Advertisment

ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್​ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ

author-image
AS Harshith
Updated On
ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್​ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ
Advertisment
  • ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ
  • ಮಾತಿಗೆ ಮಾತು ಬೆಳೆದು ಅದು ದೊಡ್ಡದಾಯ್ತು
  • ಸರ್ಕಾರ ನಿದ್ದೆ ಮಾಡ್ತಾ ಇದೆಯಾ? ಎಂದು ಪ್ರಶ್ನಿಸಿದ ಇಂದ್ರಜಿತ್ ಲಂಕೇಶ್

ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್​ ಮತ್ತು ಗ್ಯಾಂಗ್​ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಈ ವಿಷಯ ನಾನು ಮಾತನಾಡಲೇ ಬೇಕು. ಕೇವಲ ನಾನು ನಿರ್ದೇಶಕ ಅಲ್ಲಾ, ನಾನು ಪತ್ರಕರ್ತ ಕೂಡ ಎಂದು ಹೇಳಿದ್ದಾರೆ.

Advertisment

ನಾನು ಯಾಕೆ ಟಾಂಗ್ ಕೊಡೋಕೆ ಹೋಗ್ಲಿ

ದರ್ಶನ್ ಕಾಲೆಳೆದ ಲಂಕೇಶ್ ಅಂತೆಲ್ಲಾ ಕೆಲವು ಕಡೆ ಬಂದಿವೆ. ನಾನ್ ಯಾಕ್ರೀ ಟಾಂಗ್ ಕೊಡೋಕೆ ಹೋಗ್ಲಿ. ನಾನು 30 ವರ್ಷದಿಂದ ಪತ್ರಕರ್ತನಾಗಿದ್ದೇನೆ. ಪ್ರಕರಣದ ತನಿಖೆ ನಡೀತಾ ಇದೆ, ಈಗ ಪ್ರತಿಕ್ರಿಯೆ ನೀಡೋದು ಬೇಡ. ಅದಾದ ಮೇಲೆ ಎಲ್ಲಾ ಗೊತ್ತಾಗುತ್ತೆ ಅಂದಿದ್ದೆ ಅಷ್ಟೇ. ನಾನು ಯಾಕೆ ಟಾಂಗ್ ಕೊಡೋಕೆ ಹೋಗ್ಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್​ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್​ ಒಂದೆರಡಲ್ಲ!

ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ

ಬಳಿಕ ಮಾತನಾಡಿದ ನಿರ್ದೇಶಕ‌ ಇಂದ್ರಜಿತ್ ಲಂಕೇಶ್​, ದರ್ಶನ್ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಅವರೊಂದಿಗೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲಾ. ಯಾರಿಗೋ ಅನ್ಯಾಯ ಆದಾಗ ನಾನು ಧ್ವನಿ ಎತ್ತಿದೆ. ಮಾತು ಮಾತು ಬೆಳೆದು ಅದು ದೊಡ್ಡದಾಯ್ತು, ಮಾತಿಗೆ ಮಾತು ಬೆಳಿಬಾರದಿತ್ತು. ನಾನು ವಿಷಯ ಎತ್ತಿದ್ದಾಗ ಒಂದು ಮಾತನ್ನ ಹೇಳಿದ್ದೆ. ಮುಂದೆ ಅನಾಹುತ ಆಗುತ್ತೆ ಅನ್ನೋ ಮಾತು ಹೇಳಿದೀನಿ. ಸ್ನೇಹಿತನಾಗಿ ನಾನು ಹೇಳಿದ್ದೆ ಎಚ್ಚೆತ್ತುಕೊಳ್ಳಬೇಕಿತ್ತು. ಆ ಮಾತನ್ನ ಕೇಳಿದ್ರೆ ಇವತ್ತು ಇಂತಹ ಅನಾಹುತ ಆಗ್ತಿರ್ಲಿಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಕಿಡ್ನಾಪ್​ಗೂ ಮುನ್ನ ದರ್ಶನ್​ ಆ್ಯಕ್ಸಿಡೆಂಟ್​ ಮಾಡಿಸಿದ್ರಾ​? ರೇಣುಕಾಸ್ವಾಮಿ ಸ್ಕೂಟರ್​ ಡ್ಯಾಮೇಜ್​!

ವಿಜಯಲಕ್ಷ್ಮಿ ಹಾಗೂ ಅವರ ಮಗನಿಗಾಗಲಿ ಭಗವಂತ ಶಕ್ತಿ ನೀಡಲಿ

ತನಿಖೆ ನಡೀತಾ ಇದೆ, ಅದನ್ನ ನೋಡಿ ನಾನು ಪ್ರತಿಕ್ರಿಯೆ ನಿಡ್ತೇನೆ. ದಿನದಿಂದ ದಿನಕ್ಕೆ, ಕ್ಷಣ ಕ್ಷಣಕ್ಕೆ ಪ್ರಕರಣ ಬದಲಾಗ್ತಿದೆ. ನರಗುಂದ ನವಲಗುಂದ ಗಲಾಟೆ ಆದಾಗ ನನ್ನ ತಂದೆ ಕೇವಲ ಸುದ್ದಿ ಮಾಡಲಿಲ್ಲ ರೈತರೊಂದಿಗೆ ಹೋರಾಟ ಮಾಡಿದ್ರು, ಇದು ನಮ್ಮ ಕರ್ತವ್ಯ. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗಾಗಲಿ ಭಗವಂತ ಶಕ್ತಿ ನೀಡಲಿ. ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಒದಗಿಸಿ ಕೊಡಬೇಕು. ನಾನು ಕೂಡ ಅವರನ್ನ ಹೋಗಿ ಭೇಟಿ ಆಗ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ವಿಚಾರಣೆ ವೇಳೆ ದರ್ಶನ್​ ಹೇಳೋದು ಒಂದೇ ಮಾತು.. ಪಶ್ಚಾತ್ತಾಪ ಪಡ್ತಿದ್ದಾರಾ ಚಾಲೆಂಜಿಂಗ್​ ಸ್ಟಾರ್​

Advertisment

ಸರ್ಕಾರ ನಿದ್ದೆ ಮಾಡ್ತಾ ಇದೆಯಾ?

ಸಾಮಾಜಿಕ ಜಾಲತಾಣ ಅದ್ಭುತ ವೇದಿಕೆ. ಅದನ್ನ ಸರಿಯಾಗಿ ಬಳಸಿಕೊಳ್ಳಬೇಕು. ಅದನ್ನ ಬಿಟ್ಟು ಅವಾಚ್ಯ ಪದಗಳನ್ನು ಉಪಯೋಗಿಸಿಕೊಂಡ್ರೆ ಹೇಗೆ?. ದರ್ಶನ್, ವಿಜಯಲಕ್ಷ್ಮಿ ಯಾವತ್ತು ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಬೇಕು. ಸಮಾಜದಲ್ಲಿ ಅನ್ಯಾಯ ಆದಾಗ ನಾನು ಮಾತಾಡೇ ಮಾತಾಡ್ತೀನಿ. ಟ್ವೀಟ್ ಮಾಡಿದ್ದಕ್ಕೆ ಪ್ರಾಣ ತೆಗೆಯೋದು ಎಷ್ಟು ಸರಿ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಸರ್ಕಾರ ನಿದ್ದೆ ಮಾಡ್ತಾ ಇದೆಯಾ? ಎಂದು ಹುಬ್ಬಳ್ಳಿಯಲ್ಲಿ‌ ನಿರ್ದೇಶಕ‌ ಇಂದ್ರಜಿತ್ ಲಂಕೇಶ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment