30 ರನ್.. ದಕ್ಷಿಣ ಆಫ್ರಿಕಾ ಕೈಯಲ್ಲಿತ್ತು 6 ವಿಕೆಟ್.. ಕೊನೆಯ 5 ಓವರ್​​ಗಳ ರೋಚಕ ಆಟ..!

author-image
Ganesh
Updated On
30 ರನ್.. ದಕ್ಷಿಣ ಆಫ್ರಿಕಾ ಕೈಯಲ್ಲಿತ್ತು 6 ವಿಕೆಟ್.. ಕೊನೆಯ 5 ಓವರ್​​ಗಳ ರೋಚಕ ಆಟ..!
Advertisment
  • ಪಂದ್ಯಕ್ಕೆ ಟ್ವಿಸ್ಟ್​ ನೀಡಿದ ಚಂಚಲೆ ವಿಜಯಲಕ್ಷ್ಮಿ
  • ಕೈಜಾರಿದ್ದ ಪಂದ್ಯದಲ್ಲಿ ಕಮ್​​​​ಬ್ಯಾಕ್ ರೋಚಕ
  • ಟೀಮ್ ಇಂಡಿಯಾ ಮುಕುಟಕ್ಕೆ ವಿಶ್ವ ಕಿರೀಟ..!

ಟೀಮ್ ಇಂಡಿಯಾ ನೀಡಿದ್ದ 177 ರನ್​ಗಳ ಗುರಿ ಬೆನ್ನಟ್ಟಿದ್ದ ಸೌತ್ ಆಫ್ರಿಕಾ, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಟೀಮ್ ಇಂಡಿಯಾ ಕೈಯಿಂದಲೂ ಪಂದ್ಯ ಬಹುತೇಕ ಕೈಜಾರಿತ್ತು. ಇನ್ನೇನು ಸೌತ್ ಆಫ್ರಿಕಾ ಸೇರುತ್ತಿದ್ದ ಚಂಚಲೆ ವಿಜಯಲಕ್ಷ್ಮಿ, ಮನಸ್ಸು ಬದಲಿಸಿ ಪಂದ್ಯಕ್ಕೆ ಟ್ವಿಸ್ಟ್​ ನೀಡ್ತು.

177 ರನ್​​ಗಳ ಟಾರ್ಗೆಟ್​.. ಚೊಚ್ಚಲ ವಿಶ್ವಕಪ್​​​​​​​​​ ಗೆಲ್ಲೋ ಕನಸಲ್ಲೇ ಕಣಕ್ಕಿಳಿದ ಸೌತ್ ಆಫ್ರಿಕಾ, ಆರಂಭದಲ್ಲೇ ಅಘಾತ ಅನುಭವಿಸಿತು. 12 ರನ್ ಗಳಿಸುವಷ್ಟರಲ್ಲೇ ರೀಝಾ ಹೆಡ್ರಿಕ್ಸ್​, ಮಾಕ್ರಮ್ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಆಸರೆಯಾಗಿದ್ದು ಕ್ವಿಂಟನ್ಡಿಕಾಕ್ ಆ್ಯಂಡ್ ಟ್ರಿಸ್ಟನ್ ಸ್ಟಬ್.

ಇದನ್ನೂ ಓದಿ:‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್..

publive-image

ಟೀಮ್ ಇಂಡಿಯಾ ಬೌಲರ್​​ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ, 3ನೇ ವಿಕೆಟ್​ಗೆ 58 ರನ್​ಗಳ ಜೊತೆಯಾಟವಾಡಿತು. 31 ರನ್​ ಗಳಿಸಿದ್ದ ಸ್ಟಬ್ಸ್​ಗೆ ಆಕ್ಷರ್ ಪೆವಿಲಿಯನ್ ಹಾದಿ ತೋರಿಸಿದ್ರೆ, 39 ರನ್​ಗಳಿಸಿದ್ದ ಕ್ವಿಂಟನ್ ಡಿಕಾಕ್​ಗೆ ಅರ್ಷದೀಪ್ ಡಿಚ್ಚಿ ನೀಡಿದ್ರು. ಈ ಬಳಿಕ ಬಂದ ಕ್ಲಾಸೆನ್, 23 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಸೌತ್ ಆಫ್ರಿಕಾಗೆ ವಿಜಯದ ಮುಕುಟ ಧರಿಸುವ ಲೆಕ್ಕಚಾರದಲ್ಲಿದ್ದರು. ಆ ಕೊನೆ ಐದು ಓವರ್​​​​​​​​​​​​​ನಲ್ಲಿ ಎಲ್ಲವೂ ಬದಲಾಯ್ತು.

15 ಓವರ್​​​​.. 147 ರನ್​​.. 4 ವಿಕೆಟ್​..!
15 ಓವರ್​ಗಳಲ್ಲಿ ಜಸ್ಟ್​ 4 ವಿಕೆಟ್ ನಷ್ಟಕ್ಕೆ 147 ರನ್​​​​​​​ ಗಳಿಸಿದ್ದ ಸೌತ್ ಆಫ್ರಿಕಾ, ಗೆಲುವಿನ ಸಂತಸದಲ್ಲೇ ತೇಲಾಡುತ್ತಿತ್ತು. ಪಂದ್ಯ ಕೈಜಾರುವ ನಿರಾಸೆಯಲ್ಲಿದ್ದ ಟೀಮ್ ಇಂಡಿಯಾದ ಡಗೌಟ್​ನಲ್ಲೂ ನಿರವ ಮೌನ ಆವರಿಸಿತ್ತು. ರೋಚಕ ಕಮ್​ಬ್ಯಾಕ್ ಮಾಡಿದ ಟೀಮ್ ಇಂಡಿಯಾ ಬೌಲರ್​ಗಳು, ಪಂದ್ಯಕ್ಕೆ ಅಸಲಿ ಟ್ವಿಸ್ಟ್ ನೀಡಿದರು.

ಇದನ್ನೂ ಓದಿ:ಕಣ್ಣಲ್ಲಿ ನೀರು ಮತ್ತು ವಿಜಯದ ಸಂಭ್ರಮ.. ಹೇಗಿತ್ತು ಟೀಂ ಇಂಡಿಯಾ ಆಟಗಾರರ ಗೆಲುವಿನ ಸಂಭ್ರಮ..! Photos

publive-image

30 ರನ್.. ಆಫ್ರಿಕಾ ಕೈಯಲ್ಲಿತ್ತು 6 ವಿಕೆಟ್
ಕೊನೆ 5 ಓವರ್​ಗಳಲ್ಲಿ ಸೌತ್ ಆಫ್ರಿಕಾ ಗೆಲುವಿಗೆ 30 ರನ್ ಬೇಕಿತ್ತು. ಕೈಯಲ್ಲಿ 6 ವಿಕೆಟ್ ಇತ್ತು. ಸೆಟಲ್ಡ್​ ಬ್ಯಾಟರ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಕ್ರೀಸ್​ ಕಾಯ್ದುಕೊಂಡಿದ್ದರು. ಪಂದ್ಯ ಟೀಮ್ ಇಂಡಿಯಾ ಕೈಜಾರಿದೆ ಅಂತಾನೇ ಎಲ್ಲರೂ ನಿರೀಕ್ಷಿಸಿದ್ರು. 16ನೇ ಓವರ್​​ನಲ್ಲಿ ದಾಳಿಗಿಳಿದ ಗೋಲ್ಡನ್ ಆರ್ಮ್​ ಹಾರ್ದಿಕ್, 52 ರನ್​ಗಳಿಸಿದ್ದ ಕ್ಲಾಸೆನ್ ಪೆವಿಲಿಯನ್ ಹಾದಿ ತೋರಿಸಿದ್ರು. ಅಷ್ಟೇ ಅಲ್ಲ. ಪಂದ್ಯಕ್ಕೂ ಟ್ವಿಸ್ಟ್ ನೀಡಿದರು.

17ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಬೂಮ್ರಾ, ಯಾನ್ಸನ್ ವಿಕೆಟ್ ಬೇಟೆಯಾಡಿ ಜಸ್ಟ್​ 2 ರನ್ ನೀಡಿದ್ರೆ. 18ನೇ ಓವರ್​ನಲ್ಲಿ ದಾಳಿಗಿಳಿದ ಅರ್ಷ್​ದೀಪ್, ಜಸ್ಟ್ 4 ರನ್ ನೀಡಿದ್ರು. ಇದರೊಂದಿಗೆ ಕೊನೆ ಓವರ್​​​ನಲ್ಲಿ ಆಫ್ರಿಕಾಗೆ 16 ರನ್​ ಪೇರಿಸಬೇಕಾದ ಟಾರ್ಗೆಟ್ ಇತ್ತು.

ಇದನ್ನೂ ಓದಿ:ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

publive-image

ಕೊನೆ ಓವರ್.. 16 ರನ್​.. ಪಾಂಡ್ಯ ಕಮಾಲ್..!
ಕೊನೆ ಓವರ್​​ 16 ರನ್​ ಡಿಫೆಂಡ್ ಮಾಡಿಕೊಳ್ಳಬೇಕಾದ ಚಾಲೆಂಜ್ ಹಾರ್ದಿಕ್ ಮುಂದಿತ್ತು. ಹಾರ್ದಿಕ್ ಎಸೆದ ವೇಡ್ ಫುಲ್​ ಟಾಸ್​​ನ ಸಿಕ್ಸರ್​​ಗೆ ಅಟ್ಟಲು ಯತ್ನಿಸಿದ ಮಿಲ್ಲರ್, ಸೂರ್ಯ ಹಿಡಿದ ಅದ್ಬುತ ಕ್ಯಾಚ್​​ಗೆ ಬಲಿಯಾದರು. ಇದರೊಂದಿಗೆ ಟೀಮ್ ಇಂಡಿಯಾ ಗೆಲುವು ಖಾತ್ರಿಯಾಯ್ತು. ಕೊನೆಯಲ್ಲಿ ರಬಡಾ, ಎನ್ರಿಚ್ ನೋಕಿಯಾ ಕ್ರೀಸ್​ಗೆ ಬಂದರು ದಕ್ಷಿಣ ಆಫ್ರಿಕಾವನ್ನ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪರಿಣಾಮ 20 ಓವರ್​ಗಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್​​​​​​​ಗಳಿಸಲಷ್ಟೇ ಶಕ್ತವಾಯ್ತು. 7 ರನ್​ಗಳ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತು. ಇದರೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸು ನನಸು ಮಾಡ್ತು.

ಇದನ್ನೂ ಓದಿ:ಕೊಹ್ಲಿ ಮಾತ್ರವಲ್ಲ.. ಟೀಂ ಇಂಡಿಯಾಗೆ ಗೆದ್ದ ಖುಷಿಯಲ್ಲೇ ಡಬಲ್ ಶಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment