವಿಶ್ವಕಪ್​​; ಸೆಲೆಕ್ಟರ್ಸ್​ ಟೆನ್ಷನ್ ಹೆಚ್ಚಿಸಿದ ಟೀಮ್​ ಇಂಡಿಯಾದ ಆಯ್ಕೆ!

Share :

Published April 28, 2024 at 1:10pm

    ವಿಕೆಟ್​ ಕೀಪಿಂಗ್​​​ಗಾಗಿ ಆಟಗಾರರ ನಡುವೆ ಭಾರೀ ಪೈಪೋಟಿ

    ಚಾನ್ಸ್​ಗಾಗಿ ಕಾಯ್ತಿರೋ ರಿಂಕು​​, ಅಶುತೋಷ್​​ ಶರ್ಮಾ, ದುಬೆ

    ಟಿ20 ವಿಶ್ವಕಪ್​​​​​​​​​​ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆ

ಟಿ20 ವಿಶ್ವಕಪ್​​ಗೆ ಟೀಂ ಇಂಡಿಯಾ ಹೇಗಿರಲಿದೆ ? ಯಾರಿಗೆಲ್ಲಾ ಅವಕಾಶ ಸಿಗಬಹುದು ಅನ್ನೋ ಬಿಸಿಬಿಸಿ ಚರ್ಚೆ ನಡೀತಿದೆ. ಈ ಸಲ ಆಯ್ಕೆಯಂತೂ ಸುಲಭವಿಲ್ಲ. ಒಂದು ಸ್ಲಾಟ್​ಗೆ 4 ರಿಂದ ಐವರ ಮಧ್ಯೆ ಪೈಪೋಟಿ ಇದ್ದು, ಅಜಿತ್ ಅಗರ್ಕರ್ & ಟೀಮ್​ಗೆ ದೊಡ್ಡ ತಲೆನೋವಾಗಿದೆ. ಯಾವೆಲ್ಲ ಸ್ಲಾಟ್​ಗೆ, ಯಾವೆಲ್ಲ ಆಟಗಾರರ ನಡುವೆ ಸ್ಪರ್ಧೆ ಇದೆ?.

ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್​..ಯಾರಿಗೆ ಚಾನ್ಸ್​​..?

2024ರ ಟಿ20 ವಿಶ್ವಕಪ್​​​​​ ಹೆಚ್ಚೇನೂ ದೂರವಿಲ್ಲ. ಜೂನ್​​​​ 1 ರಿಂದ ಹೊಡಿಬಡಿ ಟೂರ್ನಿ ಆರಂಭಗೊಳ್ಳಲಿದ್ದು, ತಂಡ ಪ್ರಕಟಣೆಗೆ ಕೌಂಟ್​ಡೌನ್​ ಶುರುವಾಗಿದೆ. ಇದೇ ವಾರಾಂತ್ಯದಲ್ಲಿ ಟೀಮ್ ಇಂಡಿಯಾ ಪ್ರಕಟಗೊಳ್ಳಲಿದ್ದು, ತಂಡದ ಆಯ್ಕೆ ಅಜಿತ್ ಅಗರ್ಕರ್​​ & ಟೀಮ್​ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಒಂದು ಸ್ಥಾನಕ್ಕೆ 4 ರಿಂದ 5 ಪ್ಲೇಯರ್ಸ್​ ಮಧ್ಯೆ ಫೈಟ್ ಏರ್ಪಟ್ಟಿದ್ದು, ಯಾರನ್ನ ಆಯ್ಕೆ ಮಾಡಬೇಕು, ಯಾರನ್ನ ಡ್ರಾಪ್ ಮಾಡ್ಬೇಕು ಅಂತಾ ಆಯ್ಕೆಗಾರರಿಗೆ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: ಧಾರಾಕಾರ ಮಳೆ, ಭಯಾನಕ ಸುಂಟರಗಾಳಿಗೆ 5 ಜನ ಸಾವು.. 33ಕ್ಕೂ ಹೆಚ್ಚು ಮಂದಿ ಗಂಭೀರ

ಆರಂಭಿಕ ಸ್ಥಾನಕ್ಕೆ ಪಂಚ ಪಾಂಡವರ ಮಧ್ಯೆ ಫೈಟ್

ಟಿ20 ವಿಶ್ವಕಪ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಇನ್ನಿಲ್ಲದ ಪೈಪೋಟಿ ಶುರುವಾಗಿದೆ. ರೋಹಿತ್​​ ಶರ್ಮಾ, ವಿರಾಟ್ ಕೊಹ್ಲಿ, ಶುಭ್​​ಮನ್ ಗಿಲ್​​​, ಅಭಿಷೇಕ್​ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಥಾನದ ಮೇಲೆ​ ಕಣ್ಣಿಟ್ಟಿದ್ದಾರೆ. ಇವರ ಪೈಕಿ ರೋಹಿತ್​​​​​​​​​ ಸ್ಥಾನ ಖಚಿತವಾಗಿದ್ದು, ರೋಹಿತ್​​ಗೆ ಸಾಥ್​ ನೀಡೋದ್ಯಾರು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಗಿಲ್​​​​​, ಕೊಹ್ಲಿ, ಜೈಸ್ವಾಲ್​​ಗೆ ಆರಂಭಿಕರಾಗಿ ಆಡಿದ ಅನುಭವವಿದ್ರೆ, ಐಪಿಎಲ್​ನಲ್ಲಿ ಆರ್ಭಟಿಸ್ತಿರೋ ​​ಅಭಿಷೇಕ್​ ಶರ್ಮಾನ ಕಡೆಗಣಿಸುವಂತಿಲ್ಲ.

ವಿಕೆಟ್​ ಕೀಪಿಂಗ್​​​ಗಾಗಿ ನಾ ಕೊಡೆ, ನೀ ಬಿಡೆ ಹಣಾಹಣಿ..!

ಇನ್ನು ವಿಕೆಟ್​​​ ಕೀಪರ್​​ ಆಯ್ಕೆನೂ ಸೆಲೆಕ್ಟರ್ಸ್​ಗೆ ದೊಡ್ಡ ತಲೆನೋವಾಗಿದೆ. ಒಂದು ಸ್ಲಾಟ್​ಗೆ ಹಿಂದೆಂದೂ ಕಾಣದಷ್ಟು ಫೈಟ್ ಇದೆ. ಅನುಭವಿ ಕೆಎಲ್ ರಾಹುಲ್​​​, ರಿಷಭ್​​ ಪಂತ್​​​, ಇಶಾನ್ ಕಿಶನ್​​, ಸಂಜು ಸ್ಯಾಮ್ಸನ್​​​ ಹಾಗೂ ಜಿತೇಶ್​ ಶರ್ಮಾ ರೇಸ್​​ನಲ್ಲಿದ್ದಾರೆ. ಜಿತೇಶ್​ ಶರ್ಮಾ ಹೊರತುಪಡಿಸಿದ್ರೆ, ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡ್ತಿದ್ದು, ಸೆಲೆಕ್ಷನ್​ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಫಿನಿಶರ್ ಸ್ಥಾನದ ಮೇಲೆ ಮೂವರು ಹದ್ದಿನ ಕಣ್ಣು

ಫಿನಿಶರ್ ಆಯ್ಕೆನೂ ಸುಲಭವಿಲ್ಲ. ಈ ಸ್ಲಾಟ್​​​​ ಕಬ್ಜ ಮಾಡಿಕೊಳ್ಳಲು ನಾಲ್ವರು ಕಾಯ್ತಿದ್ದಾರೆ. ರಿಂಕು ಸಿಂಗ್​​, ಅಶುತೋಷ್​​ ಶರ್ಮಾ ಹಾಗೂ ಶಿವಂ ದುಬೆ ಅವಕಾಶಕ್ಕಾಗಿ ಎದುರು ನೋಡ್ತಿದ್ದಾರೆ. ಈ ತ್ರಿಮೂರ್ತಿಗಳಲ್ಲಿ ಯಾರಿಗೆ ಮಣೆ ಹಾಕ್ಬೇಕು ? ಯಾರನ್ನ ಕೈ ಬಿಡಬೇಕು.? ಅನ್ನೋ ಪ್ರಶ್ನೆ ಸೆಲೆಕ್ಟರ್ಸ್​ನ ಕಾಡ್ತಿದೆ.

ಇದನ್ನೂ ಓದಿ: ಗಿಲ್​ ಪಡೆಗೂ ಇದು ಡು ಆರ್​​ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್​ ಚಾಲೆಂಜ್

ಸ್ಪಿನ್ನರ್ಸ್​ ರೇಸ್​ನಲ್ಲಿ ಐವರು ಘಟಾನುಘಟಿಗಳು

ಸ್ಪಿನ್ ವಿಭಾಗದ ಆಯ್ಕೆನೂ ಕಬ್ಬಿಣದ ಕಡಲೆಯಾಗಿದೆ. ಯಾಕಂದ್ರೆ ಘಟಾನುಘಟಿ ಸ್ಪಿನ್ನರ್​ಗಳೇ ಈ ರೇಸ್​ನಲ್ಲಿದ್ದಾರೆ. ಚೈನಾಮನ್​​ ಕುಲ್ದೀಪ್​ ಯಾದವ್​​​, ಕೇರಂ ಸ್ಪಿನ್ನರ್​​​,​ ಆರ್​ ಅಶ್ವಿನ್​​​, ರಿಸ್ಟ್​ ಸ್ಪಿನ್ನರ್​ ಯುಜವೇಂದ್ರ ಚಹಲ್​​​ ಹಾಗೂ ಆಲ್​ರೌಂಡರ್​​ ಅಕ್ಷರ್ ಪಟೇಲ್​ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ​ ಪೈಕಿ ಕುಲ್ದೀಪ್​​​ ಮೊದಲ ಆಯ್ಕೆಯಾಗಿದ್ದು, ಉಳಿದ ಒಂದು ಸ್ಥಾನಕ್ಕೆ ನಾಲ್ವರ ಮಧ್ಯೆ ಮೆಗಾ ಫೈಟ್​ ಏರ್ಪಟ್ಟಿದೆ.

ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್​ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್​ ಪ್ಲೇಯರ್​!

ಈ ಸಲದ ಟಿ20 ವಿಶ್ವಕಪ್​​​​​​​​​​ಗೆ ಟೀಮ್ ಇಂಡಿಯಾ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಅಳೆದು ತೂಗಿ ಬಲಿಷ್ಠ ತಂಡವನ್ನ ಕಟ್ಟಬೇಕಾದ ದೊಡ್ಡ ಜವಾಬ್ದಾರಿ ಆಯ್ಕೆಗಾರರ ಮೇಲಿದೆ. ಯಾರಿಗೆಲ್ಲಾ ಅದೃಷ್ಟ ಖುಲಾಯಿಸುತ್ತೆ ಅನ್ನೋದಕ್ಕೆ ಈ ವಾರಾಂತ್ಯದಲ್ಲಿ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​​; ಸೆಲೆಕ್ಟರ್ಸ್​ ಟೆನ್ಷನ್ ಹೆಚ್ಚಿಸಿದ ಟೀಮ್​ ಇಂಡಿಯಾದ ಆಯ್ಕೆ!

https://newsfirstlive.com/wp-content/uploads/2024/04/ROHIT_SHARMA.jpg

Load More