Advertisment

ಕೊಹ್ಲಿ, ರೋಹಿತ್ ಓಪನಿಂಗ್.. ಹೇಗಿರುತ್ತೆ ಗೊತ್ತಾ ಇವತ್ತಿನ ಪ್ಲೇಯಿಂಗ್-11?

author-image
Ganesh
Updated On
ಕೊಹ್ಲಿ, ರೋಹಿತ್ ಓಪನಿಂಗ್.. ಹೇಗಿರುತ್ತೆ ಗೊತ್ತಾ ಇವತ್ತಿನ ಪ್ಲೇಯಿಂಗ್-11?
Advertisment
  • ವಿಶ್ವಕಪ್​ನಲ್ಲಿ ಇವತ್ತು ಭಾರತಕ್ಕೆ ಮೊದಲ ಪಂದ್ಯ
  • ಐರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ಟೀಂ ಇಂಡಿಯಾ
  • ಭಾರತೀಯ ಕಾಲಮಾನ 8 ಗಂಟೆಯಿಂದ ಪಂದ್ಯ ಆರಂಭ

ಭಾರತ ಇಂದಿನಿಂದ T20 ವಿಶ್ವಕಪ್​​ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮೆರಿಕ ಸಮಯದ ಪ್ರಕಾರ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತೀಯ ಕಾಲಮಾನದಲ್ಲಿ ರಾತ್ರಿ 8 ಗಂಟೆಯಿಂದ ಪಂದ್ಯ ಸ್ಟಾರ್ಟ್ ಆಗಲಿದೆ. ಐರ್ಲೆಂಡ್ ವಿರುದ್ಧ ನಡೆಯುವ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಲಿದೆ ಅನ್ನೋದ್ರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.

Advertisment

ಇದನ್ನೂ ಓದಿ:ಕೇಂದ್ರದಲ್ಲಿ ಕುಮಾರಸ್ವಾಮಿಗೆ ಮಂತ್ರಿ ಸ್ಥಾನ.. JDS ಡಿಮ್ಯಾಂಡ್ ಇಡ್ತಿರೋ ಖಾತೆ ಯಾವುದು ಗೊತ್ತಾ?

ಕೊಹ್ಲಿ-ರೋಹಿತ್ ಓಪನಿಂಗ್
ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಜೊತೆಗೆ ಓಪನಿಂಗ್‌ ಬ್ಯಾಟಿಂಗ್​ಗೆ ಬರಬಹುದು ಎನ್ನಲಾಗುತ್ತಿದೆ. ಇವತ್ತಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹೊರಗುಳಿಯಬಹುದು. ಜೈಸ್ವಾಲ್​ಗೆ ಸ್ಥಾನ ಸಿಗೋದು ಡೌಟ್ ಎನ್ನಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಬ್ಯಾಟಿಂಗ್​ಗೆ ಬಂದಿದ್ದರು.

ಇಬ್ಬರೂ ವಿಕೆಟ್‌ ಕೀಪರ್‌ಗಳಿಗೆ ಅವಕಾಶ?
ವಿಕೆಟ್ ಕೀಪರ್‌ಗಳಾದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗಬಹುದು. ರಿಷಬ್ ಪಂತ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಸಂಜು ಸ್ಯಾಮ್ಸನ್ ಐದನೇ ಸ್ಲಾಟ್​ನಲ್ಲಿ ಆಡಲು ಬರಬಹುದು ಎನ್ನಲಾಗುತ್ತಿದೆ.

Advertisment

ಇದನ್ನೂ ಓದಿ:ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!

ಸ್ಪಿನ್ನರ್ ಮತ್ತು ವೇಗಿಗಳು..!
ರೋಹಿತ್ ಶರ್ಮಾ ಯಾವ ಬೌಲಿಂಗ್ ದಾಳಿಗೆ ಮುಂದಾಗುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಮೂವರು ಸ್ಪಿನ್ನರ್‌ಗಳ ಮೊರೆ ಹೋದರೆ ಸಿರಾಜ್ ಹೊರಗುಳಿಯಬೇಕಾಗುತ್ತದೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಸ್ಥಾನ ಸಿಗುವ ಸಾಧ್ಯತೆ ಇದೆ. ಇಲ್ಲಿ ಪಾಂಡ್ಯ ಕೂಡ ಮೂರನೇ ವೇಗಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಮೂವರು ಸ್ಪಿನ್ನರ್‌ ಜೊತೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್.

Advertisment

ಇದನ್ನೂ ಓದಿ:ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment