newsfirstkannada.com

ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಪಾಪಿ.. ಕಾರಣ?

Share :

Published May 1, 2024 at 8:08am

Update May 1, 2024 at 8:20am

  ಗಂಡ ಕಲ್ಲಿನಿಂದ ಜಜ್ಜಿ ಹೆಂಡತಿ ಮೇಲೆಯೂ ಮಾರಾಣಾಂತಿಕ ಹಲ್ಲೆ

  ಅನೈತಿಕ ಸಂಬಂಧದ ವಿಚಾರ ತಿಳಿಯುತ್ತಿದಂತೆ ಗಂಡ ಕೆಂಡಾಮಂಡಲ

  ತನ್ನದೇ ಕಾರಿನಲ್ಲಿ ಹೆಂಡತಿ ಮತ್ತು ಸಹೋದರನನ್ನ ಕರೆದೊಯ್ದಿದ್ದ

ಕಲಬುರಗಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನ ಕಲ್ಲಿನಿಂದ ಜಜ್ಜಿ, ಕಾರಿನಲ್ಲಿ ಸುಟ್ಟು ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೆಂಡತಿ ಮೇಲೆಯೂ ಮಾರಣಾಂತಿಕ ಹಲ್ಲೆಗೆ ಆರೋಪಿ ಯತ್ನಿಸಿದ್ದಾನೆ. ಈ ಘಟನೆಯು ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಯಾದಗಿರಿಯ ಸುರಪುರ ತಾಲೂಕಿನ ನಿವಾಸಿ ರವಿ ಕುಮಾರ್ (45) ಕೊಲೆಯಾದ ಮೆಡಿಕಲ್ ವ್ಯಾಪಾರಿ. ವಿಜಯ್ ಕುಮಾರ್ ಹತ್ಯೆ ಮಾಡಿದ ಆರೋಪಿ. ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಇವರಿಬ್ಬರ ಪತ್ನಿಯರು ಸಹೋದರಿಯರು. ಹೀಗಾಗಿ ವಿಜಯ್ ಮತ್ತು ರವಿ ಕೂಡ ಸಹೋದರರಾಗುತ್ತಾರೆ. ಆರೋಪಿಯ ಪತ್ನಿ ನೀಲಮ್ಮಳ ಜೊತೆ ಮೃತ ವ್ಯಕ್ತಿಯು ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಕೋಪಗೊಂಡಿದ್ದ ಆರೋಪಿ ಇಬ್ಬರನ್ನು ತನ್ನದೇ ಕಾರಿನಲ್ಲಿ ಕೂರಿಸಿಕೊಂಡು ಆಳಂದ ಪಟ್ಟಣದ ಹೊರವಲಯಕ್ಕೆ ಬಂದಿದ್ದಾನೆ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

ಇದನ್ನೂ ಓದಿ: ಪ್ರಚಾರದ ವೇದಿಕೆಯಲ್ಲೇ ಭಾರೀ ಹೈಡ್ರಾಮಾ.. ಮುಖಂಡರ ಗಲಾಟೆಯಿಂದ ಸಿದ್ದರಾಮಯ್ಯಗೆ ಮುಜುಗರ..!

ಈ ವೇಳೆ ಕಾರಿನಲ್ಲೇ‌ ವ್ಯಕ್ತಿ ಜೊತೆ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕಾರಿನೊಳಗೆ ಹಾಕಿ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಇದೇ ವೇಳೆ ಹೆಂಡತಿ ಮೇಲೆಯೂ ಮಾರಾಣಾಂತಿಕ ಹಲ್ಲೆ ಮಾಡಿರುವ ಆರೋಪಿ ಕಲ್ಲಿನಿಂದ ಹೊಡೆದು, ಜಜ್ಜಿ ಕೊಲೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾಳೆ. ಈ ಸಂಬಂಧ ಆಳಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಆರೋಪಿ ವಿಜಯ್ ಕುಮಾರ್​ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಪಾಪಿ.. ಕಾರಣ?

https://newsfirstlive.com/wp-content/uploads/2024/05/KLB_MURDER.jpg

Load More