/newsfirstlive-kannada/media/post_attachments/wp-content/uploads/2024/09/Riva-arora-1.jpg)
ಭಾರತದ ಶ್ರೀಮಂತ ನಟ-ನಟಿಯವರ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ ಶ್ರಿಮಂತ ಬಾಲನಟಿಯ ಬಗ್ಗೆ ತಿಳಿದಿದೆಯಾ? ಇಲ್ಲೊಬ್ಬಳು ಬಾಲನಟಿ 8 ಕೋಟಿಯಷ್ಟು ಆಸ್ತಿಯನ್ನು ಹೊಂದಿದ್ದಾಳೆ ಎಂದರೆ ನಂಬಲು ಅಸಾಧ್ಯ. ಅಂದಹಾಗೆಯೇ ಈ ಶ್ರೀಮಂತ ಬಾಲ ನಟಿ ಯಾರು? ಆಕೆಯ ಹಿನ್ನೆಲೆ ಏನು? ನೋಡೋಣ.
ರೀವಾ ಅರೋರಾ. ಬಾಲನಟಿಯಾಗಿ ಗುರುತಿಸಿಕೊಂಡ ಈಕೆ ಉರಿ, ಛಾತ್ರಿವಾಲಿ ಸಿನಿಮಾದಲ್ಲಿ ನಟಿಸಿದ್ದಾಳೆ. ಸದ್ಯ ರೀವಾ ಭಾರತದ ಶ್ರೀಮಂತ ಬಾಲನಟಿಯಾಗಿ ಗುರುತಿಸಿಕೊಂಡಿದ್ದಾಳೆ.
[caption id="attachment_87341" align="alignnone" width="800"]
ರೀವಾ ಅರೋರಾ[/caption]
ಸಾರಾ ಅರ್ಜುನ್​ ಕೂಡ ಬಾಲನಟಿಯಾಗಿ ಗುರುತಿಸಿಕೊಂಡು ಅಸ್ತಿಯಲ್ಲಿ ಈಕೆಗಿಂತಳು ಮುಂಚೂಣಿಯಲ್ಲಿದ್ದಳು. ಆದರೆ ಕಳೆದ ವರ್ಷ 19 ವರ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸಾರಾ ಬಾಲನಟಿಯಿಂದ ನಟಿಯಾಗಿ ಗುರುತಿಸಿಕೊಂಡಳು. ಈಕೆ 10 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾಳೆ.
[caption id="attachment_87342" align="alignnone" width="800"]
ಸಾರಾ ಅರ್ಜುನ್[/caption]
ರೀವಾ ಗಳಿಕೆಯ ಜೊತೆಗೆ ದುಬಾರಿ ಜೀವನ ನಡೆಸುತ್ತಾಳೆ. ಇತ್ತೇಚೆಗೆ 40 ಲಕ್ಷ ಮೌಲ್ಯದ ಔಡಿ ಕಾರು ಖರೀದಿಸಿದ್ದಾಳೆ. ಸೆಡಾನ್​ ಕಾರು ಪರಿಚಯಿದ ಬಳಿಕ ಅದರ ಫೋಟೋವನ್ನ ಇನ್​​ಸ್ಟಾದಲ್ಲೂ ಹಂಚಿಕೊಂಡಿದ್ದಾಳೆ. ಸದ್ಯ ಇನ್​ಸ್ಟಾದಲ್ಲಿ ಈ ಬಾಲ ನಟಿ 10 ಮಿಲಿಯನ್​​ಗೂ ಅಧಿಕ ಫಾಲೋವರ್ಸ್​​ ಹೊಂದಿದ್ದಾಳೆ.
[caption id="attachment_87343" align="alignnone" width="800"]
ರೀವಾ ಅರೋರಾ[/caption]
ರೀವಾ 2019ರಲ್ಲಿ ಉರಿ ಸಿನಿಮಾದಲ್ಲಿ ನಟಿಸಿದ್ದಳು. ಆಕೆಯ ನಟನೆ ನೋಡಿ ಅನೇಕ ಫ್ಯಾನ್ಸ್​ ಹುಟ್ಟಿಕೊಂಡರು. ಸದ್ಯ ಈಕೆ ದುಬಾರಿ ಬಾಲನಟಿಯಾಗಿದ್ದಾಳೆ. ಇದಲ್ಲದೆ ಭರತ್​, ಸೆಕ್ಷನ್ 375, ಗುನ್ಜನ್​​ ಸಕ್ಷೇನಾ​ ಸಿನಿಮಾದಲ್ಲೂ ಚಿಕ್ಕ ಪಾತ್ರ ನಿಭಾಯಿಸಿದ್ದಾಳೆ. ವೆಬ್​ ಸಿರೀಸ್​ನಲ್ಲೂ ನಟಿಸಿದ್ದಾಳೆ. ಕಳೆದ ವರ್ಷ ರಾಕುಲ್​ ಪ್ರೀತ್​ ಸಿಂಗ್​ನ ಛಾತ್ರಿವಾಲಿ ಸಿನಿಮಾದಲ್ಲೂ ನಟಿಸಿದ್ದಾಳೆ.
[caption id="attachment_87344" align="alignnone" width="800"]
ರೀವಾ ಅರೋರಾ[/caption]
2006ರಲ್ಲಿ ಜನಿಸಿದ ಈಕೆಗೆ ಸದ್ಯ 17 ವರ್ಷ. ಅತಿ ಕಡಿಮೆ ವಯಸ್ಸಿನಲ್ಲೇ ಶ್ರಿಮಂತ ಬಾಲನಟಿಯಾಗಿ ಗುರುತಿಸಿಕೊಂಡಿದ್ದಾಳೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us