newsfirstkannada.com

ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

Share :

Published May 1, 2024 at 10:28am

    ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್​ನ್ನ ನೇಮಕ ಮಾಡಿರುವ ಸರ್ಕಾರ

    ಕ್ರಿಮಿನಲ್ ಇನ್​ವೆಸ್ಟಿಗೇಷನ್​ಗೆ ಪತ್ರ ಬರೆದ ರಾಜ್ಯ ಮಹಿಳಾ ಆಯೋಗ

    ಹಾಸನದ ವಿಡಿಯೋ ಕೇಸ್​​ನಲ್ಲಿ ಮಕ್ಕಳ ಹಕ್ಕುಗಳ ಆಯೋಗ ಎಂಟ್ರಿ!

ಹಾಸನದಲ್ಲಿ ಅಶ್ಲೀಲ ವಿಡಿಯೋಗಳ ಹರಿದಾಟ ಪ್ರಕರಣದಲ್ಲಿ ಎಸ್​ಐಟಿ ತನಿಖೆಗೆ ದೊಡ್ಡ ತಂಡವೇ ನೇಮಕ ಆಗಿದೆ. ಸದ್ಯ ತನಿಖೆಗೆ ಇಳಿದಿರುವ ತಂಡ, ಹಲವರನ್ನ ವಿಚಾರಣೆ ನಡೆಸಿದೆ. ಇತ್ತ, ಮಹಿಳಾ ಆಯೋಗ, ಮಕ್ಕಳ ಆಯೋಗ 2 ಕೂಡ ಎಸ್​ಐಟಿಗೆ ಪತ್ರ ಬರೆದಿದ್ದು, ಕೆಲ ಸೂಚನೆಗಳನ್ನ ನೀಡಿವೆ. ವಿಡಿಯೋ ಹರಿದಾಟ ನಿಲ್ಲಿಸಲು ಕ್ರಮಕ್ಕೆ ಮನವಿ ಮಾಡಿವೆ.

ಹಾಸನದಲ್ಲಿ ಅಶ್ಲೀಲ ವಿಡಿಯೋಗಳು ಹಲ್​ಚಲ್​ ಎಬ್ಬಿಸಿವೆ.. ಸಮಾಜದ ಕಟಕಟೆಯಲ್ಲಿ ನಿಂತ ಪ್ರಜ್ವಲ್​​​ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗ್ತಿದೆ. ಇದೇ ಪ್ರಕರಣ ಕೈಗೆತ್ತಿಕೊಂಡ ಸ್ಪೆಷಲ್​​ ಇನ್​ವೆಸ್ಟಿಗೇಷನ್​​ ಟೀಂ ತನಿಖೆ ಚುರುಕುಗೊಳಿಸಿದೆ.

ಇದನ್ನೂ ಓದಿ: ಪ್ರಚಾರದ ವೇದಿಕೆಯಲ್ಲೇ ಭಾರೀ ಹೈಡ್ರಾಮಾ.. ಮುಖಂಡರ ಗಲಾಟೆಯಿಂದ ಸಿದ್ದರಾಮಯ್ಯಗೆ ಮುಜುಗರ..!

ಹಾಸನ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ!

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್​ನ್ನ ನೇಮಕ ಮಾಡಿದೆ. ರಾಜ್ಯ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಅವರನ್ನ ಪ್ರಕರಣದಲ್ಲಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿಚಾರಣಾ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಲಯಗಳಲ್ಲಿನ ವಿಚಾರಣೆಗೆ ರಾಜ್ಯ ಸರ್ಕಾರದ ಪರ ಜಗದೀಶ್‌ ಹಾಜರಾಗಲಿದ್ದಾರೆ. ಈ ಕುರಿತ ಅಧಿಸೂಚನೆಯನ್ನು ರಾಜ್ಯ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿದ್ದಾರೆ.

ಸೈಬರ್ ಕ್ರೈಂಗೆ ತಲುಪಿದ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​!

ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಕೇಸ್​ ಸದ್ಯ ಸೈಬರ್ ಕ್ರೈಂಗೆ ತಲುಪಿದೆ. ಈ ಹಿನ್ನೆಲೆ ಕ್ರಿಮಿನಲ್ ಇನ್​ವೆಸ್ಟಿಗೇಷನ್​ಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಪೆನ್​ಡ್ರೈವ್​ ಹಾಗೂ ಇನ್ನಷ್ಟು ವಿಡಿಯೋ ವೈರಲ್ ಆಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಸೈಬರ್ ಕ್ರೈಂ ಜೊತೆ ಚರ್ಚೆ

  • ವಿಡಿಯೋ ಲೀಕ್ ಆಗಿದ್ದು ಎಲ್ಲಿಂದ? ಲೀಕ್ ಮಾಡಿದ್ದು ಯಾರು?
  • ಮಹಿಳೆಯರ ರಕ್ಷಣೆ ಅಡಿಯಲ್ಲಿ ಕ್ರಮಕ್ಕೆ ಮುಂದಾದ ಆಯೋಗ
  • ವಿಡಿಯೋ ಹೆಚ್ಚು ಶೇರ್ ಆಗದಂತೆ ಸೈಬರ್​​​ ಕ್ರೈಂ ಜೊತೆ ಚರ್ಚೆ
  • ಮಹಿಳೆಯರ ಮುಖ ಕಾಣಿಸುತ್ತಿದ್ದು, ಇದನ್ನ ತಡೆಯೋದು ಹೇಗೆ?
  • ಮತ್ತಷ್ಟು ವಿಡಿಯೋ ಹೊರಬಂದರೆ ಮಹಿಳೆಯರ ಮಾನಹಾನಿ
  • ಈ ಹಿನ್ನೆಲೆ ಆರಂಭದಲ್ಲೇ ಇದನ್ನ ತಡೆಯಲು ಆಯೋಗ ಪ್ಲಾನ್

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್

ಇದನ್ನೂ ಓದಿ: ನಾದಿನಿಯ ಗಂಡನ ಕಲ್ಲಿನಿಂದ ಜಜ್ಜಿ ಬರ್ಬರ ಕೊಲೆ.. ಕಾರಿನಲ್ಲಿ ಹಾಕಿ ಬೆಂಕಿ ಇಟ್ಟ ಗಂಡ.. ಕಾರಣ?

ಇನ್ನು, ಮಹಿಳಾ ಆಯೋಗದ ಬಳಿಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಹ ಎಂಟ್ರಿ ಕೊಟ್ಟಿದೆ. ಪ್ರಕರಣ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಸ್ಐಟಿಗೆ ಪತ್ರ ಬರೆದಿದೆ.. ಸಂತ್ರಸ್ತೆ ಒಬ್ಬರು ತನ್ನ ಮಗಳ ಜೊತೆ ಕೂಡ ಅಸಭ್ಯವಾಗಿ ವರ್ತಿಸಿರೋ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ.. ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಅನುಮಾನ ಇದೆ. ಹಾಗಾಗಿ ಅಪ್ರಾಪ್ತ ಹೆಣ್ಣು ಮಕ್ಕಳ ಬಳಕೆ ಪತ್ತೆಯಾದ್ರೆ ಈ ಬಗ್ಗೆ ವರದಿ ನೀಡುವಂತೆ ಎಸ್​ಐಟಿಗೆ ಮುಖ್ಯಸ್ಥ ಬಿ.ಕೆ ಸಿಂಗ್​ಗೆ ಪತ್ರ ಬರೆದಿದೆ. ಪ್ರಜ್ವಲ್​ ಪ್ರಕರಣದ ತನಿಖೆ ನಡೆಸ್ತಿರುವ ಎಸ್​ಐಟಿ ಮುಂದೇ ಕೇವಲ ಆರೋಪಿಗೆ ಶಿಕ್ಷೆ ಹೊಡಿಸೋದಷ್ಟೇ ಅಲ್ಲ. ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆಯ ಹೊಣೆಗಾರಿಕೆಯು ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

https://newsfirstlive.com/wp-content/uploads/2024/05/SIT_PRAJWAL_CASE.jpg

Load More