Advertisment

ಪಾಕ್​ಗೆ 48 ಎಸೆತಗಳಲ್ಲಿ 48 ರನ್​ ಬೇಕಿತ್ತು.. 8 ವಿಕೆಟ್​ಗಳಿದ್ದವು.. ಪಂದ್ಯಕ್ಕೆ ಟರ್ನ್​ ಕೊಟ್ಟಿದ್ದು ಬೂಮ್ರಾ ತೆಗೆದ ಆ ವಿಕೆಟ್..!

author-image
Ganesh
Updated On
ಯಾರು ಏನೇ ಹೇಳಲಿ.. ಈ ಇಬ್ಬರ ಆಟದಿಂದ ಭಾರತಕ್ಕೆ ಜಯ.. ಕ್ರೆಡಿಟ್ ಯಾರಿಗೆ ಸಿಗಬೇಕು ಗೊತ್ತಾ?
Advertisment
  • ಪಾಕಿಸ್ತಾನದ ವಿರುದ್ಧ ಭಾರತಕ್ಕೆ ರೋಚಕ ಗೆಲುವು
  • ಕೇವಲ 119 ರನ್​​ಗಳ ಡೆಪೆಂಡ್ ಮಾಡಿಕೊಂಡ ಭಾರತ
  • ಬೂಮ್ರಾರ ಬೆಂಕಿ ಬೌಲಿಂಗ್​ನಿಂದ ಭಾರತಕ್ಕೆ ಜಯ

ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ 6 ರನ್​ಗಳಿಂದ ಸೋಲಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಪಾಕ್ ವಿರುದ್ಧ ಸಿಕ್ಕ ಏಳನೇ ಗೆಲುವಾಗಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ 119 ರನ್​ಗಳಿಗೆ ಆಲೌಟ್ ಆದ ಪರಿಣಾಮ ಬೌಲರ್ಸ್​​ ಹೆಗಲ ಮೇಲೆ ಭಾರ ಬಿದ್ದಿತ್ತು.

Advertisment

ಒಂದು ಹಂತದಲ್ಲಿ ಪಾಕಿಸ್ತಾನ 73 ರನ್​ಗಳಿಸಿ ಕೇವಲ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ನಂತರ ನಡೆದ ಮ್ಯಾಜಿಕ್​​ನಲ್ಲಿ ಕೇವಲ 29 ರನ್​ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಗಬೇಕಾಯಿತು. ವಿಶೇಷ ಅಂದರೆ ಜಸ್ಪ್ರೀತ್ ಬುಮ್ರಾ ಅವರು 4 ಓವರ್‌ಗಳಲ್ಲಿ ಕೇವಲ 14 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಇದನ್ನೂ ಓದಿ:ಕುಮಾರಸ್ವಾಮಿ ಪ್ರಮೋಷನ್​​​ನಿಂದ ಸಿದ್ದು, ಡಿಕೆಶಿಗೆ ಟೆನ್ಯನ್.. ಇನ್ಮೇಲೆ HDK ರಾಜ್ಯ ಸರ್ಕಾರಕ್ಕೆ ಹೇಗೆಲ್ಲ ಅನಿವಾರ್ಯ ಆಗ್ತಾರೆ?

publive-image

ಪಂದ್ಯಕ್ಕೆ ತಿರುವು ಸಿಕ್ಕಿದ್ದು ಇಲ್ಲಿ..!

ಪಾಕಿಸ್ತಾನ ತಂಡ ಒಂದು ತುದಿಯಿಂದ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಮೊಹಮ್ಮದ್ ರಿಜ್ವಾನ್ ದೃಢವಾಗಿ ನಿಂತಿದ್ದರು. 43 ಎಸೆತಗಳಲ್ಲಿ 31 ರನ್ ಗಳಿಸಿದ್ದ ಅವರು ಡೆತ್ ಓವರ್‌ಗಳಲ್ಲಿ ತಂಡವನ್ನು ಗೆಲ್ಲಿಸುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​​ಗೆ ಬಂದರು. ಬುಮ್ರಾ ಎಸೆದ ಮೊದಲ ಬಾಲ್ ಉತ್ತಮ ಲೆಂತ್‌ನಲ್ಲಿ ಬಿದ್ದಿತು. ಪರಿಣಾಮ ರಿಜ್ವಾನ್ ಔಟ್ ಆಗಿ ನಿರಾಸೆಯಿಂದ ಕ್ರೀಸ್ ಬಿಡಬೇಕಾಯಿತು. 4 ವಿಕೆಟ್ ಕಳೆದುಕೊಂಡು 80 ರನ್​ಗಳಿಸಿದ್ದ ಪಾಕ್​ನ ನಂತರ ಹೋರಾಟ ಕುಂಟುತ್ತ ಹೋಯಿತು. ಭಾರತ ತಂಡಕ್ಕೆ ಹೊಸ ಹುಮ್ಮಸ್ಸು ಸಿಕ್ಕಿತು.

Advertisment

ಇದನ್ನೂ ಓದಿ:ಪಾಕ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು.. ಈ ಮೂವರು ಗೆಲುವಿನ ಹೀರೋಗಳು..!

publive-image

ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡಿತ್ತು. ರಿಷಬ್ ಪಂತ್ ಅವರ 42 ರನ್​ಗಳ ಕಾಣಿಕೆಯ ಪರಿಣಾಮ ಭಾರತ 19 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 119ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಾಕಿಸ್ತಾನಕ್ಕೆ ಜಸ್​ಪ್ರಿತ್ ಬೂಮ್ರಾ ಅವರು ದೊಡ್ಡ ಪೆಟ್ಟು ಕೊಟ್ಟರು. ಬಾಬರ್ ಅಜಂ ಹಾಗೂ ರಿಜ್ವನ್ 26 ರನ್​ಗಳಿಸಿ ಆಡುತ್ತಿದ್ದಾಗ ಅಜಂ ಅವರ ಪೆವಿಲಿಯನ್​ಗೆ ಕಳುಹಿಸುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಕ್ಯಾಪ್ಟನ್ ವಿಕೆಟ್ ಬೀಳುತ್ತಿದ್ದಂತೆಯೇ ಟೀಂ ಇಂಡಿಂಯಾ ಬೌಲಿಂಗ್ ಪಡೆಗೆ ಮತ್ತಷ್ಟು ಶಕ್ತಿ ಬಂತು. ಬೆಂಕಿ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬೌಲರ್ಸ್​​, ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ನಾಲ್ಕು ಓವರ್​​ಗಳನ್ನು ಎಸೆದು 2 ವಿಕೆಟ್ ಪಡೆದು ಕೇವಲ 24 ರನ್​​ಗಳನ್ನು ಮಾತ್ರ ನೀಡಿದರು. ಅಷ್ಟೇ ಅಲ್ಲ ಅಕ್ಸರ್ ಪಟೇಲ್​ 2 ಓವರ್​ ಎಸೆದು 11 ರನ್​ ನೀಡಿ ಒಂದು ವಿಕೆಟ್ ಪಡೆದರು. ಪಾಕ್​ನ ಬ್ಯಾಟಿಂಗ್ ಶಕ್ತಿ ಉಸ್ಮಾನ್ ಖಾನ್​ರ ವಿಕೆಟ್ ಪಡೆದು ಪಾಕ್​ನ ಮಗ್ಗಲು ಮುರಿದರು. ನಿನ್ನೆಯ ಪಂದ್ಯದಲ್ಲಿ ಸಿರಾಜ್ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು, 4 ಓವರ್​ಗಳಲ್ಲಿ 19 ರನ್​ ನೀಡಿದರು. ಆದರೆ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ. ರವೀಂದ್ರ ಜಡೇಜಾ 2 ಓವರ್​ ಮಾಡಿ 10 ರನ್​ ನೀಡಿದ್ರೆ, ಅರ್ಷ್​​ದೀಪ್ ಸಿಂಗ್ ಸ್ವಲ್ಪ ದುಬಾರಿಯಾದರೂ ಒಂದು ವಿಕೆಟ್ ಪಡೆದುಕೊಂಡರು. 31 ರನ್​ ನೀಡಿ ಒಂದು ವಿಕೆಟ್ ಪಡೆದುಕೊಂಡರು. ಬೂಮ್ರಾ, ಸಿರಾಜ್ ಹಾಗೂ ಪಾಂಡ್ಯ ಅವರ ಭಯಂಕರ ಬೌಲಿಂಗ್​ನಿಂದಾಗಿ ಪಾಕಿಸ್ತಾನದ ವಿರುದ್ಧ ಭಾರತ ಮತ್ತೆ ಗೆದ್ದು ಬೀಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment