newsfirstkannada.com

T20 World Cup; ದಿನೇಶ್​ ಕಾರ್ತಿಕ್, ಇಶನ್​ಗೂ ಬಿಗ್ ಶಾಕ್.. ಕನ್ನಡಿಗ ಕೆಎಲ್​ ರಾಹುಲ್​ರನ್ನ ಹೊರಗಿಟ್ಟಿದ್ಯಾಕೆ?

Share :

Published May 1, 2024 at 11:41am

Update May 1, 2024 at 11:42am

    ಐಪಿಎಲ್​ನಲ್ಲಿ ಅಬ್ಬರ ವಿದ್ದರೂ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ

    ಗೇಟ್​ಪಾಸ್​ ಪಡೆದಿರೋ ಶ್ರೇಯಸ್​​ಗೆ ಬಿಸಿಸಿಐ ಮತ್ತೊಂದು ಶಾಕ್​

    ಆಫ್​ ಸ್ಪಿನ್ನರ್​ ಅಶ್ವಿನ್​, ರವಿ ಬಿಷ್ನೋಯ್​ಗೂ ಸೆಲೆಕ್ಟರ್ಸ್​ ಕೊಕ್

ಚುಟುಕು ಮಹಾದಂಗಲ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಜಿತ್​ ಅಗರ್ಕರ್​ & ಟೀಮ್​ ಪಕ್ಕಾ ಲೆಕ್ಕಾ ಹಾಕಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಕೆಲ ಅನುಭವಿಗಳು ಹಾಗೂ ಯುವ ಆಟಗಾರರಿಗೆ ಮಣೆ ಹಾಕಿರೋ ಸೆಲೆಕ್ಟರ್ಸ್​, ಸ್ಥಾನದ ನಿರೀಕ್ಷೆಯಲ್ಲಿದ್ದ ಕೆಲವರಿಗೆ ಶಾಕ್​ ಕೊಟ್ಟಿದ್ದಾರೆ. ವಿಶ್ವಕಪ್​ ಆಡೋ ಕನವರಿಕೆಯಲ್ಲಿದ್ದ ಕೆಲ ಸ್ಟಾರ್​​ಗಳ ಕನಸು ನುಚ್ಚು ನೂರಾಗಿದೆ.

ಟಿ20 ವಿಶ್ವಕಪ್​​ ಟೂರ್ನಿಗೆ ಕೊನೆಗೂ ಟೀಮ್ ಇಂಡಿಯಾ ಪ್ರಕಟವಾಗಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಬಲಿಷ್ಠ ತಂಡವನ್ನ ಸೆಲೆಕ್ಷನ್​ ಕಮಿಟಿ ಆಯ್ಕೆ ಮಾಡಿದೆ. 15 ಆಟಗಾರರ ಜೊತೆಗೆ 4 ಮಂದಿ ರಿಸರ್ವ್​ ಪ್ಲೇಯರ್ಸ್​​ಗಳು ಕೂಡ ವಿಂಡೀಸ್​​ ಫ್ಲೈಟ್​​ ಟಿಕೆಟ್​ ಹತ್ತಲಿದ್ದಾರೆ. ಬ್ಯಾಟಿಂಗ್​ -ಬೌಲಿಂಗ್​ 2 ವಿಭಾಗದಲ್ಲಿ ಟೀಮ್​ ಇಂಡಿಯಾ ಸಖತ್​ ಸ್ಟ್ರಾಂಗ್​ ಆಗಿ ಕಾಣ್ತಿದೆ.

ಇದನ್ನೂ ಓದಿ: ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಗಂಡ.. ಕಾರಣ?

ಇದನ್ನೂ ಓದಿ: ‘ಕರ್ನಾಟಕಕ್ಕೆ ಕಳಂಕ, ಮಾನವ ಕುಲಕ್ಕೆ ಅಪಮಾನ’- ಹಾಸನ ಅಶ್ಲೀಲ ವಿಡಿಯೋ ಬಗ್ಗೆ ಎಸ್ ನಾರಾಯಣ್ ಆಕ್ರೋಶ

ಈಗ ತಂಡಕ್ಕೆ ಆಯ್ಕೆಯಾದ ಆಟಗಾರರ ಹೊರತಾಗಿ ಇನ್ನೂ ಹಲ ಆಟಗಾರರು ವಿಶ್ವಕಪ್​ ಆಡೋ ಕನಸನ್ನ ಕಂಡಿದ್ರು. ಅನುಭವ ಹಾಗೂ ಸ್ಟಾರ್​​ಡಮ್​ ಲೆಕ್ಕಾಚಾರದಲ್ಲಿ ತಮಗೆ ಚಾನ್ಸ್ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿದ್ರು. ಆದ್ರೆ, ಆ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಸೆಲೆಕ್ಟರ್ಸ್​ ಶಾಕ್​ ಕೊಟ್ಟಿದ್ದಾರೆ.

ಕನ್ನಡಿಗ ಕೆ.ಎಲ್​​ ರಾಹುಲ್​ಗೆ ತಂಡದಲ್ಲಿಲ್ಲ ಸ್ಥಾನ.!

ಟೀಮ್​ ಇಂಡಿಯಾದ ಆಪತ್ಭಾಂದವ ಎಂದೇ ಗುರುತಿಸಿಕೊಂಡಿರುವ ಕರ್ನಾಟಕದ ಬ್ಯಾಟ್ಸ್​ಮನ್​ ಕೆ.ಎಲ್​ ರಾಹುಲ್​ಗೆ ಟಿ20 ವಿಶ್ವಕಪ್​ ತಂಡದಿಂದ ಕೊಕ್​ ಕೊಡಲಾಗಿದೆ. ಟಾಪ್​ ಆರ್ಡರ್​​ ಜೊತೆಗೆ ಮಿಡಲ್​ ಆರ್ಡರ್​ನಲ್ಲೂ ಬ್ಯಾಟಿಂಗ್​ ಮಾಡೋ ಸಾಮರ್ಥ್ಯವನ್ನ ರಾಹುಲ್​ ಹೊಂದಿದ್ರು. ಬ್ಯಾಟಿಂಗ್​ ಜೊತೆಗೆ ವಿಕೆಟ್ ಕೀಪರ್​ ಆಗಿಯೂ ಸಾಮರ್ಥ್ಯವನ್ನ ನಿರೂಪಿಸಿದ್ರು. ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ನೀಡ್ತಾ ಇರೋ ರಾಹುಲ್​ ಸಹಜವಾಗೇ ವಿಶ್ವಕಪ್​ ತಂಡದಲ್ಲಿರ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ರಾಹುಲ್​ಗೆ ತಂಡದಿಂದ ಕೊಕ್​ ಕೊಡಲಾಗಿದೆ.

ಶ್ರೇಯಸ್​ ಅಯ್ಯರ್​ಗೆ ಶಾಕ್​ ಕೊಟ್ಟ ಸೆಲೆಕ್ಟರ್ಸ್​.!

ಐಪಿಎಲ್​ಗೂ ಮುನ್ನ ವಿವಾದಕ್ಕೆ ಗುರಿಯಾಗಿ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಲಿಸ್ಟ್​ನಿಂದ ಗೇಟ್​ಪಾಸ್​ ಪಡೆದಿರೋ ಶ್ರೇಯಸ್​​ಗೆ ಬಿಸಿಸಿಐ ಮತ್ತೊಂದು ಶಾಕ್​ ಕೊಟ್ಟಿದೆ. ಟಿ20 ವಿಶ್ವಕಪ್ ತಂಡದಿಂದ ಶ್ರೇಯಸ್​ ಅಯ್ಯರ್​​ಗೆ​ ಗೇಟ್​ಪಾಸ್​ ನೀಡಲಾಗಿದೆ. ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಕ್ಯಾಪ್ಟನ್ ಆಗಿರುವ​ ಶ್ರೇಯಸ್​​ ಅಯ್ಯರ್ ಡಿಸೆಂಟ್​​ ಪರ್ಫಾಮೆನ್ಸ್​​ ನೀಡ್ತಾ ಇದ್ರೂ, ಡ್ರಾಪ್​ ಮಾಡಲಾಗಿದೆ.

​ ಕಿಶನ್​ ಕನಸು ನುಚ್ಚು ನೂರು.!

ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಇಶನ್​ ಕಿಶನ್​ಗೂ​​ ವಿಶ್ವಕಪ್​ ತಂಡದಿಂದ ಗೇಟ್​ಪಾಸ್​ ಕೊಡಲಾಗಿದೆ. ಶ್ರೇಯಸ್​​ ಅಯ್ಯರ್​ ಜೊತೆಗೆ ಇಶಾನ್​ ಕಿಶನ್​ ಕೂಡ ಕಾಂಟ್ರವರ್ಸಿಗೆ ಗುರಿಯಾಗಿದ್ರು. ಇದೇ ಕಾರಣದಿಂದ ಸೆಂಟ್ರಲ್​ ಕಾಂಟ್ರಾಕ್ಟ್​​ ಲಿಸ್ಟ್​ನಿಂದ ಕೈ ಬಿಡಲಾಗಿತ್ತು. ಇದೀಗ ವಿಶ್ವಕಪ್​ ತಂಡದಿಂದಲೂ ಕೊಕ್​ ಕೊಡಲಾಗಿದೆ. ಐಪಿಎಲ್​ನಲ್ಲಿ ಅಬ್ಬರದ ಪರ್ಫಾಮೆನ್ಸ್​ ನೀಡ್ತಾ ಇದ್ರೂ, ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

ರವಿ ಬಿಷ್ನೋಯ್​​ಗೆ ಶಾಕ್​ ಕೊಟ್ಟ ಸೆಲೆಕ್ಟರ್ಸ್​.!

ಕಳೆದ ಒಂದು ವರ್ಷದಿಂದ ಯುವ ಸ್ಪಿನ್ನರ್​​ ರವಿ ಬಿಷ್ನೋಯ್​ ಟೀಮ್​ ಇಂಡಿಯಾ ಟಿ20 ತಂಡದ ಭಾಗವಾಗಿದ್ರು. 2023ರ ಜನವರಿಯಿಂದ ಈವರೆಗೆ 14 ಪಂದ್ಯಗಳನ್ನಾಡಿ 20 ವಿಕೆಟ್​ ಬೇಟೆಯಾಡಿದ್ರು. 7.80ರ ಉತ್ತಮ ಎಕಾನಮಿಯನ್ನ ಹೊಂದಿದ್ದ ರವಿ ಬಿಷ್ನೋಯ್​ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ರು. ಆದ್ರೆ, ಕುಲ್​ದೀಪ್​- ಚಹಲ್​ ಜೊತೆಗಿನ ಪೈಪೋಟಿಯಲ್ಲಿ ಹಿಂದೆ ಬಿದ್ದ ಬಿಷ್ನೋಯ್​​ ಸ್ಥಾನ ವಂಚಿತರಾಗಿದ್ದಾರೆ.

ಅನುಭವಿಗಳಾದ ಅಶ್ವಿನ್​, ಕಾರ್ತಿಕ್​ಗೂ ನಿರಾಸೆ.!

ಅನುಭವಿ ಆಫ್​ ಸ್ಪಿನ್ನರ್​ ಅಶ್ವಿನ್​ ಹಾಗೂ ಐಪಿಎಲ್​ನಲ್ಲಿ​ ಫಿನಿಷರ್​ ಆಗಿ ಮಿಂಚ್ತಾ ಇರೋ ದಿನೇಶ್​ ಕಾರ್ತಿಕ್​ ಹೆಸರು ಕೂಡ ವಿಶ್ವಕಪ್​ ಸೆಲೆಕ್ಷನ್​ ರೇಸ್​ನಲ್ಲಿತ್ತು. ಆದ್ರೆ, ಅಂತಿಮವಾಗಿ ತಂಡದಲ್ಲಿ ಎಂಟ್ರಿ ಕೊಡುವಲ್ಲಿ ಫೇಲ್​ ಆಗಿದ್ದಾರೆ. ಇಬ್ಬರೂ ಸೀನಿಯರ್ಸ್​ಗೆ ಸೆಲೆಕ್ಟರ್ಸ್​ ಕೊಕ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 World Cup; ದಿನೇಶ್​ ಕಾರ್ತಿಕ್, ಇಶನ್​ಗೂ ಬಿಗ್ ಶಾಕ್.. ಕನ್ನಡಿಗ ಕೆಎಲ್​ ರಾಹುಲ್​ರನ್ನ ಹೊರಗಿಟ್ಟಿದ್ಯಾಕೆ?

https://newsfirstlive.com/wp-content/uploads/2024/05/KL_RAHU_DINESH_KARTHIK.jpg

Load More